ಇಂದು ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಹುಟ್ಟುಹಬ್ಬ. ಏ. 24 ಎಂದರೆ ರಾಜ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ದೈಹಿಕವಾಗಿ ರಾಜ್ ನಮ್ಮೊಂದಿಗೆ ಇಲ್ಲದಿದ್ದರೂ ಕನ್ನಡಿಗರ ಮನಸ್ಸಿನಲ್ಲಿ ಮಾಸದ ನೆನಪಾಗಿ ಉಳಿದು ಬಿಟ್ಟಿದ್ದಾರೆ.
ಕನ್ನಡ ಚಿತ್ರರಂಗವೇ ಒಂದು ಕಟುಂಬ. ಆ ಕುಟುಂಬದ ಸದಸ್ಯರಿಗಾಗಿ ಏನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿ ಮೊದಲಿನಿಂದಲೂ ಇತ್ತು. ಅದಕ್ಕಾಗಿಯೇ ಅವರು ಕನ್ನಡ ಚಲನಚಿತ್ರ ಕಲಾವಿದರ ಸಂಘದ ನಿರ್ಮಾಣದತ್ತ ಹಾಕಿದ್ದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ರಾಜಣ್ಣ ಕಷ್ಟದ ದಿನಗಳನ್ನು ಕಂಡವರು. ಅದಕ್ಕಾಗಿ ಮೊದಲು ಕಲಾವಿದರ ಕಷ್ಟಗಳಿಗೆ ಸ್ಪಂದಿಸುವ ಒಂದು ಮಾರ್ಗ ಕಂಡುಕೊಂಡರು.
![]()
ರಾಜ್ ಕುಮಾರ್
ಅದೇ ಕನ್ನಡ ಚಲನಚಿತ್ರ ಕಲಾವಿದರ ಸಂಘ. ಅದು ಅಸ್ತಿತ್ವಕ್ಕೆ ಬಂದ ನಂತರ ಆಗ ರಾಜ್ ಮೊದಲು ಅಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಅಲ್ಲದೆ ಒಂದು ವಿದ್ಯಾ ಮಂದಿರ, ಆರ್ಥಿಕ ಸಂಕಷ್ಟದಲ್ಲಿರುವವರ ಸಹಾಯಕ್ಕೆ ಸ್ಪಂದಿಸುವುದು ಈ ಸಂಘದ ಮೂಲ ಉದ್ದೇಶವಾಗಿತ್ತು. ಜೊತೆಗೆ ಕಲಾವಿದರ ಕಷ್ಟಗಳನ್ನು ಚರ್ಚಿಸಲು ಇದು ವೇದಿಕೆಯಾಗಿತ್ತು ಎಂದು ರಾಜ್ ಖುದ್ದು ಹೇಳಿಕೊಂಡಿದ್ದಾರೆ. ಕೇಳಿ ಅವರ ದನಿಯಲ್ಲಿ.
(21-04 ರಿಂದ 19-20)
ಅಪ್ಪಾಜಿಯ ನೆನಪು | ಭಾಗ-8
1971ರ ಏಪ್ರಿಲ್ ತಿಂಗಳಲ್ಲಿ ಅಪ್ಪಾಜಿಯ ಆತ್ಮೀಯ ಸ್ನೇಹಿತರಾಗಿದ್ದ ಎಸ್. ರಾಮಸ್ವಾಮಿ ರವರು ಆಕಾಶವಾಣಿಯಲ್ಲಿ ನಡೆಸಿದ ರೇಡಿಯೋ ಸಂದರ್ಶನ ಇದು. ಏಪ್ರಿಲ್ ಬಂತೆಂದರೆ ಸಹಜವಾಗಿ ಅಪ್ಪಾಜಿಯವರ ಹುಟ್ಟುಹಬ್ಬ ನೆನಪಿಗೆ ಬರುತ್ತದೆ, ಈ ಸಂದರ್ಭದಲ್ಲಿ ಅವರನ್ನು ಕುರಿತು ಒಂದು ಸರಮಾಲೆ ಹಂಚಿಕೊಳ್ಳುತ್ತಿರುವುದಾಗಿ ಯುವರಾಜ್ ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.
Rare Photos Of Dr. Rajkumar: ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಅಣ್ಣಾವ್ರ ಅಪರೂಪದ ಚಿತ್ರಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ