Drama Juniors: ಡ್ರಾಮಾ ಮಾಡೋಕೆ ಆಯ್ಕೆ ಆದ್ರು 25 ಮಕ್ಕಳು, ಇವ್ರು ಹುಟ್ಟಿರೋದೇ ನಟನೆ ಮಾಡೋಕೆ

ಮಕ್ಕಳಿಗೆಂದೇ ಡ್ರಾಮ ಜೂನಿಯರ್ಸ್ ಸೀಸನ್ 4 (Drama Juniors Season 4) ಕಾರ್ಯಕ್ರಮವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ಈಗಾಗಲೇ ಇದರ ಮೆಗಾ ಆಡಿಷನ್​ ನಡೆದಿದ್ದು 25 ಮಕ್ಕಳು ಆಯ್ಕೆ ಆಗಿದ್ದಾರೆ.

ಡ್ರಾಮಾ ಜೂನಿಯರ್ಸ್-4

ಡ್ರಾಮಾ ಜೂನಿಯರ್ಸ್-4

  • Share this:
ಕನ್ನಡ ಕಿರುತೆರೆ (Kannada Small Screen) ಲೋಕದಲ್ಲಿ ಜೀ ಕನ್ನಡ (Zee Kannada) ವಾಹಿನಿ ಕೇವಲ ಮನರಂಜನೆ (Entertainment) ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ, ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರುವಲ್ಲಿ ಸತತ ಪ್ರಯತ್ನ ನಡೆಸುತ್ತಿದೆ ಎಂದರೂ ತಪ್ಪಾಗಲಾರದು. ಹೌದು, ಡ್ರಾಮಾ ಜೂನಿಯರ್ಸ್​ (Drama Juniors), ಸರಿಗಮಪ (SARIGAMAPA), ಕಾಮಿಡಿ ಕಿಲಾಡಿಗಳು (Comedy Khiladigalu) ಹೀಗೆ ಸಾಲು ಸಾಲು ವಿನೂತನ ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರ ಮನೆ-ಮನಗಳನ್ನು ಮೆಚ್ಚಿಸಿ ಸತತವಾಗಿ 3 ವರ್ಷದಿದಂದ ನಂಬರ್ 1 ಸ್ಥಾನದಲ್ಲಿರುವುದು ಜೀ ಕನ್ನಡಕ್ಕೆ ಹೆಮ್ಮೆಯ ಗರಿ. ಬರೋಬ್ಬರಿ ಮೂರು ವರ್ಷಗಳ ನಂತರ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆಂದೇ ಡ್ರಾಮ ಜೂನಿಯರ್ಸ್ ಸೀಸನ್ 4 (Drama Juniors Season 4) ಕಾರ್ಯಕ್ರಮವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಗಿದೆ. ಈಗಾಗಲೇ ಇದರ ಮೆಗಾ ಆಡಿಷನ್​ ನಡೆದಿದ್ದು 25 ಮಕ್ಕಳು ಆಯ್ಕೆ ಆಗಿದ್ದಾರೆ.

ತೀರ್ಪುಗಾರರಾಗಿ ಕ್ರೇಜಿಸ್ಟಾರ್​, ಜೂಲಿ, ಡಿಂಪಲ್ ಕ್ವೀನ್​ :

ಕಳೆದ 3 ಸೀಸನ್ ಗಳಲ್ಲಿ ತೀರ್ಪುಗಾರರಾಗಿದ್ದ ಜೂಲಿ ಲಕ್ಷ್ಮೀ ರವರು ಈ ಸೀಸನ್ ನಲ್ಲೂ ಮುಂದುವರೆದಿದ್ದರೆ. ಆದರೆ ಇವರ ಜೊತೆಗೆ ಈ ಬಾರಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಜೊತೆಯಾಗಿದ್ದಾರೆ. ಇವರೊಂದಿಗೆ ಕನ್ನಡದ ಖ್ಯಾತ ನಟಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಸಹ ತೀರ್ಪುಗಾರರಾಗಿ ಬಂದಿದ್ದು, ಈ ಬಾರಿಯ ಸೀಸನ್​ ಮತ್ತಷ್ಟು ಮನೋರಂಜನೆಯಿಂದ ಕೂಡಿರಲಿದ್ದು, ವೀಕ್ಷಕರ ನಿರೀಕ್ಷೆಯು ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ.

25 ಮಕ್ಕಳ ಆಯ್ಕೆ: 

ಕಳೆದ ವಾರದಿಂದ ಅಂದರೆ ಮಾರ್ಚ್ 19ರಿಂದ ಆರಂಭವಾಗಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ, ಸದ್ಯ ಆಡಿಷನ್​ ಹಂತದಲ್ಲಿದೆ.  ಅಲ್ಲದೇ ಇದಕ್ಕೂ ಮೊದಲು ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಲಾಕ್ ಡೌನ್ ನಂತರ ಮಕ್ಕಳ ಕಾರ್ಯಕ್ರಮಕ್ಕಾಗಿ ಮೆಗಾ ಆಡಿಷನ್ ಮಾಡಿದೆ. 15ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆಡಿಷನ್ಸ್ ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೆಲವರನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿದ್ದು, ಇವರಲ್ಲಿ ಫೈನಲ್​ 36 ಮಕ್ಕಳನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Serial Actor: 'ಹಿಟ್ಲರ್ ಕಲ್ಯಾಣ' ನಟ ದಿಲೀಪ್ ರಾಜ್ ಹೊಸ ಮನೆ ಗೃಹ ಪ್ರವೇಶ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಡ್ರಾಮಾ ಜೂನಿಯರ್ಸ್ ಗೆ ಇದುವರೆಗೂ 25 ಮಕ್ಕಳು ಆಯ್ಕೆ ಆಗಿದ್ದಾರೆ. ಪ್ರಾರ್ಥನಾ ರಾಯ್ಕರ್, ವಿಶ್ವ ಶಂಕರ್ ಲಕ್ಕುಂಡಿ, ಚಿರಂತೆ ಕುಂಬಾರ್, ಅಪೇಕ್ಷಾ, ಪೂರ್ವಿ, ಸಮೃದ್ಧಿ,ಸಾತ್ವಿಕ್ ಸತೀಶ್,  ವೇದಿಕ್ ಕೌಶಲ್, ಭಾರ್ಗವ್ ಗೌಡ, ಪರಿಚಿತ್, ರೇಶ್ಮಾ, ರಚನಾ, ಧನ್ಯಾ ದಿನೇಶ್, ಭೈರವಿ ಸೇರಿದಂತೆ ಹಲವರು ಆಯ್ಕೆ ಆಗಿದ್ದಾರೆ. ಮುಂದಿನ ವಾರವೂ ಮೆಗಾ ಆಡಿಷನ್ ನಡೆಯಲಿದ್ದು, ಒಟ್ಟು 36 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಮಾಸ್ಟರ್​ ಆನಂದ್​ ನಿರೂಪಣೆ: 

ಡ್ರಾಮಾ ಜೂನಿಯರ್ಸ್ ಸೀಸನ್ 4 ವಿಶೇಷತೆಯೆಂದರೆ ನಮ್ಮ ನಾಡಿನ ಸೊಗಡು , ಸಾಧಕರ ಯಶೋಗಾಥೆ , ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅನೇಕ ಸಾಹಿತಿಗಳ ಗದ್ಯಗಳು , ಸಣ್ಣ ಕಥೆಗಳು , ಕನ್ನಡ ತನವನ್ನು ಪ್ರತಿನಿಧಿಸುವ ಕಥೆಗಳನ್ನು ಮಕ್ಕಳ ಮುಖಾಂತರ ಸಾಮಾನ್ಯರಿಗೂ ತಲುಪಿಸುವ ಪ್ರಯತ್ನ ಮಾಡುತ್ತಿದೆ. ಮಾತಿನ ಮಲ್ಲ ಮಾಸ್ಟರ್ ಆನಂದ್ ರವರ ನಿರೂಪಕರಾಗಿ ಈ ಸೀಸನ್ ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Drama Juniors: ಇವ್ರು ಹುಟ್ಟಿರೋದೇ ನಟನೆ ಮಾಡೋಕೆ.. ಶುರುವಾಗ್ತಿದೆ ಡ್ರಾಮಾ ಜೂನಿಯರ್ಸ್- 4 ಮಕ್ಕಳ ದರ್ಬಾರ್!

ಸಖತ್ ಹಿಟ್​ ಆಗಿದ್ದ ಕಿಡ್ನ್ಯಾಪ್ ಪ್ರೋಮೋ:

ರಿಯಾಲಿಟಿ ಶೋ ಆರಂಭಗೊಳ್ಳುವುದಕ್ಕೂ ಮೊದಲು ಜೀ ಕನ್ನಡ ವಾಹಿನಿ ಡ್ರಾಮಾ ಜೂನಿಯರ್ಸ್ ಸೀಸನ್ 4ರ ಪ್ರೋಮೋ ಬಿಡುಗಡೆ ಮಾಡಿತ್ತು. ಇದರಲ್ಲಿ ತೀರ್ಪುಗಾರರಾದ ರವಿಂದ್ರನ್​ ಮತ್ತು ರಚಿತಾ ರಾಮ್​ ಅವರನ್ನು ಕಿಡ್ನಾಪ್ ಮಾಡಿದ ರೀತಿಯಲ್ಲಿ ಮಾಡಿದ ಕಿಡ್ನಾಪ್ ಪ್ರೋಮೋ ಎಲ್ಲಡೆ ಸಖತ್ ಹಿಟ್​ ಆಗಿತ್ತು.
Published by:shrikrishna bhat
First published: