ವಿರಾಟ್ ಕೊಹ್ಲಿಅವತಾರದಲ್ಲಿ ನಟ ದುಲ್ಖರ್ ಸಲ್ಮಾನ್?

news18
Updated:August 12, 2018, 8:44 PM IST
ವಿರಾಟ್ ಕೊಹ್ಲಿಅವತಾರದಲ್ಲಿ ನಟ ದುಲ್ಖರ್ ಸಲ್ಮಾನ್?
news18
Updated: August 12, 2018, 8:44 PM IST
-ನ್ಯೂಸ್ 18 ಕನ್ನಡ

ಮಾಲಿವುಡ್​ ಚಿತ್ರರಂಗದ ಯೂತ್ ಐಕಾನ್ ದುಲ್ಖರ್ ಸಲ್ಮಾನ್ ಅಭಿನಯದ ಮೊದಲ ಬಾಲಿವುಡ್​ ಚಿತ್ರ ಕಾರವಾನ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಡಿಕ್ಯೂ(ದುಲ್ಖರ್)ಗೆ ಮತ್ತೊಂದು ಹಿಂದಿ ಚಿತ್ರದಿಂದ ಆಫರ್ ಬಂದಿದೆ. ಅದು ನಟಿ ಸೋನಮ್ ಕಪೂರ್ ಅವರ ನಿರ್ಮಾಣ ಸಂಸ್ಥೆಯಿಂದ ಎಂಬುದು ವಿಶೇಷ. ಈ ಹಿಂದೆ ಸೋನು ಘೋಷಿಸಿರುವ 'ಜೋಯಾ ಫ್ಯಾಕ್ಟರ್'​ ಸಿನಿಮಾದಲ್ಲಿ ನಾಯಕನಾಗಲು ದುಲ್ಖರ್​ಗೆ ಬುಲಾವ್ ನೀಡಲಾಗಿದೆ.

ಅನುಜಾ ಚೌಹಾನ್ ಬರೆದಿರುವ ಕ್ರಿಕೆಟ್​ ಆಧಾರಿತ 'ಜೋಯಾ ಫ್ಯಾಕ್ಟರ್' ಕಾದಂಬರಿಯಲ್ಲಿ ಬರುವ ಟೀಂ ಇಂಡಿಯಾ ನಾಯಕನಾಗಿ ಡಿಕ್ಯೂ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಸೋನಮ್ ಕಪೂರ್ ಜೋಯಾಳ ಪಾತ್ರ ನಿರ್ವಹಿಸಿದರೆ, ದುಲ್ಖರ್ ಸಲ್ಮಾನ್ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್ ಕೊಹ್ಲಿ ರೋಲ್​ನಲ್ಲಿ ಕಾಣಿಸಲಿದ್ದಾರೆ.​

'ಪರಮಾಣು' ಚಿತ್ರ ನಿರ್ದೇಶಕ ಅಭಿಷೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳಲಿರುವ 'ಜೋಯಾ ಫ್ಯಾಕ್ಟರ್'ಗೆ ಈ ಮೊದಲು ಪಾಕ್ ನಟ ಫವಾದ್ ಖಾನ್ ಆಯ್ಕೆಯಾಗಿದ್ದರು. 'ಖೂಬ್​ಸೂರತ್' ಚಿತ್ರದಲ್ಲಿ ಜೋಡಿಯಾಗಿದ್ದ ಸೋನು-ಫವಾದ್ ಇಲ್ಲೂ ಮುಂದುವರೆಯುವ ಸಾಧ್ಯತೆಯಿತ್ತು. ಆದರೆ ಪಾಕಿಸ್ತಾನದ ನಟರನ್ನು ಬಾಲಿವುಡ್​ನಲ್ಲಿ ಬ್ಯಾನ್ ಮಾಡಬೇಕೆಂಬ ಕೂಗು ಕೇಳಿ ಬಂದಿದ್ದರಿಂದ ಫವಾದ್ ಪಾತ್ರ ಈಗ ಡಿಕ್ಯೂ ಪಾಲಾಗಿದೆ.

ತನ್ನ ಎರಡನೇ ಬಾಲಿವುಡ್​ ಚಿತ್ರಕ್ಕಾಗಿ ದುಲ್ಖರ್ ಈಗಾಗಲೇ ವರ್ಕೌಟ್ ಆರಂಭಿಸಿದ್ದಾರೆ ಎನ್ನಲಾಗಿದ್ದು, ಇದಕ್ಕಾಗಿ ಕ್ರಿಕೆಟ್​ ಅಭ್ಯಾಸದಲ್ಲಿ ನಿರತರಾಗಿದ್ದಾರೆಂಬ ಸುದ್ದಿಗಳು ಬಿಟೌನ್​ನಲ್ಲಿ ಹರಿದಾಡುತ್ತಿದೆ.

ಸದ್ಯ ಸೋನಮ್ ಕಪೂರ್ 'ಏಕ್ ಲಡ್ಕಿ ಕೊ ದೇಖಾ ತೊ ಹೈಸಾ ಲಗಾ' ಎಂಬ ಚಿತ್ರದಲ್ಲಿ ತಂದೆ ಅನಿಲ್ ಕಪೂರ್ ಅವರೊಂದಿಗೆ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತು ಕೊಂಡಿರುವ ಸೋನು ಇದರ ಬಳಿಕ 'ಜೋಯಾ ಫ್ಯಾಕ್ಟರ್'​ನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ದುಲ್ಖರ್​ನ್ನು ಭೇಟಿಯಾಗಿ ಸಿನಿಮಾದ ಬಗ್ಗೆ ಚರ್ಚಿಸಿರುವ ಸೋನಮ್ ಪ್ರತಿಭಾವಂತನ ನಟನೊಂದಿಗೆ ಬೆಳ್ಳಿಪರದೆಯನ್ನು ಹಂಚಿಕೊಳ್ಳಲು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
Loading...

'ಜೋಯಾ ಫ್ಯಾಕ್ಟರ್' ಎಂಬ ಕಾದಂಬರಿಯು ಹುಡುಗಿಯೊಬ್ಬಳ ಅದೃಷ್ಟದ ಸುತ್ತ ಹೆಣೆದಿರುವ ಕಥೆಯಾಗಿದೆ. 1983 ಮತ್ತು 2011ರಲ್ಲಿ ಭಾರತ ​​ವಿಶ್ವಕಪ್​ ಗೆಲ್ಲಲು ಜೋಯಾಳ ಲಕ್ ಕಾರಣವಾಗಿತ್ತೆಂಬ ಕುತೂಹಕಾರಿ ಕಥೆಯನ್ನು ಅನುಜಾ ಚೌಹಾನ್ ಬರೆದಿದ್ದರು. ಇದುವೇ ಈಗ 'ಜೋಯಾ ಫ್ಯಾಕ್ಟರ್' ಆಗಿ ಸಿನಿಮಾ ಆಗುತ್ತಿದೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626