‘Kurup’ ಚಿತ್ರವನ್ನು ಥಿಯೇಟರ್‌ನಲ್ಲಿಯೇ ರಿಲೀಸ್​ ಮಾಡಬೇಕೆಂದು ಕೋಟಿ ಕೋಟಿ ಒಪ್ಪಂದ ಕೈ ಬಿಟ್ಟ Dulquer Salmaan

ನಟ ದುಲ್ಕರ್ ಸಲ್ಮಾನ್ ಅವರ‘ಕುರುಪ್’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯನ್ನು ಮಮ್ಮುಟ್ಟಿ ತಡೆದರು ಎನ್ನಲಾಗುತ್ತಿದೆ. ಇದೇ ಕಾರಣದಿಂದಾಗಿ ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಕುರುಪ್​ ಸಿನಿಮಾದಲ್ಲಿ ದುಲ್ಕರ್​ ಸಲ್ಮಾನ್​

ಕುರುಪ್​ ಸಿನಿಮಾದಲ್ಲಿ ದುಲ್ಕರ್​ ಸಲ್ಮಾನ್​

  • Share this:
ಮಾಲಿವುಡ್‌ ದಿಗ್ಗಜ ನಟ ಮಮ್ಮುಟ್ಟಿಯ ಮಗ ಮತ್ತು ಮಾಲಿವುಡ್‌ನ ಸೂಪರ್ ಸ್ಟಾರ್‌ ದುಲ್ಕರ್ ಸಲ್ಮಾನ್  (Actor Mammooty Son Dulquer Salmaan) ಅಭಿಮಾನಿಗಳಿಗೆ ಇಂದು ಹಬ್ಬ ಅಂತಾನೆ ಹೇಳಬಹುದು. ಏಕೆಂದರೆ ಅವರ ಬಹು ನಿರೀಕ್ಷಿತ ‘ಕುರುಪ್’ (Kurup) ಚಿತ್ರವು ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.ಇದು ಅವರ ಮೊದಲ ಪ್ಯಾನ್ ಇಂಡಿಯಾ (Pan India Movie) ಚಿತ್ರವಾಗಿದೆ. ಈ ಚಿತ್ರದ ಬಿಡುಗಡೆಗಾಗಿ ನಟ ತುಂಬಾನೇ ಉತ್ಸುಕರಾಗಿದ್ದರು. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯಲು ಸಾಧ್ಯವಿಲ್ಲವಾದರೂ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚಿತ್ರದ ತಯಾರಕರು ಈ ಹಿಂದೆ ಒಟಿಟಿಯಲ್ಲಿ ಈ ಚಿತ್ರ ಬಿಡುಗಡೆ ಮಾಡಲು ಇಚ್ಚಿಸಿದ್ದರು ಎಂದು ತಿಳಿದು ಬಂದಿದೆ.

ಆದರೆ ನಟ ದುಲ್ಕರ್ ಸಲ್ಮಾನ್ ತಂದೆ ಮತ್ತು ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಈ ಚಿತ್ರವನ್ನು ವೀಕ್ಷಿಸಿದಾಗ, ಅವರು ಮಾಡಿಕೊಂಡ ಒಟಿಟಿ ಒಪ್ಪಂದ ರದ್ದುಗೊಳಿಸುವಂತೆ ಹೇಳಿದ್ದರಂತೆ. ಕುರುಪ್​ ಸಿನಿಮಾವನ್ನು ಚಿತ್ರ ಮಂದಿರದಲ್ಲಿಯೇ ಬಿಡುಗಡೆ ಮಾಡುವಂತೆ ಚಿತ್ರ ತಯಾರಕರು ಮತ್ತು ನಟ ದುಲ್ಖಾರ್ ಅವರ ಮನವೊಲಿಸಿದರಂತೆ ಮಮ್ಮುಟ್ಟಿ. ಹೀಗಾಗಿಯೇ ದುಲ್ಕರ್​ ಸಲ್ಮಾನ್​ ಆ 40 ಕೋಟಿ ರೂಪಾಯಿಯ ಒಟಿಟಿಯಲ್ಲಿ ಚಿತ್ರ ಬಿಡುಗಡೆಯ ಒಪ್ಪಂದವನ್ನು ಕೈಬಿಟ್ಟರು ಎಂದು ಹೇಳಲಾಗುತ್ತಿದೆ.


View this post on Instagram


A post shared by Dulquer Salmaan (@dqsalmaan)


ನಟ ದುಲ್ಕರ್ ಸಲ್ಮಾನ್ ಅವರ‘ಕುರುಪ್’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯನ್ನು ಮಮ್ಮುಟ್ಟಿ ತಡೆದರು

ನಟ ದುಲ್ಕರ್ ಸಲ್ಮಾನ್ ಅವರ ‘ಕುರುಪ್’ ಚಿತ್ರದ ಟ್ರೈಲರ್ ಅಭಿಮಾನಿಗಳಿಗೆ ತುಂಬಾನೇ ಇಷ್ಟವಾಗಿತ್ತು. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗಾಗಿ ನಿರೀಕ್ಷಿಸಿದ ಅಭಿಮಾನಿಗಳಿಗೆ ಕೋವಿಡ್‌ನಿಂದಾಗಿ ನಂತರ ಒಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ವರದಿಗಳ ಪ್ರಕಾರ, ಕೋವಿಡ್ ಸಾಂಕ್ರಾಮಿಕದಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾದಾಗ ‘ಕುರುಪ್’ ನ ತಯಾರಕರು ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್‌ನೊಂದಿಗೆ ಬರೋಬ್ಬರಿ 40 ಕೋಟಿ ರೂಪಾಯಿಗಳ ಒಪ್ಪಂದವನ್ನು ರದ್ದು ಮಾಡಿಕೊಂಡರು.

ಇದನ್ನೂ ಓದಿ: ಕರ್ಮಫಲದ ಬಗ್ಗೆ ಮಾತನಾಡುತ್ತಾ Sorry ಕೇಳಿದ ನಟಿ Ragini Dwivedi

ಆದರೆ, ಈ ಚಿತ್ರವನ್ನು ಒಟಿಟಿ ವೇದಿಕೆಗಳಲ್ಲಿ ನೋಡದೇ ಚಿತ್ರಮಂದಿರಗಳಲ್ಲಿ ಜನರು ವೀಕ್ಷಿಸಬೇಕು ಎಂದು ಚಿತ್ರ ವೀಕ್ಷಿಸಿದ್ದ ಮಮ್ಮುಟ್ಟಿ ನಿರ್ಮಾಪಕರಿಗೆ ತಿಳಿಸಿದರಂತೆ. ಚಿತ್ರದ ನಿರ್ಮಾಪಕರಾಗಿರುವ ನಟ ದುಲ್ಕರ್ ಸಲ್ಮಾನ್ ನಂತರ 40 ಕೋಟಿ ರೂಪಾಯಿಗಳ ಒಪ್ಪಂದವನ್ನು ರದ್ದು ಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಈ ರೀತಿಯ ಚಲನಚಿತ್ರಗಳು ಪ್ರದರ್ಶಕರು, ವಿತರಕರು ಮತ್ತು ಥಿಯೇಟರ್ ಮಾಲೀಕರಿಗೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಅನೇಕರಿಗೆ ಉತ್ತಮ ಆದಾಯ ಗಳಿಸಲು ಸಹಾಯ ಮಾಡುತ್ತದೆ ಎಂದು ಮಮ್ಮುಟ್ಟಿ ಹೇಳಿದ್ದಾರೆ.

‘ಕುರುಪ್’ ಚಿತ್ರದ ಬಗ್ಗೆ ನಿಮಗೆ ಗೊತ್ತೇ?

ಕೇರಳದ ಮೋಸ್ಟ್ ವಾಂಟೆಡ್ ಅಪರಾಧಿಯಾಗಿರುವ ಪರಾರಿಯಾದ ಸುಕುಮಾರ ಕುರುಪ್ ಜೀವನವನ್ನು ‘ಕುರುಪ್’ ಚಿತ್ರ ಆಧರಿಸಿದೆ. ಈ ಚಿತ್ರವನ್ನು 35 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ತಯಾರಿಸಲಾಗಿದೆ. ಈ ಚಿತ್ರವನ್ನು ಕೇರಳ, ಮುಂಬೈ, ದುಬೈ, ಮಂಗಳೂರು, ಮೈಸೂರು ಮತ್ತು ಅಹಮದಾಬಾದ್ ನಲ್ಲಿ 105 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಇದನ್ನೂ ಓದಿ: Rajinikanth ಚಿತ್ರಕ್ಕಾಗಿ ಕೆಲಸ ಮಾಡಿದ್ದು ನರಕ ದರ್ಶನ ಮಾಡಿಸಿತ್ತು ಎಂದಿದ್ದೇಕೆ A R Rahman ..!

ಚಿತ್ರದ ಕಥೆಯನ್ನು ಕೆ.ಎಸ್. ಅರವಿಂದ, ಜಿಥಿನ್ ಕೆ ಜೋಸ್ ಮತ್ತು ಡೇನಿಯಲ್ ಸಯೂಜ್ ನಾಯರ್ ಜಂಟಿಯಾಗಿ ಬರೆದಿದ್ದಾರೆ. ಈ ಚಿತ್ರದಲ್ಲಿ ನಟ ದುಲ್ಖಾರ್, ಇಂದ್ರಜಿತ್ ಸುಕುಮಾರನ್, ಸನ್ನಿ ವೇಯ್ನ್, ಶೈನ್ ಟಾಮ್ ಚಾಕೊ, ಸೋಭಿತಾ ಧುಲಿಪಾಲ ಮತ್ತು ಭರತ್ ಶ್ರೀನಿವಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Published by:Anitha E
First published: