ಕನ್ನಡದ ಬೆಳ್ಳಿ ತೆರೆ ಮೆಲೆ 'ಡೇರ್‌ಡೆವಿಲ್ ಮುಸ್ತಾಫಾ' (Daredevil Mushtafa Movie) )ಬರಲು ಸಜ್ಜಾಗಿದ್ದಾನೆ. ಈತನ ಹುಟ್ಟು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಲ್ಲಿ ಆಗಿದೆ. ಪೂರ್ಣಚಂದ್ರ ತೇಜಸ್ವಿ ಬರೆದ ಕಥೆಯನ್ನ (Daredevil Musthafa Book) ಓದಿದ ಅಭಿಮಾನಿಗಳು ಸುಮ್ಮನೆ ಕುಳಿತಿಲ್ಲ. ಡೇರ್‌ಡೆವಿಲ್ ಮುಸ್ತಾಫಾನನ್ನ ಬೆಳ್ಳಿ ತೆರೆಗೆ ತರಲೇಬೇಕು ಅಂತ ಡಿಸೈಡ್ ಮಾಡಿದ್ದರು. ಅದಕ್ಕೆ ಎಲ್ಲರೂ ಸೇರಿ ದುಡ್ಡು ಕೂಡ ಹಾಕಿದ್ದರು. ಅದರಿಂದ ಡೇರ್‌ಡೆವಿಲ್ ಮುಸ್ತಾಫಾ ಬೆಳ್ಳಿ ತೆರೆಗೆ ಬಂದಿದ್ದಾನೆ. ಈತನ ಆಗಮನಕ್ಕೆ ಡಾಲಿ ಧನಂಜಯ್ ರೆಡ್ ಕಾರ್ಪೆಟ್ ಹಾಸಿ ವೆಲ್‌ಕಮ್ ಮಾಡಿದ್ದಾರೆ. ಹಾಗಾಗಿಯೇ ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಇಲ್ಲಿ ಇನ್ನೂ ಒಂದು ವಿಶೇಷ ನಿರೂಪಣೆ ಇದೆ. ಇದನ್ನ ಯಾರು ಹೇಳಿದ್ರು ಅನ್ನುವ ಹಿಂಟ್ ನಿಮಗೆ ಸಿಕ್ಕಿದೆ. ಅದರ ಇತರ ಡಿಟೈಲ್ಸ್ ಇಲ್ಲಿದೆ.
ಅಬಚೂರಿನ ಕಾಲೇಜ್‌ಗೆ ಡೇರ್‌ಡೆವಿಲ್ ಮುಸ್ತಾಫಾ!
ಡೇರ್‌ಡೆವಿಲ್ ಮುಸ್ತಾಫಾ ಕಥೆ ಅಬಚೂರಿನ ಕಾಲೇಜ್ ಅಲ್ಲಿಯೇ ನಡೆಯೋದು. ಮುಸ್ತಾಫಾ ಬರೋ ಮುಂಚೆ ಇಲ್ಲಿ ಎಲ್ಲವೂ ಸರಿ ಇತ್ತು. ಎಲ್ಲ ಕಾಲೇಜ್ ರೀತಿ ಇದೂ ಒಂದು ಕಾಲೇಜ್ ಆಗಿತ್ತು. ಆದರೆ ಮುಸ್ತಾಫಾ ಬಂದ್ಮೇಲೆ ಇಲ್ಲಿ ಎಲ್ಲವೂ ಉಲ್ಟಾ-ಪಲ್ಟಾ ಆಗುತ್ತವೆ.
ಹೀಗೆ ಡೇರ್‌ಡೆವಿಲ್ ಮುಸ್ತಾಫಾ ಕಥೆಯನ್ನ ನಿರೂಪಿಸ್ತಾನೇ ಹೋಗುತ್ತದೆ ಆ ಒಂದು ಧ್ವನಿ. ಹೌದು, ಆ ಧ್ವನಿ ಕೇಳಿದಾಗ ಎಲ್ಲೋ ಕೇಳಿದ ಅನುಭವ ಆಗುತ್ತದೆ. ಯಾರಿದು ಯಾರಿದು ಅನ್ನೋ ಪ್ರಶ್ನೆ ಕೂಡ ಮೂಡುತ್ತದೆ.
ಬೆಳ್ಳಿತೆರೆಗೆ ಕಾಲಿಟ್ಟ ಡಾಕ್ಟರ್ ಬ್ರೋ ಗಗನ್ ಶ್ರೀನಿವಾಸ್
ಆ ಧ್ವನಿ ಬೇರೆ ಯಾರದ್ದೋ ಅಲ್ಲ. ದೇಶ-ವಿದೇಶ ಸುತ್ತೋ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಈ ಮೂಲಕ ಬೆಳ್ಳಿ ಪರದೆಗೂ ಕಾಲಿಟ್ಟಿದ್ದಾರೆ. ಗಗನ್ ಶ್ರೀನಿವಾಸ್ ಇಲ್ಲಿವರೆಗೂ ತಮ್ಮದೇ ವಿಡಿಯೋಗಳಿಗೆ ಧ್ವನಿ ಕೊಡ್ತಿದ್ರು. ಯಾರೂ ಹೋಗದೆ ಇರೋ ಜಾಗಕ್ಕೆ ಹೋಗಿ ಅಲ್ಲಿಯ ಅಪರೂಪದ ವಿಷಯಗಳನ್ನ ಸೆರೆಹಿಡಿದುಕೊಂಡು ಬರ್ತಿದ್ದರು.
ಡಾಕ್ಟರ್ ಬ್ರೋ ನಿರೂಪಣೆಯಲ್ಲಿ ಮುಸ್ತಾಫಾ ಕಥೆ!
ಆದರೆ ಡಾಕ್ಟರ್ ಬ್ರೋ ಇದೀಗ ಡೇರ್‌ಡೆವಿಲ್ ಮುಸ್ತಾಫಾ ಕಥೆ ನಿರೂಪಿಸುತ್ತಿದ್ದಾರೆ. ಈ ಮೂಲಕ ಸಿನಿಮಾಕ್ಕೆ ಒಂದು ಹೊಸ ರೀತಿ ಧ್ವನಿ ಸಿಕ್ಕಿದೆ. ಕಂಪ್ಲೀಟ್ ಹೊಸಬರ ಈ ಚಿತ್ರಕ್ಕೆ ಒಳ್ಳೆ ಫೀಲ್ ಕೂಡ ಬಂದಂತೆ ಕಾಣುತ್ತಿದೆ.
ಶಶಾಂಕ್ ಸೋಘಲ್ ನಿರ್ದೇಶನದ ಸಿನಿಮಾ
ಶಶಾಂಕ್ ಸೋಘಲ್ ನಿರ್ದೇಶನದ ಈ ಚಿತ್ರದಲ್ಲಿ ನುರಿತ ಕಲಾವಿದರೂ ಇದ್ದಾರೆ. ಪೂರ್ಣಚಂದ್ರ ಮೈಸೂರು, ಮಂಡ್ಯ ರಮೇಶ್, ಹಾಸ್ಯ ನಟ ಎಂ.ಎಸ್. ಉಮೇಶ್, ನಾಗಭೂಷಣ ಇವರೆಲ್ಲ ಈ ಕಥೆಗೆ ಜೀವತುಂಬಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಓದುಗ ಅಭಿಮಾನಿಗಳೇ ಈ ಚಿತ್ರಕ್ಕೆ ದುಡ್ಡುಹಾಕಿದ್ದಾರೆ.
ಡೇರ್‌ಡೆವಿಲ್ ಮುಸ್ತಾಫಾ ಮೇ-19 ರಂದು ರಿಲೀಸ್
ಪೂರ್ಣಚಂದ್ರ ತೇಜಸ್ವಿ ಅವರ 100 ಹೆಚ್ಚು ಓದುಗರೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ತಮ್ಮ ಕನಸಿನ ಡೇರ್‌ಡೆವಿಲ್ ಮುಸ್ತಾಫಾನನ್ನ ಬೆಳ್ಳಿ ತೆರೆಗೆ ತರುವ ಸಾಹಸ ಮಾಡಿದ್ದಾರೆ. ಇವರೆಲ್ಲರ ಸತತ ಪ್ರಯತ್ನದಿಂದ ಈ ಒಂದು ಚಿತ್ರ ಇದೇ ತಿಂಗಳ 19 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: Chaitra Achar: ಏನನ್ನು ಪ್ರಮೋಟ್ ಮಾಡ್ತೀದ್ದೀರಿ? ಸೀರೆ-ಬ್ಲೌಸ್! ಕೈಯಲ್ಲಿ ಸಿಗರೇಟ್ ಹಿಡಿದ ಸ್ಯಾಂಡಲ್ವುಡ್ ನಟಿ ಟ್ರೋಲ್
ಸದ್ಯ ಟ್ರೈಲರ್ ರಿಲೀಸ್ ಆಗಿ ಸಾಕಷ್ಟು ಗಮನ ಸೆಳೆಯುತ್ತಲೇ ಇದೆ. ಒಮ್ಮೆ ನೀವು ನೋಡಿ ದಿಲ್ ಖುಷ್ ಆಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ