Sita Ramam Movie: ಸೀತಾ ರಾಮಂ ಸಿನಿಮಾ ಟೀಸರ್ ರಿಲೀಸ್​, ಅದ್ಭುತ ಪ್ರೇಮಕಥೆ ಹೇಳಲಿದ್ದಾರೆ ದುಲ್ಕರ್ ಸಲ್ಮಾನ್

Dulquer Salmaan: ಟೀಸರ್ ಸೀತಾ ರಾಮನ್ ಸಿನಿಮಾ, ಮ್ಯಾಜಿಕಲ್ ಲವ್ ಸ್ಟೋರಿ ಎಂಬ ಭರವಸೆಯನ್ನು ಪ್ರೇಕ್ಷಕರಿಗೆ ನೀಡುತ್ತದೆ. ಇದನ್ನು 1965 ರ ಕಥೆ ಎಂದು ತೋರಿಸಲಾಗಿದ್ದು, ಅದಕ್ಕೆ ಸೂಕ್ತವಾಗುವಂತೆ ಸೆಟ್ಟಿಂಗ್​ ಮಾಡಲಾಗಿದೆ.

ಸೀತಾ ರಾಮಂ

ಸೀತಾ ರಾಮಂ

  • Share this:
ಟಾಲಿವುಡ್‌ನ (Tollywood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಇಂದು ದುಲ್ಕರ್ ಸಲ್ಮಾನ್ (Dulquer Salmaan) , ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna)  ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ, ಸೀತಾ ರಾಮಂ (Sita Ramam) ಟೀಸರ್​ ​ಅನ್ನು ಬಿಡುಗಡೆ ಮಾಡಿದೆ. ಅದ್ಭುತ ಪ್ರೇಮಕಥೆಗಳನ್ನು ಜನರಿಗೆ ನೀಡುವಲ್ಲಿ ಸ್ಪೆಷಲಿಸ್ಟ್ ಆಗಿರುವ ಹನು ರಾಘವಪುಡಿ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಿದ್ದು, ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ಸ್ವಪ್ನಾ ಸಿನಿಮಾ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಚಿತ್ರದ ಟೀಸರ್ ನಮಗೆ ಲೆಫ್ಟಿನೆಂಟ್ ರಾಮ್ ಎನ್ನುವ ವ್ಯಕ್ತಿಯ ಜೀವನದ ಒಳನೋಟವನ್ನು ನೀಡುತ್ತದೆ. ಆ ವ್ಯಕ್ತಿ ಕಾಶ್ಮೀರ ಕಣಿವೆಯಲ್ಲಿ ಒಂಟಿ ಸೈನಿಕನಾಗಿ ಗಸ್ತು ತಿರುಗುತ್ತಿರುವ ಅನಾಥ. ಅವನಿಗಾಗಿ, ಅವನ ಬಗ್ಗೆ ಕೇಳಲು ಯಾರೂ ಇಲ್ಲ, ಅವನಿಗೆ ಪತ್ರ ಬರೆಯಲು ಯಾರೂ ಇಲ್ಲ ಎನ್ನಲಾಗುತ್ತದೆ. ಎಲ್ಲರೂ ಹಾಗೆಯೇ ಅಂದುಕೊಂಡಿರುತ್ತಾರೆ. ಆದರೆ ಒಂದು ದಿನ ಅವನಿಗೆ ತನ್ನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿಯಿಂದ ಸರಣಿ ಪತ್ರಗಳು ಬರುತ್ತದೆ. ಇಲ್ಲಿಂದ ಕಥೆಗೆ ಟ್ವಿಸ್ಟ್​ ಸಿಗುತ್ತದೆ.


ಟೀಸರ್ ಸೀತಾ ರಾಮನ್ ಸಿನಿಮಾ, ಮ್ಯಾಜಿಕಲ್ ಲವ್ ಸ್ಟೋರಿ ಎಂಬ ಭರವಸೆಯನ್ನು ಪ್ರೇಕ್ಷಕರಿಗೆ ನೀಡುತ್ತದೆ. ಇದನ್ನು 1965 ರ ಕಥೆ ಎಂದು ತೋರಿಸಲಾಗಿದ್ದು, ಅದಕ್ಕೆ ಸೂಕ್ತವಾಗುವಂತೆ ಸೆಟ್ಟಿಂಗ್​ ಮಾಡಲಾಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ಅದ್ಭುತ ಕೆಮಿಸ್ಟ್ರಿ ಅವರ ಸುಂದರವಾದ ಪ್ರಣಯ ಪ್ರಪಂಚಕ್ಕೆ ನಮ್ಮನ್ನು ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಠಾಕೂರ್ ಮತ್ತು ದುಲ್ಕರ್ ಜೊತೆ ಜೋಡಿ ಹೇಳಿ ಮಾಡಿಸಿದ ಹಾಗಿದೆ. ಇವರಿಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡುವುದೇ ಕಣ್ಣಿಗೆ ಹಬ್ಬ.

ಇದನ್ನೂ ಓದಿ: ಸಂಜನಾ ಮುದ್ದು ಮಗನ ಹೆಸರೇನು ಗೊತ್ತಾ? ಈ ಕ್ಯೂಟ್ ಪುಟಾಣಿಯ ವಿಡಿಯೋ ನೀವು ನೋಡಿ

ಟೀಸರ್​​ ನೋಡಿದ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸಿನಿರಂಗದ ಗಣ್ಯರೂ ಸಹ ಟೀಸರ್​​ ಅನ್ನು ಹೊಗಳಿದ್ದಾರೆ.



ಪಿಎಸ್ ವಿನೋದ್ ಈ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದು, ಅವರು ಸೆರೆಹಿಡಿದಿರುವ ಪ್ರತಿಯೊಂದು ಫ್ರೇಮ್ ಒಂದು ಕಲಾಕೃತಿಯಂತೆ ಬಂದಿದೆ ಎಂಬುದು ಜನರ ಅಭಿಪ್ರಾಯ. ಅಲ್ಲದೇ, ಇದರಲ್ಲಿ ಕಾಶ್ಮೀರದ ಸ್ಥಳಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಅದ್ಭುತವಾದ ಅಭಿನಯ, ಮನಮುಟ್ಟುವ ಕಥೆ, ಸುಂದರವಾದ ದೃಶ್ಯಗಳು ಮತ್ತು ಮೋಡಿಮಾಡುವ ಸಂಗೀತದೊಂದಿಗೆ ಸೀತಾ ರಾಮಂ ಒಂದು ಅದ್ಭುತ ಪ್ರೇಮಕಥೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಅಯ್ಯಯ್ಯೋ ಹಂಗೇ ಬಂದ್ರಂತೆ ಪೂನಂ ಪಾಂಡೆ! ಸ್ವಲ್ಪ ಮರ್ಯಾದೆ ಕಾಪಾಡಿಕೊಳ್ಳಿ ಅಂತ ಕಾಲೆಳೆದ ನೆಟ್ಟಿಗರು

ಸೀತಾ ರಾಮಂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Published by:Sandhya M
First published: