9 ವರ್ಷಗಳ ಹಿಂದೆ ಮಲಯಾಳಂನಲ್ಲಿ (Malayalam) ರಿಲೀಸ್ ಆಗಿದ್ದ ನಟ ಮೋಹನ್ ಲಾಲ್ (Mohanlal) ಅವರ ಕ್ರೈಂ ಥ್ರಿಲ್ಲರ್ ಚಿತ್ರ ದೃಶ್ಯಂ ಭಾರೀ ಸಕ್ಸಸ್ ಕಂಡಿತ್ತು. ಈ ಚಿತ್ರದ ಮತ್ತೊಂದು ಭಾಗ ದೃಶ್ಯಂ 2 ಕೂಡ ಗೆದ್ದಿತ್ತು. ಪ್ರೇಕ್ಷಕರು ಪಾರ್ಟ್ 2 ನಲ್ಲಿ ಸಿನಿಮಾ ಕಥೆಗೆ ಮುಕ್ತಾಯ ಹಾಡಲಾಗುತ್ತೆ ಎಂದು ಊಹಿಸಿದ್ರು. ಆದ್ರೆ ನಿರ್ದೇಶಕ ಜಿತು ಜೋಸೆಫ್ ದೃಶ್ಯಂ (Drishyam 3) ಭಾಗ 2 ರ ಕ್ಲೈಮಾಕ್ಸ್ನಲ್ಲಿ ಭಾಗ 3ರ ಸುಳಿವು ನೀಡಿದ್ದರು. ಅದರಂತೆ ಶೀಘ್ರದಲ್ಲೇ ಮೂರನೇ ಭಾಗದ ಚಿತ್ರೀಕರಣ ಕೂಡಾ ಆರಂಭವಾಗಬಹುದು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ(Social Media) ಹಬ್ಬಿತ್ತು. ದೃಶ್ಯ ಪಾರ್ಟ್ 3 ಬರೋದು ಪಕ್ಕಾ ಆಗಿದೆ.
ಚಿತ್ರತಂಡದಿಂದಲೇ ಅಧಿಕೃತ ಘೋಷಣೆ
ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಅವರು ಶನಿವಾರ ಮಜವಿಲ್ ಎಂಟರ್‌ಟೈನ್‌ಮೆಂಟ್ ಅವಾರ್ಡ್ಸ್‌ನಲ್ಲಿ ದೃಶ್ಯಂ ಭಾಗ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ದೃಶ್ಯಂ 3 ಕ್ರೇಜ್ ಹೆಚ್ಚಾಗಿದ್ದು, ಅಭಿಮಾನಿಗಳು 'ದೃಶ್ಯಂ 3' ಹ್ಯಾಶ್‌ಟ್ಯಾಗ್ ಅನ್ನು ಟ್ರೆಂಡಿಂಗ್ ಮಾಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಕ್ಲಾಸಿಕ್ ಕ್ರಿಮಿನಲ್ ಈಸ್ ಬ್ಯಾಕ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
And its Official Now !! #Drishyam3 🔥🔜@Mohanlal - #JeethuJoseph pic.twitter.com/3ia8f76Q5n
— Joyal (@j_o_y_a_l_) August 27, 2022
2013 ರಲ್ಲಿ ಜೀತು ಜೋಸೆಫ್ ಮಲಯಾಳಂನಲ್ಲಿ ಕ್ರೈಮ್ ಥ್ರಿಲ್ಲರ್ ಸಿನಿಮಾ ದೃಶ್ಯಂ ನಿರ್ದೇಶಿಸಿದ್ರು. ಬಾಕ್ಸಾಫೀಸ್ನಲ್ಲಿ ಭಾರೀ ಸದ್ದು ಮಾಡಿದ್ದ ದೃಶ್ಯಂ ಚಿತ್ರ, ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು. ಚಿತ್ರ ಯಶಸ್ವಿಯಾದ ಬಳಿಕ ಅದು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಇತರ ನಾಲ್ಕು ಭಾಷೆಗಳಲ್ಲಿ ರೀಮೇಕ್ ಆಗಿದೆ.
And its Official Now !!
Classic criminal is back 🔥#Drishyam3 Happening soon...! 🥵
Everest level hype 💥🔥@Mohanlal | #Mohanlal@aashirvadcine - #Jeethu pic.twitter.com/N1WE4vFJxj
— Naveenkumar`°´ (@NAVEENK75503966) August 28, 2022
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರೋ ಪೋಸ್ಟರ್‌ನಲ್ಲಿ ಜಾರ್ಜ್ ಕುಟ್ಟಿ ಪಾತ್ರಧಾರಿ ಮೋಹನ್ ಲಾಲ್ ಕೈಗಳಿಗೆ ಕೋಳ ತೊಡಿಸಲಾಗಿದೆ. ಜಾರ್ಜ್ ಕುಟ್ಟಿ ಮುಂದೇನು ಎಂದು ಯೋಚಿಸುತ್ತಾ ಮೌನವಾಗಿ ಕುಳಿತಿದ್ದಾರೆ. ದೃಶ್ಯಂ 3 ಪೋಸ್ಟರ್ ಭಾರೀ ಸದ್ದು ಮಾಡುತ್ತಿದೆ. ಸದ್ಯ ವೈರಲ್ ಆಗಿರುವ ಪೋಸ್ಟರ್‌ನಲ್ಲಿ 'ದೃಶ್ಯಂ'-3 ದಿ ಕನ್‌ಕ್ಲೂಷನ್ ಎಂದು ಬರೆಯಲಾಗಿದೆ. ಕಥೆಗೆ ಮೂರನೇ ಭಾಗದಲ್ಲಿ ಅಂತ್ಯ ಹಾಡುವ ಸಾಧ್ಯತೆಯಿದೆ
ಕನ್ನಡದಲ್ಲೂ ಯಶಸ್ಸು ಕಂಡ ದೃಶ್ಯ
2014ರಲ್ಲಿ ಬಿಡುಗಡೆಯಾದ ರವಿಚಂದ್ರನ್ ಅಭಿನಯದ 'ದೃಶ್ಯ' ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇ4 ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ಪಿ. ವಾಸು ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್, ನವ್ಯಾ ನಾಯರ್, ಆರೋಹಿ ನಾರಾಯಣ್, ಉನ್ನತಿ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ನಟಿಸಿದ್ದರು. ಪ್ರತಿ ಕ್ಷಣವೂ ಕುತೂಹಲ ಕೆರಳಿಸುವ ಸಿನಿಮಾವನ್ನು ಸಿನಿಪ್ರಿಯರು ಬಹಳ ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ: Drishyam 3: ಜಾರ್ಜ್ ಕುಟ್ಟಿ ಕೈಗೆ ಕೋಳ; ದೃಶ್ಯಂ 3 ಪೋಸ್ಟರ್ ವೈರಲ್
ದೃಶ್ಯ 2 ಕೂಡ ಗೆದ್ದಿತ್ತು
ಕಳೆದ ವರ್ಷ ಡಿಸೆಂಬರ್ 10 ರಂದು 'ದೃಶ್ಯ 2 ' ಕೂಡಾ ತೆರೆ ಕಂಡಿತ್ತು. ಈ ಸಿನಿಮಾ ಕೂಡಾ ಮೊದಲ ಚಿತ್ರದಂತೆ ಯಶಸ್ಸು ಗಳಿಸಿತ್ತು. ಇದು ಮಲಯಾಳಂನ 'ದೃಶ್ಯಂ' ಹಾಗೂ 'ದೃಶ್ಯಂ 2' ಚಿತ್ರದ ರೀಮೇಕ್ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆಶಿರ್ವಾದ್ ಸಿನಿಮಾಸ್ ಬ್ಯಾನರ್ ಅಡಿ ಈ ಚಿತ್ರವನ್ನು ಮಲಯಾಳಂ ನಿರ್ದೇಶಕ ಜಿತು ಜೋಸೆಫ್ ಕಥೆ ಬರೆದು ನಿರ್ದೇಶಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ