• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ondu Muttina Kathe: ನಾನು ರಾಜ್​ಕುಮಾರ್ ಇಮೇಜ್ ಬ್ರೇಕ್ ಮಾಡುವಲ್ಲಿ ಸೋತು ಹೋದೆ ಎಂದಿದ್ದರು ಶಂಕರ್ ನಾಗ್? ಯಾಕೆ?

Ondu Muttina Kathe: ನಾನು ರಾಜ್​ಕುಮಾರ್ ಇಮೇಜ್ ಬ್ರೇಕ್ ಮಾಡುವಲ್ಲಿ ಸೋತು ಹೋದೆ ಎಂದಿದ್ದರು ಶಂಕರ್ ನಾಗ್? ಯಾಕೆ?

ಚಿತ್ರದಲ್ಲಿ ಆಕ್ಟೋಪಸ್ ಜೊತೆಗೆ ರಾಜ್ ಸಖತ್ ಫೈಟ್!

ಚಿತ್ರದಲ್ಲಿ ಆಕ್ಟೋಪಸ್ ಜೊತೆಗೆ ರಾಜ್ ಸಖತ್ ಫೈಟ್!

ಸಮುದ್ರದಾಳದಲ್ಲಿ ರಾಜ್‌ಕುಮಾರ್ ಆಕ್ಟೋಪಸ್ ಜೊತೆಗೆ ಫೈಟ್ ಮಾಡುತ್ತಾರೆ. ಇದನ್ನ ಕಂಡ ಸಿನಿಪ್ರೇಮಿಗಳು ಥ್ರಿಲ್ ಆಗಿದ್ದರು.ಚಿತ್ರದ ಈ ಒಂದು ದೃಶ್ಯವನ್ನ ಮಾಲ್ಡೀವ್ಸ್‌ನಲ್ಲಿ ತೆಗೆಯಲಾಗಿತ್ತು.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಒಂದು ಮುತ್ತಿನ ಕಥೆ ತುಂಬಾ ವಿಶೇಷವಾದ (Ondu Muttina Kathe Movie) ಸಿನಿಮಾ ಆಗಿದೆ. ೫೮ ನೇ ವಯಸ್ಸಿನಲ್ಲಿ ರಾಜಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ರಾಜ್ ಅವರನ್ನ ನಿರ್ದೇಶನದ ಮಾಡಿದ್ದ ಶಂಕರ್ ನಾಗ್ (Ondu Muttina Kathe Untold Stories) ಅವರು ಚಿಕ್ಕ ವಯಸ್ಸಿನ ಡೈರೆಕ್ಟರ್ ಈ ಮೂಲಕ ಅನಿಸಿಕೊಂಡರು. ಇದಾದ್ಮೇಲೆ ರಾಜ್‌ ಕುಮಾರ್ ಅವರನ್ನ ಶಂಕರ್ ನಾಗ್ ಮತ್ತೆ ಮುಂದೆ ನಿರ್ದೇಶನ (Rajkumar Special Movie) ಮಾಡಲೇ ಇಲ್ಲ. ಇದಕ್ಕೆ ಏನೂ ಕಾರಣ ಅನ್ನೋದು ಎಲ್ಲೂ ದಾಖಲೂ ಆಗಿಲ್ಲ ಬಿಡಿ. ಇಲ್ಲಿ ಈ ವಿಷಯಕ್ಕಿಂತಲೂ ಇನ್ನೂ ಸಾಕಷ್ಟು ಇಂಟ್ರಸ್ಟಿಂಗ್ ವಿಷಯಗಳು ಈ ಚಿತ್ರದ (Sandalwood Movie Updates) ಸುತ್ತ ಇವೆ. ಅದನ್ನ ಹೇಳ್ತಾ ಹೋದ್ರೆ ಓದೋ ನಿಮಗೂ ಕುತೂಹಲ ಮೂಡುತ್ತಲೇ ಹೋಗುತ್ತದೆ.


ಒಂದು ಮುತ್ತಿನ ಕಥೆ ಹಿಂದೆ ಹತ್ತು ಹಲವು ಕಥೆಗಳು


ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ ಒಂದು ಮುತ್ತಿನ ಕಥೆ ಕೂಡ ಒಂದು ಕಾದಂಬರಿ ಆಧಾರಿಸಿದ ಸಿನಿಮಾ ಆಗಿದೆ. 1947 ರಲ್ಲಿ ಜಾನ್ ಸ್ಟೈನ್ಬೆಕ್ ಬರೆದ ದಿ ಪರ್ಲ್ ಅನ್ನೋ ಕಾದಂಬರಿಯನ್ನ ಈ ಚಿತ್ರ ಆಧರಿಸಿತ್ತು. ಈ ಕಾದಂಬರಿ ಇಟ್ಟುಕೊಂಡೇ ನಿರ್ದೇಶಕ ಶಂಕರ್ ನಾಗ್ ಈ ಸಿನಿಮಾ ಮಾಡಿದ್ದರು.


Dr Rajkumar Acted Ondu Muttina Kathe Movie Untold Stories
ಒಂದು ಮುತ್ತಿನ ಕಥೆ ಟೆಕ್ನಿಕಲಿ ಶ್ರೇಷ್ಠ ಸಿನಿಮಾ


ಒಂದು ಮುತ್ತಿನ ಕಥೆ ಟೆಕ್ನಿಕಲಿ ಶ್ರೇಷ್ಠ ಸಿನಿಮಾ


ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಅದರಲ್ಲಿ ಒಂದೊಂದಾಗಿ ಹೇಳೋದಾದ್ರೆ, ಈ ಚಿತ್ರ ಟೆಕ್ನಿಕಲಿ ತುಂಬಾ ಶ್ರೆಷ್ಠವಾಗಿಯೇ ಇತ್ತು. ಶಂಕರ್ ನಾಗ್ ಬರೆದ ಚಿತ್ರಕಥೆ ಕೂಡ ವಿಶೇಷವಾಗಿಯೇ ಸೆಳೆದಿತ್ತು. ಇವರೆಡೂ ವಿಷಯಗಳಲ್ಲದೇ, ಈ ಚಿತ್ರ ಅಂಡರ್‌ವಾಟರ್ ನಲ್ಲಿ ಫೈಟ್ ಸೀನ್ ದೃಶ್ಯವನ್ನ ತೆಗೆದ ಮೊದಲ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.




ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಸಮುದ್ರದಾಳದಲ್ಲಿ ರಾಜ್‌ಕುಮಾರ್ ಆಕ್ಟೋಪಸ್ ಜೊತೆಗೆ ಫೈಟ್ ಮಾಡುತ್ತಾರೆ. ಇದನ್ನ ಕಂಡ ಸಿನಿಪ್ರೇಮಿಗಳು ಥ್ರಿಲ್ ಆಗಿದ್ದರು. ಚಿತ್ರದ ಈ ಒಂದು ದೃಶ್ಯವನ್ನ ಮಾಲ್ಡೀವ್ಸ್‌ನಲ್ಲಿ ತೆಗೆಯಲಾಗಿತ್ತು.


ಚಿತ್ರದಲ್ಲಿ ಆಕ್ಟೋಪಸ್ ಜೊತೆಗೆ ರಾಜ್ ಸಖತ್ ಫೈಟ್!


ಜರ್ಮನ್‌ನಿಂದ ಬಂದಿದ್ದ ಕ್ಯಾಮೆರಾಮನ್ ಕೆನಡಿಯನ್ ಕ್ಯಾಮೆರಾ ಬಳಸಿ ಈ ದೃಶ್ಯವನ್ನ ತೆಗೆದಿದ್ದರು ಅನ್ನುವ ಮಾಹಿತಿ ಕೂಡ ಸಿಗುತ್ತದೆ. ಚಿತ್ರದ ಈ ಒಂದು ದೃಶ್ಯಕ್ಕಾಗಿಯೇ ಕೃತಕ ಆಕ್ಟೋಪಸ್ ಬಳಸಲಾಗಿತ್ತು. ಈ ಆಕ್ಟೋಪಸ್ ಅನ್ನ ಲಂಡನ್‌ನಲ್ಲಿ ತಯಾರಿಸಲಾಗಿತ್ತು ಅನ್ನೋದು ಇಂಟ್ರಸ್ಟಿಂಗ್ ವಿಷಯ ಕೂಡ ಇದೆ.


ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ಸ್ಪೆಷಲ್ ಕಥೇನೆ ಇದೆ. ರಾಜಕುಮಾರ್ ಅವರು ಈ ಚಿತ್ರದಲ್ಲಿ ಐತು ಅನ್ನೋ ವಿಶೇಷ ಹೆಸರಿನ ವ್ಯಕ್ತಿ ಪಾತ್ರ ಮಾಡಿದ್ದರು. ನಟಿ ಅರ್ಚನಾ ಇಲ್ಲಿ ಕಾಕಿ ಅನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಒಂದು ಮುತ್ತಿನ ಕಥೆ ಚಿತ್ರದಲ್ಲಿ ರಾಜ್ ಪಾತ್ರ ಏನು?


ಈ ಐತು ಕೆಲಸ ಸಮುದ್ರದಾಳಕ್ಕೆ ಹೋಗೋದು, ಅಲ್ಲಿ ಸಿಗೋ ಮುತ್ತುಗಳನ್ನ ತರೋದು ಮತ್ತು ಅದನ್ನ ಮಾರಿ ಜೀವನ ಮಾಡೋದು. ಇದೇ ಈತನ ಕೆಲಸ ಆಗಿರುತ್ತದೆ. ಆದರೆ ದೈನಂದಿನ ಈ ಒಂದು ಕೆಲಸದಲ್ಲಿ ಐತುಗೆ ಒಂದು ವಿಶೇಷ ಮತ್ತು ಸಿಗುತ್ತದೆ. ಆಗ ನೋಡಿ ಇಡೀ ಐತು ಲೈಫ್‌ ಅಲ್ಲಿ ಎಲ್ಲವೂ ಉಲ್ಟಾ-ಪಲ್ಟಾ ಆಗುತ್ತದೆ. ತನ್ನವರು ಅಂದುಕೊಂಡವರೆಲ್ಲ ಅಸಲಿ ಬಣ್ಣ ಬಯಲಾಗುತ್ತದೆ.


ಮುಗ್ಧ ಜನರ ಮಧ್ಯೆ ಬರುವ ಆ ಒಂದು ಅಮೂಲ್ಯ ಮುತ್ತು ಏನೆಲ್ಲ ಮಾಡುತ್ತದೆ ಅನ್ನೋದೇ ಒಟ್ಟು ಚಿತ್ರದ ಕಥೆ ಆಗಿದೆ. ಆದರೆ ಅದ್ಯಾಕೋ ಏನೋ, ಜನ ಈ ಚಿತ್ರವನ್ನ ಅಷ್ಟು ಆಸಕ್ತಿಯಿಂದ ನೋಡಲೇ ಇಲ್ಲ ಅನಿಸುತ್ತದೆ. ಈ ಕಾರಣಕ್ಕೇನೆ ಒಂದು ಮುತ್ತಿನ ಕಥೆ ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ದಿನ ಓಡಲೇ ಇಲ್ಲ.


ಒಂದು ಮುತ್ತಿನ ಕಥೆ ಹೆಚ್ಚು ದಿನ ಥಿಯೇಟರ್‌ನಲ್ಲಿ ಓಡಲೇ ಇಲ್ಲ!


ರಾಜ್‌ಕುಮಾರ್ ಅವರ ಚಿತ್ರ ಜೀವನದಲ್ಲಿ ಅತಿ ಕಡಿಮೆ ಓಡಿದ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿತ್ತು. ಹಾಗಾಗಿಯೇ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಂತಹ ಏನೂ ಕಮಾಲ್ ಮಾಡಲಿಲ್ಲ. ಆದರೆ ಕನ್ನಡದ ಕಲ್ಟ್ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾ ಇದೆ.


ಚಿತ್ರಕಥೆ ಮತ್ತು ಟೆಕ್ನಿಕಲಿ ವಿಶೇಷವಾದ ಸಿನಿಮಾ ಅನ್ನುವ ಹೆಗ್ಗಳಿಕೆ ಈ ಚಿತ್ರಕ್ಕೆ ಸಲುತ್ತದೆ. ಸಿನಿಮಾ ಜೀವನದಲ್ಲಿ ಏನೇನೋ ಆಗುತ್ತವೆ. ರಾಜ್‌ಕುಮಾರ್ ಜೀವನದಲ್ಲಿ ಒಂದು ಮತ್ತಿನ ಕಥೆ ಸಿನಿಮಾ ಸ್ಪೆಷಲ್ ಆಗಿಯೆನೋ ಇತ್ತು. ಆದರೆ ಓಡಲಿಲ್ಲ ಅನ್ನೋದು ಅಷ್ಟೆ ಸತ್ಯ.


Dr Rajkumar Acted Ondu Muttina Kathe Movie Untold Stories
ರಾಜ್ ಬಗ್ಗೆ ಶಂಕರ್ ನಾಗ್ ಹಾಗೆ ಸಂದರ್ಶನದಲ್ಲಿ ಹೇಳಿದ್ಯಾಕೆ?


ರಾಜ್ ಬಗ್ಗೆ ಶಂಕರ್ ನಾಗ್ ಹಾಗೆ ಸಂದರ್ಶನದಲ್ಲಿ ಹೇಳಿದ್ಯಾಕೆ?


ಈ ಒಂದು ವಿಷಯದ ಹಿನ್ನೆಲೆಯಲ್ಲೋ ಏನೋ, ಚಿತ್ರದ ಡೈರೆಕ್ಟರ್ ಶಂಕರ್ ನಾಗ್ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. "ನಾನು ರಾಜ್‌ಕುಮಾರ್ ಅವರ ಇಮೇಜ್ ಬದಲಿಸೋವಲ್ಲಿ ಸೋತು ಹೋದೆ. ಆದರೆ ರಾಜಕುಮಾರ್ ಅವರ ಸಹಕಾರದಿಂದ ನಾನು ಮಾಡಿರೋ ಪ್ರಾಮಾಣಿಕ ಪ್ರಯತ್ನ ತೃಪ್ತಿ ತಂದಿದೆ ಅಂತಲೇ ಹೇಳಿಕೊಂಡಿದ್ದರು".


ಇದನ್ನೂ ಓದಿ: Agent Movie: ಟಾಲಿವುಡ್‌ ಏಜೆಂಟ್ ಸಿನಿಮಾದಲ್ಲಿ ಗುಂಡಿ ಸುರಿಮಳೆ, ಹೇಗಿದೆ ಟ್ರೈಲರ್?

top videos


    ರಾಜ್‌ ಸಿನಿಮಾ ಜೀವನದ ಈ ಒಂದು ಮುತ್ತಿನ ಕಥೆಗೆ ರಕ್ಷಿತಾ ತಂದೆ ಬಿ.ಸಿ. ಗೌರಿಶಂಕರ್ ಕ್ಯಾಮೆರಾವರ್ಕ್ ಮಾಡಿದ್ದರು. ಎಲ್. ವೈದ್ಯನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಈ ಚಿತ್ರವನ್ನ ಎಲ್ಲೆಡೆ ವಿತರಣೆ ಮಾಡಿತ್ತು. ಇನ್ನುಳಿದಂತೆ ಕನ್ನಡದ ಒಂದು ಮುತ್ತಿನ ಕಥೆ ಈಗಲೂ ವಿಶೇಷ ಸಿನಿಮಾ ಅನಿಸಿಕೊಳ್ಳುತ್ತದೆ.

    First published: