ರಣವೀರ್​ ಸಿಂಗ್​ ಮಲ್ಹಾರಿ ಹಾಡಿಗೆ ಅಮೆರಿಕ ಅಧ್ಯಕ್ಷ ಹೆಜ್ಜೆ ಹಾಕಿದ ವಿಡಿಯೋ ಹಂಚಿಕೊಂಡ ಟ್ರಂಪ್​ ಸಹಾಯಕ !

Donald Trump India Visit: ಡೊನಾಲ್ಡ್​ ಟ್ರಂಪ್​ ಭಾರತ ಭೇಟಿ ಮಾಡುವ ಮುನ್ನವೇ ಅವರ ಸಹಾಯಕ ಡ್ಯಾನ್​ ಸ್ಕ್ಯಾವಿನೊ ತಮ್ಮ ಟ್ವಿಟರ್​ನಲ್ಲಿ ಟ್ರಂಪ್​' ಮಲ್ಹಾರಿ...' ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿದ್ದು, 'ಟು ಇಂಡಿಯಾ NamasteTrump' ಎಂದು ಬರೆದುಕೊಂಡಿದ್ದಾರೆ.

ಡೊನಾಲ್ಡ್​ ಟ್ರಂಪ್​

ಡೊನಾಲ್ಡ್​ ಟ್ರಂಪ್​

  • Share this:
ನಿನ್ನೆಯಷ್ಟೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬಂದಿದ್ದಾರೆ. ಕುಟುಂಬ ಸಮೇತ ಅಹಮದಾಬಾದಿಗೆ ಬಂದ ಅವರು ಮೊದಲ ದಿನದ ಪ್ರವಾಸದಲ್ಲಿ ನಮಸ್ತೆ ಟ್ರಂಪ್​​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೊತೆಗೆ ವಿಶ್ವ ಪ್ರಸಿದ್ಧ ತಾಜ್​ಮಹಲ್​ಗೂ ಭೇಟಿ ನೀಡಿ, ಅದರ ಸೌಂದರ್ಯವನ್ನು ಕಣ್ತುಂಬಿಕೊಂಡರು.

ಡೊನಾಲ್ಡ್​ ಟ್ರಂಪ್​ ಭಾರತ ಭೇಟಿ ಮಾಡುವ ಮುನ್ನವೇ ಅವರ ಸಹಾಯಕ ಡ್ಯಾನ್​ ಸ್ಕ್ಯಾವಿನೊ ತಮ್ಮ ಟ್ವಿಟರ್​ನಲ್ಲಿ ಟ್ರಂಪ್​' ಮಲ್ಹಾರಿ...' ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿದ್ದು, 'ಟು ಇಂಡಿಯಾ #NamasteTrump' ಎಂದು ಬರೆದುಕೊಂಡಿದ್ದಾರೆ.ಟ್ರಂಪ್​ ಡಾನ್ಸ್​ ಮಾಡುತ್ತಿರುವ ವಿಡಿಯೋ ಅಂದರೆ ಅದು ನಿಜಕ್ಕೂ ಅವರು 'ಮಲ್ಹಾರಿ' ಹಾಡಿಗೆ ಕುಣಿದಿದ್ದಾರೆ ಎಂದಲ್ಲ. 'ಬಾಜಿರಾವ್​ ಮಸ್ತಾನಿ' ಸಿನಿಮಾದ 'ಮಲ್ಹಾರಿ....' ಹಾಡಿನಲ್ಲಿ ರಣವೀರ್​ ಕುಣಿದಿರುವ ರೀತಿ ನೋಡಿದರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಈ ಹಾಡಿನಲ್ಲಿ ರಣವೀರ್​ ಮುಖಕ್ಕೆ ಟ್ರಂಪ್​ ಅವರ ಮುಖ ಹಾಕಿ ಎಡಿಟ್ ಮಾಡಿರುವ ವಿಡಿಯೋ ನಿಜಕ್ಕೂ ಟ್ರಂಪ್​ ಕುಣಿದಂತೆ ಅನ್ನಿಸುತ್ತದೆ.

ಇದನ್ನೂ ಓದಿ: Dabboo Ratnani: ಕಿಯಾರಾ ಬೆತ್ತಲೆ ಚಿತ್ರವನ್ನು ಟ್ರೋಲ್​ ಮಾಡಿದವರಿಗೆ ಉತ್ತರ ಕೊಟ್ಟ ಛಾಯಾಗ್ರಾಹಕ ಡಬೂ ರತ್ನಾನಿ..!

ಈ ವಿಡಿಯೋ ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲೇ ಎಲ್ಲೆಡೆ ಹರಿದಾಡಿದ್ದು, ವೈರಲ್​ ಆಗಿತ್ತು. ಆದರೆ ಭಾರತದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದ ವಿಡಿಯೋ ಇತ್ತೀಚೆಗಷ್ಟೆ ಟ್ರಂಪ್​ ಅವರ ದೊಡ್ಡ ಮಗ ಡೊನಾಲ್ಡ್​ ಟ್ರಂಪ್ ಜೂನಿಯರ್​ ಅವರ ಅಧಿಕೃತ ಫೇಸ್​ಬುಕ್​ ವಾಲ್​ ಮೇಲೂ ಪೋಸ್ಟ್​ ಕಾಣಿಸಿಕೊಂಡಿತ್ತು.

Donald Trumps Assistant Shares Morphed Video of the US President Dancing on Ranveer Singhs Malhari
ರಣವೀರ್​ ಸಿಂಗ್​ ಹಾಗೂ ಡೊನಾಲ್ಡ್​ ಟ್ರಂಪ್​


ನಟ ರಣವೀರ್ ಸಿಂಗ್​ ಈಗ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಸಂಜಯ್​ ಲೀಲಾ ಬನ್ಸಾಲಿ ಅವರ 'ಪದ್ಮಾವತ್​' ಸಿನಿಮಾದಲ್ಲಿ ವಿಲನ್​ ಪಾತ್ರ ರಣವೀರ್​ ಅವರ ಸಿನಿ ಜೀವನಕ್ಕೆ ತಿರುವು ನೀಡಿತ್ತು. ಆದರೆ ನಿಜಕ್ಕೂ 'ಬಾಜಿರಾವ್​ ಮಸ್ತಾನಿ' ಸಿನಿಮಾ ಸಹ ರಣವೀರ್​ ಸಿನಿ ಜೀವನಕ್ಕೆ ಗುರುತು ತಂದುಕೊಟ್ಟಿತ್ತು ಎಂದರೆ ತಪ್ಪಾಗಲಾರದು.

Nikhil Revathi Pre Wedding Photo Shoot: ನಿಖಿಲ್​-ರೇವತಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ನ ಚಿತ್ರಕ್ಕೆ ನಿಖಿಲ್​ ರೊಮ್ಯಾಂಟಿಕ್ ಕ್ಯಾಪ್ಷನ್


 

First published: