Drama Juniors: ಫಸ್ಟ್ ಟೈಂ ಡ್ರಾಮಾ ಜೂನಿಯರ್ಸ್ಗೆ ಬಂದ್ರು ರಿಯಲ್ ‘ಜಡ್ಜ್‘! ಲೋಕ್ ಅದಾಲತ್ ನಾಟಕದ ಬಗ್ಗೆ ಕೊಟ್ಟ ತೀರ್ಪು ಏನು?
ಈ ವಾರವೂ ಡ್ರಾಮಾ ಜೂನಿಯರ್ಸ್ಗೆ ಓರ್ವ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಹೌದು, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬಿ. ವೀರಪ್ಪ (B. Veerappa) ಅವರು ಡ್ರಾಮಾ ಜೂನಿಯರ್ಸ್ ನಲ್ಲಿ ಹಾಜರಿದ್ದರು.
ಕನ್ನಡ ಕಿರುತೆರೆಯ (Kannada Small Screen) ಲೋಕದಲ್ಲಿ ಜೀ ಕನ್ನಡ (Zee Kannada) ವಾಹಿನಿ ಕೇವಲ ಮನರಂಜನೆಯ (Entertainment) ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೇ ಸದಭಿರುಚಿಯ ಕಾರ್ಯಕ್ರಮಗಳನ್ನೂ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಮಕ್ಕಳ ಅಭಿನಯದ ಮೂಲಕ ಜನರ ಮನಸ್ಸಿಗೆ ಮುದನೀಡುತ್ತಿರುವ ಡ್ರಾಮಾ ಜ್ಯೂನಿಯರ್ನ್ ಸೀಸನ್ 4 (Drama Juniors season 4) ಚೆನ್ನಾಗಿ ಮೂಡಿಬರುತ್ತಿದೆ. ಇದಲ್ಲದೇ ಸಮಾಜಕ್ಕೆ ಉತ್ತಮ ಸಂದೇಶ ಕೊಡುವದನ್ನು ರೂಡಿಸಿಕೊಂಡು ಬಂದಿದೆ. ಇನ್ನು, 4ನೇ ಸೀಸನ್ ನಲ್ಲಿ ಹಲವು ವಿಶೇಷ , ಭಕ್ತಿ ಪ್ರಧಾನ ಕಥೆಗಳಿಗೆ, ಸ್ಪೂರ್ತಿದಾಯಕ ಜೀವನಚರಿತ್ರೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಈ ಮೂಲಕ ಮಕ್ಕಳ ಮೂಲಕವೇ ಕನ್ನಡಿಗರಿಗೆ ಜ್ಞಾನಾರ್ಜನೆಯನ್ನು ನೀಡುತ್ತಿದೆ ಎಂದರೂ ತಪ್ಪಾಗಲಾರದು.
ಇದರ ನಡುವೆ ಪ್ರತಿ ವಾರದಂತೆ ಈ ವಾರವೂ ಡ್ರಾಮಾ ಜೂನಿಯರ್ಸ್ಗೆ ಓರ್ವ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಹೌದು, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬಿ. ವೀರಪ್ಪ (B. Veerappa) ಅವರು ಡ್ರಾಮಾ ಜೂನಿಯರ್ಸ್ ನಲ್ಲಿ ಹಾಜರಿದ್ದರು.
ಡ್ರಾಮಾ ಜೂನಿಯರ್ಸ್ ವೇದಿಕೆ ಮೇಲೆ ನ್ಯಾಯಮೂರ್ತಿಗಳು:
ಹೌದು, ಈ ವಾರ ಡ್ರಾಮಾ ಜೂನಿಯರ್ಸ್ ಸೀಸನ್ 4ರಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬಿ. ವೀರಪ್ಪ ಆಗಮಿಸುವ ಮೂಲಕ ಮಕ್ಕಳ ತುಂಟಾಟವನ್ನು, ಆನಂದಿಸಿದ್ದಾರೆ. ಇದಲ್ಲದೇ ಅವರು ಮಕ್ಕಳ ಅಭಿನಯವನ್ನು ಕಂಡು ಮೆಚ್ಚುಗೆ ವ್ಯಕತಪಡಿಸಿ ಎಲ್ಲರಿಗೂ ಆಶೀರ್ವದಿಸಿದ್ದಾರೆ. ಅಂತಿಮವಾಗಿ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯವನ್ನೂ ಸಹ ಮಾಡಿದ್ದಾರೆ. ಇನ್ನು, ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ನ್ಯಾಯಮೂರ್ತಿಗಳೊಬ್ಬರು ಕಾನೂನಿನ ಬಗ್ಗೆ ಅರಿವು ಮೂಡಿಸುವ ಮಹತ್ಕಾರ್ಯವನ್ನು ಮಾಡಿದ್ದಾರೆ.
ಲೋಕ್ ಅದಾಲತ್ ಎನ್ನುವ ಕಾನೂನಿನ ಮೂಲಕ ಯಾವುದೇ ಪ್ರಕರಣಗಳನ್ನು ಬಹುಬೇಗ ಇತ್ಯರ್ಥಗೊಳಿಸಬಹುದಾಗಿದೆ. ಈ ಬಗ್ಗೆ ಯಾರಿಗೂ ತಿಳಿದಿರದ ಅದೆಷ್ಟೋ ವಿಷಯಗಳನ್ನು ಮಕ್ಕಳ ಹಾಗು ನ್ಯಾಯಮೂರ್ತಿಗಳ ಮೂಲಕ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಡ್ರಾಮಾ ಜೂನಿಯರ್ಸ್ ವೇದಿಕೆಯಲ್ಲಿ ಜರುಗಿದೆ. ಇನ್ನು ಬಿ .ವೀರಪ್ಪ ಅವರ ಜೊತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರಾದ ಕಾರ್ಯದರ್ಶಿಗಳಾದ ಶಶಿಧರ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಿಘ್ನೇಶ್ ಕುಮಾರ್ ಸಹ ಸೀಸನ್ 4 ಡ್ರಾಮ್ ಜೂನಿಯರ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರೇಜಿಸ್ಟಾರ್, ಜೂಲಿ, ಡಿಂಪಲ್ ಕ್ವೀನ್ ಒಂದೇ ವೇದಿಕೆಯಲ್ಲಿ:
ಅದೇ ರೀತಿ ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋನಲ್ಲಿ ಹಿಂದಿನ 3 ಸೀಸನ್ ಗಳಲ್ಲಿ ತೀರ್ಪುಗಾರರಾಗಿದ್ದ ಜೂಲಿ ಲಕ್ಷ್ಮೀ ರವರು 4 ನೇ ಸೀಸನ್ ನಲ್ಲೂ ಮುಂದುವರೆದಿದ್ದರೆ ಅವರ ಜೊತೆಗೆ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಜೊತೆಯಾಗಿದ್ದಾರೆ. ಅದಲ್ಲದೆ ಇಲ್ಲಿವರೆಗೂ ವಿಶೇಷ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದ ರವಿಚಂದ್ರನ್ ಅವರು ಈಗ ಜೀ ಕನ್ನಡವಾಹಿನಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿರುವುದು ವೀಕ್ಷಕರಲ್ಲಿ ವೀಕ್ಷಕರಿಗೆ ಕಾರ್ಯಕ್ರಮ ನೋಡಲು ಇನ್ನಷ್ಟು ಆಸಕ್ತಿ ನೀಡಿದೆ. ಅದ್ಭುತ ನಿರೂಪಕ ಮಾಸ್ಟರ್ ಆನಂದ್ ರವರ ನಿರೂಪಕರಾಗಿ ಈ ಸೀಸನ್ ನಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ