ಯಾರು ಕಂಡಿರದ ರೀತಿಯಲ್ಲಿ ಕೆಜಿಎಫ್ 2(KGF 2) ಸಿನಿಮಾ ಆರ್ಭಟಿಸುತ್ತಿದೆ. ಈ ಸಿನಿಮಾ ಸೃಷ್ಟಿ ಮಾಡಿರುವ ದಾಖಲೆ(Records) ಒಂದಾ? ಎರಡಾ? ಅಬ್ಬಬ್ಬಾ ಮೂರೇ ದಿನಕ್ಕೆ ಈ ಸಿನಿಮಾ ಇಷ್ಟು ಸೌಂಡ್ ಮಾಡುತ್ತಿದೆ ಅಂದರೆ, ಇನ್ನೂ ಮುಂದಿನ ದಿನಗಳಲ್ಲಿ ಸಾವಿರ ಕೋಟಿ ಕಲೆಕ್ಷನ್(1000 Crore Collection) ಮಾಡಿ ಕನ್ನಡ(Kannada) ಸಿನಿಮಾರಂಗದ ಇತಿಹಾಸದಲ್ಲೇ ನೂತನ ದಾಖಲೆ ಬರೆಯಲಿದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ. ಇನ್ನೂ ಈ ಸಿನಿಮಾದಲ್ಲಿ ಹಲವಾರು ವಿಶೇಷತೆ ಇವೆ. ಒಂದಕ್ಕಿಂತ ಒಂದು ಸೀನ್ ಅದ್ಭುತ. ಅದರಲ್ಲೂ ಕೆಜಿಎಫ್ 2 ಸಿನಿಮಾ ಸೆಕೆಂಡ್ ಹಾಫ್(KGF 2 Second Half)ನಲ್ಲಿ ಬರುವ ದೊಡ್ಡಮ್ಮ (Dodamma) ಮಾತ್ರ ದೊಡ್ಡದಾಗಿ ಸೌಂಡ್ ಮಾಡುತ್ತಿದೆ. ಸಿನಿಮಾ ನೋಡಿದರವರಿಗೆ ದೊಡ್ಡಮ್ಮ ಯಾರು? ಅದರ ಸಾಮರ್ಥ್ಯ ಏನು ಅಂತ ಗೊತ್ತಿದೆ. ಸಿನಿಮಾ ಇನ್ನೂ ನೋಡದೇ ಇರುವವರಿಗೆ ಈ ದೊಡ್ಡಮ್ಮ ಯಾರು ಅಂತ ಕನ್ಫೂಸ್ ಆಗಬಹುದು.
ಪೊಲೀಸ್ ಠಾಣೆಯನ್ನೇ ಉಡೀಸ್ ಮಾಡಿದ ‘ದೊಡ್ಡಮ್ಮ’!
ಹೌದು, ಸಿನಿಮಾದಲ್ಲಿ ರಾಕಿ ಭಾಯ್ ಅಬ್ಬರದ ನಡುವೆ ದೊಡ್ಡಮ್ಮ ಸಖತ್ ಸೌಂಡ್ ಮಾಡುತ್ತಿದೆ. ಕೆಜಿಎಫ್ 2 ಮೊದಲ ಟೀಸರ್ನಲ್ಲೇ ದೊಡ್ಡಮ್ಮನ ದರ್ಶನವಾಗಿತ್ತು. ಹೌದು, ಸಿನಿಮಾದ ಸೆಕೆಂಡ್ ಹಾಫ್ನಲ್ಲಿ ಪೊಲೀಸ್ ರೈಡ್ ಸಮಯದಲ್ಲಿ ರಾಕಿ ಭಾಯ್ಗೆ ಸೇರಿದ ಒಂದು ಚಿನ್ನದ ಬಿಸ್ಕೆಟ್ ಪೊಲೀಸರು ತಂದು ಠಾಣೆಯಲ್ಲಿ ಇರಿಸಿಕೊಂಡಿರುತ್ತಾರೆ. ಈ ವಿಚಾರ ತಿಳಿದ ಯಶ್ ದೊಡ್ಡಮ್ಮ ಜೊತೆಗೆ ಬಂದು ಇಡೀ ಠಾಣೆಯನ್ನೇ ಉಡೀಸ್ ಮಾಡಿ ತನ್ನ ಚಿನ್ನದ ಬಿಸ್ಕೆಟ್ ತೆಗೆದುಕೊಂಡು ಹೋಗುತ್ತಾರೆ.
ದೊಡ್ಡಮ್ಮ ಅಂದರೆ M1919 ಮಿಷನ್ ಗನ್!
ಹೌದು ಟ್ರೈಲರ್ ಸೇರಿದಂತೆ ಸಿನಿಮಾದಲ್ಲಿ ದೊಡ್ಡಮ್ಮ ಅಬ್ಬರ ಜೋರಾಗಿದೆ. ಯಶ್ ಗನ್ನಿಂದ ಸಿಗರೇಟ್ ಹಚ್ಚುವ ದೃಶ್ಯ ಸಖತ್ ವೈರಲ್ ಆಗಿತ್ತು. ಈಗಲೂ ಆಗುತ್ತಿದೆ. ಈ ದೃಶ್ಯದಲ್ಲಿ ಮಿಷನ್ ಗನ್ ಬಳಸಿ ಠಾಣೆಯನ್ನೇ ಉಡೀಸ್ ಮಾಡುತ್ತಾರೆ. ಈ ಗನ್ ಹೆಸರೇ ದೊಡ್ಡಮ್ಮ. ಅಷ್ಟಕ್ಕೂ ಈ ದೊಡ್ಡಮ್ಮನ ನಿಜವಾದ ಹೆಸರು M1919. ಇದನ್ನು .30 ಕ್ಯಾಲ್ ಎಂದೂ ಕರೆಯುತ್ತಾರೆ. ಇದು ಮೆಷಿನ್ ಗನ್ ಆಗಿದ್ದು, ಇದನ್ನು ವರ್ಲ್ಡ್ ವಾರ್ 2ನಲ್ಲಿ ಬಳಸಲಾಗಿತ್ತು. ಕೊರಿಯನ್ ಯುದ್ಧ ಮತ್ತು ವಿಯೆಟ್ನಾಂ ಯುದ್ಧ ಸೇರಿದಂತೆ ಅನೇಕ ಯುದ್ಧಗಳಲ್ಲಿ ಬಳಸಲಾಯಿತು. ಇದನ್ನು ಜಾನ್ ಬ್ರೌನಿಂಗ್ ಎಂಬ ಎಂಜಿನಿಯರ್ 7.62 ಎಂಎಂ ಕ್ಯಾಲಿಬರ್ನಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಇದನ್ನೂ ಓದಿ:`ರಣ ಬೇಟೆಗಾರ’ ರಾಕಿ ಭಾಯ್ ರಣಾರ್ಭಟ, ಕೆಜಿಎಫ್ 2 ಹಿಟ್ ಆಗಲು ಈ 5 ಶಕ್ತಿಗಳೇ ಕಾರಣ!
1919ರಲ್ಲಿ ಸಿದ್ಧವಾದ ‘ದೊಡ್ಡಮ್ಮ’
1919 ರಲ್ಲಿ ಈ ಕ್ರೂರ ಆಯುಧವನ್ನು ವಿನ್ಯಾಸಗೊಳಿಸಲಾಯಿತು.M1919 ಮೆಷಿನ್ ಗನ್ ನೀರಿನಿಂದ ತಂಪಾಗುತ್ತದೆ. ಏಕೆಂದರೆ ಸಂಪೂರ್ಣ ಸ್ವಯಂಚಾಲಿತ ಗನ್ನ ತ್ವರಿತ-ಗುಂಡು ಹಾರಿಸುವ ಪ್ರಕ್ರಿಯೆಯಲ್ಲಿ, ಘರ್ಷಣೆಯಿಂದಾಗಿ ಯಂತ್ರಗಳು ತುಂಬಾ ಬಿಸಿಯಾಗುತ್ತವೆ. ಅದು ಎಷ್ಟು ಬಿಸಿಯಾಗುತ್ತಿತ್ತು ಎಂದರೆ ಬಂದೂಕನ್ನು ಆಪರೇಟ್ ಮಾಡಲು ಯತ್ನಿಸುತ್ತಿದ್ದವರನ್ನು ಸುಟ್ಟು ಹಾಕುವಷ್ಟು ಶಕ್ತಿಯುತವಾಗಿತ್ತು. ಇದನ್ನೂ ಕೂಲ್ ಮಾಡಲು.ವಿನ್ಯಾಸಕರು ಏರ್-ಕೂಲ್ಡ್ ವಿನ್ಯಾಸವನ್ನು ಆವಿಷ್ಕರಿಸಿದರು. ಗನ್ ಯೂಸ್ ಮಾಡಿದ ಬಳಿಕ ನೀರಿನಲ್ಲಿ ಹಾಕಿ ಕೂಲ್ ಮಾಡಲಾಗುತ್ತೆ.
ಇದನ್ನೂ ಓದಿ: KGF Chapter 2 ನೋಡಿ ಹಣ, ಸಮಯ ವ್ಯರ್ಥ ಎಂದ ನಟ; ಈತನಿಗೇಕೆ ಹೊಟ್ಟೆಕಿಚ್ಚು?
ಕೆಜಿಎಫ್ 2 ಎರಡನೇ ದಿನದ ಕಲೆಕ್ಷನ್ ಎಷ್ಟು?
ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ದಾಖಲೆ ಗಳಿಕೆ ಮಾಡಿದ್ದು, ಎರಡನೇ ದಿನದ ಕಲೆಕ್ಷನ್ ಅನ್ನು ಎದುರು ನೋಡುವಂತೆ ಮಾಡುತ್ತಿದೆ. ಈ ಕಾರಣಕ್ಕೆ ಎರಡನೇ ದಿನವೂ ವಿಶ್ವದಾದ್ಯಂತ ಅದ್ಭುತ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಒಂದು ಅಂದಾಜಿನ ಪ್ರಕಾರ, ಎರಡೂ ದಿನದ ಗಳಿಕೆ ಸುಮಾರು 230 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ