ಫೆ. 21ಕ್ಕೆ ಸುಕ್ಕ ಸೂರಿ ‘ಪಾಪ್ ಕಾರ್ನ್ ಮಂಕಿ ಟೈಗರ್‘ ರಿಲೀಸ್​

popcorn monkey tiger: ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಿವೇದಿತಾ ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ,  ಪೂರ್ಣಚಂದ್ರ ತೇಜಸ್ವಿ, ಮೌನೀಶ  ನಾಡಿಗೇರ್ ಸೇರಿದಂತೆ  ಪ್ರತಿಭಾವಂತ ತಾರಾಬಳಗವಿದೆ. 

ಡಾಲಿ ಧನಂಜಯ

ಡಾಲಿ ಧನಂಜಯ

 • Share this:
  ದುನಿಯಾ ಸೂರಿ ನಿರ್ದೇಶನದ ಮತ್ತು ಡಾಲಿ ಧನಂಜಯ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. ಈಗಾಗಲೇ  ಸೆನ್ಸಾರ್ ಮುಗಿಸಿರುವ ಚಿತ್ರತಂಡ ರಿಲೀಸ್​ಗಾಗಿ ತುದಿಗಾಲಿನಲ್ಲಿ ನಿಂತಿದೆ. ಮಹಾಶಿವರಾತ್ರಿ ಹಬ್ಬದಂದು ಅಂದರೆ, ಇದೇ ತಿಂಗಳ 21ಕ್ಕೆ ರಾಜ್ಯದಾದ್ಯಂತ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

  ಟಗರು ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಷನ್ ಮತ್ತೊಂದು ರಾ ಸಿನಿಮಾ ಇದಾಗಿದೆ, ಈಗಾಗಲೇ ಈ ಸಿನಿಮಾ ಟೀಸರ್​, ಹಾಡುಗಳ ಮೂಲಕ ಯ್ಯೂಟೂಬ್​ನಲ್ಲಿ ಸದ್ದು ಮಾಡಿದೆ.

  ಇನ್ನು ಈ ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಿವೇದಿತಾ ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ,  ಪೂರ್ಣಚಂದ್ರ ತೇಜಸ್ವಿ, ಮೌನೀಶ  ನಾಡಿಗೇರ್ ಸೇರಿದಂತೆ  ಪ್ರತಿಭಾವಂತ ತಾರಾಬಳಗವಿದೆ. 

  ಟಗರು ಚಿತ್ರಕ್ಕೆ ಟ್ರೆಂಡಿ ಸಂಗೀತ ಕೊಟ್ಟು ಕಮಾಲ್ ಮಾಡಿದ್ದ ಚರಣ್ ರಾಜ್ ಸಂಗೀತ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಇನ್ನೂ ಶೇಖರ್ ಛಾಯಾಗ್ರಹಣ,  ಸುಧೀರ್ ಕೆ.ಎಮ್ ಅವರ ನಿರ್ಮಾಣ ಈ ಸಿನಿಮಾಕ್ಕಿದೆ.  ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನ ಸುಧೀರ್  ಮೋಹನ್ ಫಿಲಂಸ್ ಮತ್ತು ಪುಷ್ಕರ್ ಫಿಲಂಸ್ ಜಂಟಿ ವಿತರಣೆಯಲ್ಲಿ  ದೇಶದಾದ್ಯಂತ ವಿತರಿಸುತ್ತಿದ್ದಾರೆ.

  ಇದನ್ನೂ ಓದಿ: ಕೆಸರಿನಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆಗೆ ಕೈಚಾಚಿದ ವಾನರ; ಸೋಷಿಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್
  First published: