ಸ್ಯಾಂಡಲ್ವುಡ್ ಜಯಸಿಂಹ, ಅಭಿಮಾನಿಗಳ ದಾದ ವಿಷ್ಣುವರ್ಧನ್ ಅಗಲಿ 11 ವರ್ಷ. ಇಂದು ಅವರ 11ನೇ ವರ್ಷದ ಪುಣ್ಯ ಸ್ಮರಣೆಯನ್ನು ಆಚರಿಸಲಾಗುತ್ತಿದೆ. ಸ್ನೇಹಮಯಿ ವಿಷ್ಣು ಅವರಿಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಬೇರೆ ಸಿನಿರಂಗದಲ್ಲೂ ಅಭಿಮಾನಿಗಳಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಇತರೆ ಭಾಷೆಯ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರ ಸ್ನೇಹಿತರಿದ್ದಾರೆ. ಇಂತಹ ಸ್ನೇಹ ಜೀವಿ 2009ರ ಡಿ.30ರಂದು ಎಲ್ಲರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿದ ವಿಷ್ಣು, ಭೌತಿಕವಾಗಿ ಇಲ್ಲಿ ಇಲ್ಲದಿದ್ದರೂ, ಅವರ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಹಸಿರಾಗಿದ್ದಾರೆ. ಅಭಿಮಾನಿಗಳು ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಸ್ಮರಿಸುತ್ತಿದ್ದರೆ, ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸ್ಯಾಂಡಲ್ವುಡ್ನ ಸಾಹಸ ಸಿಂಹ ಎಂದೇ ಕರೆಯಲ್ಪಡುವ ವಿಷ್ಣುವರ್ಧನ್ ಸ್ನೇಹಕ್ಕೆ ಹೆಸರಾಗಿದ್ದವರು. ಅವರ ಹಾಗೂ ಅಂಬರೀಷ್ ನಡುವಿನ ಸಂಬಂಧದ ಬಗ್ಗೆ ಮತ್ತೆ ಹೇಳಬೇಕಿಲ್ಲ. ಸುಮಲತಾ ಹಾಗೂ ಅಂಬಿ ಮದುವೆಗೆ ಸೇತುವೆಯಾದವರು ವಿಷ್ಣು. ಇಂತಹ ಸ್ನೇಹಜೀವಿಯನ್ನು ಇಂದು ಸುಮಲತಾ ಸ್ಮರಿಸಿದ್ದಾರೆ.
ಸ್ನೇಹ ಪ್ರೀತಿಗೆ ಸಾಕಾರ ರೂಪವಾಗಿದ್ದ ನಮ್ಮ ವಿಷ್ಣುವರ್ಧನ್ ನಮ್ಮ ಕಣ್ಣ ಮುಂದೆ ಇರದೇ ಇರಬಹುದು. ಆದರೆ ನಮ್ಮ ನಿಶ್ಚಲ ಯೋಚನೆಗಳಲ್ಲಿ, ನಮ್ಮ ಚೈತನ್ಯದ ಯೋಜನೆಗಳಲ್ಲಿ, ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿ ಮತ್ತು ಎಲ್ಲದಕ್ಕೂ ಹೆಚ್ಚಾಗಿ ನಮ್ಮೆಲ್ಲರ ಸ್ನೇಹದ ಸೇತುವೆಯಾಗಿ ಇನ್ನೂ ಜೀವಂತವಾಗಿದ್ದಾರೆ. #ವಿಷ್ಣು_ಚಿರಾಯು pic.twitter.com/5oxCeHgwc2
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 30, 2020
An eternal symbol of love and friendship, #Vishnuvardhan remains in our hearts forever. The treasure we all cherish and the unending bond of his beloved persona we all share, will live on. #ForveverVishnu pic.twitter.com/qXz5Ybu24j
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) December 30, 2020
View this post on Instagram
ಮತ್ತೆ ಹುಟ್ಟಿ ಬನ್ನಿ.... pic.twitter.com/KoQlM6M2NI
— ಸುನಿ/SuNi (@SimpleSuni) December 30, 2020
View this post on Instagram
ಕನ್ನಡ ಚಲನಚಿತ್ರ ರಂಗದ ಸ್ಪ್ರುರದೃಪೀ ನಟ, ಸಾಹಸ ಸಿಂಹ ನಾಗೀ ಮಿಂಚಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯ ದಿನವಾದ ಇಂದು ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ.#BJP4India #BJP4Karnatak #CMofKarnataka #Sahasasimha #VishnuVardhan pic.twitter.com/vYTust6nZg
— K S Eshwarappa (@ikseshwarappa) December 30, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ