Gauri Documentary: ಗೌರಿ ಡಾಕ್ಯುಮೆಂಟರಿಗೆ ಟೊರೊಂಟೋ ಫಿಲ್ಮ್ ಅವಾರ್ಡ್

Gauri Documentary: ಗೌರಿ ಡಾಕ್ಯುಮೆಂಟರಿ ಟೊರೊಂಟೋ ಫಿಲ್ಮ್ ಅವಾರ್ಡ್ಸ್​​ ಪಡೆದುಕೊಂಡಿದೆ. ಟೊರೊಂಟೋ ವಿಮೆನ್ಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಈ ಪ್ರಶಸ್ತಿ ಪಡೆದಿದೆ.

ಗೌರಿ ಡಾಕ್ಯುಮೆಂಟರಿ

ಗೌರಿ ಡಾಕ್ಯುಮೆಂಟರಿ

  • Share this:
ಕರ್ನಾಟಕದ ಗೌರಿ ಡಾಕ್ಯುಮೆಂಟರಿಗೆ (Gauri Documentary) ಟೊರೊಂಟೋ  (Toronto) ಪ್ರಶಸ್ತಿ ಬಂದಿದೆ. ಗೌರಿ ಸಾಕ್ಷ್ಯ ಚಿತ್ರಕ್ಕೆ ಅತ್ಯುತ್ತಮ ಮಾನವ ಹಕ್ಕು ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ನಿರ್ದೇಶಕಿ ಕವಿತಾ ಲಂಕೇಶ್ (Kavitha Lankesh) ನಿರ್ದೇಶಿಸಿದ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಾಕ್ಷ್ಯಚಿತ್ರ ಗೌರಿ, ಟೊರೊಂಟೊ ಮಹಿಳಾ ಚಲನಚಿತ್ರೋತ್ಸವ 2022 ರಲ್ಲಿ 'ಅತ್ಯುತ್ತಮ ಮಾನವ ಹಕ್ಕು' ಕುರಿತ ಚಲನಚಿತ್ರ ಪ್ರಶಸ್ತಿಯನ್ನು (Award) ಗೆದ್ದಿದೆ. ಈ ಚಲನಚಿತ್ರವು ಮಾಂಟ್ರಿಯಲ್‌ನ ದಕ್ಷಿಣ ಏಷ್ಯಾದ ಚಲನಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ. ಡಾಕ್ ನ್ಯೂಯಾರ್ಕ್, ಆಂಸ್ಟರ್‌ಡ್ಯಾಮ್‌ನ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರ ಚಲನಚಿತ್ರೋತ್ಸವ, ಸನ್‌ಡಾನ್ಸ್ ಚಲನಚಿತ್ರೋತ್ಸವ ಮತ್ತು ಪ್ರಪಂಚದಾದ್ಯಂತದ ಇತರ ಉತ್ಸವಗಳಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ.

ಭಾರತದಲ್ಲಿ ಪತ್ರಕರ್ತರು ಪ್ರತಿದಿನ ಎದುರಿಸುತ್ತಿರುವ ದೈಹಿಕ ಮತ್ತು ಮೌಖಿಕ ಬೆದರಿಕೆಗಳನ್ನು ಸಾಕ್ಷ್ಯಚಿತ್ರವು ತೋರಿಸಿಕೊಡುತ್ತದೆ ಎಂದು ಕವಿತಾ ಲಂಕೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಸಾವು

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಪತ್ರಕರ್ತರ ಮೇಲೆ 200 ಕ್ಕೂ ಹೆಚ್ಚು ದಾಳಿಗಳು ವರದಿಯಾಗಿವೆ. ಅದರಲ್ಲಿ ಕಳೆದ ದಶಕದಲ್ಲಿ 30 ಕ್ಕೂ ಹೆಚ್ಚು ಪತ್ರಕರ್ತರ ಕೊಲೆಗಳಾಗಿವೆ ಎಂದು ಅವರು ಹೇಳಿದರು. ಪತ್ರಕರ್ತರ ಮೇಲಿನ ದಾಳಿಗಳು ತೀವ್ರವಾಗಿರುತ್ತದೆ. ಅವುಗಳ ಹಿಂದಿನ ಉದ್ದೇಶವೂ ನಿಗೂಢವಾಗಿರುತ್ತದೆ ಎಂದಿದ್ದಾರೆ.ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸಂಖ್ಯೆಯು 180 ರಲ್ಲಿ 150 ಆಗಿದೆ ಎಂದು ಅವರು ಹೇಳಿದರು. ಯಾವುದೇ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುವವರು ಮತ್ತು ಪತ್ರಕರ್ತರ ಮೇಲಿನ ದಾಳಿಗಳು ಭಾರತದಲ್ಲಿ ಹೊಸದೇನಲ್ಲ. ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅಗತ್ಯವಾಗಿ ಚಿಂತಿಸಬೇಕಾದ ವಿಚಾರವಾಗಿದೆ ಎಂದಿದ್ದಾರೆ.

2017ರಲ್ಲಿ ಹತ್ಯೆ

ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ಮನೆಯ ಸಮೀಪದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಆರ್ಟಿಕಲ್ 19 ರಿಂದ ಫ್ರೀ ಪ್ರೆಸ್ ಅನ್‌ಲಿಮಿಟೆಡ್‌ನ ಧ್ಯೇಯವು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಬಂದಿದ್ದು ಅದು ಪ್ರತಿಯೊಬ್ಬರಿಗೂ ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕೊಡುತ್ತದೆ. ಈ ಹಕ್ಕು ಯಾವುದೇ ಹಸ್ತಕ್ಷೇಪವಿಲ್ಲದೆ ಅಭಿಪ್ರಾಯಗಳನ್ನು ಹೊಂದಲು ಮತ್ತು ಯಾವುದೇ ಮಾಧ್ಯಮದ ಮೂಲಕ ಮಾಹಿತಿ ಮತ್ತು ಆಲೋಚನೆಗಳನ್ನು ಹುಡುಕುವ, ಸ್ವೀಕರಿಸುವ ಮತ್ತು ನೀಡುವ ಸ್ವಾತಂತ್ರ್ಯವನ್ನು ಒಳಗೊಂಡಿದೆ ಎಂದು ಇದು ತಿಳಿಸುತ್ತದೆ.
Published by:Divya D
First published: