• Home
  • »
  • News
  • »
  • entertainment
  • »
  • KK Death: ಕೆಕೆ ಸಾವಿನ ಸ್ಪೋಟಕ ಬಿಚ್ಚಿಟ್ಟ ವೈದ್ಯರು! ಹೃದಯ ಸಮಸ್ಯೆಗಳಿಂದ ಬಳಲುತಿದ್ರಾ ಇವರು

KK Death: ಕೆಕೆ ಸಾವಿನ ಸ್ಪೋಟಕ ಬಿಚ್ಚಿಟ್ಟ ವೈದ್ಯರು! ಹೃದಯ ಸಮಸ್ಯೆಗಳಿಂದ ಬಳಲುತಿದ್ರಾ ಇವರು

ಗಾಯಕ-ಸಂಯೋಜಕ ಕೆಕೆ

ಗಾಯಕ-ಸಂಯೋಜಕ ಕೆಕೆ

53 ವರ್ಷ ವಯಸ್ಸಿನವರಾಗಿದ್ದ ಕೆಕೆ ಅವರು ನಗರದ ನಜ್ರುಲ್ ಮಂಚದ ಸಭಾಂಗಣದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಅಸ್ವಸ್ಥಗೊಂಡು ಹೋಟೆಲ್‌ಗೆ ಮರಳಿದ ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಸದ್ಯ, ಕೆಕೆ ಅವರ ಶವಪರೀಕ್ಷೆಯನ್ನು ನಡೆಸಿರುವ ವೈದ್ಯರು ಹೇಳುವ ಪ್ರಕಾರ, ಗಾಯಕ ಕೆಕೆ ಅವರ ಶರೀರದಲ್ಲಿ ಆಂಟಾಸಿಡ್‌ಗಳ ಉಪಸ್ಥಿತಿ ಇತ್ತು ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

ಕೋಲ್ಕತ್ತಾದಲ್ಲಿ (Kolkata) ನಡೆಯುತ್ತಿದ್ದ ನೇರ ಪ್ರದರ್ಶನವೊಂದರ ನಂತರ ಗಾಯಕ-ಸಂಯೋಜಕ ಕೆಕೆ (Singer-composer KK) ಅವರು ಮಂಗಳವಾರ ರಾತ್ರಿಯಂದು ಹೃದಯಾಘಾತದಿಂದ (Heart attack) ನಿಧನರಾಗಿರುವ ದುಃಖಕರ ಸಂಗತಿ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ. 53 ವರ್ಷ ವಯಸ್ಸಿನವರಾಗಿದ್ದ ಕೆಕೆ ಅವರು ನಗರದ ನಜ್ರುಲ್ ಮಂಚದ ಸಭಾಂಗಣದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಗ ಅಸ್ವಸ್ಥಗೊಂಡು ಹೋಟೆಲ್‌ಗೆ (Hotel) ಮರಳಿದ ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಸದ್ಯ, ಕೆಕೆ ಅವರ ಶವಪರೀಕ್ಷೆಯನ್ನು ನಡೆಸಿರುವ ವೈದ್ಯರು ಹೇಳುವ ಪ್ರಕಾರ, ಗಾಯಕ ಕೆಕೆ ಅವರ ಶರೀರದಲ್ಲಿ ಆಂಟಾಸಿಡ್‌ಗಳ (Antacid) ಉಪಸ್ಥಿತಿ ಇತ್ತು ಎಂದು ತಿಳಿದುಬಂದಿದೆ.


ಆಂಟಾಸಿಡ್‌ಗಳ ಸೇವನೆ
ಇದಕ್ಕೆ ಸಂಬಂಧಿಸಿದಂತೆ ವೈದ್ಯರು "ಬಹುಶಃ ಅವರು (ಕೆಕೆ) ಕೆಲವು ನೋವುಗಳನ್ನು ಜೀರ್ಣಕಾರಿ ಸಮಸ್ಯೆಗಳಿರಬಹುದು ಎಂದು ತಪ್ಪಾಗಿ ಭಾವಿಸಿರಬಹುದು" ಎಂದು ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ಇನ್ನು, ಹೆಚ್ಚುವರಿಯಾದ ಹೇಳಿಕೆಯಲ್ಲಿ, ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು ಕೆಕೆ ಅವರು ಬಹಳಷ್ಟು ಆಂಟಾಸಿಡ್‌ಗಳನ್ನು ಸೇವಿಸಿದ್ದರೆಂದು ಅವರ ಪತ್ನಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ತಮ್ಮ ತೋಳು ಮತ್ತು ಭುಜಗಳಲ್ಲಿ ನೋವು ಅನುಭವಿಸುತ್ತಿರುವ ವಿಷಯವನ್ನು ದೂರವಾಣಿ ಸಂಭಾಷಣೆಯ ಸಮಯದಲ್ಲಿ ಕೆಕೆ ತಮ್ಮ ಹೆಂಡತಿಯೊಂದಿಗೆ ಹಂಚಿಕೊಂಡಿದ್ದರು ಎಂದು ಐಪಿಎಸ್ ಅಧಿಕಾರಿ ಹೇಳಿದ್ದಾರೆನ್ನಲಾಗಿದೆ.


ಅರೋಗ್ಯ ಸಮಸ್ಯೆಗಳ ಬಗ್ಗೆ ಗೊಂದಲ
ಈಗ ಈ ಪ್ರಕರಣವು ಹೊಸದೊಂದು ವಿಷಯವನ್ನು ಹುಟ್ಟು ಹಾಕಿದಂತಿದೆ. ಅದೇನೆಂದರೆ ಕೆಲವೊಮ್ಮೆ ಜನರು ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳನ್ನು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೆಂದು ತಪ್ಪಾಗಿ ಭಾವಿಸಿಕೊಳ್ಳುವುದು. ಹೌದು, ಅನೇಕರು ಹೃದಯಾಘಾತವನ್ನು ಜೀರ್ಣಕಾರಿ ಸಮಸ್ಯೆಗಳೊಂದಿಗೆ ಹೋಲಿಸಿಕೊಂಡು ಗೊಂದಲಗೊಳಿಸಿಕೊಳ್ಳುತ್ತಾರೆ ಎಂದು ಶಾರದಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸುಭೇಂದು ಮೊಹಾಂತಿ ಹೇಳುತ್ತಾರೆ. ಮುಂದುವರೆಯುತ್ತ ಅವರು "ಇದನ್ನು ಅವಲೋಕಿಸಲು, ನಾವು ಸಾಮಾನ್ಯವಾಗಿ ವಯಸ್ಸು, ರಕ್ತದೊತ್ತಡ, ಧೂಮಪಾನದ ಇತಿಹಾಸದಂತಹ ಅಪಾಯಕಾರಿ ಅಂಶಗಳನ್ನು ನೋಡುತ್ತೇವೆ" ಎಂದು ತಿಳಿಸುತ್ತಾರೆ.


"ಯಾರಾದರೂ ಈ ಅಪಾಯಕಾರಿ ಅಂಶಗಳನ್ನು (ರಕ್ತದೊತ್ತಡ, ಧೂಮಪಾನದ ಇತಿಹಾಸದಂತಹ) ಹೊಂದಿದ್ದರೆ ಮತ್ತು ಜೀರ್ಣ ಸಮಸ್ಯೆಗಳ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಅವರು ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ, ಏಕೆಂದರೆ ಅದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯೂ ಆಗಿರಬಹುದು. ಒಂದು ವೇಳೆ ಮೇಲೆ ಹೇಳಿದ ಅಪಾಯಕಾರಿ ಅಂಶಗಳ ಅನುಪಸ್ಥಿತಿಯಿದ್ದರೂ ಸಹ ನಾವು ಹೃದಯದ ಸಮಸ್ಯೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ, ವಿಶೇಷವಾಗಿ ನಿಮ್ಮ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿದ್ದರೆ", ಎಂದು ತಜ್ಞರು ಹೇಳುತ್ತಾರೆ.


ಜೀರ್ಣ ಸಮಸ್ಯೆ ಹಾಗೂ ಹೃದಯ ಸಮಸ್ಯೆ
ಇನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕರಾದ ಡಾ. ಎ. ಗೋಪಿ ಅವರು ನುಡಿಯುತ್ತಾರೆ "ಎರಡನ್ನು (ಜೀರ್ಣ ಸಮಸ್ಯೆ ಹಾಗೂ ಹೃದಯ ಸಮಸ್ಯೆ) ಪ್ರತ್ಯೇಕಿಸುವಾಗ ನಾವು ಕೆಲವು ಪೂರ್ವ-ಅಗತ್ಯವಿರುವ ಸಂಭವನೀಯತೆಗಳನ್ನು ಪರಿಶೀಲಿಸುತ್ತೇವೆ. ಉದಾಹರಣೆಗೆ, ರೋಗಿಯು ಧೂಮಪಾನಿ ಅಥವಾ ಮಧುಮೇಹಿಗಳಾಗಿದ್ದರೆ, ಇವುಗಳು ಹೃದಯಾಘಾತಕ್ಕೆ ಹೆಚ್ಚಿನ ಅಪಾಯಕಾರಿ ಅಂಶಗಳಾಗಿವೆ ಮತ್ತು ಈ ರೋಗಿಗಳಲ್ಲಿ, ಹೃದಯಾಘಾತದ ಸಾಧ್ಯತೆಯನ್ನು ತಳ್ಳಿಹಾಕಲಾಗದು".


ಇದನ್ನೂ ಓದಿ: Crime News: ಅಳುತ್ತಿದ್ದ ಪುಟ್ಟ ಮಗಳು, ಆಹಾರ ಕೇಳಿದ ಮಗನನ್ನು ಕತ್ತು ಹಿಸುಕಿ ಕೊಂದ ತಾಯಿ


ಹೃದಯದ ಸಮಸ್ಯೆಯ ರೋಗಲಕ್ಷಣಗಳು
ಇದಲ್ಲದೆ, ಪ್ರಸ್ತುತ ಸಂದರ್ಭಗಳಲ್ಲಿ ಹೃದಯದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಮಾನಸಿಕ ಒತ್ತಡದ ಪರಿಣಾಮಗಳ ಬಗ್ಗೆಯೂ ಡಾ. ಮೊಹಾಂತಿ ಗಮನ ಸೆಳೆಯುತ್ತಾರೆ. "ಒಬ್ಬ ವ್ಯಕ್ತಿಯು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮಾನಸಿಕ ಒತ್ತಡದ ಅಂಶಗಳನ್ನು ಹೊಂದಿದ್ದರೆ ಮತ್ತು ಎದೆ ನೋವು, ಸುಡುವ ಸಂವೇದನೆಯಂತಹ ರೋಗಲಕ್ಷಣಗಳನ್ನು ಅನುಭವಿಸಿದರೆ, ಅದು ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ".


"ಹೃದಯಾಘಾತ ಮತ್ತು ಜೀರ್ಣಕಾರಿ ಸಮಸ್ಯೆಗಳು ಸುಡುವ ಸಂವೇದನೆ, ಕಿಬ್ಬೊಟ್ಟೆಯ ಸೆಳೆತ, ಎದೆ ನೋವು ಮುಂತಾದ ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತವೆ. ಇವುಗಳ ಜೊತೆ, ಉಸಿರಾಟದ ತೊಂದರೆಯಂತಹ ರೋಗಲಕ್ಷಣಗಳಿದ್ದರೆ, ಇದು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚು ಸೂಚಿಸುತ್ತದೆ ” ಎನ್ನುತ್ತಾರೆ ವೈದ್ಯರು.


ಎಲೆಕ್ಟ್ರೋಕಾರ್ಡಿಯೋಗ್ರಫಿ
ಎರಡನ್ನೂ (ಜೀರ್ಣ ಸಮಸ್ಯೆ ಹಾಗೂ ಹೃದಯ ಸಮಸ್ಯೆ) ಪ್ರತ್ಯೇಕಿಸಲು ಒಂದು ನಿರ್ದಿಷ್ಟ ಮಾರ್ಗವೆಂದರೆ ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಫಿ) ಎಂದು ಡಾ ಮೊಹಾಂತಿ ಈ ಸಂದರ್ಭದಲ್ಲಿ ಹೇಳುತ್ತಾರೆ. ಅವರು ಹೇಳುವಂತೆ, “ನೀವು ಅಂತಹ ಸಮಸ್ಯೆಗಳನ್ನು ಅನುಭವಿಸಿದರೆ, ಕಾರಣವನ್ನು ಗುರುತಿಸಲು ಇಸಿಜಿ ಮಾಡಿಸಿ. ಇದರಿಂದ ಜೀವ ಉಳಿಸಬಹುದು. ಶೇ. 90 ರಷ್ಟು ಸಂದರ್ಭಗಳಲ್ಲಿ, ಇಸಿಜಿ ಹೃದಯಾಘಾತವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.


ಇದನ್ನೂ ಓದಿ: Daughter Love: ಅಪ್ಪನ ಮೇಣದ ಪ್ರತಿಮೆ ಮುಂದೆ ಮದುವೆಯಾದ ಮಗಳು! ಮನಮಿಡಿಯುವ ಘಟನೆಗೆ ನೂರಾರು ಮಂದಿ ಸಾಕ್ಷಿ


ಅಸ್ವಸ್ಥತೆ ತುಂಬಾ ತೀವ್ರವಾಗಿದ್ದರೆ ಮತ್ತು ನೀವು ಮೇಲೆ ತಿಳಿಸಿದ ಅಪಾಯಕಾರಿ ಅಂಶಗಳನ್ನು ಹೊಂದಿದ್ದರೆ, ಅದನ್ನು ಯಾವುದೇ ಸಮಯದಲ್ಲೂ ನಿರ್ಲಕ್ಷಿಸಬಾರದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

Published by:Ashwini Prabhu
First published: