ನಟ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಚಿರಂಜೀವಿ ಎಂದು ಹೆಸರಿಟ್ಟುಕೊಂಡು ಚಿಕ್ಕವಯಸ್ಸಿನಲ್ಲೇ ಜೀವನದ ಪಯಣ ಮುಗಿಸಿದ ನಟನ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬಿನಿ ಮಿಡಿಯುತ್ತಿದೆ.
ಸ್ಯಾಂಡಲ್ವುಡ್ನಲ್ಲಿ ಹಲವಾರು ಸಿನಿಮಾಗಳನ್ನು ಮಾಡಿದ್ದ ಚಿರು ಸರ್ಜಾ ದೊಡ್ಡ ಕನಸುಗಳನ್ನೇ ಕಂಡಿದ್ದರಂತೆ. ಅವುಗಳಲ್ಲಿ 'ದೊಡ್ಡೋರು' ಸಿನಿಮಾ ಸಹ ಒಂದಾಗಿತ್ತು. ಬಿಗ್ ಬಜೆಟ್ನ ಈ ಸಿನಿಮಾ ಮಾಡಲು ಕಳೆದ ಐದು ವರ್ಷಗಳಿಂದ ಪ್ಲಾನ್ ನಡೆದಿತ್ತು.
![]()
ಧ್ರುವ ಹಾಗೂ ಚಿರಂಜೀವಿ ಸರ್ಜಾ
'ದೊಡ್ಡೋರು' ಸಿನಿಮಾದ ಕತೆ ಸಿದ್ಧವಾಗಿತ್ತು. ಚಿತ್ರಕ್ಕೆ ಹಣ ಹೂಡುವ ನಿರ್ಮಾಪಕರಿಗಾಗಿ ಹುಡುಕಾಟ ಮುಂದುವರೆದಿತ್ತು. ಈ ಹಿಂದೆ ಆರ್ ಎಸ್ ಪ್ರೊಡಕ್ಷನ್ ಶ್ರೀನಿವಾಸ್ ಅವರೊಂದಿಗೆ ಜೊತೆ ಒಂದು ಸುತ್ತಿನ ಮಾತುಕತೆ ಸಹ ನಡೆದಿತ್ತು. ಆದರೆ ಅದು ಫಲಕಾರಿಯಾಗಲಿಲ್ಲ. ನಂತರ ಬೇರೆ ಬೇರೆ ನಿರ್ಮಾಪಕರ ಬಳಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿತ್ತಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ.
![]()
ಧ್ರುವ, ಚಿರು ಹಾಗೂ ಮೇಘನಾ
ಚಿರಂಜೀವಿ ಸರ್ಜಾ ಅವರಿಗೆ 'ದೊಡ್ಡೋರು' ಚಿತ್ರದ ವಿಷಯ ಹಾಗೂ ಕತೆ ತುಂಬಾ ಇಷ್ಟವಾಗಿತ್ತಂತೆ. ಈ ಸಿನಿಮಾ ಮಾಡಿದರೆ, ಅವರ ವೃತ್ತಿ ಜೀವನಕ್ಕೆ ಒಂದು ತಿರುವು ಸಿಗುತ್ತೆ ಅಂತ ಚಿರು ಸದಾ ಹೇಳುತ್ತಿದ್ದರಂತೆ. ನಿರ್ದೇಶಕ ಹರಿ ಸಂತು ಹಾಗೂ ತಂಡ ಈ ಸಿನಿಮಾದ ರೆಫರಲ್ ಟ್ರೇಲರ್ ಬಿಡುಗಡೆ ಮಾಡಿದ್ದು, ಅದನ್ನು ಚಿರು ಸರ್ಜಾ ಅವರಿಗೆ ಸಮರ್ಪಿಸಿದ್ದಾರೆ.
5 ವರ್ಷದ ಹಿಂದೆ ಚಿರಂಜೀವಿ ಸರ್ಜಾರವರಿಗೆ ನಿರ್ದೇಶಕ ಹರಿ ಸಂತು ಹಾಗೂ ತಂಡ ಮಾಡಲು ಹೊರಟ್ಟಿದ್ದ ಸಿನಿನಮಾ ಇದಾಗಿದೆ. ಚಿರು ಅಗಲಿಕೆ ನೋವಿನಲ್ಲಿರುವ ಚಿತ್ರತಂಡ ಕನ್ನಡ ಪಿಚ್ಚರ್ ಯೂ ಟ್ಯೂಬ್ ಚಾನೆಲ್ ಮೂಲಕ ಟ್ರೇಲರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಚಿರಂಜೀವಿ ಸರ್ಜಾ ಜೊತೆಗಿನ ನೆನಪು ಮೆಲುಕು ಹಾಕಿದ ನಟಿ ರಮ್ಯಾ
ವಿಜ್ಜು ಸಂಗೀತ, ಹರಿ ಸಂತು, ಚೇತನ್ ಕುಮಾರ್ ಸಾಹಿತ್ಯದ ಟೈಟಲ್ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಈ ಹಾಡಿಗೆ ಚಿರು ಅವರ ಹಲವು ಚಿತ್ರಗಳ ತುಣುಕುಗಳು ಹಾಗೂ ಇತರೆ ಆ ಜಾನರ್ ಚಿತ್ರಗಳ ತುಣುಕುಗಳನ್ನ ಆಯ್ಕೆ ಮಾಡಿಕೊಂಡು ಈ ಟ್ರೇಲರ್ ಮಾಡಲಾಗಿದೆ.
![Chiranjeevi Sarja Funeral Chiru sarja had sleepover at his dream farmhouse]()
ಚಿರಂಜೀವಿ ಸರ್ಜಾ
ಟ್ರೇಲರ್ ಅನ್ನು ನಿರ್ಮಾಪಕರಿಗೆ ತೋರಿಸಲೆಂದು ಬಹಳ ಹಿಂದೆಯೇ ಮಾಡಿದ್ದು, ಚಿರು ಸಹ ಇದನ್ನು ನೋಡಿದ್ದರಂತೆ. ಆದರೆ ಈ ಸಿನಿಮಾ ಸೆಟ್ಟೇರಿ, ಚಿರು ಕನಸು ನನಸಾಗುವ ಮೊದಲೇ ಅವರು ನಮ್ಮೆಲ್ಲರನ್ನ ಅಗಲಿದ್ದಾರೆ.
Sonam Kapoor: ಮುಂಬೈನಲ್ಲಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೋನಮ್ ಕಪೂರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ