ಶ್ 2 ಚಿತ್ರಕ್ಕೆ ಭರದ ಸಿದ್ಧತೆ! ಅನುಮತಿ ಸಿಗುತ್ತಲೇ ಶೂಟಿಂಗ್ ಶುರು!

Shhh2: ಈಗ 27 ವರ್ಷಗಳ ಹಿಂದಿನ ಶ್ ಚಿತ್ರದ ಮುಂದುವರೆದ ಭಾಗ ಎಂಬಂತೆ ಶ್ 2 ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಡಿಪಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಡಿ.ಪಿ. ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

news18-kannada
Updated:July 2, 2020, 3:01 PM IST
ಶ್ 2 ಚಿತ್ರಕ್ಕೆ ಭರದ ಸಿದ್ಧತೆ! ಅನುಮತಿ ಸಿಗುತ್ತಲೇ ಶೂಟಿಂಗ್ ಶುರು!
ಡಿ.ಪಿ. ವೆಂಕಟೇಶ್, ವಿ. ಮನೋಹರ್, ಪಿ. ಮಹೇಶ್
  • Share this:
ಶ್!!!.  27 ವರ್ಷಗಳ ಹಿಂದೆ ಅರ್ಥಾತ್ 1993ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ ಮಾಸ್ಟರ್ಪೀಸ್​​. ಈಗಲೂ ಹಾರರ್ ಜಾನರ್ ಬಗ್ಗೆ ಸ್ಯಾಂಡಲ್ವುಡ್​​ನಲ್ಲಿ ಯಾರೇ ಮಾತನಾಡಿದರೂ, ಮೊದಲು ಉದಾಹರಣೆ ನೀಡುವುದೇ ಶ್ ಸಿನಿಮಾ ಬಗ್ಗೆ. ಅಷ್ಟರ ಮಟ್ಟಿಗೆ ಈ ಚಿತ್ರ ಜನಮಾನಸದಲ್ಲಿ ಉಳಿದಿದೆ. ಈ ಚಿತ್ರದ ಬಳಿಕವೂ ಮತ್ತೆ ಶ್ ಎಚ್ಚರಿಕೆ ಸಿನಿಮಾಗಳು ಬಂದರೂ ರಿಯಲ್ ಸ್ಟಾರ್ ಉಪ್ಪಿ ಸಿನಿಮಾದಷ್ಟು ಯಶಸ್ಸು ಯಾವ ಚಿತ್ರಕ್ಕೂ ದೊರೆಯಲಿಲ್ಲ.

ಈಗ 27 ವರ್ಷಗಳ ಹಿಂದಿನ ಶ್ ಚಿತ್ರದ ಮುಂದುವರೆದ ಭಾಗ ಎಂಬಂತೆ ಶ್ 2 ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಡಿಪಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಉದ್ಯಮಿ ಡಿ.ಪಿ. ವೆಂಕಟೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಾತ್ರವಲ್ಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ತಾವೇ ಶ್ 2 ನಿರ್ದೇಶಿಸುತ್ತಿದ್ದಾರೆ ಕೂಡ. ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನಿರ್ದೇಶಿಸುತ್ತಿದ್ದು, ಇಂದಿನಿಂದಲೇ ಸಂಗೀತ ಸಂಯೋಜನೆಯ ಕೆಲಸಗಳೂ ಪ್ರಾರಂಭವಾಗಿವೆ. ಕುಮಾರಸ್ವಾಮಿ ಲೇಔಟ್ ನ ಪಾರೇಕ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣದ ಕೆಲಸಗಳು ಭರದಿಂದ ಸಾಗಿವೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕ ಪಿ. ಮಹೇಶ್ ಹಾಗೂ ಡಿ.ಪಿ. ವೆಂಕಟೇಶ್ ಇಬ್ಬರೂ ಆಪ್ತ ಗೆಳೆಯರು. ಇವತ್ತು ಪಿ. ಮಹೇಶ್ ಹುಟ್ಟುಹಬ್ಬವಾದ ಕಾರಣ, ಇಂದಿನಿಂದಲೇ ಶ್ 2 ಚಿತ್ರದ ಹಾಡುಗಳ ಧ್ವನಿ ಮುದ್ರಣ ಪ್ರಾರಂಭಿಸಿರುವುದಾಗಿ ನಿರ್ಮಾಪಕ, ನಿರ್ದೇಶಕ ಡಿ.ಪಿ. ವೆಂಕಟೇಶ್ ಹೇಳಿಕೊಂಡಿದ್ದಾರೆ. ಆ ಮೂಲಕ ತಮ್ಮ ಗೆಳೆಯನಿಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ್ದಾರೆ.

ಶ್​!!!


ಲಾಕ್​ಡೌನ್ ಬಹುತೇಕ ಅನ್​ಲಾಕ್ ಆಗಿದ್ದರೂ ಇನ್ನೂ ಹೊಸ ಸಿನಿಮಾಗಳ ಶೂಟಿಂಗ್ ಹಾಗೂ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್​​​ಗಳು ಕಾರ್ಯಾರಂಭ ಮಾಡಲು ಅವಕಾಶ ನೀಡಿಲ್ಲ. ಹೀಗಾಗಿ ಸದ್ಯ ಸಾಂಗ್ ರೆಕಾರ್ಡಿಂಗ್ ಹಾಗೂ ಪ್ರೀಪ್ರೊಡಕ್ಷನ್ ಕೆಲಸಗಳತ್ತ ಚಿತ್ರತಂಡ ಹೆಚ್ಚು ಗಮನ ಹರಿಸಿದೆ. ಕೊರೋನಾ ಹಾವಳಿ ಕಡಿಮೆಯಾಗಿ, ಲಾಕ್​​ಡೌನ್​​ನಿಂದ ಸಂಪೂರ್ಣ ರಿಲೀಫ್ ಸಿಕ್ಕ ಬಳಿಕ ಶ್ 2 ಚಿತ್ರೀಕರಣ ಪ್ರಾರಂಭಿಸುವ ಐಡಿಯಾ ಚಿತ್ರತಂಡದ್ದು. ಬೆಂಗಳೂರು, ಮಡಿಕೇರಿಯಲ್ಲಿ 40 ದಿನಗಳ ಚಿತ್ರೀಕರಣಕ್ಕೆ ಶೆಡ್ಯೂಲ್ ಪ್ಲ್ಯಾನ್ ಡಿಪಿ ವೆಂಕಟೇಶ್ ಅವರದು.

ಇನ್ನು ಶ್ 2 ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಮಾಡಲಿದ್ದಾರೆ. ಸದ್ಯ ಚಿತ್ರದ ನಾಯಕನ ಪಾತ್ರಕ್ಕಾಗಿ ಕನ್ನಡದ ಖ್ಯಾತ ನಟರೊಂದಿಗೆ ಮಾತುಕತೆ ನಡೆಯುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಕಲಾವಿದರ ಹಾಗೂ ಉಳಿದ ತಂತ್ರಜ್ಞರ ಮಾಹಿತಿ ನೀಡುವುದಾಗಿ ನಿರ್ದೇಶಕ ಡಿ.ಪಿ. ವೆಂಕಟೇಶ್ ತಿಳಿಸಿದ್ದಾರೆ.

ಕನ್ನಡ ಸಿನಿ ಪರದೆ ಮೇಲೆ ಬಾಲ ನಟಿಯಾಗಿ ಮಿಂಚಿದ್ದ ಬೇಬಿ ಇಂದಿರಾ ಈಗೇನು ಮಾಡುತ್ತಿದ್ದಾರೆ?
First published: July 2, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading