Drishyam 3: ಜಾರ್ಜ್ ಕುಟ್ಟಿ ಕೈಗೆ ಕೋಳ; ದೃಶ್ಯಂ 3 ಪೋಸ್ಟರ್ ವೈರಲ್

'ದೃಶ್ಯಂ 3' ಚಿತ್ರದ ಪೋಸ್ಟರ್​​​ವೊಂದು ಬಹಳ ವೈರಲ್ ಆಗುತ್ತಿದೆ. ಪೋಸ್ಟರ್​ನಲ್ಲಿ ಜಾರ್ಜ್ ಕುಟ್ಟಿ ಪಾತ್ರಧಾರಿ ಮೋಹನ್ ಲಾಲ್ ಕೈಗಳಿಗೆ ಕೋಳ ತೊಡಿಸಲಾಗಿದೆ. ಅದಷ್ಟು ಬೇಗ ದೃಶ್ಯಂಭಾಗ 3 ಚಿತ್ರದ ಚಿತ್ರೀಕರಣ ಶುರುವಾಗಲಿದೆ ಅನ್ನೋ ಮಾತು ಕೇಳಿಬರ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ ವೈರಲ್​

  • Share this:
9 ವರ್ಷಗಳ ಹಿಂದೆ ಮಲಯಾಳಂನಲ್ಲಿ (Malayalam) ರಿಲೀಸ್ ಆಗಿದ್ದ ನಟ ಮೋಹನ್​ ಲಾಲ್ (Mohanlal)​ ಅವರ  ಕ್ರೈಂ ಥ್ರಿಲ್ಲರ್​ ಚಿತ್ರ ದೃಶ್ಯಂ ಭಾರೀ ಸಕ್ಸಸ್ ಕಂಡಿತ್ತು. ಈ ಚಿತ್ರದ ಮತ್ತೊಂದು ಭಾಗ  ದೃಶ್ಯಂ 2 ಕೂಡ ಗೆದ್ದಿತ್ತು. ಪ್ರೇಕ್ಷಕರು ಪಾರ್ಟ್  ​2 ನಲ್ಲಿ ಸಿನಿಮಾ ಕಥೆಗೆ ಮುಕ್ತಾಯ ಹಾಡಲಾಗುತ್ತೆ ಎಂದು ಊಹಿಸಿದ್ರು. ಆದ್ರೆ ನಿರ್ದೇಶಕ ಜಿತು ಜೋಸೆಫ್​ ದೃಶ್ಯಂ (Drishyam 3) ಭಾಗ 2 ರ ಕ್ಲೈಮಾಕ್ಸ್​​​​​ನಲ್ಲಿ ಭಾಗ 3ರ ಸುಳಿವು ನೀಡಿದ್ದರು. ಅದರಂತೆ ಶೀಘ್ರದಲ್ಲೇ ಮೂರನೇ ಭಾಗದ  ಚಿತ್ರೀಕರಣ ಕೂಡಾ ಆರಂಭವಾಗಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ(Social Media) ನಡೆಯುತ್ತಿದೆ.

ದೃಶ್ಯಂ 3 ಪೋಸ್ಟರ್​ ವೈರಲ್​

ಅಷ್ಟಕ್ಕೂ ಈ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವುದು ಚಿತ್ರದ ಒಂದು ಪೋಸ್ಟರ್. ನಿನ್ನೆಯಿಂದ 'ದೃಶ್ಯಂ 3' ಚಿತ್ರದ ಪೋಸ್ಟರ್​​​ವೊಂದು ಬಹಳ ವೈರಲ್ ಆಗುತ್ತಿದೆ. ಪೋಸ್ಟರ್​ನಲ್ಲಿ ಜಾರ್ಜ್ ಕುಟ್ಟಿ ಪಾತ್ರಧಾರಿ ಮೋಹನ್ ಲಾಲ್ ಕೈಗಳಿಗೆ ಕೋಳ ತೊಡಿಸಲಾಗಿದೆ.

ಕನ್ನಡದಲ್ಲೂ ಯಶಸ್ಸು ಕಂಡ ದೃಶ್ಯ

2014ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅಭಿನಯದ 'ದೃಶ್ಯ' ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇ4 ಎಂಟರ್​​​​​​ಟೈನ್ಮೆಂಟ್ ಬ್ಯಾನರ್ ಅಡಿ ಪಿ. ವಾಸು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್​, ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ನಟಿಸಿದ್ದರು. ಪ್ರತಿ ಕ್ಷಣವೂ ಕುತೂಹಲ ಕೆರಳಿಸುವ ಸಿನಿಮಾವನ್ನು ಸಿನಿಪ್ರಿಯರು ಬಹಳ ಮೆಚ್ಚಿಕೊಂಡಿದ್ದರು.

 ದೃಶ್ಯ 2 ಕೂಡ ಗೆದ್ದಿತ್ತು

ಕಳೆದ ವರ್ಷ ಡಿಸೆಂಬರ್​ 10 ರಂದು 'ದೃಶ್ಯ 2 ' ಕೂಡಾ ತೆರೆ ಕಂಡಿತ್ತು. ಈ ಸಿನಿಮಾ ಕೂಡಾ ಮೊದಲ ಚಿತ್ರದಂತೆ ಯಶಸ್ಸು ಗಳಿಸಿತ್ತು. ಇದು ಮಲಯಾಳಂನ 'ದೃಶ್ಯಂ' ಹಾಗೂ 'ದೃಶ್ಯಂ 2' ಚಿತ್ರದ ರೀಮೇಕ್ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿ ಈ ಚಿತ್ರವನ್ನು ಮಲಯಾಳಂ ನಿರ್ದೇಶಕ ಜಿತು ಜೋಸೆಫ್ ಕಥೆ ಬರೆದು ನಿರ್ದೇಶಿಸಿದ್ದರು.

ಅನೇಕ ಭಾಷೆಗಳಲ್ಲಿ ದೃಶ್ಯ ಚಿತ್ರ ರಿಮೇಕ್

ಎಷ್ಟೇ ಮುಂದುವರೆದ ಭಾಗಗಳು ಬಂದರೂ ನಾವು ನೋಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಜನರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಹಿಂದಿ, ಸಿಂಹಳ, ಮ್ಯಾಂಡರಿನ್ ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿತ್ತು. ಈಗ ಇದು ಇಂಡೋನ್ಯೇಶ್ಯನ್ ಭಾಷೆಗೂ ರೀಮೇಕ್ ಆಗುತ್ತಿದೆ.

ಮೂರನೇ ಭಾಗದ ಚಿತ್ರೀಕರಣ ಶುರುವಾಗುತ್ತಾ?

ದೃಶ್ಯಂ ಭಾಗ 2 ರ ಕ್ಲೈಮಾಕ್ಸ್​​​​​ನಲ್ಲಿ ಜಿತು ಜೋಸೆಫ್​ ಭಾಗ 3 ರ ಸುಳಿವು ನೀಡಿದ್ದರು. ಅದರಂತೆ ಶೀಘ್ರದಲ್ಲೇ ಮೂರನೇ ಭಾಗದ ಚಿತ್ರೀಕರಣ ಕೂಡಾ ಆರಂಭವಾಗಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಈ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿರುವುದು ಚಿತ್ರದ ಒಂದು ಪೋಸ್ಟರ್. ನಿನ್ನೆಯಿಂದ 'ದೃಶ್ಯಂ 3' ಚಿತ್ರದ ಪೋಸ್ಟರ್​​​ವೊಂದು ಬಹಳ ವೈರಲ್ ಆಗುತ್ತಿದೆ.

ಮೋಹನ್ ಲಾಲ್ ಕೈಗಳಿಗೆ ಕೋಳ

ಇದರಲ್ಲಿ ಜಾರ್ಜ್ ಕುಟ್ಟಿ ಪಾತ್ರಧಾರಿ ಮೋಹನ್ ಲಾಲ್ ಕೈಗಳಿಗೆ ಕೋಳ ತೊಡಿಸಲಾಗಿದೆ. ಜಾರ್ಜ್ ಕುಟ್ಟಿ ಮುಂದೇನು ಎಂದು ಯೋಚಿಸುತ್ತಾ ಮೌನವಾಗಿ ಕುಳಿತಿದ್ದಾರೆ. ದೃಶ್ಯಂ ಚಿತ್ರತಂಡ ಇದುವರೆಗೂ ಚಿತ್ರದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಆದರೂ ದೃಶ್ಯಂ 3 ಪೋಸ್ಟರ್ ಮಾತ್ರ ಭಾರೀ ಸದ್ದು ಮಾಡುತ್ತಿದೆ. ಸದ್ಯ ವೈರಲ್ ಆಗಿರುವ ಪೋಸ್ಟರ್‌ನಲ್ಲಿ 'ದೃಶ್ಯಂ'-3 ದಿ ಕನ್‌ಕ್ಲೂಷನ್ ಎಂದು ಬರೆಯಲಾಗಿದೆ. ಕಥೆಗೆ ಮೂರನೇ ಭಾಗದಲ್ಲಿ ಅಂತ್ಯ ಹಾಡುವ ಸಾಧ್ಯತೆಯಿದೆ
Published by:Pavana HS
First published: