ನಾಯಿ ಪಾತ್ರಕ್ಕೆ ನಾಯಿಂದಲೇ ಡಬ್ಬಿಂಗ್; ದಾಖಲೆ ಬರೆದ ನಾನು ಮತ್ತು ಗುಂಡ ಸಿನಿಮಾ

‘ನಾನು ಮತ್ತು ಗುಂಡ‘ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದಾದ್ಯಂತ ರಿಲೀಸ್ ಆಗುತ್ತಿದೆ. ಚಿತ್ರತಂಡ ಚಿತ್ರದ ಬಗೆಗಿನ ವಿಶೇಷ ವಿಚಾರಗಳನ್ನ ರಿವೀಲ್ ಮಾಡುತ್ತಿದೆ. ಇನ್ನು ಸಾಕು ಪ್ರಾಣಿಯ ಸಂಬಂಧ ಸಾರುವ ಈ ಸಿನಿಮಾವನ್ನುನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ. ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ರಘು ಹಾಸನ್ ನಿರ್ಮಾಣ ಮಾಡಿದ್ದಾರೆ.

news18-kannada
Updated:January 13, 2020, 7:44 PM IST
ನಾಯಿ ಪಾತ್ರಕ್ಕೆ ನಾಯಿಂದಲೇ ಡಬ್ಬಿಂಗ್; ದಾಖಲೆ ಬರೆದ ನಾನು ಮತ್ತು ಗುಂಡ ಸಿನಿಮಾ
ನಾನು ಮತ್ತು ಗುಂಡ
  • Share this:
ಸ್ಯಾಂಡಲ್​ವುಡ್​ನಲ್ಲಿ ಈ ವರ್ಷ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ರೆಡಿಯಾಗಿದೆ. ಅದರಂತೆ ಹ್ಯಾಸ ನಟ​ ಶಿವರಾಜ್​ ಕೆ.ಆರ್​ ಪೇಟೆ ನಟಿಸಿರುವ ‘ನಾನು ಮತ್ತು ಗುಂಡ‘ ಸಿನಿಮಾ ಕೂಡ ಬಿಡುಗಡೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಸಿಂಬಾ ಹೆಸರಿನ ನಾಯಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದೆ. ಇದೀಗ ಸಿಂಬಾ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಿ ಇತಿಹಾಸ ಸೃಷ್ಟಿಸಿದೆ. ಸಿಂಬಾ ಡಬ್ಬಿಂಗ್ ಮಾಡಿರುವ ದೃಶ್ಯಾವಳಿಯನ್ನ ಚಿತ್ರತಂಡ ರಿಲೀಸ್ ಮಾಡಿದೆ.

ಈ ವಿಡಿಯೋ, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ವಿಡಿಯೋದಿಂದಾಗಿ ಪ್ರೇಕ್ಷಕರಲ್ಲಿ ನಾನು ಮತ್ತು ಗುಂಡ ಚಿತ್ರದ ಮೇಲಿನ ಕುತೂಹಲವನ್ನ ಇನ್ನಷ್ಟು ಹೆಚ್ಚಾಗಿದೆ.

‘ನಾನು ಮತ್ತು ಗುಂಡ‘ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದಾದ್ಯಂತ ರಿಲೀಸ್ ಆಗುತ್ತಿದೆ. ಚಿತ್ರತಂಡ ಚಿತ್ರದ ಬಗೆಗಿನ ವಿಶೇಷ ವಿಚಾರಗಳನ್ನ ರಿವೀಲ್ ಮಾಡುತ್ತಿದೆ. ಇನ್ನು ಸಾಕು ಪ್ರಾಣಿಯ ಸಂಬಂಧ ಸಾರುವ ಈ ಸಿನಿಮಾವನ್ನುನಿವಾಸ್ ತಿಮ್ಮಯ್ಯ ನಿರ್ದೇಶಿಸಿದ್ದಾರೆ. ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ರಘು ಹಾಸನ್ ನಿರ್ಮಾಣ ಮಾಡಿದ್ದಾರೆ.ಗುಂಡನ ಜೊತೆಗೆ ಕಾಮಿಡಿ ಹಾಸ್ಯ ನಟ ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.‘ನಾನು ಮತ್ತು ಗುಂಡ‘ ಸಿನಿಮಾದ ಟೀಸರ್​​ ಮತ್ತು ಲಿರಿಕಲ್ ವಿಡಿಯೋಗಳು ಈಗಾಗಲೇ ಭಾರಿ ಸದ್ದು ಮಾಡಿದ್ದು, ಈ ವಾರ ಟ್ರೈಲರ್ ಲಾಂಚ್ ಮಾಡುತ್ತಿದೆ. ಅಂದಹಾಗೆ ಸ್ಯಾಂಡಲ್​ವುಡ್ ಅಂಗಳದಲ್ಲಿ ಪ್ರಾಣಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಸಂಬಂಧವನ್ನ ಸಾರುವಂತಹ ಈ ಸಿನಿಮಾ ಕನ್ನಡ ಸಿನಿಪ್ರಿಯರ ಮನಸ್ಸಲ್ಲಿ ಅಚ್ಚಳಿಯಾಗಿ ಉಳಿಯಲಿದೆ.ಇದನ್ನೂ ಓದಿ: ನಾನು ಉಫ್ ಅಂತ ಊದಿದ್ದಕ್ಕೆ ಜಮೀರ್​ ಬೆಂಗಳೂರಿಗೆ ವಿಮಾನ ಹತ್ತಿದ್ದು; ಸೋಮಶೇಖರ ರೆಡ್ಡಿ ವ್ಯಂಗ್ಯ

ಇದನ್ನೂ ಓದಿ: Video: ವಾವ್ಹ್…ಕ್ಯಾಚ್ ಆಫ್ ದಿ ಮ್ಯಾಚ್: ಬೌಂಡರಿ ಲೈನ್​ನಲ್ಲಿ ಅದ್ಭುತ ಫೀಲ್ಡಿಂಗ್
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ