Rajkumar Birthday: ಇಂದು ಡಾ. ರಾಜ್​ಕುಮಾರ್​ ಹುಟ್ಟುಹಬ್ಬ, ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಅಣ್ಣಾವ್ರ ಸ್ಮರಣೆ

ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, ಹೆಮ್ಮೆಯ ಕನ್ನಡಿಗ, ಇಂದು ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸೇರಿದಂತೆ ಅನೇಕ ಗಣ್ಯರು ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

ವರನಟ ಡಾ.ರಾಜ್​ಕುಮಾರ್​

ವರನಟ ಡಾ.ರಾಜ್​ಕುಮಾರ್​

  • Share this:
ಇಂದು ಗಾನ ಗಂಧರ್ವ, ಪದ್ಮ ಭೂಷಣ, ಕರ್ನಾಟಕ ರತ್ನ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ(Dr Rajkumar) . ಕನ್ನಡಿಗರಿಗಾಗಿ, ಕನ್ನಡಿಗರಿಂದ, ಕನ್ನಡಕ್ಕಾಗಿ ಬಾಳಿ ಬದುಕಿದ ಮೇರುನಟ, ಹೆಮ್ಮೆಯ ಕನ್ನಡಿಗ, ಇಂದು ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸೇರಿದಂತೆ ಅನೇಕ ಗಣ್ಯರು ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ. ಕರ್ನಾಟಕ 'ರಾಜರತ್ನ' ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಅಗಲಿದ ನಂತರ, ಮೊದಲ ಬಾರಿಗೆ ಅಣ್ಣಾವ್ರ ಹುಟ್ಟುಹಬ್ಬ ಬಂದಿದೆ. ಪ್ರತಿ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು ಪುನೀತ್​ ರಾಜ್​ಕುಮಾರ್​ ಅಪ್ಪಾಜಿ ಸಮಾಧಿಗೆ ತೆರಳಿ ಪೂಜೆ ಮಾಡುತ್ತಿದ್ದರು. ಆದರೆ, ಈ ಬಾರಿ ಅಪ್ಪು, ಅಪ್ಪಾಜಿ ಪಕ್ಕದಲ್ಲೇ ಶಾಶ್ವತವಾಗಿ ಮಲಗಿದ್ದಾರೆ. ಅಣ್ಣಾವ್ರ ಕುಟುಂಬ (Dr Rajkumar Family) ಸಮಾಧಿ ಬಳಿ ತೆರಳಿ ಪೊಜೆ ಸಲ್ಲಿಸಿದ್ದಾರೆ. 

ಸಿಎಂ ಬೊಮ್ಮಾಯಿ ಅವರಿಂದ ರಾಜ್​ ಸ್ಮರಣೆ

'ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಿಸಿದ್ದಾರೆ.




Koo App


ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು.

- Basavaraj Bommai (@bsbommai) 24 Apr 2022





ನಮ್ಮೆಲ್ಲರಿಗೂ ಆದರ್ಶ ಎಂದ ಅಶ್ವಥ್​ ನಾರಾಯಣ್​!

'ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಗೋಕಾಕ್ ಚಳುವಳಿಯ ಮೂಲಕ ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು ಶ್ರಮಿಸುವ ಜತೆ ಅನೇಕ ಸುಪ್ರಸಿದ್ಧ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಚಲನಚಿತ್ರ ನೀಡಿದ ಕನ್ನಡದ ಕಣ್ಮಣಿ ಅಣ್ಣಾವ್ರ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶ' ಎಂದು ಸಚಿವ ಅಶ್ವಥ್ ನಾರಾಯಣ್ ಕೂ ಮಾಡಿದ್ದಾರೆ.




Koo App


ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಗೋಕಾಕ್ ಚಳುವಳಿಯ ಮೂಲಕ ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು ಶ್ರಮಿಸುವ ಜತೆ ಅನೇಕ ಸುಪ್ರಸಿದ್ಧ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಚಲನಚಿತ್ರ ನೀಡಿದ ಕನ್ನಡದ ಕಣ್ಮಣಿ ಅಣ್ಣಾವ್ರ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶ.

- Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 24 Apr 2022





ಇದನ್ನೂ ಓದಿ: ಇಂದು ಯುಗಪುರುಷ ಡಾ. ರಾಜ್​ಕುಮಾರ್ ಹುಟ್ಟುಹಬ್ಬ; ಹಿಂದೆ ಯಾರೂ ಇರಲಿಲ್ಲ, ಮುಂದೆ ಯಾರೂ ಹುಟ್ಟಲ್ಲ!

ರಾಜ್​ ಸ್ಮರಿಸಿದ ಸಚಿವ ಬಿ.ಸಿ ನಾಗೇಶ್​

ಕನ್ನಡ ಕಲಾರಂಗದ ಶ್ರೇಷ್ಠ ನಟ, ನಟಸಾರ್ವಭೌಮ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಶ್ರೀ ಡಾ.ರಾಜ್‍ಕುಮಾರ್ ಅವರ ಜಯಂತಿಯಂದು ಆದರಪೂರ್ವಕ ಪ್ರಣಾಮಗಳು. ಅಮೋಘ ಕಂಠಸಿರಿ, ಅದ್ಭುತ ನಟನೆಯಿಂದ ಅವರು ಸದಾ ಕನ್ನಡಿಗರ ಮನದಲ್ಲಿ ನೆಲೆಸಿದ್ದಾರೆ ಎಂದು ಸಚಿವ ಬಿ ಸಿ ನಾಗೇಶ್​ ಹೇಳಿದ್ದಾರೆ.



ಅಣ್ಣಾವ್ರು ಎಂದಿಗೂ ಅಮರ ಎಂದ ಆರಗ ಜ್ಞಾನೇಂದ್ರ

ನಾಡಿನ ಹೆಮ್ಮೆಯ ವರನಟ, ನಟಸಾರ್ವಭೌಮ ಶ್ರೀ ಡಾ.ರಾಜ್‍ಕುಮಾರ್ ಅವರ ಜಯಂತಿಯಂದು ಕೋಟಿ ಪ್ರಣಾಮಗಳು. 200 ಕ್ಕೂ ಹೆಚ್ಚು ಚಿತ್ರಗಳ ಮೂಲಕ ಕಲಾರಸಿಕರ ಮನ ಗೆದ್ದ ಜನಪ್ರಿಯ ಕಲಾವಿದರು ಅಣ್ಣಾವ್ರು. ಸರಳ ವ್ಯಕ್ತಿತ್ವ, ಸಜ್ಜನಿಕೆಯ ಅವರು ನಾಡಿನ ಜನರ ಮನದಲ್ಲಿ ವಿರಾಜಮಾನರಾಗಿದ್ದಾರೆ ಎಂದು ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ/



ಇದನ್ನೂ ಓದಿ: ಡಾ. ರಾಜ್​ಕುಮಾರ್ ರಾಜಕೀಯಕ್ಕೆ ಧುಮುಕಲಿಲ್ಲ ಏಕೆ?

'ಕನ್ನಡ ನಾಡಿನ ಮೇರುನಟ, ಗಾನಗಂಧರ್ವ, ನಟ ಸಾರ್ವಭೌಮ ಡಾ. ರಾಜಕುಮಾರ ಅವರ ಜನ್ಮದಿನದಂದು ಗೌರವಯುತ ನಮನಗಳು' ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮನ ಸಲ್ಲಿಸಿದ್ದಾರೆ
Published by:Vasudeva M
First published: