ಸಾಕು ಪ್ರಾಣಿಗಳನ್ನು ಅನಾಥ ಮಾಡದಂತೆ ಮನವಿ ಮಾಡಿದ ಆಲಿಯಾ-ಅನುಷ್ಕಾ ಶರ್ಮಾ
ಕೊರೋನಾ ವೈರಸ್ ಭೀತಿಯ ನಡುವೆ ಸಾಕು ಪ್ರಾಣಿಗಳನ್ನು ಅನಾಥವಾಗಿ ಮಾಡಬೇಡಿ ಎಂದು ಸೆಲೆಬ್ರಿಟಿಗಳು ಕೆಲವು ದಿನಗಳಿಂದ ಮನವಿ ಮಾಡುತ್ತಿದ್ದಾರೆ. ಈಗ ಆಲಿಯಾ ಭಟ್ ಹಾಗೂ ಅನುಷ್ಕಾ ಶರ್ಮಾ ಸಹ ಈ ವಿಷಯವಾಗಿ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಈಗ ಎಲ್ಲಿ ನೋಡಿದರು ಕೊರೋನಾ ವೈರಸ್ನ ಕರಾಳ ರೂಪದ ನರ್ತನವೇ ಕಾಣುತ್ತಿದೆ. ಇದರ ಜೊತೆಗೆ ಕೊರೋನಾ ಕುರಿತಾದ ಹಲವಾರು ಸುಳ್ಳು ವದಂತಿಗಳು ಹರಿದಾಡುತ್ತಿವೆ. ಅದರಲ್ಲಿ ಸಾಕು ಪ್ರಾಣಿ ಕುರಿತ ವಿಷಯವೂ ಒಂದು. ಕೊರೋನಾ ವೈರಸ್ ಸೋಂಕು ಸಾಕು ಪ್ರಾಣಿಗಳಿಂದ ಹರಡುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಕೊರೋನಾ ವೈರಸ್ ಭೀತಿಯ ನಡುವೆ ಸಾಕು ಪ್ರಾಣಿಗಳನ್ನು ಅನಾಥವಾಗಿ ಮಾಡಬೇಡಿ ಎಂದು ಸೆಲೆಬ್ರಿಟಿಗಳು ಕೆಲವು ದಿನಗಳಿಂದ ಮನವಿ ಮಾಡುತ್ತಿದ್ದಾರೆ. ಈಗ ಆಲಿಯಾ ಭಟ್ ಹಾಗೂ ಅನುಷ್ಕಾ ಶರ್ಮಾ ಸಹ ಈ ವಿಷಯವಾಗಿ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ರಣಬೀರ್ ಕಪೂರ್, ಅಲಿಯಾ
ಸಾಕು ಪ್ರಾಣಿಗಳಿಂದ ಕೊರೋನಾ ಹರಡುವುದಿಲ್ಲ. ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಆಲಿಯಾ ಸಲಹೆ ನೀಡಿದ್ದಾರೆ.
ಇಂತಹ ಕಷ್ಟದ ಸಮಯದಲ್ಲಿ ಸಾಕು ಪ್ರಾಣಿಗಳನ್ನು ಅನಾಥ ಮಾಡುವುದು ಸರಿಯಲ್ಲ. ಬದಲಾಗಿ ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಅವುಗಳನ್ನು ಅನಾಥ ಮಾಡುವುದು ಅಮಾನವೀಯ ಕೃತ್ಯ ಎಂದಿದ್ದಾರೆ ಅನುಷ್ಕಾ ಶರ್ಮಾ.
ಅನುಷ್ಕಾ ಶರ್ಮಾ ಮಾಡಿರುವ ಇನ್ಸ್ಟಾಗ್ರಾಂ ಸ್ಟೋರಿಯ ಚಿತ್ರ
ಈ ಹಿಂದೆ ಮುಂಬೈನಲ್ಲಿ ಸಾರ್ವಜನಿಕ ಸಂಸ್ಥೆಗಳೇ ಸಾಕು ಪ್ರಾಣಿಗಳಿಂದ ಕೊರೋನಾ ಸೋಂಕು ಹರಡುತ್ತದೆ ಎಂದು ದೊಡ್ಡ ದೊಡ್ಡ ಫಲಕಗಳನ್ನು ಹಾಕಿದ್ದರು. ಆಗ ಜಾನ್ ಅಬ್ರಹಾಂ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಅನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದರು. ನಂತರ ಕ್ಷಮೆ ಯಾಚಿಸಿದ ಬಿಎಂಸಿ ಫಲಕಗಳನ್ನು ತೆರವುಗೊಳಿಸಿತ್ತು.
Appreciate it and thanks for responding so swiftly. Stay safe people and pets out there. https://t.co/O4agBf6lSj
ಇತ್ತೀಚೆಗೆ ನಟಿ ಹಾಗೂ ಬರಹಗಾರ್ತಿ ಟ್ವಿಂಕಲ್ ಖನ್ನಾ ಸಹ ಈ ವಿಷಯವಾಗಿ ಮನವಿ ಮಾಡಿದ್ದರು. ಜೊತೆಗೆ ತಮ್ಮ ಸಾಕು ನಾಯಿಯೊಂದಿಗೆ ಇರುವ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
There is no evidence that dogs and cats pass on Covid-19! Because of misleading posters and dubious sources of information, people are abandoning their pets! A cuddle a day keeps the doctor and the vet away, so do cuddle away💙#Dogpersonpic.twitter.com/JkEV52CmWA