ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಬಹುನಿರೀಕ್ಷಿತ ಸಿನಿಮಾ ಪೊಗರು. ಇದರ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ತೆರೆಗಪ್ಪಳಿಸಲು ಸಿದ್ಧವಾಗುತ್ತಿರುವ ಪೊಗರು ಚಿತ್ರದಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಪೊಗರು ಚಿತ್ರದ ಡೈಲಾಗರ್ ಟೀಸರ್, ಹಾಡುಗಳು, ಪೋಸ್ಟರ್ ಹಾಗೂ ಟೀಸರ್ಗೆ ಈಗಾಗಲೇ ಸಖತ್ ಪ್ರತಿಕ್ರಿಯೆ ಸಿಕ್ಕಿದ್ದು, ಇದು ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಇರುವ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇನ್ನು ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ತೆಲುಗಿನಲ್ಲೂ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದ ಖರಾಬು ಹಾಡಿಗೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಎರಡರಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದ ಕಡೆಯ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿರುವಾಗಲೇ ಧ್ರುವ ಅವರಿಗೆ ಮತ್ತೆರಡು ಸಿನಿಮಾಗಳಿಂದ ಆಫರ್ ಸಿಕ್ಕಿದೆ. ಚಿರು ಹುಟ್ಟುಹಬ್ಬದಂದು ಪೊಗರು ನಿರ್ದೇಶಕ ನಂದಕಿಶೋರ್ ಜೊತೆಯೇ ಮತ್ತೊಂದು ಚಿತ್ರಕ್ಕೆ ಓಕೆ ಮಾಡಿದ್ದರು ಧ್ರುವ.
ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾ ದುಬಾರಿ. ಚಿರು ಸರ್ಜಾ ಹುಟ್ಟುಹಬ್ಬದಂದೇ ಈ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ಮಾಡಿಸಲಾಗಿತ್ತು. ಇನ್ನುಈ ಚಿತ್ರಕ್ಕೆ ಈಗ ಟೈಟಲ್ ಫಿಕ್ಸ್ ಆಗಿದೆ. ಜೊತೆಗೆ ಚಿತ್ರತಂಡ ಟೈಟಲ್ ಪೋಸ್ಟರ್ ಸಹ ರಿಲೀಸ್ ಮಾಡಿದೆ.
ದುಬಾರಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ನೆರವೇರಿದೆ. ಈ ಬಗ್ಗೆ ನಟಿ ತಾರಾನೂರಾಧಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಧ್ರುವ ಸರ್ಜಾ ನಾಯಕರಾಗಿ ಅಭಿನಯಿಸುತ್ತಿರುವ ಹೊಸ ಚಲನಚಿತ್ರದ ಮುಹೂರ್ತ ಇಂದು ಬೆಳಗಿನ ಜಾವ ಬೆಂಗಳೂರಿನ ದೇವಸ್ಥಾನದಲ್ಲಿ ನೆರವೇರಿತು. ಉದಯ್ ಮೆಹ್ತಾ ನಿರ್ಮಾಣದ ಹಾಗೂ ನಂದಕೀಶೊರ್ ನಿರ್ದೇಶನ ಚಿತ್ರಕ್ಕೆ ದುಬಾರಿ ಎಂದು ಹೆದರಿಡಲಾಗಿದೆ ಎಂದು ತಾರಾ ಪೋಸ್ಟ್ ಮಾಡಿದ್ದಾರೆ.
ಈ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದ ತಾರಾ ಅವರೇ ಕ್ಯ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ದುಬಾರಿ ಸಿನಿಮಾಗೆ ಐ ಆ್ಯಮ್ ವೆರಿ ಕಾಸ್ಲಿ ಎನ್ನುವ ಟ್ಯಾಗ್ ಲೈನ್ ಇದೆ.
ಮುಹೂರ್ತ ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ, ಪ್ರಥಮ್, ಗಾಯಕ ಚಂದನ್ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು. ಆದರೆ ಸಿನಿಮಾದಲ್ಲಿ ಧ್ರುವಾಗೆ ನಾಯಕಿ ಯಾರು ಅನ್ನೋದ್ರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ