Chiranjeevi: ಮೆಗಾಸ್ಟಾರ್ ಮೆಗಾ ಪವಾಡ! ಚಿರಂಜೀವಿ ಸಿನಿಮಾ ತೋರಿಸುತ್ತಾ ಮಹಿಳೆಗೆ ಬ್ರೈನ್​ ಸರ್ಜರಿ

Surgery While Showing Movie: ಕೆಲವರಿದ್ದಾರೆ ಸಿನಿಮಾವನ್ನೇ ಉಸಿರು ಮಾಡಿಕೊಂಡಿರುತ್ತಾರೆ. ಸಿನಿಮಾ ನೋಡದೇ ಇದ್ದರೆ ಊಟವೂ ಸೇರುವುದಿಲ್ಲ. ಈಗ ಯಾಕೆ ಈ ವಿಷಯದ ಬಗ್ಗೆ ಹೇಳುತ್ತಾ ಇದ್ದೀವಿ ಅಂದುಕೊಂಡರಾ? ಅದಕ್ಕೂ ಒಂದು ಕಾರಣವಿದೆ. ಈ ಸ್ಟೋರಿ ನೋಡಿ ನಿಮ್ಮ ಮುಖದಲ್ಲಿ ಒಂದು ಸಣ್ಣ ನಗು (Smile) ಮೂಡುವುದಂತೂ ಖಚಿತ.

ಸಿನಿಮಾ ತೋರಿಸುತ್ತಾ ಬ್ರೈನ್​ ಸರ್ಜರಿ

ಸಿನಿಮಾ ತೋರಿಸುತ್ತಾ ಬ್ರೈನ್​ ಸರ್ಜರಿ

  • Share this:
Surgery While Showing Movie : ಸಿನಿಮಾ (Movie) ನಟರು ಅಂದರೆ ನಮ್ಮ ಜನಕ್ಕೆ ಎಲ್ಲಿಲ್ಲದ ಪ್ರೀತಿ. ರಂಗು ರಂಗಿನ ಬಣ್ಣದ ಸಿನಿಮಾ ರಂಗವೇ ಹಾಗೇ. ಜನರಿಗೆ ಸಿನಿಮಾ ನಟ, ನಟಿಯರು ಬೇಗ ಕನೆಕ್ಟ್ (Connect)​ ಆಗುತ್ತಾರೆ. ಯಾರೂ ಏನೇ ಹೇಳಿದರೂ ಕೇಳದ ವ್ಯಕ್ತಿಗಳು ತಮ್ಮ ನೆಚ್ಚಿನ  ನಟರು ಹೇಳಿದರೆ, ಒಂದೇ ಸಲಕ್ಕೆ ಸುಮ್ಮನಾಗಿಬಿಡುತ್ತಾರೆ. ತನ್ನ ನೆಚ್ಚಿನ ನಟ (Favorite Actor) ನನ್ನು ಒಮ್ಮೆ ಭೇಟಿಯಾಗಿ ಒಂದು ಸೆಲ್ಫಿ (Selfie) ಕ್ಲಿಕ್ಕಿಸಿಕೊಂಡು ಸೋಷಿಯಲ್​ ಮೀಡಿಯಾ (Social Media) ದಲ್ಲಿ ಹಂಚಿಕೊಳ್ಳುವವರೆಗೂ ಅವರಿಗೆ ಸಮಾಧಾನ ಆಗುವುದಿಲ್ಲ. ಇನ್ನೂ ಕೆಲವರಿದ್ದಾರೆ ಸಿನಿಮಾವನ್ನೇ ಉಸಿರು ಮಾಡಿಕೊಂಡಿರುತ್ತಾರೆ. ಸಿನಿಮಾ ನೋಡದೇ ಇದ್ದರೆ ಊಟವೂ ಸೇರುವುದಿಲ್ಲ. ಈಗ ಯಾಕೆ ಈ ವಿಷಯದ ಬಗ್ಗೆ ಹೇಳುತ್ತಾ ಇದ್ದೀವಿ ಅಂದುಕೊಂಡರಾ? ಅದಕ್ಕೂ ಒಂದು ಕಾರಣವಿದೆ. ಈ ಸ್ಟೋರಿ ನೋಡಿ ನಿಮ್ಮ ಮುಖದಲ್ಲಿ ಒಂದು ಸಣ್ಣ ನಗು (Smile) ಮೂಡುವುದಂತೂ ಖಚಿತ.

ಚಿರಂಜೀವಿ ಸಿನಿಮಾ ತೋರಿಸಿ ಮಹಿಳೆಗೆ ಸರ್ಜರಿ!

ಕೆಲವು ವೈದ್ಯರು ಪವಾಡಗಳನ್ನು ಸೃಷ್ಟಿಸುತ್ತಾರೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತಾರೆ. ಟೆಕ್ನಾಲಜಿ ಬಳಸಿ, ಅರಿವಳಿಕೆ ನೀಡದೆ ರೋಗಿಗಳಿಗೆ ಪ್ರಜ್ಞೆ ಇರುವಾಗಲೇ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ.ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಆದರೆ, ಪ್ರಜ್ಞೆ ಇರುವಾಗಲೇ ಆಪರೇಷನ್ ಮಾಡಿದ್ದಾರೆ. ಅರೇ, ಇದು ಹೇಗೆ ಸಾಧ್ಯ? ಎಂದು ಆಶ್ಚರ್ಯ ಪಡುತ್ತಿದ್ದೀರಾ? ಹೌದು, ಮಹಿಳೆಯೊಬ್ಬಳಿಗೆ ಆಪರೇಷನ್​ ಮಾಡುವಾಗ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಅವರ ಸಿನಿಮಾವನ್ನು ತೋರಿಸಲಾಗಿದೆ.

ಮೆಗಾಸ್ಟಾರ್​ ಮೆಗಾ ಪವರ್ ಅಂದರೆ ಇದೇನಾ?

ಸಿಕಂದರಾಬಾದ್ ನ ಗಾಂಧಿ ಆಸ್ಪತ್ರೆಯ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ. ರೋಗಿಯು ಪ್ರಜ್ಞೆಯಲ್ಲಿದ್ದಾಗ ಅವರಿಗೆ ಬಹಳ ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಅಜಿಯೊಬ್ಬರ ಮಿದುಳಿನಲ್ಲಿದ್ದ ಗಡ್ಡೆಯನ್ನು  ತೋರಿಸಿ ಮಾತನಾಡಿಸಿ ಬಹಳ ಸುಲಭವಾಗಿ ತೆಗೆಯಲಾಯಿತು.  ಹೈದರಾಬಾದ್ ಮೂಲದ ಐವತ್ತು ವರ್ಷದ ಮಹಿಳೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರನ್ನು ಪರೀಕ್ಷಿಸಿ  ಮೆದುಳಿನಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು.

ಚಿರಂಜೀವಿ ಸಿನಿಮಾ ತೋರಿಸುತ್ತಾ ಮಹಿಳೆಗೆ ಬ್ರೈನ್​ ಸರ್ಜರಿ


ಇದನ್ನೂ ಓದಿ: ಹೇಗಿದೆ ಲೈಗರ್‌ ಚಿತ್ರದ ಮೊದಲ ದಿನದ ಕಲೆಕ್ಷನ್?

ತಕ್ಷಣವೇ ಗಡ್ಡೆ ತೆಗೆಯಲು ಆಗಸ್ಟ್ 25ರಂದು ಆಪರೇಷನ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಆಪರೇಷನ್ ವೇಳೆ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಅಡವಿ ದೊಂಗಾ ಚಿತ್ರವನ್ನು ತೋರಿಸಿ ಸರ್ಜರಿ ಮಾಡಲಾಗಿದೆ. ಯಾವುದೇ ಒತ್ತಡವಿಲ್ಲದೆ ಟ್ಯಾಬ್ ನಲ್ಲಿ ನೋಡುವಂತೆ ಮಹಿಳೆಗೆ ಹೇಳಲಾಗಿತ್ತು. ಆಪರೇಷನ್​ ಮಧ್ಯದಲ್ಲೇ ಅವರೊಂದಿಗೂ ವೈದ್ಯರು ಮಾತನಾಡಿದ್ದಾರೆ. ತನ್ನ ನೆಚ್ಚಿನ  ನಟನ ಸಿನಿಮಾ ನೋಡುತ್ತಾ, ಆಪರೇಷನ್ ನಡೆಯುತ್ತಿದೆ ಎಂಬ ಕಲ್ಪನೆಯೂ ಅವರಿಗೆ ಇಲ್ಲದೇ ಬ್ರೈನ್ ಟ್ಯೂಮರ್ ಅನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.

ಇದನ್ನೂ ಓದಿ: ನಟಿ ಸಾವಿನ ಕೇಸ್‌ಗೆ ಸಿಕ್ತು ಸ್ಫೋಟಕ ಟ್ವಿಸ್ಟ್! ಕೊಲೆ ಬಗ್ಗೆ ತಪ್ಪೊಪ್ಪಿಕೊಂಡರಾ ಆರೋಪಿಗಳು?

ಆದರೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಪ್ರಜ್ಞೆ ಇರುವಾಗಲೇ ಮೆದುಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವಿಧಾನವನ್ನು ‘ಅವೇಕ್ ಕ್ರಾನಿಯೊಟಮಿ’ ಎನ್ನುತ್ತಾರೆ ಆಸ್ಪತ್ರೆ ಅಧೀಕ್ಷಕ ಡಾ.ರಾಜಾ ರಾವ್. ಇದನ್ನು ತಿಳಿದ ಚಿರಂಜೀವಿ ಅವರು ತಮ್ಮ ಪಿಆರ್‌ಒ ಆನಂದ್ ಅವರನ್ನು ಗಾಂಧಿ ಆಸ್ಪತ್ರೆ ಬಳಿಗೆ ಕಳುಹಿಸಿ ವಿವರಗಳನ್ನು ತಿಳಿದುಕೊಂಡಿದ್ದಾರೆ. ಅಧೀಕ್ಷಕ ರಾಜಾ ರಾವ್ ಅವರೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರನ್ನು ಗಾಂಧಿ ಭೇಟಿಯಾದರು.

ಮೆಗಾ ಸ್ಟಾರ್​ ಚಿರಂಜೀವಿ 


ಮಹಿಳೆಯನ್ನು ಭೇಟಿಯಾಗ್ತಾರಾ ಮೆಗಾಸ್ಟಾರ್?

ಚಿರಂಜೀವಿ ಅವರ ಪಿಆರ್​ಒ ಆನಂದ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯನ್ನು ಭೇಟಿಯಾದರು. ಮಹಿಳೆ ಕೂಡ ಅವರ ಬಳಿ ನಾನು ಚಿರಂಜೀವಿ ಅವರ ಅಭಿಮಾನಿ ಎಂದು ಹೇಳಿದರು.ಇಲ್ಲಿಯವರೆಗೆ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ ಎಂದರು. ಇನ್ನೂ ಚಿರಂಜೀವಿ ಕೂಡ 3 ದಿನಗಳಲ್ಲಿ ಮಹಿಳೆಯನ್ನು ಭೇಟಿಯಾಗ್ತಾರೆ ಎಂದು ಹೇಳಲಾಗಿದೆ.
Published by:Vasudeva M
First published: