Sita Ramam Trailer: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಪ್ರೇಮಕಥೆ ಹೇಳಿದ ಸೀತಾ ರಾಮಂ, ಹೇಗಿದೆ ಸಿನಿಮಾದ ಟ್ರೈಲರ್?

Sita Ramam Trailer: ಟ್ರೈಲರ್​ ಬಗ್ಗೆ ಹೇಳುವುದಾದರೆ, ಚಲನಚಿತ್ರದಲ್ಲಿ ಒಂದು ಸುಂದರ ಪ್ರೇಮಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದು, ಅದನ್ನು ಟ್ರೈಲರ್ ಸಾಧಿಸಿದಂತೆ

ಸೀತಾ ರಾಮಂ

ಸೀತಾ ರಾಮಂ

  • Share this:
ಟಾಲಿವುಡ್‌ನ (Tollywood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ಇಂದು ದುಲ್ಕರ್ ಸಲ್ಮಾನ್ (Dulquer Salmaan) , ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna)  ಅಭಿನಯದ ಬಹು ನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ, ಸೀತಾ ರಾಮಂ (Sita Ramam) ಟ್ರೈಲರ್​​ ​ಅನ್ನು ಬಿಡುಗಡೆ ಮಾಡಿದೆ. ಅದ್ಭುತ ಪ್ರೇಮಕಥೆಗಳನ್ನು ಜನರಿಗೆ ನೀಡುವಲ್ಲಿ ಸ್ಪೆಷಲಿಸ್ಟ್ ಆಗಿರುವ ಹನು ರಾಘವಪುಡಿ ಈ ಚಿತ್ರಕ್ಕೆ ಆಕ್ಷನ್​ ಕಟ್​ ಹೇಳಿದ್ದು, ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ಸ್ವಪ್ನಾ ಸಿನಿಮಾ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಪ್ರೇಮಕಥೆ ಹೇಳುತ್ತಿದೆ ಟ್ರೈಲರ್

ಟ್ರೈಲರ್​ ಬಗ್ಗೆ ಹೇಳುವುದಾದರೆ, ಚಲನಚಿತ್ರದಲ್ಲಿ ಒಂದು ಸುಂದರ ಪ್ರೇಮಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದು, ಅದನ್ನು ಟ್ರೈಲರ್ ಸಾಧಿಸಿದಂತೆ. ಸೀತಾ ಎಂಬ ಮಹಿಳೆಗೆ ಪತ್ರವನ್ನು ತಲುಪಿಸಲು ರಶ್ಮಿಕಾ ಮಂದಣ್ಣ ಅಂದರೆ ಆಫ್ರೀನ್​ ವೈಯಕ್ತಿಕ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರೊಂದಿಗೆ ಟ್ರೇಲರ್ ಆರಂಭವಾಗುತ್ತದೆ. ಆ ಪತ್ರ ರಾಮ್​ ಎಂಬುವವರಿಂದ ಬಂದಿರುತ್ತದೆ. ಸುಮಾರು 20 ವರ್ಷಗಳ ಹಿಂದೆ ಇವರಿಬ್ಬರು ಪ್ರೇಮಿಗಳಾಗಿದ್ದರಂತೆ.ಅಫ್ರೀನ್ ಸೀತಾ ಇರುವ ಸ್ಥಳವನ್ನು ಕಂಡುಹಿಡಿಯಲು ಸಾಧ್ಯವಾಗದೇ ಪರದಾಡುವುದನ್ನ ಟ್ರೈಲರ್​ನಲ್ಲಿ ನೋಡಬಹುದು.  ಇನ್ನು ಯಾವಾಗ ಸೀತಾ ಸಿಗುವುದಿಲ್ಲ, ಆಗ ಅಫ್ರೀನ್ ಮೊದಲು ರಾಮನನ್ನು ಹುಡುಕಲು ನಿರ್ಧರಿಸುತ್ತಾರೆ. ಕಳೆದುಹೋದ ಪ್ರೀತಿಗಾಗಿ ನಡೆಯುವ ಹುಡುಕಾಟ ಹಲವಾರು ಹಳೆಯ ನೆನಪುಗಳು ಹಾಗೂ ಘಟನೆಗಳು ತಿಳಿಯುತ್ತಾ ಹೋಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಪ್ರೇಮಕಥೆ ವ್ಯಾಪಿಸಿದೆ ಎನ್ನಬಹುದು.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿ- ಕತ್ರಿನಾಗೆ ಜೀವ ಬೆದರಿಕೆ, ತನಿಖೆ ಆರಂಭಿಸಿದ ಪೊಲೀಸರು

ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿ

ಇನ್ನು ಕಳೆದ ತಿಂಗಳು ಈ ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು. ಅದಕ್ಕೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸೀತಾ ರಾಮನ್ ಸಿನಿಮಾ, ಮ್ಯಾಜಿಕಲ್ ಲವ್ ಸ್ಟೋರಿ ಎಂಬ ಭರವಸೆಯನ್ನು ಪ್ರೇಕ್ಷಕರಿಗೆ ನೀಡುತ್ತದೆ. ಇದನ್ನು 1965 ರ ಕಥೆ ಎಂದು ತೋರಿಸಲಾಗಿದ್ದು, ಅದಕ್ಕೆ ಸೂಕ್ತವಾಗುವಂತೆ ಸೆಟ್ಟಿಂಗ್​ ಮಾಡಲಾಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ಅದ್ಭುತ ಕೆಮಿಸ್ಟ್ರಿ ಅವರ ಸುಂದರವಾದ ಪ್ರಣಯ ಪ್ರಪಂಚಕ್ಕೆ ನಮ್ಮನ್ನು ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಠಾಕೂರ್ ಮತ್ತು ದುಲ್ಕರ್ ಜೊತೆ ಜೋಡಿ ಹೇಳಿ ಮಾಡಿಸಿದ ಹಾಗಿದೆ. ಇವರಿಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡುವುದೇ ಕಣ್ಣಿಗೆ ಹಬ್ಬ.


ಪಿಎಸ್ ವಿನೋದ್ ಈ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದು, ಅವರು ಸೆರೆಹಿಡಿದಿರುವ ಪ್ರತಿಯೊಂದು ಫ್ರೇಮ್ ಒಂದು ಕಲಾಕೃತಿಯಂತೆ ಬಂದಿದೆ ಎಂಬುದು ಜನರ ಅಭಿಪ್ರಾಯ. ಅಲ್ಲದೇ, ಇದರಲ್ಲಿ ಕಾಶ್ಮೀರದ ಸ್ಥಳಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಅದ್ಭುತವಾದ ಅಭಿನಯ, ಮನಮುಟ್ಟುವ ಕಥೆ, ಸುಂದರವಾದ ದೃಶ್ಯಗಳು ಮತ್ತು ಮೋಡಿಮಾಡುವ ಸಂಗೀತದೊಂದಿಗೆ ಸೀತಾ ರಾಮಂ ಒಂದು ಅದ್ಭುತ ಪ್ರೇಮಕಥೆಯಾಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಲಂಕಾಸುರ ಸಿನಿಮಾದ ಟೈಟಲ್​ ಟ್ರ್ಯಾಕ್​ ರಿಲೀಸ್​, ಹೊಸ ಅವತಾರದಲ್ಲಿ ಮರಿ ಟೈಗರ್

ಸೀತಾ ರಾಮಂ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಈ ಸಿನಿಮಾ ಆಗಸ್ಟ್ 5 ರಂದು ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Published by:Sandhya M
First published: