ಬೆಂಗಳೂರು ಭೂಗತ ಪಾತಕಿ ಜಯರಾಜ್​ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಡಾಲಿ ಧನಂಜಯ್​!

1970-89ರ ಅವಧಿಯಲ್ಲಿ ಜಯರಾಜ್​ ಇಡೀ ಬೆಂಗಳೂರಿನ್ನೇ ನಡುಗಿಸಿದ್ದ. ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ರಾಜಕೀಯದ ಮೇಲೂ ಹಿಡಿತ ಸಾಧಿಸಿದ್ದ ಎನ್ನಲಾಗಿದೆ. ಜಯರಾಜ್​ ಪಾತ್ರದಲ್ಲಿ ಡಾಲಿ ಧನಂಜಯ್​ ಕಾಣಿಸಿಕೊಳ್ಳುತ್ತಿದ್ದಾರೆ.

ಅದರೊಂದಿಗೆ ಇದೀಗ ಡಾನ್ ಜಯರಾಜ್​ಗಾಗಿ ಡಾಲಿ ಧನಂಜಯ್ ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿರುವ ಸುದ್ದಿ ಹೊರಬಿದ್ದಿದೆ. ಒಟ್ಟಿನಲ್ಲಿ ಬೆಂಗಳೂರು ಅಂಡರ್​ವರ್ಲ್ಡ್​ನ ತೆರೆಮರೆಯ ಕಥೆಯನ್ನು ನೋಡಲು ಸಿನಿಪ್ರಿಯರು ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ.

ಅದರೊಂದಿಗೆ ಇದೀಗ ಡಾನ್ ಜಯರಾಜ್​ಗಾಗಿ ಡಾಲಿ ಧನಂಜಯ್ ಸಕಲ ರೀತಿಯಲ್ಲೂ ತಯಾರಿ ನಡೆಸುತ್ತಿರುವ ಸುದ್ದಿ ಹೊರಬಿದ್ದಿದೆ. ಒಟ್ಟಿನಲ್ಲಿ ಬೆಂಗಳೂರು ಅಂಡರ್​ವರ್ಲ್ಡ್​ನ ತೆರೆಮರೆಯ ಕಥೆಯನ್ನು ನೋಡಲು ಸಿನಿಪ್ರಿಯರು ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ.

 • Share this:
  ‘ಟಗರು’ ಸಿನಿಮಾ ತೆರೆಕಂಡ ನಂತರ ಡಾಲಿ ಧನಂಜಯ್​ ನಸೀಬು ಅಕ್ಷರಶಃ ಬದಲಾಗಿದೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವರಿಗೆ ಆಫರ್​ಗಳು ಹುಡುಕಿಕೊಂಡು​ ಬರುತ್ತಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲಿ ಭೂಗತ ಪಾತಕಿ ಜಯರಾಜ್​ ಜೀವನ ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಡಾಲಿ ಧನಂಜಯ್​ ಜೀವ ತುಂಬಲು ಮುಂದಾಗಿದ್ದಾರೆ.

  1970-89ರ ಅವಧಿಯಲ್ಲಿ ಜಯರಾಜ್​ ಇಡೀ ಬೆಂಗಳೂರಿನ್ನೇ ನಡುಗಿಸಿದ್ದ. ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ರಾಜಕೀಯದ ಮೇಲೂ ಹಿಡಿತ ಸಾಧಿಸಿದ್ದ ಎನ್ನಲಾಗಿದೆ. 1989ರಲ್ಲಿ ಈತನನ್ನು ಹತ್ಯೆ ಮಾಡಲಾಗಿತ್ತು. ಈಗ ಈತನ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಭೂಗತ ಪಾತಕಿ ಜಯರಾಜ್​ ಪಾತ್ರದಲ್ಲಿ ಡಾಲಿ ಧನಂಜಯ್​ ಕಾಣಿಸಿಕೊಳ್ಳುತ್ತಿದ್ದಾರೆ.

  ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಘೋಷಣೆ ಮಾಡಲಾಗಿದೆ. ಜಯರಾಜ್ ಪಾತ್ರದಲ್ಲಿ ಡಾಲಿ‌ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಭಾಗಗಳಲ್ಲಿ ಜಯರಾಜ್ ಚಿತ್ರ ಮಾಡಲು ಪ್ಲಾನ್ ಮಾಡಲಾಗಿದೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿ‌ದೆ.  ಇದನ್ನೂ ಓದಿ: ‘ಜೋಕರ್’ ಪಾತ್ರದಲ್ಲಿ ಡಾಲಿ ಧನಂಜಯ್?; ವೈರಲ್ ಆಯ್ತು ಪೋಸ್ಟರ್​

  ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಸಿನಿಮಾಗೆ ಕಥೆ ಬರೆದಿದ್ದಾರೆ. ಅಶು ಬೆದ್ರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನವ ಪ್ರತಿಭೆ ಶೂನ್ಯ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.  ಈ ಚಿತ್ರಕ್ಕಾಗಿ ಧನಂಜಯ್​ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುತ್ತಿದೆ ಗಾಂಧಿ ನಗರ.

  ಸದ್ಯ, ಡಾಲಿ ಧನಂಜಯ್​ ಅಭಿನಯದ 'ಪಾಪ್​ಕಾರ್ನ್​ ಮಂಕಿ ಟೈಗರ್​' ಫೆ.21ರಂದು ತೆರೆಗೆ ಬರಲು ಸಿದ್ದಗೊಂಡಿದೆ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ಸಾಕಷ್ಟು ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ನಿರೀಕ್ಷೆ ಇದ್ದು, ಈ ಚಿತ್ರ ಬಿಡುಗಡೆಗೂ ಮುನ್ನವೇ 10 ಕೋಟಿ ವ್ಯವಹಾರ ಕುದುರಿಸಿದೆ. ಈಗಾಗಲೇ ಈ ಚಿತ್ರದ ಟೀಸರ್​ ಸಿನಿಪ್ರಿಯರಲ್ಲಿ ಸಾಕಷ್ಟು ಕ್ರೇಜ್​ ಹುಟ್ಟಿಸಿದೆ.
  First published: