Rajkumar Birthday: ಅಣ್ಣಾವ್ರ 95ನೇ ಜಯಂತೋತ್ಸವ, ಅಪ್ಪಟ ಬಂಗಾರ ನಮ್ಮ 'ರಾಜಕುಮಾರ'

ಇಂದು ರಾಜಣ್ಣನ ಜನ್ಮ ದಿನ

ಇಂದು ರಾಜಣ್ಣನ ಜನ್ಮ ದಿನ

ರಾಜ್‌ಕುಮಾರ್ ನಮ್ಮ-ನಿಮ್ಮ ಮನದಲ್ಲಿ ಇನ್ನೂ ಇದ್ದಾರೆ. ಇವರ ಜನ್ಮ ದಿನಕ್ಕೆ ಇವರನ್ನ ಆರಾಧಿಸೋ ಜನರ ಸಂಖ್ಯೆ ಕಡಿಮೆ ಆಗಿಲ್ಲ. ಸದಾ ಜನರ ಮನದಲ್ಲಿರೋ ರಾಜಣ್ಣನ ಜನ್ಮ ದಿನ ಇವತ್ತು. ಈ ಹಿನ್ನೆಲೆಯಲ್ಲಿ ಇಲ್ಲೊಂದು ಸ್ಟೋರಿ ಇದೆ ಓದಿ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಡಾ. ರಾಜ್‌ಕುಮಾರ್ ನಮ್ಮ-ನಿಮ್ಮ (Rajkumar 95th Birthday Celebration) ಅಚ್ಚುಮೆಚ್ಚಿನ ಧ್ರುವ ತಾರೆ, ಎಂದು ಮರೆಯಾಗದ ಎಂದೂ ಮರೆತು ಹೋಗದ ತಾರೆ. ಹೌದು, ರಾಜಣ್ಣ ಎಲ್ಲರ ಮನದಲ್ಲಿ ಸದಾ ಇರುತ್ತಾರೆ. ರಾಜ್‌ಕುಮಾರ್ ನಮಗೆ ಯಾಕೆ ಇಷ್ಟ ಆಗ್ತಾರೆ? ಈ ಒಂದು ಪ್ರಶ್ನೆಗೆ ಅವರ ಸರಳತೆ ಮತ್ತು (Rajkumar Birthday Anniversary) ಸಾತ್ವಿಕ ಗುಣವೇ ಉತ್ತರ ರೂಪದಲ್ಲಿ ಸಿಗುತ್ತವೆ. ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ರಾಜ್‌ಕುಮಾರ್ ಎಲ್ಲ ಕಾಲಕ್ಕೂ (Rajkumar Birthday Celebration) ಎಲ್ಲರಿಗೂ ಮಾದರಿ ಆಗೋ ಸಿನಿಮಾಗಳನ್ನೆ ಮಾಡಿದ್ದಾರೆ. ರಾಜ್‌ಕುಮಾರ್ ಮಾಡದೆ ಇರೋ ಪಾತ್ರಗಳೇ ಇಲ್ಲ. ಒಂದೇ ಚಿತ್ರದಲ್ಲಿ ಮೂರು ಮೂರು
ಪಾತ್ರಗಳನ್ನ ನಿರ್ವಹಿಸಿರೋದು ಇದೆ. ಡಬಲ್ ರೋಲ್ ಅಲ್ಲಿ ರಾಜ್‌ಕುಮಾರ್ ಜನರ ಹೃದಯ ಗೆದ್ದು ಬಿಟ್ಟಿದ್ದಾರೆ.


ರಾಜ್‌ಕುಮಾರ್ ಸಿನಿಮಾಗಳಲ್ಲಿ ಮೌಲ್ಯಯುತ ಕಥೆಗಳು


ರಾಜ್‌ಕುಮಾರ್ ಸಿನಿಮಾಗಳಲ್ಲಿ ಆದರ್ಶವೇ ಪ್ರಧಾನವಾಗಿ ಇರುತ್ತಿತ್ತು. ಹಾಗಾಗಿಯೇ ಒಂದೊಂದು ಚಿತ್ರವೂ ಒಂದೊಂದು ಮುತ್ತು ಅಂದ್ರೆ ಅತಿಶಯೋಕ್ತಿ ಆಗೋದಿಲ್ಲ ಬಿಡಿ. ರಾಜ್‌ಕುಮಾರ್ ಅವರ ಬಹುತೇಕ ಸಿನಿಮಾಗಳು ಕಾದಂಬರಿಯನ್ನ ಆಧರಿಸಿವೆ.


Dr Rajkumar 95th Birthday celebration at Kanteerava Studio
ಬಂಗಾರದ ಮನುಷ್ಯನ ಬಂಗಾರದಂತಹ ಅಭಿಮಾನಿಗಳು


ಪತ್ರಿ ಕಾದಂಬರಿಯ ಮೌಲ್ಯಯುತ ಅಂಶಗಳು ರಾಜ್‌ಕುಮಾರ್ ಸಿನಿಮಾಗಳಲ್ಲಿ ಬಂದಿವೆ. ರಾಜ್‌ಕುಮಾರ್ ಅವರ ಒಂದು ಮುತ್ತಿನ ಕಥೆ ಕೂಡ ಇಂಗ್ಲೀಷ್ ಕಾದಂಬರಿಯನ್ನ ಆಧರಿಸಿತ್ತು. ಆದರೆ ರಾಜ್‌ಕುಮಾರ್ ಅಭಿನಯದ ನಾಂದಿ ಸಿನಿಮಾ ಇನ್ನೂ ವಿಶೇಷವಾಗಿಯೇ ಇತ್ತು.
ರಾಜ್‌ಕುಮಾರ್ ಸಿನಿ ಜೀವನದ ಸ್ಪೆಷಲ್ ಸಿನಿಮಾಗಳು


ಕನ್ನಡದಲ್ಲಿ ಬಂದ ಆಫ್ಬೀಟ್ ಸಿನಿಮಾಗಳಲ್ಲಿ ನಾಂದಿ ಸಿನಿಮಾನೇ ಮೊದಲ ಸಿನಿಮಾ ಆಗಿತ್ತು. ರಾಜ್‌ಕುಮಾರ್ ಅಭಿನಯದ ಬಾಂಡ್ ಸಿನಿಮಾಗಳೂ ಏನು ಕಮ್ಮಿ ಇದ್ದವೇ? ದೊರೈ-ಭಗವಾನ್ ನಿರ್ದೇಶನದ ಈ ಬಾಂಡ್ ಸರಣಿ ಸಿನಿಮಾಗಳು ಅಣ್ಣಾವ್ರಗೆ ಭಾರೀ ದೊಡ್ಡ ಹೆಸರನ್ನ ತಂದುಕೊಟ್ಟಿವೆ. ಇಂಡಿಯನ್ ಸಿನಿಮಾರಂಗದಲ್ಲಿಯೇ ರಾಜ್ ಮೊದಲ ಬಾಂಡ್ ಸಿನಿಮಾ ಹೀರೋ ಅನ್ನೋ ಮಟ್ಟವನ್ನ ತಂದುಕೊಟ್ಟಿವೆ.


ರಾಜ್‌ಕುಮಾರ್ ಸಿನಿಮಾ ಜೀವನದಲ್ಲಿ ಕಸ್ತೂರಿ ನಿವಾಸ ನಿಜಕ್ಕೂ ಗ್ರೇಟ್ ಸಿನಿಮಾ ಆಗಿದೆ. ಹೊಸ ಸ್ಪರ್ಶದಿಂದ ಮತ್ತೊಮ್ಮೆ ರಿಲೀಸ್ ಆದಾಗಲೂ ಕಸ್ತೂರಿ ನಿವಾಸ ಸೂಪರ್ ಹಿಟ್ ಆಗಿತ್ತು. ಬಂಗಾರದ ಮನುಷ್ಯ ಯಾರಿಗೆ ಗೊತ್ತಿಲ್ಲ ಹೇಳಿ?


ಬಂಗಾರದ ಮನುಷ್ಯನ ಬಂಗಾರದಂತಹ ಅಭಿಮಾನಿಗಳು


ಈ ಸಿನಿಮಾ ರಾಜ್ ಜೀವನದ ವಿಶೇಷ ಸಿನಿಮಾ ಆಗಿದೆ. ಈ ಚಿತ್ರ ಬಂದಾಗ, ಅನೇಕರು ವಾಪಸ್ ತಮ್ಮ ಹಳ್ಳಿಗೆ ಹೋಗಿ ವ್ಯವಸಾಯ ಮಾಡಿರೋ ಸತ್ಯ ಈಗಲೂ ಇತಿಹಾಸ ಪುಟದಲ್ಲಿ ಹೊಳೆಯುತ್ತದೆ. ಅಷ್ಟು ವಿಶೇಷವಾದ ಸಿನಿಮಾಗಳನ್ನ ಕೊಡುತ್ತಲೇ ರಾಜ್‌ ಕುಮಾರ್ ಅಜರಾಮರ ಆಗಿದ್ದಾರೆ.


ರಾಜ್‌ಕುಮಾರ್ ಅವರ ಜನ್ಮದಿನ ಬಂತು ಅಂದ್ರೇ ಅಂದು ಕಂಠೀರವ ಸ್ಟುಡಿಯೋ ಆವರಣದಲ್ಲಿರೋ ರಾಜ್ ಸಮಾಧಿ ಬಳಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ರಾಜ್‌ಕುಮಾರ್ ಅವರನ್ನ ದೇವರ ರೀತಿಯಲ್ಲಿ ಆರಾಧಿಸೋ ಅಭಿಮಾನಿಗಳು ತಮ್ಮ ದೇವರಿಗೆ ತಮ್ಮದೇ ರೀತಿಯಲ್ಲಿ ಗೌರವ ಸಲ್ಲಿಸುತ್ತಾರೆ.


Dr Rajkumar 95th Birthday celebration at Kanteerava Studio
ರಾಜ್‌ಕುಮಾರ್ ಸಿನಿ ಜೀವನದ ಸ್ಪೆಷಲ್ ಸಿನಿಮಾಗಳು


ರಾಜ್‌ಕುಮಾರ್ ಫ್ಯಾಮಿಲಿಯಿಂದ ಸಮಾಧಿಗೆ ಪೂಜೆ


ರಾಜ್‌ಕುಮಾರ್ ಅವರ ಫ್ಯಾಮಿಲಿಯ ಸದಸ್ಯರು ಎಂದಿನಂತೆ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಅಣ್ಣಾವ್ರ ಅಭಿಮಾನಿಗಳು ಅನ್ನ ಸಂತರ್ಪಣೆಯನ್ನ ಮಾಡೋ ಮೂಲಕ ಅಣ್ಣಾವ್ರ ಜನ್ಮ ದಿನವನ್ನ ಸ್ಪೆಷಲ್ ಆಗಿ ಆಚರಿಸುತ್ತಾರೆ.


ಇದನ್ನೂ ಓದಿ: Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ


ರಾಜ್‌ಕುಮಾರ್ ಮೊಮ್ಮಗಳ ಧನ್ಯಾ ರಾಮ್‌ಕುಮಾರ್ ಅಭಿನಯದ ದಿ ಜಡ್ಜಮೆಂಟ್ ಸಿನಿಮಾ ಚಿತ್ರೀಕರಣ ಇದೇ ದಿನ ಶೂಟಿಂಗ್ ಆರಂಭಿಸುತ್ತಿದೆ. ರಾಜ್‌ ಜನ್ಮ ದಿನವನ್ನ ಹಬ್ಬದಂತೆ ಆಚರಿಸೋ ಸಿನಿಮಾ ಇಂಡಸ್ಟ್ರೀಯ ಜನ ಅಂದು ತಮ್ಮದೇ ರೀತಿಯಲ್ಲಿ ಅಣ್ಣಾವ್ರಗೆ ಶುಭಾಷಯ ತಿಳಿಸುತ್ತಲೇ ಬಂದಿದ್ದಾರೆ. ಈ ವರ್ಷವೂ ಅದು ಮುಂದುವರೆಯುತ್ತದೆ.

First published: