ನೀವು ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಅವರ ದೊಡ್ಡ ಅಭಿಮಾನಿಯಾಗಿದ್ದರೆ, ನೀವು ಅವರ ಮುಂಬರುವ ಚಿತ್ರ ‘ವಿಕ್ರಮ್ ವೇದ’ ಕ್ಕಾಗಿ ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತೀರಿ. ಹೃತಿಕ್ ಅವರು ತಮ್ಮ ಮೊದಲ ಚಿತ್ರವಾದ ‘ಕಹೋ ನಾ ಪ್ಯಾರ್ ಹೈ’ (Kaho na pyar hai) ದಲ್ಲಿರುವ ‘ಏಕ್ ಪಲ್ ಕಾ ಜೀನಾ’ ಹಾಡಿಗೆ ಮಾಡಿದ್ದ ಡ್ಯಾನ್ಸ್ ಸ್ಟೆಪ್ಸ್ ತುಂಬಾನೇ ಫೇಮಸ್ ಆಗಿದ್ದವು. ಆದರೆ ಅದರ ಹಿಂದೆ ಒಂದು ಬೇರೆಯೇ ಕಥೆಯೇ (Story) ಇದೆ ಅಂತ ಅನೇಕರಿಗೆ ಗೊತ್ತಿಲ್ಲ. ಇತ್ತೀಚೆಗೆ ‘ವಿಕ್ರಮ್ ವೇದ’ (Vikram Vedha) ಚಿತ್ರದ ಟ್ರೈಲರ್ ಬಿಡುಗಡೆಯಾದ ನಂತರ ಹೃತಿಕ್ ಅವರು ಆ ಹಳೆಯ ಒಂದು ವಿಷಯವನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
‘ಆಲ್ಕೋಹಾಲಿಯಾ’ ಡ್ಯಾನ್ಸ್ ಸಹ ಪ್ರೇಕ್ಷಕರಿಗೆ ಮಜಾ ನೀಡುತ್ತೆ!
ಹೃತಿಕ್ ಖಂಡಿತವಾಗಿಯೂ ತಮ್ಮ ಇತ್ತೀಚಿನ ಡ್ಯಾನ್ಸ್ ‘ಆಲ್ಕೋಹಾಲಿಯಾ’ ದಲ್ಲಿ ಸಹ ಅದೇ ರೀತಿಯ ಡ್ಯಾನ್ಸ್ ಮಾಡಿರುವುದಾಗಿ ಹೇಳಿದ್ದಾರೆ. ಇದರ ನಂತರ ಹೃತಿಕ್ ಅವರು ತಮ್ಮ ಹೊಸ ಹಾಡಿನಲ್ಲಿ ಮಾಡಿದ ಡ್ಯಾನ್ಸ್ ಸಹ ಅಭಿಮಾನಿಗಳಿಗೆ ‘ಏಕ್ ಪಲ್ ಕಾ ಜೀನಾ’ ಡ್ಯಾನ್ಸ್ ಕೊಟ್ಟಷ್ಟೆ ಮಜಾ ನೀಡುತ್ತದೆ ಅಂತ ಹೇಳಿದ್ದಾರೆ.
ಹೃತಿಕ್‍ಗೆ ಡ್ಯಾನ್ಸ್ ಮತ್ತು ಆಕ್ಷನ್ ಮಾಡಬೇಡಿ ಅಂತ ಹೇಳಿದ್ರಂತೆ ಡಾಕ್ಟ್ರು
‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ನಟಿಸುವ ಮೊದಲು ಅನಾರೋಗ್ಯದ ಕಾರಣದಿಂದಾಗಿ, ವೈದ್ಯರು ಅವರಿಗೆ ಯಾವುದೇ ರೀತಿಯ ಡ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸಬೇಡಿ ಅಂತ ಹೇಳಿದ್ದರು ಅಂತ ಖುದ್ದು ನಟ ಹೃತಿಕ್ ಅವರೇ ಹೇಳಿಕೊಂಡಿದ್ದಾರೆ. ಗೈಟಿ ಗ್ಯಾಲಕ್ಸಿ ಚಿತ್ರಮಂದಿರದಲ್ಲಿ ನಡೆದ ‘ವಿಕ್ರಮ್ ವೇದ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಹೃತಿಕ್ ಅವರು ತಮ್ಮ ಹಳೆಯ ಘಟನೆಯನ್ನು ನೆನಪಿಸಿಕೊಂಡರು, ವೈದ್ಯರು ಎಚ್ಚರಿಕೆ ನೀಡಿದ ನಂತರ, ಅವರು ಅದನ್ನು ಸವಾಲಾಗಿ ತೆಗೆದುಕೊಂಡು ಮಾಡಿದರು ಅಂತ ನಟ ಹೇಳಿದರು.
ಇದನ್ನೂ ಓದಿ: Samantha-Naga Chaitanya: ಸಮಂತಾ-ನಾಗ್ ಮಧ್ಯೆ ಬಂದರಾ ಹ್ಯಾಂಡ್ಸಂ ಮಹೇಶ್ ಬಾಬು? ಡಿವೋರ್ಸ್ಗೆ ಅಸಲಿ ಕಾರಣ ಏನು?
‘ವಾರ್’ ಚಿತ್ರದ ನಟ ತಾನು ಈಗ ಚಿತ್ರಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದೇನೆ ಮತ್ತು ಆಕ್ಷನ್ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ ಎಂದರೆ ಅದು ಸಂಪೂರ್ಣವಾಗಿ ವಾಸ್ತವಿಕವಾಗಿದೆ ಎಂದು ಹೇಳಿದರು. ನಾನು ಬಯಸಿದ್ದನ್ನು ಇಂದು ಚಿತ್ರಗಳಲ್ಲಿ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಮುಖ್ಯವಾದ ಕಾರಣವೆಂದರೆ ತಮ್ಮ ಬಗ್ಗೆ ಕಾಳಜಿ ವಹಿಸಿಕೊಂಡದ್ದು ಅಂತ ನಟ ಹೇಳಿದರು.
"ಕಹೋ ನಾ ಪ್ಯಾರ್ ಹೈ ಚಿತ್ರಕ್ಕೂ ಮೊದಲು, ಆಕ್ಷನ್ ಚಲನಚಿತ್ರಗಳು ಮತ್ತು ಡ್ಯಾನ್ಸ್ ಮಾಡಲು ನನ್ನ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ” ಎಂದು ವೈದ್ಯರು ಹೇಳಿದ್ದರು. ನಾನು ಅದನ್ನು ಸವಾಲಾಗಿ ತೆಗೆದುಕೊಂಡೆ ಮತ್ತು ಅಂತಹ ಚಲನಚಿತ್ರಗಳನ್ನು ಮಾಡಲು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. 25 ಚಿತ್ರಗಳಲ್ಲಿ ಡ್ಯಾನ್ಸ್ ಮಾಡುವುದು, ಆಕ್ಷನ್ ಮಾಡುವುದು ಮತ್ತು ಆ ಸಂಭಾಷಣೆಗಳನ್ನು ಹೇಳುವುದು ನನಗೆ ಅತಿ ವಾಸ್ತವಿಕವಾಗಿದೆ ಎಂದು ಹೇಳಿದರು.
ಹಳೆಯದನ್ನು ನೆನಪಿಸಿಕೊಂಡರೆ ಹೆಮ್ಮೆ ಅನ್ನಿಸುತ್ತದೆ: ಹೃತಿಕ್
ನಟ ಹೃತಿಕ್ ಈಗ ಅದೆಲ್ಲವನ್ನೂ ನೆನಪಿಸಿಕೊಂಡರೆ, ಅವರ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಆಗುತ್ತದೆ ಅಂತ ಸಹ ನಟ ಹೇಳಿಕೊಂಡಿದ್ದಾರೆ. ಕಹೋ ನಾ ಪ್ಯಾರ್ ಹೈ ಚಿತ್ರವನ್ನು ಹೃತಿಕ್ ಅವರ ತಂದೆ ರಾಕೇಶ್ ರೋಷನ್ ಅವರು ನಿರ್ದೇಶಿಸಿದ್ದರು ಮತ್ತು ಹೃತಿಕ್ ಜೊತೆಗೆ, ಈ ಚಿತ್ರದಲ್ಲಿ ಪ್ರಮುಖ ನಟಿಯಾಗಿ ಅಮೀಶಾ ಪಟೇಲ್ ಅವರು ನಟಿಸಿದ್ದರು ಮತ್ತು ಇದು ಅವರಿಗೂ ಸಹ ಚೊಚ್ಚಲ ಹಿಂದಿ ಚಿತ್ರವಾಗಿತ್ತು.
ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಹೃತಿಕ್ ಅವರ ನಿಷ್ಕಪಟ ಅಭಿನಯವು ಆ ವರ್ಷ ಅವರ ನಟನೆಗಾಗಿ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ಪುರುಷ ಚೊಚ್ಚಲ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿತು. ಇನ್ನು, ‘ವಿಕ್ರಮ್ ವೇದ’ ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿದ್ದು, ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದಾರೆ. ಹೃತಿಕ್ ಹೊರತಾಗಿ, ಸೈಫ್ ಅಲಿ ಖಾನ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ