Video: ವೈರಲ್​ ಆಯಿತು ದಂಗಲ್​ ಹುಡುಗಿಯರ ಈ ಡಾನ್ಸ್​ ವಿಡಿಯೋ!

news18
Updated:August 2, 2018, 5:01 PM IST
Video: ವೈರಲ್​ ಆಯಿತು ದಂಗಲ್​ ಹುಡುಗಿಯರ ಈ ಡಾನ್ಸ್​ ವಿಡಿಯೋ!
news18
Updated: August 2, 2018, 5:01 PM IST
ನ್ಯೂಸ್​ 18 ಕನ್ನಡ 

'ದಂಗಲ್'​ ಸಿನಿಮಾದ ದಂಗಲ್ ಹುಡುಗಿಯರೆಂದೇ ಖ್ಯಾತರಾಗಿರುಗ ಫಾತಿಮಾ ಸನಾ ಶೇಕ್​ ಹಾಗೂ ಸಾನ್ಯಾ ಮಲ್ಹೋತ್ರ ಇಬ್ಬರೂ ಫಿಟ್​ನೆಸ್​ ಫ್ರೀಕ್​. ಹೀಗಾಗಿಯೇ ಅವರು ಆಗಾಗ ನರತ್ಯದ ಕಾರ್ಯಾಗಾರಕ್ಕೆ ಹೋಗುತ್ತಿರುತ್ತಾರೆ.

ಅಲ್ಲದೆ ಈ ದಂಗಲ್​ ಜೋಡಿ ಸಿನಿಮಾ ಹೊರತಾಗಿಯೂ ಸ್ನೇಹವನ್ನು ಹೊಂದಿದ್ದು, ಇಬ್ಬರೂ ಹೊರಗಡೆ ಹೋದಾಗ ತೆಗೆಸಿಕೊಂಡ ಚಿತ್ರಗಳನ್ನು ಪೋಸ್ಟ್​ ಮಾಡುತ್ತಾರೆ. ಹೀಗೆ ಪೋಸ್ಟ್​ ಆದ ಫೋಟೋಗಳು ​ಕೆಲವೇ ಗಂಟೆಗಳಲ್ಲಿ ವೈರಲ್​ ಆಗುತ್ತದೆ. ಈಗ ಈ ಜೋಡಿಯ ಡಾನ್ಸ್​ ವಿಡಿಯೋವೊಂದು ವೈರಲ್​ ಆಗುತ್ತಿದೆ.

 




Choreography by @shazebsheikh 😉 #shazebsheikhchoreography


A post shared by Fatima Sana Shaikh (@fatimasanashaikh) on






ಹೌದು ಸಾನ್ಯಾ ಹಾಗೂ ಫಾತಿಮಾ ಶೇಕ್​ ಪ್ರಕಟಿಸಿರುವ ಡಾನ್ಸ್​ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಇತ್ತೀಚೆಗಷ್ಟೆ ನಟಿ ನೋರಾ ಅವರ ಬೆಲ್ಲಿ ಡಾನ್ಸ್​ ವಿಡಿಯೋ ಎಲ್ಲರ ಮನಸೂರೆ ಮಾಡಿತ್ತು. ​




ಸುಶ್ಮಿತಾ ಸೇನ್​ ಹಾಗೂ ಸಂಜಯ್​ ಕಪೂರ್​ ಅಭಿನಯದ 'ಸಿರ್ಫ್​ ತುಮ್​' ಸಿನಿಮಾದ 'ದಿಲ್​ ಬರ್ ದಿಲ್​ ಬರ್​...' ಹಾಡಿಗೆ ಶಾಜೆಬ್​ ಶೇಕ್​ ಅವರ ನೃತ್ಯ ಸಂಯೋಜನೆಯಲ್ಲಿ ಈ ದಂಗಲ್​ ಗರ್ಲ್ಸ್​ ಮಾಡಿರುವ ಮೂವ್ಸ್​ಗೆ ಜನರು ಮೆಚ್ಚುಗೆಯ ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ.

 


First published:August 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ