Dulquer Salmaan: ಇನ್ಮುಂದೆ ಈ ರೀತಿ ಸಿನಿಮಾ ಮಾಡಲ್ಲ ಎಂದ ದುಲ್ಕರ್ ಸಲ್ಮಾನ್, ಸಡನ್​ ಆಗಿ ಸ್ಟಾರ್ ನಟ ಈ ನಿರ್ಧಾರ ಮಾಡಿದ್ದೇಕೆ?

Sita Ramam Movie: ಮೊನ್ನೆಯಷ್ಟೇ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೇವಲ ಟೈಲರ್​ ಮಾತ್ರವಲ್ಲದೇ ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ ಸಹ ಜನರಿಗೆ ಬಹಳ ಇಷ್ಟವಾಗಿದ್ದು, ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್

  • Share this:
ಮಲಯಾಳಂ (Malayalam) ಸಿನಿಮಾ ರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan)  ಅಪಾರ ಅಭಿಮಾನಿ (Fans) ಬಳಗವನ್ನು ಹೊಂದಿದ್ದಾರೆ. ಅವರ ಸಿನಿಮಾ (Film) ಎಂದರೆ ಯಾವಾಗಲೂ ವಿಭಿನ್ನತೆಯಿಂದ ಕೂಡಿರುತ್ತದೆ. ಇದುವರೆಗೂ ಅವರು ಮಾಡಿದ ಸಿನಿಮಾಗಳು ಸೂಪರ್ ಹಿಟ್​ ಆಗಿವೆ. ಅವರು ಮಲಯಾಳಂ ಸ್ಟಾರ್​ ನಟನಾಗಿ ಗುರುತಿಸಿಕೊಂಡಿದ್ದರೂ ಸಹ ದಕ್ಷಿಣ ಸಿನಿಮಾ ರಂಗದಲ್ಲಿ ಎಲ್ಲಾ ಭಾಷೆಯ ಪ್ರೇಕ್ಷಕರಿಂದ ಉತ್ತಮ ಹೆಸರುಗಳಿಸಿದ್ದಾರೆ. ಸದ್ಯ ಅವರ ಅಭಿನಯದ ರೊಮ್ಯಾಂಟಿಕ್ ಸಿನಿಮಾ (Romantic Film) ಸೀತಾ  ರಾಮಂ (Sita Ramam ) ರಿಲೀಸ್​ಗೆ ಸಿದ್ದವಾಗಿದೆ. ಈ ನಡುವೆ ದುಲ್ಕರ್ ಸಲ್ಮಾನ್ ಶಾಕಿಂಗ್ ಹೇಳಿಕೆ ನೀಡಿದ್ದು, ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ.

ಕೊನೆಯ ರೊಮ್ಯಾಂಟಿಕ್ ಸಿನಿಮಾ ಎಂದ ನಟ

ಹೌದು, ಮೊನ್ನೆಯಷ್ಟೇ ಅವರ ಅಭಿನಯದ ಸೀತಾ ರಾಮಂ ಸಿನಿಮಾದ ಟ್ರೈಲರ್ ರಿಲೀಸ್​ ಆಗಿದೆ. ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ, ದುಲ್ಕರ್ ಸಲ್ಮಾನ್ ಸೀತಾ ರಾಮಂ ಅವರ ಕೊನೆಯ ರೊಮ್ಯಾಂಟಿಕ್ ಚಿತ್ರ ಎಂದು ಹೇಳಿದ್ದಾರೆ. ರೊಮ್ಯಾಂಟಿಕ್ ಹೀರೋ ಎಂದು ಕರೆಸಿಕೊಳ್ಳುತ್ತಿರುವುದರಿಂದ ಇನ್ನು ಮುಂದೆ ಯಾವುದೇ ರೊಮ್ಯಾಂಟಿಕ್ ಸಿನಿಮಾ ಮಾಡಬಾರದು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಹನು ಸರ್ ಈ ಕಥೆಯೊಂದಿಗೆ ನನ್ನ ಬಳಿ ಬಂದಾಗ, ನಾನು ನಿರಾಕರಿಸಲು ಸಾಧ್ಯವಾಗಲಿಲ್ಲ. ಈ ಕಥೆಯು ತುಂಬಾ ಚೆನ್ನಾಗಿದೆ, ತುಂಬಾ ಅದ್ಭುತವಾಗಿದೆ, ಇದೊಂದು ಮಹಾಕಾವ್ಯ, ಇದು ಟೈಮ್‌ಲೆಸ್ ಮತ್ತು ತುಂಬಾ ಕ್ಲಾಸಿಕ್​ ಹಾಗಾಗಿ ನಾನು ಈ ಸಿನಿಮಾವನ್ನು ಇಷ್ಟಪಟ್ಟಿದ್ದೇನೆ. ಆದರೆ ಇದು ನನ್ನ ಕೊನೆಯ ರೊಮ್ಯಾಂಟಿಕ್ ಸಿನಿಮಾ ಎಂದಿದ್ದಾರೆ.  

ಇದನ್ನೂ ಓದಿ: ರಣವೀರ್​ ಏನ್​ ಬೆತ್ತಲಾಗೋದು, ಇಲ್ನೋಡಿ ಉರ್ಫಿನಾ! ಬಟ್ಟೆ ಇದ್ರೂ ತೆಗೆದು ಪೋಸ್​ ಕೊಟ್ಟಿದ್ದಾರೆ

ಮೊನ್ನೆಯಷ್ಟೇ ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೇವಲ ಟೈಲರ್​ ಮಾತ್ರವಲ್ಲದೇ ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್​ ಸಹ ಜನರಿಗೆ ಬಹಳ ಇಷ್ಟವಾಗಿದ್ದು, ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ವ್ಯಕ್ತವಾಗಿದೆ. ಸೀತಾ ರಾಮಂ ಸಿನಿಮಾ, ಮ್ಯಾಜಿಕಲ್ ಲವ್ ಸ್ಟೋರಿ ಎಂಬ ಭರವಸೆಯನ್ನು ಪ್ರೇಕ್ಷಕರಿಗೆ ನೀಡುತ್ತದೆ. ಇದನ್ನು 1965 ರ ಕಥೆ ಎಂದು ತೋರಿಸಲಾಗಿದ್ದು, ಅದಕ್ಕೆ ಸೂಕ್ತವಾಗುವಂತೆ ಸೆಟ್ಟಿಂಗ್​ ಮಾಡಲಾಗಿದೆ.

ಆಗಸ್ಟ್​ 5 ರಂದು ಸಿನಿಮಾ ರಿಲೀಸ್​

ಅಲ್ಲದೇ, ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ ಠಾಕೂರ್ ಅವರ ಅದ್ಭುತ ಕೆಮಿಸ್ಟ್ರಿ ಅವರ ಸುಂದರವಾದ ಪ್ರಣಯ ಪ್ರಪಂಚಕ್ಕೆ ನಮ್ಮನ್ನು ಕರೆದುಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಠಾಕೂರ್ ಮತ್ತು ದುಲ್ಕರ್ ಜೊತೆ ಜೋಡಿ ಹೇಳಿ ಮಾಡಿಸಿದ ಹಾಗಿದೆ. ಇವರಿಬ್ಬರನ್ನು ಒಟ್ಟಿಗೆ ತೆರೆಯ ಮೇಲೆ ನೋಡುವುದೇ ಕಣ್ಣಿಗೆ ಹಬ್ಬ.

ಇದನ್ನೂ ಓದಿ: ಈ ಹೀರೋ ಜೊತೆ ಡೇಟಿಂಗ್ ಮಾಡ್ತಿದ್ದಾರಂತೆ ಅನನ್ಯಾ ಪಾಂಡೆ, ಕರಣ್ ಕೇಳಿದ ಪ್ರಶ್ನೆಗೆ ಹೀಗ್ಯಾಕಂದ್ರು ನಟಿ?

 ಸೀತಾ ರಾಮಂ ಸಿನಿಮಾದಲ್ಲಿ ಸುಮಂತ್, ತರುಣ್ ಭಾಸ್ಕರ್, ಗೌತಮ್ ಮೆನನ್, ಭೂಮಿಕಾ ಚಾವ್ಲಾ, ವೆನ್ನೆಲಾ ಕಿಶೋರ್ ಮತ್ತು ಮುರಳಿ ಶರ್ಮಾ ಸೇರಿದಂತೆ ಅನೇಕ ಅದ್ಭುತ ಕಲಾವಿದರು ಕೂಡ ನಟಿಸಿದ್ದಾರೆ. ಸ್ವಪ್ನಾ ಸಿನಿಮಾ ಬ್ಯಾನರ್‌ನಡಿಯಲ್ಲಿ ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ಅವರ ಬೆಂಬಲದೊಂದಿಗೆ ಚಿತ್ರವನ್ನು ವೈಜಯಂತಿ ನಿರ್ಮಾಣ ಮಾಡಿದ್ದು, ಈ ಬಹುನಿರೀಕ್ಷಿತ ಸಿನಿಮಾ ಈ ವರ್ಷ ಆಗಸ್ಟ್ 5 ರಂದು ಬಿಡುಗಡೆಯಾಗಲಿದೆ.
Published by:Sandhya M
First published: