'ನನಗೆ ಚೈಲ್ಡ್​ ಅನ್ನಬೇಡಿ' ಎಂದು ವಿಜಯ್​ ದೇವರಕೊಂಡಗೆ ತಾಕೀತು ಮಾಡಿದ ರಶ್ಮಿಕಾ!

ಒಂದರ ಹಿಂದೊಂದು ಸ್ಟಾರ್​ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಬಗ್ಗೆ ಪ್ರೇಕ್ಷಕರಿಗೆ ಇರುವ ಕ್ರೇಜ್​ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಗೂಗಲ್​ ಬಿಡುಗಡೆ ಮಾಡಿರುವ ಅತ್ಯಂತ ಹೆಚ್ಚು ಸರ್ಚ್​ ಮಾಡಲ್ಪಟ್ಟವರ ಪಟ್ಟಿಯೇ ಸಾಕ್ಷಿ.

sushma chakre | news18
Updated:December 17, 2018, 1:04 PM IST
'ನನಗೆ ಚೈಲ್ಡ್​ ಅನ್ನಬೇಡಿ' ಎಂದು ವಿಜಯ್​ ದೇವರಕೊಂಡಗೆ ತಾಕೀತು ಮಾಡಿದ ರಶ್ಮಿಕಾ!
ವಿಜಯ್​ ದೇವರಕೊಂಡ- ರಶ್ಮಿಕಾ ಮಂದಣ್ಣ
sushma chakre | news18
Updated: December 17, 2018, 1:04 PM IST
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್​ಗೆ ಕಾಲಿಟ್ಟಿದ್ದೇ ಇಟ್ಟಿದ್ದು ಒಂದರ ಹಿಂದೊಂದು ಭರ್ಜರಿ ಸಿನಿಮಾ ಆಫರ್​ಗಳು ಹುಡುಕಿಕೊಂಡು ಬಂದವು. 'ಗೀತ ಗೋವಿಂದಂ' ಸಿನಿಮಾ ಹಿಟ್​ ಆಗುತ್ತಿದ್ದಂತೆ ರಶ್ಮಿಕಾ- ವಿಜಯ್​ ದೇವರಕೊಂಡ ಜೋಡಿ ಕೂಡ ಫೇಮಸ್​ ಆಯಿತು. ಅದಾದ ನಂತರ ಇದೀಗ 'ಡಿಯರ್​ ಕಾಮ್ರೇಡ್​' ಸಿನಿಮಾದಲ್ಲಿ ಮತ್ತೆ ಇದೇ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದೆ.

ಈ ವರ್ಷ ಅಂದರೆ 2018ರಲ್ಲಿ ಗೂಗಲ್​ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ದಕ್ಷಿಣ ಭಾರತೀಯ ನಟಿಯರಲ್ಲಿ ರಶ್ಮಿಕಾ ಮಂದಣ್ಣ 5ನೇ ಸ್ಥಾನ ಪಡೆದುಕೊಂಡಿದ್ದರು. ಕನ್ನಡದಲ್ಲಿ 'ಕಿರಿಕ್​ ಪಾರ್ಟಿ' ನಂತರ 'ಚಮಕ್', 'ಅಂಜನೀಪುತ್ರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಸದ್ಯಕ್ಕೆ ದರ್ಶನ್​ ಅಭಿನಯದ 'ಯಜಮಾನ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರ ಹಿಂದೊಂದು ಸ್ಟಾರ್​ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ರಶ್ಮಿಕಾ ಬಗ್ಗೆ ಪ್ರೇಕ್ಷಕರಿಗೆ ಇರುವ ಕ್ರೇಜ್​ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಗೂಗಲ್​ ಬಿಡುಗಡೆ ಮಾಡಿರುವ ಅತ್ಯಂತ ಹೆಚ್ಚು ಸರ್ಚ್​ ಮಾಡಲ್ಪಟ್ಟವರ ಪಟ್ಟಿಯೇ ಸಾಕ್ಷಿ.

ರಶ್ಮಿಕಾ ಚೈಲ್ಡ್​ ನಟಿಯಂತೆ:

ಅದೆಲ್ಲ ಇರಲಿ, ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಚ್​ ಮಾಡಲ್ಪಟ್ಟ ದಕ್ಷಿಣ ಭಾರತದ ಸ್ಟಾರ್​ಗಳಲ್ಲಿ ರಶ್ಮಿಕಾ ಮಂದಣ್ಣ ಕೂಡ ಟಾಪ್​ 5ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿಯುತ್ತಿದ್ದಂತೆ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಕೂಡ ಶುಭ ಹಾರೈಸಿದ್ದಾರೆ. ವಿಜಯ್ ದೇವರಕೊಂಡ ಅವರ ಹಾಸ್ಯಪ್ರಜ್ಞೆಯ ಬಗ್ಗೆ ತಿಳಿಯದವರು ಯಾರೂ ಇಲ್ಲ ಎನ್ನಬಹುದು. ಅವರು​ ಟ್ವೀಟ್​ ಮೂಲಕ ರಶ್ಮಿಕಾಗೆ ಅಭಿನಂದನೆ ಸಲ್ಲಿಸಿದ್ದು, 'ಚೈಲ್ಡ್​ ನಟಿಗೆ ಕಂಗ್ರಾಟ್ಸ್​' ಎಂದು ಕಾಲೆಳೆದಿದ್ದಾರೆ.

Comradeee @iamRashmika,

'ಡಿಯರ್​ ಕಾಮ್ರೇಡ್​' ಸಿನಿಮಾದ ಸ್ಟಿಲ್​ ಹಾಕಿ ಟ್ವೀಟ್​ ಮಾಡಿರುವ ವಿಜಯ್​ ದೇವರಕೊಂಡ, 'ಡಿಯರ್ ಕಾಮ್ರೇಡೀ ರಶ್ಮಿಕಾ, ಗೂಗಲ್​ನಲ್ಲಿ ಅತಿಹೆಚ್ಚು ಸರ್ಚ್​ ಮಾಡಲ್ಪಟ್ಟ ದಕ್ಷಿಣ ಭಾರತದ ಸ್ಟಾರ್​ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿರುವ ಚೈಲ್ಡ್​ ನಟಿಗೆ ಕಂಗ್ರಾಟ್ಸ್​. ಈ ವರ್ಷ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಸಿನಿಮಾ, ಅತಿ ಹೆಚ್ಚು ಹುಡುಕಲ್ಪಟ್ಟ 1ನೇ, 4ನೇ ಮತ್ತು 9ನೇ ಹಾಡುಗಳು ಕೂಡ ನಿಮ್ಮದೇ. ಇದೇ ಖುಷಿಯಲ್ಲಿ ನಮಗೆ ಪಾರ್ಟಿ ಬೇಕು. ಇಡೀ ಗೂಗಲ್​ ತುಂಬ ನೀವೇ ಆವರಿಸಿಕೊಂಡಿದ್ದೀರಿ!' ಎಂದು ರಶ್ಮಿಕಾ ಅವರ ಕಾಲೆಳೆದಿದ್ದಾರೆ ವಿಜಯ್​ ದೇವರಕೊಂಡ.

ರಶ್ಮಿಕಾ ಉತ್ತರವೇನು?:

ಆ ಟ್ವೀಟ್​ಗೆ ಉತ್ತರಿಸಿರುವ ರಶ್ಮಿಕಾ ಮಂದಣ್ಣ ಕೂಡ 'ಡಿಯರ್ ಕಾಮ್ರೇಡ್​' ಸಿನಿಮಾದಲ್ಲಿನ ವಿಜಯ್​ ದೇವರಕೊಂಡ ಅವರ ಪೋಸ್ಟರ್​ ಹಾಕಿದ್ದು, 'ಕಾಮ್ರೇಡ್​ ವಿಜಯ್​ ದೇವರಕೊಂಡ, ಮಿಸ್ಟರ್​ ಫಿಲಂಫೇರ್- ರೌಡಿವೇರ್​ ಖ್ಯಾತಿ ಪಡೆದಿರುವ ವಿಜಯ್​ ಅವರೇ ನನಗೆ ಯಾವಾಗ ಪಾರ್ಟಿ ಕೊಡುತ್ತೀರ? ಗೂಗಲ್​ನಲ್ಲಿ ಅತಿಹೆಚ್ಚು ಸರ್ಚ್​ ಮಾಡಿರುವ ದಕ್ಷಿಣ ಭಾರತದ ನಟರಲ್ಲಿ 4ನೇ ಸ್ಥಾನ, ಅತಿಹೆಚ್ಚು ಗೂಗಲ್​ನಲ್ಲಿ ಹುಡುಕಲ್ಪಟ್ಟ ಸಿನಿಮಾದ ಹೀರೋ ಆಗಿದ್ದೀರಿ. ಅತಿಹೆಚ್ಚು ಹುಡುಕಲ್ಪಟ್ಟ 2ನೇ ಮತ್ತು 4ನೇ ಹಾಡುಗಳು ಕೂಡ ನಿಮ್ಮದೇ. ಹಾಗೇ, ಚುನಾವಣಾ ಫಲಿತಾಂಶ ಬಂದ ನಂತರ ಇಡೀ ಸಿನಿಮಾ ಸೆಟ್​ಗೆ ಪಾರ್ಟಿ ಕೊಡಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಿರಿ.. ಅದೆಲ್ಲ ಏನಾಯ್ತು? ಹಾಗೇ ಇನ್ನೊಂದು ಮಾತು.. ನನ್ನನ್ನು ಚೈಲ್ಡ್​ ಎಂದು ಕರೆಯಬೇಡಿ'  ಎಂದು ಟ್ವೀಟ್​ ಮಾಡಿದ್ದಾರೆ ರಶ್ಮಿಕಾ.

ರಶ್ಮಿಕಾ- ವಿಜಯ್​ ದೇವರಕೊಂಡ ಸಿನಿಮಾದ ಹೊರತಾಗಿಯೂ ಬಹಳ ಆತ್ಮೀಯರಾಗಿದ್ದಾರೆ. ಇದೇ ಕಾರಣಕ್ಕೆ ಗೀತ-ಗೋವಿಂದಂ ಸಿನಿಮಾ ಬಿಡುಗಡೆ ವೇಳೆ ಅವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್​ಗಳು ಹರಿದಾಡಿದ್ದವು. ಈ ರೀತಿ ಟ್ವಿಟ್ಟರ್​ನಲ್ಲಿ ಅವರಿಬ್ಬರೂ ಕಾಲೆಳೆದುಕೊಳ್ಳುವುದು ಕೂಡ ಇದೇ ಹೊಸತೇನಲ್ಲ. ಗೀತ-ಗೋವಿಂದಂ ಸಿನಿಮಾ ಪ್ರಚಾರದ ಸಂದರ್ಭದಲ್ಲೂ ಇದೇ ರೀತಿ ಒಬ್ಬರನ್ನೊಬ್ಬರು ಕಿಚಾಯಿಸಿಕೊಂಡು ಟ್ವಿಟ್ಟರ್​ನಲ್ಲಿ ಸುದ್ದಿಯಾಗಿದ್ದರು.

First published:December 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ