HOME » NEWS » Entertainment » DUE TO VERY LESS SPECTATORS SINGLE SCREEN CINEMAS WILL BE CLOSED IN KOLKATA AE

ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು: ಸದ್ಯಕ್ಕೆ ಸಿಂಗಲ್​ ಸ್ಕ್ರೀನ್​ ಮುಚ್ಚಲು ಮಾಲೀಕರ ನಿರ್ಧಾರ..!

ಜನರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಮಲ್ಟಿಪ್ಲೆಕ್ಸ್​ಗಳಲ್ಲಿ ಒಬ್ಬರು ಅಥವಾ ಇಬ್ಬರು ಇದ್ದರೂ ಸಿನಿಮಾ ಪ್ರದರ್ಶನವಾಗುತ್ತಿದೆ. ಇಂತಹ ಪರಿಸ್ಥಿತಿ ಇಡೀ ದೇಶದೆಲ್ಲೆಡೆ ಇದೆ.

Anitha E | news18-kannada
Updated:November 21, 2020, 11:14 AM IST
ಚಿತ್ರಮಂದಿರಗಳಿಗೆ ಬಾರದ ಪ್ರೇಕ್ಷಕರು: ಸದ್ಯಕ್ಕೆ ಸಿಂಗಲ್​ ಸ್ಕ್ರೀನ್​ ಮುಚ್ಚಲು ಮಾಲೀಕರ ನಿರ್ಧಾರ..!
ಸಾಂದರ್ಭಿಕ ಚಿತ್ರ
  • Share this:
ಲಾಕ್​ಡೌನ್​ ಆರಂಭದಲ್ಲಿ ಕೊರೋನಾ ಕಾರಣದಿಂದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳನ್ನು ಮುಚ್ಚಲಾಗಿತ್ತು. ಆದರೆ, ಸುಮಾರು ಏಳು ತಿಂಗಳ ನಂತರ ಮತ್ತೆ ಸಿನಿಮಾ ಪ್ರದರ್ಶನಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಯಿತು. ಈಗ ಚಿತ್ರಮಂದಿರಗಳು ತೆರೆದು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಆದರೂ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ. ಇದು ಕೇವಲ ಇಲ್ಲಿನ ಪರಿಸ್ಥಿತಿಯಲ್ಲ. ದೇಶ-ವಿದೇಶಗಳಲ್ಲೂ ಇದೇ ಸ್ಥಿತಿ. ಸಿನಿಮಾ ಪ್ರದರ್ಶನಕ್ಕೆ ಅನುಮತಿ ಸಿಕ್ಕ ಕೂಡಲೇ ಹಾಲಿವುಡ್​ ಸಿನಿಮಾ ಟೆನೆಟ್​ ರಿಲೀಸ್​ ಆಗಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಜನರು ಸಿನಿಮಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರಲೇ ಇಲ್ಲ. ಇದರಿಂದಾಗಿಯೇ ಬಹುನಿರೀಕ್ಷಿತ ಸೂಪರ್​ ಹೀರೋ ಹಾಗೂ ಇತರೆ ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮುಂದಿನ ವರ್ಷಾಂತಕ್ಕೆ ಮಂದೂಡಿವೆ. ಇನ್ನು ರಾಜ್ಯದಲ್ಲೂ ಇದೇ ಪರಿಸ್ಥಿತಿ. ನಿನ್ನೆಯಷ್ಟೆ ಹೊಸ ಸಿನಿಮಾ ಆ್ಯಕ್ಟ್​ 1978 ರಿಲೀಸ್​ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಆದರೆ ಜನರು ಚಿತ್ರಮಂದಿರಗಳತ್ತ ಮುಖ ಮಾಡುತ್ತಿಲ್ಲ. 

ಜನರು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಮಲ್ಟಿಪ್ಲೆಕ್ಸ್​ಗಳಲ್ಲಿ ಒಬ್ಬರು ಅಥವಾ ಇಬ್ಬರು ಇದ್ದರೂ ಸಿನಿಮಾ ಪ್ರದರ್ಶನವಾಗುತ್ತಿದೆ. ಇಂತಹ ಪರಿಸ್ಥಿತಿ ಇಡೀ ದೇಶದೆಲ್ಲೆಡೆ ಇದೆ. ಇದೇ ಕಾರಣದಿಂದಾಗಿ ಕೋಲ್ಕತ್ತದಲ್ಲಿ ಸಿಂಗಲ್​ ಸ್ಕ್ರೀನ್​ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರಂತೆ ಚಿತ್ರಮಂದಿರಗಳ ಮಾಲೀಕರು.

After 7 months theaters reopened and not getting good response from movie lovers, Theatre Reopening Guidelines: In Kannada Film Industry Only Half of the theater will open from Friday,
ಸಾಂದರ್ಭಿಕ ಚಿತ್ರ


ದಿನಕ್ಕೆ ಕೇವಲ 30 ಮಂದಿ ಮಾತ್ರ ಸಿನಿಮಾ ನೋಡಲು ಬರುತ್ತಿದ್ದು, ಚಿತ್ರಮಂದಿರಗಳ ಮಾಲೀಕರು ನಷ್ಟ ಎದುರಿಸುವಂತಾಗಿದೆಯಂತೆ. ಈಗಿರುವ ಪರಿಸ್ಥಿತಿಯಲ್ಲಿ ಸಿನಿಮಾ ಪ್ರದರ್ಶನ ಮಾಡುವುದರೊಂದಿಗೆ ಸಿಬ್ಬಂದಿಗೆ ವೇತನ ನೀಡುವಷ್ಟು ಹಣ ಬರುತ್ತಿಲ್ಲವಂತೆ. ಅದಕ್ಕಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೂ ಸಿಂಗ್​ ಸ್ಕ್ರೀನ್​ ಮುಚ್ಚುವ ನಿರ್ಧಾರ ಮಾಡಿದ್ದಾರಂತೆ. ಇನ್ನು ಕೋಲ್ಕತ್ತಾದಲ್ಲಿ ಮೇನಕಾ ಹಾಗೂ ಇತರೆ ಚಿತ್ರಮಂದಿರಗಳು ನಿನ್ನೆಯಿಂದಲೇ ಪ್ರದರ್ಶನ ಸ್ಥಗಿತಗೊಳಿಸಿವೆ.

ಇದನ್ನೂ ಓದಿ: ಸಾಂಪ್ರದಾಯಿಕ ಉಡುಗೆ ಸೀರೆಗೆ ಮಾಡರ್ನ್​ ಸ್ಟೈಲಿಶ್​ ಟಚ್​ ಕೊಟ್ಟ ಮಲೈಕಾ ಅರೋರಾ..!

ಕೋಲ್ಕತ್ತಾದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಅವರ ನೆಚ್ಚಿನ ನೆಟರ ಸಿನಿಮಾಗಳನ್ನು ಪ್ರದರ್ಶಿಸಲಾಗಿದೆಯಂತೆ. ಆದರೂ ದಿನಕ್ಕೆ 25-30 ಮಂದಿ ಮಾತ್ರ ಸಿನಿಮಾ ನೋಡಲು ಬರುತ್ತಿದ್ದಾರಂತೆ. ಇನ್ನು ಕೆಲವು ಶೋಗಳಲ್ಲಿ 4-5 ಜನ ಮಾತ್ರ ಇರುತ್ತಾರೆ ಎಂದು ಕೋಲ್ಕತ್ತಾದ ಪ್ರಿಯಾ ಸಿನಿಮಾದ ಮಾಲೀಕರಾದ ಅರಿಜಿತ್​ ದತ್​ ಹೇಳಿದ್ದಾರೆ.
Published by: Anitha E
First published: November 21, 2020, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories