ಫ್ಯಾಮಿಲಿ ಜೊತೆ ಮೆಗಾಸ್ಟಾರ್ Chiranjeevi ಸಂಕ್ರಾಂತಿ ಆಚರಣೆಯ ವಿಡಿಯೋ ಇಲ್ಲಿದೆ ನೋಡಿ..

ಮೆಗಾಸ್ಟಾರ್ ಕುಟುಂಬದ ಹಲವಾರು ಸದಸ್ಯರನ್ನು ಒಳಗೊಂಡಿರುವ ಗೆಟ್-ಟು-ಗೆದರ್ ನ ಒಂದು ನೋಟವನ್ನು ನೀಡುವ ಮೂಲಕ ಅಭಿಮಾನಿಗಳನ್ನು ಅವರ ಆಚರಣೆಗೆ ಕರೆದೊಯ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ದೋಸೆ ಮಾಡುತ್ತಿರುವ ಚಿರಜೀವಿ

ದೋಸೆ ಮಾಡುತ್ತಿರುವ ಚಿರಜೀವಿ

  • Share this:
ವರ್ಷದ ಮೊದಲ ಹಬ್ಬ ಎಂದು ಕರೆಯುವ ಮಕರ ಸಂಕ್ರಾಂತಿಯನ್ನು( Sankranti) ಎಲ್ಲರೂ ದೇಶಾದ್ಯಂತ ವಿಧ ವಿಧವಾದ ಹೆಸರಿಂದ ಕರೆದರೂ ಸಹ ಮಾಡುವ ಹಬ್ಬ ಮಾತ್ರ ಒಂದೇ ಆಗಿದೆ ಎಂದು ಹೇಳಬಹುದು. ಅದರಲ್ಲೂ ಈ ಸಿನೆಮಾ ಸ್ಟಾರ್ ಗಳು ಹೇಗೆ ತಮ್ಮ ಕುಟುಂಬದವರೊಡನೆ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತಾರೆ. ಹಾಗಾದರೆ ಬನ್ನಿ ತೆಲುಗು ಚಿತ್ರೋದ್ಯಮದ (Telugu film industry) ಮೆಗಾಸ್ಟಾರ್ ಎಂದು ಖ್ಯಾತಿ ಪಡೆದಿರುವ ಚಿರಂಜೀವಿ (Chiranjeevi) ಅವರು ಮಕರ ಸಂಕ್ರಾಂತಿಯನ್ನು ತಮ್ಮ ಕುಟುಂಬದವರೊಡನೆ ತುಂಬಾನೇ ವಿಭಿನ್ನವಾಗಿ ಹೇಗೆ (celebrated) ಆಚರಿಸಿದ್ದಾರೆ ಎಂದು ನೋಡೋಣ.

ಮಕರ ಸಂಕ್ರಮಣ ಶುಭ ಕೋರಿದ ಚಿರಂಜೀವಿ
ನಟ ಚಿರಂಜೀವಿ, ಸಹೋದರ ನಾಗ ಬಾಬು ಮತ್ತು ಭಾವ ನಿರ್ಮಾಪಕ ಅಲ್ಲು ಅರವಿಂದ್ ಅವರು ತಮ್ಮ ಕುಟುಂಬಗಳೊಂದಿಗೆ ಒಂದೇ ಸೂರಿನಡಿ ಜಮಾಯಿಸಿ ಸಂಭ್ರಮಿಸಿದರು. ನಟ, ಶುಕ್ರವಾರದಂದು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಮಕರ ಸಂಕ್ರಮಣ ಹಬ್ಬದ ಶುಭ ಹಾರೈಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿರುವ ಖಾತೆಯಲ್ಲಿರುವ ಅವರ ಪುಟದಲ್ಲಿ ಹಂಚಿ ಕೊಂಡಿದ್ದಾರೆ.

ಇದಷ್ಟೇ ಅಲ್ಲದೆ ಮೆಗಾಸ್ಟಾರ್ ಕುಟುಂಬದ ಹಲವಾರು ಸದಸ್ಯರನ್ನು ಒಳಗೊಂಡಿರುವ ಗೆಟ್-ಟು-ಗೆದರ್ ನ ಒಂದು ನೋಟವನ್ನು ನೀಡುವ ಮೂಲಕ ಅಭಿಮಾನಿಗಳನ್ನು ಅವರ ಆಚರಣೆಗೆ ಕರೆದೊಯ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಚಿರಂಜೀವಿ ಅವರು ಹಂಚಿಕೊಂಡ ವೀಡಿಯೋದಲ್ಲಿ "ಎಲ್ಲರಿಗೂ ಭೋಗಿ ಮತ್ತು ಸಂಕ್ರಾಂತಿ ಹಬ್ಬದ ಶುಭಾಶಯಗಳು" ಎಂದು ಹೇಳಿ ಅಲ್ಲಿಯೇ ಹಾಜರಿದ್ದ ಅವರ ಕುಟುಂಬದ ಉಳಿದ ಸದಸ್ಯರನ್ನು ತೋರಿಸಲು ಅವರು ಕ್ಯಾಮೆರಾವನ್ನು ಹಾಗೆ ಅವರ ಕಡೆಗೆ ವಾಲಿಸಿದ್ದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ: Private Jet: ಯಾವ್ಯಾವ ನಟರ ಬಳಿ ಪ್ರೈವೇಟ್​ ಜೆಟ್​ ಇದೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್​ ಡಿಟೇಲ್ಸ್​!

ಒಟ್ಟಾಗಿ ಕಾಣಿಸಿಕೊಂಡ ಇಡೀ ಕುಟುಂಬ
ಈ ವೀಡಿಯೋದಲ್ಲಿ ಮೊದಲು ಕಾಣಿಸಿಕೊಂಡವರು ನಟ ವರುಣ್ ತೇಜ್ ಅವರು ಎಂದು ಹೇಳಬಹುದು, ಇವರು ಎಲ್ಲಾ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ನಂತರ ಅಲ್ಲು ಅರವಿಂದ, ರಾಮ್ ಚರಣ್ ಮತ್ತು ಅವರ ಪತ್ನಿ ಉಪಾಸನ ಕಮಿನೇನಿ, ಸಾಯಿ ಧರಂ ತೇಜ್ ಮತ್ತು ನಿಹಾರಿಕಾ ಕೊನಿಡೆಲಾ ಕೂಡ ಅಭಿಮಾನಿಗಳಿಗೆ ಶುಭ ಹಾರೈಸಲು ವೀಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ.

ಕುಟುಂಬವು ಒಂದು ಬೋನಾಫೈರ್ ಅನ್ನು ಮಧ್ಯೆದಲ್ಲಿ ಹಾಕಿಕೊಂಡು ಸುತ್ತಲೂ ಕುಳಿತಿರುವುದನ್ನು ಮತ್ತು ಸಂತೋಷದಿಂದ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ತಿಳಿಸುತ್ತಾ ಅಡ್ಡಾಡುತ್ತಿರುವುದನ್ನು ನೋಡಬಹುದಾಗಿದೆ. ಚಿರಂಜೀವಿ ಅವರು ಹಂಚಿಕೊಂಡ ವೀಡಿಯೋವನ್ನು ಸುಮಾರು 1,20,675 ಜನರು ಇಷ್ಟ ಪಟ್ಟಿದ್ದಾರೆ.

ವಿಡಿಯೋ ನೋಡಿ:
ಗಾರ್ಡನ್ ಜಾಗದಲ್ಲಿ ಸಂಭ್ರಮ
ಇದಲ್ಲದೆ ನಿಹಾರಿಕಾ ಕೊನಿಡೆಲಾ ಅವರು ಸಹ ಹಬ್ಬದ ಸಂದರ್ಭದಲ್ಲಿ ಕುಟುಂಬವು ಕಳೆದ ಸಮಯವನ್ನು ಒಳಗೊಂಡಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದಾರೆ. ಕುಟುಂಬ ಸದಸ್ಯರು ಮನೆಯ ಮುಂದೆ ಸುಂದರವಾದ ರಂಗೋಲಿ ಬಿಡಿಸಿದ್ದು, ಹೂವಿನಿಂದ ಮನೆಯ ಬಾಗಿಲುಗಳನ್ನು ಅಲಂಕರಿಸಿ, ಅಲ್ಲೇ ಗಾರ್ಡನ್ ಜಾಗದಲ್ಲಿ ದೋಸಾಗಳನ್ನು ಮಾಡುತ್ತ ಮತ್ತು ಹರಟೆ ಹೊಡೆಯುತ್ತಾ ಸಂತೋಷದಿಂದ ಹಬ್ಬ ಆಚರಿಸಿರುವುದನ್ನು ನೋಡಬಹುದಾಗಿದೆ.

ಅಡುಗೆ ಸ್ಪರ್ಧೆ
ನಂತರ ನಟ ವರುಣ್ ತೇಜ್ ಕೂಡ ಸುಂದರವಾದ ವೀಡಿಯೋವನ್ನು ಹಂಚಿ ಕೊಂಡಿದ್ದಾರೆ, ಅದರಲ್ಲಿ ಅವರು ಬೋನಾಫೈರ್ ಹಚ್ಚುವುದರೊಂದಿಗೆ ಪ್ರಾರಂಭ ಮಾಡುತ್ತಾರೆ. ನಂತರ ಅವರು ಚಿರಂಜೀವಿ ಅವರೊಂದಿಗೆ ದೋಸಾ ಮಾಡಲು ಮುಂದಾಗುತ್ತಾರೆ, ಒಂದು ರೀತಿಯ ಅಡುಗೆ ಸ್ಪರ್ಧೆಯಲ್ಲಿ ತೊಡಗುತ್ತಾರೆ. ವೀಡಿಯೋದಲ್ಲಿ ಚಿರಂಜೀವಿ ಅವರು ವರುಣ್ ತೇಜ್ ಅವರ ದೋಸಾವನ್ನು ನಾಶಮಾಡಲು ಉಲ್ಲಾಸದಿಂದ ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ: ನಾನು ಜೀವನದಲ್ಲಿ ಮರೆಯಲಾಗದ ವ್ಯಕ್ತಿ Puneeth Rajkumar ಎಂದ ಚಿರಂಜೀವಿ: ಅಂತಿಮ ನಮನ ಸಲ್ಲಿಸಿದ ವೆಂಕಟೇಶ್​..!

ಅಲ್ಲು ಅರವಿಂದ್ ಅವರ ಮಗ ಅಲ್ಲು ಅರ್ಜುನ್ ತಮ್ಮ ಪುಷ್ಪಾ ಚಿತ್ರದ ಮೂಲಕ ಅದ್ಭುತ ಯಶಸ್ಸನ್ನು ಪಡೆದ ನಂತರ ಮೆಗಾಸ್ಟಾರ್ ಕುಟುಂಬಕ್ಕೆ ಹೊಸ ವರ್ಷವು ದೊಡ್ಡ ರೀತಿಯಲ್ಲಿ ಉತ್ತಮವಾಗಿ ಪ್ರಾರಂಭವಾಗಿದೆ ಎಂದು ಹೇಳಬಹುದು. ಈ ಕುಟುಂಬವು ಮುಂದಿನದು ರಾಮ್ ಚರಣ್ ಅವರ ಬಹು ನಿರೀಕ್ಷಿತ ಚಿತ್ರ ‘ಆರ್ ಆರ್ ಆರ್’ ಬಿಡುಗಡೆಯಾಗುವುದನ್ನು ನಿರೀಕ್ಷಿಸುತ್ತಿದೆ. ಈ ಚಿತ್ರವನ್ನು ಮೊದಲಿಗೆ ಜನವರಿ 7 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಮುಂದೂಡಲಾಯಿತು.
Published by:vanithasanjevani vanithasanjevani
First published: