Drama Juniors: ಇವ್ರು ಹುಟ್ಟಿರೋದೇ ನಟನೆ ಮಾಡೋಕೆ.. ಶುರುವಾಗ್ತಿದೆ ಡ್ರಾಮಾ ಜೂನಿಯರ್ಸ್- 4 ಮಕ್ಕಳ ದರ್ಬಾರ್!

ಸತತವಾಗಿ 3 ವರ್ಷದಿದಂದ ನಂಬರ್ 1 ಸ್ಥಾನದಲ್ಲಿರುವುದು ಜೀ ಕನ್ನಡಕ್ಕೆ ಹೆಮ್ಮೆಯ ಗರಿ.ಬರೋಬ್ಬರಿ ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆಂದೇ ಡ್ರಾಮ ಜೂನಿಯರ್ಸ್ ಸೀಸನ್ 4(Drama Juniors Season 4) ಕಾರ್ಯಕ್ರಮವನ್ನು ಅದ್ದೂರಿಯಾಗಿ ಲಾಂಚ್ ಮಾಡಲಿದೆ.

ಶುರುವಾಗ್ತಿದೆ ಡ್ರಾಮಾ ಜೂನಿಯರ್ಸ್ ಸೀಸನ್​ 4

ಶುರುವಾಗ್ತಿದೆ ಡ್ರಾಮಾ ಜೂನಿಯರ್ಸ್ ಸೀಸನ್​ 4

  • Share this:
ಕನ್ನಡ ಕಿರುತೆರೆ(Kannada Small Screen)ಯ ಲೋಕದಲ್ಲಿ ಜೀ ಕನ್ನಡ(Zee Kannada) ವಾಹಿನಿ ಕೇವಲ ಮನರಂಜನೆ(Entertainment)ಯ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ‘ವೀಕೆಂಡ್ ವಿತ್ ರಮೇಶ್’(Weekend With Ramesh), ‘ ಡ್ರಾಮಾ ಜೂನಿಯರ್ಸ್​’(Drama Juniors), ‘ಸರಿಗಮಪ’(SARIGAMAPA), ‘ಕಾಮಿಡಿ ಕಿಲಾಡಿಗಳು’(Comedy Khiladigalu), ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’(Dance Karnataka Dance), ‘ಜೀನ್ಸ್’(Jeans), ‘ಕನ್ನಡದ ಕಣ್ಮಣಿ’(Kannada Kanmani), ‘ಯಾರಿಗುಂಟು ಯಾರಿಗಿಲ್ಲ’, ಹೀಗೆ ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಸತತವಾಗಿ 3 ವರ್ಷದಿದಂದ ನಂಬರ್ 1 ಸ್ಥಾನದಲ್ಲಿರುವುದು ಜೀ ಕನ್ನಡಕ್ಕೆ ಹೆಮ್ಮೆಯ ಗರಿ.ಬರೋಬ್ಬರಿ ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆಂದೇ ಡ್ರಾಮ ಜೂನಿಯರ್ಸ್ ಸೀಸನ್ 4(Drama Juniors Season 4) ಕಾರ್ಯಕ್ರಮವನ್ನು ಅದ್ದೂರಿಯಾಗಿ ಲಾಂಚ್ ಮಾಡಲಿದೆ.

ಶುರುವಾಗ್ತಿದೆ ಡ್ರಾಮಾ ಜೂನಿಯರ್ಸ್​ ಸೀಸನ್​ 4

ಫಿಕ್ಷನ್‌ ಮತ್ತು ನಾನ್‌ಫಿಕ್ಷನ್ ವಿಭಾಗದಲ್ಲಿ ಸತತ ಮೂರು ವರ್ಷಗಳಿಂದ  ನಂಬರ್ ಒನ್ ವಾಹಿನಿಯಾಗಿರುವ ಜೀ ಕನ್ನಡ ಇದೀಗ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಲಾಕ್ ಡೌನ್ ನಂತರ ಮಕ್ಕಳ ಕಾರ್ಯಕ್ರಮಕ್ಕಾಗಿ ಮೆಗಾ ಆಡಿಷನ್ ಮಾಡಿದೆ. 15ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್ಸ್ ನಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ಮಹತ್ವ ಮತ್ತು ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದೇ ಮಾರ್ಚ್ 19ರಂದು ಸಂಜೆ 7.30 ಕ್ಕೆ ಡ್ರಾಮಾ ಜೂನಿಯರ್ಸ್ ಫ್ಲೈಟ್ ನೇರವಾಗಿ ನಿಮ್ಮ ಮನೆಯಂಗಳದಲ್ಲಿ ಲ್ಯಾಂಡ್ ಆಗಲಿದೆ.

ಒಂದೇ ವೇದಿಕೆಯಲ್ಲಿ ಕ್ರೇಜಿಸ್ಟಾರ್​, ಜೂಲಿ, ಡಿಂಪಲ್ ಕ್ವೀನ್​!

ಹಿಂದಿನ 3 ಸೀಸನ್ ಗಳಲ್ಲಿ ತೀರ್ಪುಗಾರರಾಗಿದ್ದ ಜೂಲಿ ಲಕ್ಷ್ಮೀ ರವರು 4 ನೇ ಸೀಸನ್ ನಲ್ಲೂ ಮುಂದುವರೆದಿದ್ದರೆ ಅವರ ಜೊತೆಗೆ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಜೊತೆಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕಿಡ್ನ್ಯಾಪ್ ಪ್ರೋಮೋಗಳು ಎಲ್ಲೆಡೆ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಅದಲ್ಲದೆ ಇಲ್ಲಿವರೆಗೂ ವಿಶೇಷ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದ ರವಿಚಂದ್ರನ್ ಅವರು ಈಗ ಜೀ ಕನ್ನಡವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿರುವುದು ವೀಕ್ಷಕರಲ್ಲಿ ತುಂಬಾ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅವ್ವಾ ಕೇಳೇ.. ತಿಳಿ ನೀಲಿ ಆಗಸದಿ ಎಲ್ಲಿರುವೆ ಹೇಳೇ.. ತಾಯಿಯ ಬಗ್ಗೆ Neenasam Sathish ಹಾಡು

10 ವರ್ಷದ ಬಳಿಕ ಜೀಗೆ ಬಂದ ರಚಿತಾ ರಾಮ್​!

ರವಿಚಂದ್ರನ್ , ಲಕ್ಷ್ಮೀ ಅವರ ಜೊತೆಗೆ ಸುಮಾರು 10 ವರ್ಷಗಳ ನಂತರ‌ ಜೀ ಕುಟುಂಬದ ಅರಸಿ ಡಿಂಪಲ್ ಕ್ವೀನ್ ರಚಿತಾರಾಮ್ ರವರು ಡ್ರಾಮಾ ಜೂನಿಯರ್ಸ್ ನ ಮತ್ತೋರ್ವ ತೀರ್ಪುಗಾರರಾಗಿ ಬರುತ್ತಿರುವುದು ತುಂಬಾ ವಿಶೇಷ. ರಚಿತಾ ರಾಮ್ ರವರ  ಪ್ರೊಮೋ ತುಂಬಾ ವಿಶೇಷವಾಗಿ ಮೂಡಿಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮಾತಿನ ಮಲ್ಲ ಮಾಸ್ಟರ್​ ಆನಂದ್​ ನಿರೂಪಣೆ!

ಸೀಸನ್ ಡ್ರಾಮಾ ಜೂನಿಯರ್ಸ್ ವಿಶೇಷತೆಯೆಂದರೆ ನಮ್ಮ ನಾಡಿನ ಸೊಗಡು , ಸಾಧಕರ ಯಶೋಗಾಥೆ , ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನೇಕ ಸಾಹಿತಿಗಳ ಗದ್ಯಗಳು , ಸಣ್ಣ ಕಥೆಗಳು , ಕನ್ನಡ ತನವನ್ನು ಪ್ರತಿನಿಧಿಸುವ ಕಥೆಗಳನ್ನು ಮಕ್ಕಳ ಮುಖಾಂತರ ಸಾಮಾನ್ಯರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಮಾತಿನ ಮಲ್ಲ ಮಾಸ್ಟರ್ ಆನಂದ್ ರವರ ನಿರೂಪಕರಾಗಿ ಈ ಸೀಸನ್ ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಡಿಂಪಲ್​ ಕ್ವೀನ್​ ರಚಿತಾ ರಾಮ್​ ತಲೆಗೆ ಗನ್​ ಇಟ್ಟು ಕಿಡ್ನಾಪ್​, ಅಭಿಮಾನಿಗಳಿಗೆ ಶಾಕ್​!

ಇದೇ ಮಾರ್ಚ್ 19 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ನಿಮ್ಮ ನೆಚ್ಚಿನ  ಜೀ಼ಕನ್ನಡವಾಹಿನಿಯಲ್ಲಿ ಪ್ರಸಾರವಾಗಲಿದೆ
Published by:Vasudeva M
First published: