Aindrita Ray: ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ: ಐಂದ್ರಿತಾ-ದಿಗಂತ್​ಗೆ ನೋಟಿಸ್​ ನೀಡಿದ ಸಿಸಿಬಿ ಪೊಲೀಸರು..!

Diganth: ಮಾದಕ ವಸ್ತು ಪ್ರಕರಣದಲ್ಲಿ ದಿಗಂತ್​ ಹಾಗೂ ಐಂದ್ರಿತಾಗೂ ಸಿಸಿಬಿ ಪೊಲೀಸರು ಶಾಕ್​ ನೀಡಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಿಗ್ಗೆ 11ಕ್ಕೆ ಬರುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ದಿಗಂತ್​ ಹಾಗೂ ಐಂದ್ರಿತಾ ರೇ

ದಿಗಂತ್​ ಹಾಗೂ ಐಂದ್ರಿತಾ ರೇ

  • Share this:
ಸ್ಯಾಂಡಲ್​ವುಡ್​ ಹಾಗೂ ಡ್ರಗ್ಸ್​ ಮಾಫಿಯಾಗೂ ನಂಟಿರುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ಕಳೆದ ಕೆಲವು ವಾರಗಳಿಂದ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರಿಗೂ ಸಿಸಿಬಿ ಪೊಲೀಸ್ರು ನೋಟಿಸ್​ ನೀಡಿದ್ದಾರೆ. ಈ ಮಾದಕ ವಸ್ತು ಪ್ರಕರಣದಲ್ಲಿ ಮಾಹಿತಿ ಕಲೆ ಹಾಕುವ ಅಗತ್ಯವಿದೆ. ಅದಕ್ಕಾಗಿಯೇ ಸ್ಟಾರ್​ ದಂಪತಿ ದಿಗಂತ್  ಹಾಗೂ ಐಂದ್ರಿತಾರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಮಾದಕವಸ್ತು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್​ ಅವರ ಜೊತೆ ಐಂದ್ರಿತಾ ರೇ ಇರುವ ಫೋಟೋಗಳಿವೆ. ಈ ಹಿಂದೆ ನಟಿ ಐಂದ್ರಿತಾ ಪಾರ್ಟಿಗಳಿಗೆ ಆಹ್ವಾನ ನೀಡುವ ವೀಡಿಯೋ ವೈರಲ್ ಆಗಿದ್ದವು. 

ಮಾದಕ ವಸ್ತು ಪ್ರಕರಣದಲ್ಲಿ ದಿಗಂತ್​ ಹಾಗೂ ಐಂದ್ರಿತಾಗೂ ಸಿಸಿಬಿ ಪೊಲೀಸರು ಶಾಕ್​ ನೀಡಿದ್ದಾರೆ. ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಿಗ್ಗೆ 11ಕ್ಕೆ ಬರುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಎ 1 ಆರೋಪಿ ಶಿವಪ್ರಕಾಶ್​ ಜೊತೆ ರಾಗಿಣಿ ಆತ್ಮೀಯವಾಗಿದ್ದರು. ಅಲ್ಲದೆ ಐಂದ್ರಿತಾ ಹಾಗೂ ದಿಗಂತ್​ ಅವರೂ ಶಿವಪ್ರಕಾಶ್​ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಅಷ್ಟೇಅಲ್ಲ, ನಿರ್ಮಾಪಕರಾಗಿರುವ ಶಿವಪ್ರಕಾಶ್​ ಅವರು ಕೊಡುತ್ತಿದ್ದ ಪಾರ್ಟಿಗಳಲ್ಲಿ ರಾಗಿಣಿ, ದಿಗಂತ್​, ಸಂಜನಾ, ಐಂದ್ರಿತಾ ಹಾಗೂ ಇತರೆ ಸೆಲೆಬ್ರಿಟಿಗಳೂ ಕಾಣಿಸಿಕೊಂಡಿದ್ದರು. ಇನ್ನು ರಾಗಿಣಿ, ದಿಗಂತ್​ ಹಾಗೂ ಐಂದ್ರಿತಾ ಅವರ ಸ್ನೇಹ ಯಾರಿಂದಲೂ ಮಿಚ್ಚಿಟ್ಟಿಲ್ಲ. ಈ ಮೂರು ಮಂದಿ ಒಂದಡೆ ಸೇರಿ ಪಾರ್ಟಿ ಮಾಡುತ್ತಿದ್ದ ಫೋಟೋಗಳನ್ನು ಈಗಲೂ ದಿಗಂತ್​ ಅವರ ಇನ್​ಸ್ಟಾಗ್ರಾಂನಲ್ಲಿ ಕಾಣಬಹುದಾಗಿದೆ.

Diganth Manchale, Aindrita Ray, Sandalwod, Drug Mafia, Ragini, Shivakumar, Drug Mafia in Sandalwood CCB police issued notice , Diganth and Aindrita RayDrug Mafia in Sandalwood CCB police issued notice to Diganth and Aindrita Ray
ದಿಗಂತ್​ - ರಾಗಿಣಿ


ಐಂದ್ರಿತಾ ಮದುವೆ ಸಂದರ್ಭದಲ್ಲಿ ರಾಗಿಣಿ ಜೊತೆಗೇ ಇದ್ದರು. ಈಗಾಗಲೇ ಮಾದಕವಸ್ತು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಜೊತೆ ಐಂದ್ರಿತಾ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಬಂಧಿತರಲ್ಲಿ ಕೆಲವರು ಐಂದ್ರಿತಾರ ಹೆಸರನ್ನೂ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಹಲವಾರು ಸಲ, ವೈಭವ್ ಜೈನ್ ಮತ್ತು ವಿರೇನ್ ಖನ್ನಾ ಆಯೋಜಿತ ಪಾರ್ಟಿಯಲ್ಲಿ ಭಾಗಿ ಈ ಸ್ಟಾರ್​ ದಂಪತಿ ಭಾಗಿಯಾಗಿದ್ದಾರಂತೆ.

Diganth Manchale, Aindrita Ray, Sandalwod, Drug Mafia, Ragini, Shivakumar, Drug Mafia in Sandalwood CCB police issued notice to Diganth and Aindrita Ray, Drug Mafia in Sandalwood CCB police issued notice to Diganth and Aindrita Ray
ದಿಗಂತ್​-ಐಂದ್ರಿತಾ ವಿವಾಹದಲ್ಲಿ ಭಾಗಿಯಾಗಿದ್ದ ರಾಗಿಣಿ ದ್ವಿವೇದಿ


Diganth Manchale, Aindrita Ray, Sandalwod, Drug Mafia, Ragini, Shivakumar, Drug Mafia in Sandalwood CCB police issued notice to Diganth and Aindrita Ray, Drug Mafia in Sandalwood CCB police issued notice to Diganth and Aindrita Ray
ಐಂದ್ರಿತಾ, ಶೇಖ್ ಪಾಜಿಲ್​ ಹಾಗೂ  ಬಾಲಿವುಡ್​ ನಟ ಸಂಜಯ್​ ಕಪೂರ್​


ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೇಖ್ ಪಾಜಿಲ್ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶೇಖ್ ಫಾಜಿಲ್ ಬಗ್ಗೆ ಐಂದ್ರಿತಾಗೆ ಮಾಹಿತಿ ಇರೋ ಹಿನ್ನಲೆ ಸಿಸಿಬಿಯಿಂದ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ, ಕಸಿನೋ ಪಾರ್ಟಿಯಲ್ಲಿ ಐಂದ್ರಿತಾ ಭಾಗಿಯಾಗಿದ್ದ ಬಗ್ಗೆ ಸಂಜನಾ ಮತ್ತು ರಾಹುಲ್ ಮಾಹಿತಿ ನೀಡಿದ್ದು, ಇವರ ಹೇಳಿಕೆ ಆಧಾರದ ಮೇಲೆಯೇ ಐಂದ್ರಿತಾಗೆ ನೋಟಿಸ್​ ನೀಡಲಾಗಿದೆ ಎನ್ನಲಾಗುತ್ತಿದೆ.
Published by:Anitha E
First published: