• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Sara Ali Khan: ನನ್ನನ್ನು ರಾಜಕುಮಾರಿ ಎಂದು ಹೇಳ್ಬೇಡಿ, ನನಗೆ ಇದು ಹಾಸ್ಯಾಸ್ಪದ ಎನಿಸುತ್ತದೆ ಎಂದ ಆ ನಟಿ ಯಾರು? ಹೀಗೆ ಹೇಳಿದ್ಯಾಕೆ?

Sara Ali Khan: ನನ್ನನ್ನು ರಾಜಕುಮಾರಿ ಎಂದು ಹೇಳ್ಬೇಡಿ, ನನಗೆ ಇದು ಹಾಸ್ಯಾಸ್ಪದ ಎನಿಸುತ್ತದೆ ಎಂದ ಆ ನಟಿ ಯಾರು? ಹೀಗೆ ಹೇಳಿದ್ಯಾಕೆ?

ಸೈಫ್​ ಅಲಿ ಖಾನ್​ ಮತ್ತು ಸಾರಾ ಅಲಿ ಖಾನ್​

ಸೈಫ್​ ಅಲಿ ಖಾನ್​ ಮತ್ತು ಸಾರಾ ಅಲಿ ಖಾನ್​

ಬಾಲಿವುಡ್​​ನಲ್ಲಿ ಸೈಫ್​ ಅಲಿ ಖಾನ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೀಗ ಇವರ ಮಗಳು ಸಾರಾ ಅಲಿ ಖಾನ್​ ಸಹ ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ. ಆದ್ರೆ ಇದೀಗ ಜನರೆಲ್ಲರೂ ಆಕೆಯನ್ನ ರಾಜಕುಮಾರಿ ಎಂದು ಕರೆಯುತ್ತಿದ್ದಾರೆ. ಇದಕ್ಕೆ ಸಾರಾ ಅಲಿ ಖಾನ್​ ಅವರು ನನ್ನನ್ನು ರಾಜಕುಮಾರಿ ಎಂದು ಹೇಳ್ಬೇಡಿ ಎಂದಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್ ನಲ್ಲಿ (Bollywood) ತುಂಬಾನೇ ಜನಪ್ರಿಯ ನಟರಲ್ಲಿ ಸೈಫ್ ಅಲಿ ಖಾನ್ (Saif Ali Khan) ಪಟೌಡಿ ಸಹ ಒಬ್ಬರು ಅಂತ ಹೇಳಬಹುದು. ಇವರು ಬರೀ ನಟರಷ್ಟೇ ಅಲ್ಲದೆ, ಚಲನಚಿತ್ರ ನಿರ್ಮಾಪಕ ಕೂಡ ಆಗಿದ್ದಾರೆ. ನಟ ಸೈಫ್ ಪಟೌಡಿ ಕುಟುಂಬದ ಹತ್ತನೇ ನವಾಬ್ ಎಂಬ ವಿಷಯ ಎಲ್ಲರಿಗೂ ಗೊತ್ತು. ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಮತ್ತು ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಪುತ್ರ ಈ ಸೈಫ್. ಈಗೇಕೆ ಬಾಲಿವುಡ್ ನಟ ಸೈಫ್ ಬಗ್ಗೆ ಮಾತು ಅಂತೀರಾ? ಇಲ್ಲಿದೆ ನೋಡಿ ಒಂದು ಇಂಟ್ರೆಸ್ಟಿಂಗ್​ ಸ್ಟೋರಿ. ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಅವರ ಮಗಳಾದ ಸಾರಾ ಅಲಿ ಖಾನ್ (Sara Ali Khan) ಈಗ ಬಾಲಿವುಡ್​​ಗೆ (Bollywood) ಎಂಟ್ರಿ ಕೊಟ್ಟಾಗಿದೆ.


ಅವರು ಈಗ ‘ಗ್ಯಾಸ್‌ಲೈಟ್’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ತನ್ನ ಕಾಣೆಯಾದ ತಂದೆಯನ್ನು ಹುಡುಕಲು ತನ್ನ ರಾಜಮನೆತನದ ಎಸ್ಟೇಟ್ ನಲ್ಲಿರುವ ಮನೆಗೆ ಬರುವ ಒಂದು ಮಗಳ ಪಾತ್ರದಲ್ಲಿ ಸಾರಾ ಅಲಿ ಖಾನ್ ನಟಿಸಲು ಸಜ್ಜಾಗಿದ್ದಾರೆ.


ನಾನು ರಾಜಕುಮಾರಿ ಅಲ್ಲ, ಮುಂಬೈ ಹುಡುಗಿ ಅಂತಾರೆ ಸಾರಾ


ನಟಿ ಸಾರಾ ಸ್ವತಃ ಒಬ್ಬ ರಾಜಕುಮಾರಿ, ಏಕೆಂದರೆ ಅವಳ ತಂದೆ ಸೈಫ್ ಅಲಿ ಖಾನ್ ಪಟೌಡಿಯ ಹತ್ತನೇ ನವಾಬ್ ಆಗಿದ್ದಾರೆ. ಈಗ ಜನರು ಸೈಫ್ ಅಲಿ ಖಾನ್ ಅವರ ಮಗಳು ಸಾರಾ ಅಲಿ ಖಾನ್ ಅವರನ್ನು ರಾಜಕುಮಾರಿ ಅಂತ ಭಾವಿಸುವುದು ಸಹಜ ಅಲ್ಲವೇ? ಹೀಗೆ ಒಂದು ಸಂದರ್ಶನದಲ್ಲಿ ಬಂದಾಗ ಅವರು ಈ ರೀತಿಯಾಗಿ ಜನರು ತನ್ನನ್ನು ರಾಜಕುಮಾರಿ ಅಂತ ಅಂದು ಕೊಂಡರೆ ಆಕೆಗೆ ತುಂಬಾನೇ ಹಾಸ್ಯಾಸ್ಪದವಾಗಿ ಅನ್ನಿಸುತ್ತದೆಯಂತೆ ಅಂತ ಹೇಳಿಕೊಂಡರು.


ಇದನ್ನೂ ಓದಿ: ಕರಣ್ ಜೊತೆ ಕಾಫಿ ಕುಡಿಯಲು ರಿಷಬ್-ರಾಕಿ ಭಾಯ್ ರೆಡಿ!


ತನ್ನನ್ನು ತಾನು ಒಬ್ಬ ಮುಂಬೈ ಹುಡುಗಿ ಅಂತ ಕರೆದುಕೊಂಡು ಈ "ರಾಯಲ್" ಮತ್ತು “ಪ್ರಿನ್ಸಸ್” ಎಂದರೇನು ಅಂತ ನನಗೆ ಗೊತ್ತಿಲ್ಲ ಎಂದು ನಟಿ ಸಾರಾ ಅವರು ಹೇಳಿದ್ದಾರೆ.


ರಾಜಕುಮಾರಿ ಅಂತ ಕರೆಯಬೇಡಿ ಎಂದ ನಟಿ


ಸುದ್ದಿ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಈ ನಟಿ "ಜನರು ನನ್ನನ್ನು ಒಬ್ಬ ರಾಜಕುಮಾರಿ ಅಂತ ನೋಡುವಾಗ ಮತ್ತು ಭಾವಿಸಿದಾಗ ನನಗೆ ತುಂಬಾನೇ ಹಾಸ್ಯಾಸ್ಪದ ಅಂತ ಅನ್ನಿಸುತ್ತದೆ. ನಾನು ನನ್ನನ್ನು ರಾಜಕುಮಾರಿ ಅಂತ ಎಂದಿಗೂ ಪರಿಗಣಿಸುವುದಿಲ್ಲ" ಎಂದು ಹೇಳಿದರು.


ಸೈಫ್​ ಅಲಿ ಖಾನ್​ ಮತ್ತು ಸಾರಾ ಅಲಿ ಖಾನ್​


ತಾನು ಹೇಗೆ ಒಬ್ಬ ಮುಂಬೈ ಹುಡುಗಿ ಎಂದು ಹೇಳಿಕೊಂಡ ಅವರು "ನಾನು ನನ್ನ ಜೀವನದ ಹೆಚ್ಚಿನ ಸಮಯವನ್ನು ಮುಂಬೈನ ಜುಹುವಿನಲ್ಲಿ ನನ್ನ ತಾಯಿಯೊಂದಿಗೆ ಕಳೆದಿದ್ದೇನೆ. ನನ್ನ ತಂದೆಯನ್ನು ಭೇಟಿಯಾಗಲು ನಾನು ಬಾಂದ್ರಾಗೆ ಹೋಗುತ್ತೇನೆ.


ನಾನು ಹಿಮಾಚಲ ಪ್ರದೇಶ ಮತ್ತು ಕೇದಾರನಾಥ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ರಜಾದಿನಗಳನ್ನು ಕಳೆಯುತ್ತೇನೆ. ಗಂಭೀರವಾಗಿ ಹೇಳುವುದಾದರೆ, ನನಗೆ ಈ ರಾಜ ಮನೆತನ ಎಂದರೇನು ಅಂತ ಗೊತ್ತಿಲ್ಲ" ಎಂದು ಸಾರಾ ಹೇಳಿದರು.


ಸಾರಾ ಅಭಿನಯದ ಗ್ಯಾಸ್‌ಲೈಟ್ ಚಿತ್ರ ಮಾರ್ಚ್ 31ಕ್ಕೆ ಬಿಡುಗಡೆಯಾಗಲಿದೆ..


ಸಾರಾ ಅಭಿನಯದ ಗ್ಯಾಸ್‌ಲೈಟ್ ಚಿತ್ರ ಮಾರ್ಚ್ 31 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಅವರ ಮುಂದಿನ ಬಿಡುಗಡೆಯ ಚಿತ್ರದಲ್ಲಿ ಸಾರಾ ಅವರು ನಟ ವಿಕ್ಕಿ ಕೌಶಲ್ ಅವರೊಂದಿಗೆ ನಟಿಸಲಿದ್ದು, ಲಕ್ಷ್ಮಣ್ ಉಟೇಕರ್ ಅವರ ಈ ಚಿತ್ರಕ್ಕೆ ಇನ್ನೂ ಯಾವುದೇ ಹೆಸರು ಇಟ್ಟಿಲ್ಲ ಅಂತ ಹೇಳಲಾಗುತ್ತಿದೆ.
ಸಾರಾ ಸದ್ಯಕ್ಕೆ ಹೋಮಿ ಅಡಾಜಾನಿಯಾ ಅವರ ಮುಂದಿನ ಮುಬಾರಕ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ, ಈ ಚಿತ್ರದಲ್ಲಿ ನಟಿ ಕರಿಷ್ಮಾ ಕಪೂರ್ ಸಹ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಚಿತ್ರಗಳ ನಂತರ ಅವರು ‘ಏ ವತನ್ ಮೇರೆ ವತನ್’ ಚಿತ್ರದ ಕೆಲಸವನ್ನು ಶುರು ಮಾಡಲಿದ್ದಾರಂತೆ. ಕಣ್ಣನ್ ಅಯ್ಯರ್ ನಿರ್ದೇಶನದ ಈ ಚಿತ್ರವು ಈ ವರ್ಷದ ಕೊನೆಯಲ್ಲಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಪ್ರದರ್ಶನಗೊಳ್ಳಲಿದೆ ಅಂತ ಹೇಳಲಾಗುತ್ತಿದೆ.

top videos
    First published: