ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಈ ನಟನ ಮೇಲೆ ಎರಡು ಬಕೆಟ್ ರಕ್ತ ಸುರಿದಿದ್ದರಂತೆ!

ಟಗರು’ ಚಿತ್ರದ ಮೂಲಕ ಕಾಕ್ರೋಚ್​ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಧಿ ಈ ಅನುಭವ ಹಂಚಿಕೊಂಡಿದ್ದಾರೆ. ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ಈ ಘಟನೆ ನಡೆದಿದೆ.

news18-kannada
Updated:January 16, 2020, 3:30 PM IST
ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಈ ನಟನ ಮೇಲೆ ಎರಡು ಬಕೆಟ್ ರಕ್ತ ಸುರಿದಿದ್ದರಂತೆ!
ಸೂರಿ
  • Share this:
ನಿರ್ದೇಶಕ ಸೂರಿ ಯಾವಾಗಲೂ ನೈಜತೆಗೆ ಮೊದಲ ಆದ್ಯತೆ ನೀಡುತ್ತಾರೆ. ಇದು ದುನಿಯಾ ಸೂರಿ ಸ್ಪೆಷಾಲಿಟಿಯೂ ಹೌದು. ‘ಟಗರು’ ಹಿಟ್​ ಆದ ನಂತರ ಅವರು ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ವೇಳೆ ಕಲಾವಿದನೋರ್ವನಿಗೆ ಸೂರಿ ಎರಡು ಬಕೆಟ್​ ರಕ್ತ ಸುರಿದಿದ್ದರಂತೆ!

ಹೌದು, ‘ಟಗರು’ ಚಿತ್ರದ ಮೂಲಕ ಕಾಕ್ರೋಚ್​ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಧಿ ಈ ಅನುಭವ ಹಂಚಿಕೊಂಡಿದ್ದಾರೆ. ‘ಪಾಪ್​ಕಾರ್ನ್​ ಮಂಕಿ ಟೈಗರ್​’ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಈ ವೇಳೆ ರಕ್ತ ಸುರಿದುಕೊಂಡು ಓಡಾಡುವ ದೃಶ್ಯ ಇತ್ತಂತೆ.

“ಬೇರೆ ಚಿತ್ರಗಳಲ್ಲಾದರೆ ರಕ್ತ ಎಂದಾಗ ನೀರಿಗೆ ಬಣ್ಣ ಸುರಿಯುತ್ತಿದ್ದರು. ಆದರೆ, ಪಾಪ್​ಕಾರ್ನ್​ನಲ್ಲಿ ಸೂರಿ ಅವರು ಹಾಗೆ ಮಾಡಿಲ್ಲ. ಎರಡು ಬಕೆಟ್​ ಕುರಿ ರಕ್ತ ತಂದು ಮೈ ಮೇಲೆ ಸುರಿದಿದ್ದರು. ನಾವು ಒಂದು ದಿನ ಹಾಗೆಯೇ ಇದ್ದೆವು,” ಎನ್ನುತ್ತಾರೆ ಸುಧಿ.ದುನಿಯಾ ಸೂರಿ  ನಿರ್ದೇಶನದ ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸುತ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್​ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Published by: Rajesh Duggumane
First published: January 16, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading