• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Chalisuva Modagalu: ಆಲ್ ಟೈಮ್ ಹಿಟ್ ಚಿತ್ರ ಅಣ್ಣಾವ್ರ ಚಲಿಸುವ ಮೋಡಗಳು; ಹುಬ್ಬಳ್ಳಿಯಲ್ಲಿ 40 ವಾರ ಪ್ರದರ್ಶನ ಕಂಡ ಸಿನಿಮಾ

Chalisuva Modagalu: ಆಲ್ ಟೈಮ್ ಹಿಟ್ ಚಿತ್ರ ಅಣ್ಣಾವ್ರ ಚಲಿಸುವ ಮೋಡಗಳು; ಹುಬ್ಬಳ್ಳಿಯಲ್ಲಿ 40 ವಾರ ಪ್ರದರ್ಶನ ಕಂಡ ಸಿನಿಮಾ

ಚಲಿಸುವ ಮೋಡಗಳು ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ

ಚಲಿಸುವ ಮೋಡಗಳು ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ

ಬೆಂಗಳೂರಿನ ಸಂಪಿಗೆ ಥಿಯೇಟರ್‌ನಲ್ಲಿ ಚಲಿಸುವ ಮೋಡಗಳು ಸಿನಿಮಾ ಸಖತ್ ಆಗಿಯೇ ಓಡಿತ್ತು. ಇಲ್ಲಿ ಬೇರೆ ಭಾಷೆಯ ಸಿನಿಮಾಗಳೇ ಪ್ರದರ್ಶನ ಕಾಣುತ್ತಿದ್ದವು. ಆದರೆ ಚಲಿಸುವ ಮೋಡಗಳು ಸಿನಿಮಾ 85 ದಿನಗಳವರೆಗೂ ಯಶಸ್ವಿ ಪ್ರದರ್ಶನ ಕಂಡಿತ್ತು.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಡಾಕ್ಟರ್ ರಾಜ್‌ಕುಮಾರ್ ಸಿನಿಮಾಗಳ (Chalisuva Modagalu Movie) ಪ್ರೇಮಿಗಳು ಎಲ್ಲೆಡೆ ಇದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಅಣ್ಣಾವ್ರ ಫ್ಯಾನ್ಸ್ ಈಗಲೂ ಇದ್ದಾರೆ. ರಾಜಕುಮಾರ್ ಅವರನ್ನ ಇಲ್ಲಿಯ ಹೆಣ್ಣುಮಕ್ಕಳು ನಮ್ಮ ಅಣ್ಣಾವ್ರ ಸಿನಿಮಾ ಅಂತಲೇ ಕರೆಯುತ್ತಿದ್ದರು. ಜನರ ಮನದಲ್ಲಿ (All Time Hit Movie) ಅಷ್ಟೊಂದು ಆಳವಾಗಿ ಬೇರೂರಿದ್ದ ರಾಜಕುಮಾರ್ ಅವರು ಹುಬ್ಬಳ್ಳಿ ಬಗ್ಗೆ ವಿಶೇಷ ಪ್ರೀತಿ ಇಟ್ಟುಕೊಂಡಿದ್ದರು. ಅವರ ಮಕ್ಕಳು ಅದೇ ಪ್ರೀತಿಯಿಂದಲೇ ಇಲ್ಲಿ ಆಗಾಗ ಬಂದು ಹೋಗ್ತಾರೆ. ಶ್ರೀ ಸಿದ್ಧಾರೂಢ ಮಠಕ್ಕೂ (Doctor Rajkumar Cinema) ವಿಶೇಷವಾಗಿಯೇ ರಾಜ್‌ ಫ್ಯಾಮಿಲಿ ಗೌರವ ಸಲ್ಲಿಸುತ್ತಲೇ ಬಂದಿದ್ದು, ರಾಜ್ ಅಭಿನಯದ ಚಲಿಸುವ ಮೋಡಗಳು ಸಿನಿಮಾ ಹುಬ್ಬಳ್ಳಿಯಲ್ಲಿ 40 ವಾರ ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರದ ಆ ದಿನಗಳ ಒಂದಷ್ಟು  ವಿಶೇಷ ವಿಷಯ ಇಲ್ಲಿದೆ.


ರಾಜ್‌ ಕುಮಾರ್ ಅಭಿನಯದ ಚಲಿಸುವ ಮೋಡಗಳು ಸಿನಿಮಾ ಸ್ಪೆಷಲ್ ಆಗಿದೆ. ಈ ಚಿತ್ರದಲ್ಲಿ ರಾಜಕುಮಾರ್ ಲಾಯರ್ ಪಾತ್ರದಲ್ಲಿ ಅಭಿನಯಿಸಿದ್ದರು. ನಟಿ ಸರಿತಾ ಮತ್ತು ಅಂಬಿಕಾ ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಕೆ.ಎಸ್. ಅಶ್ವಥ್ ಹಾಗೂ ಪಂಡರಿಬಾಯಿ, ಬಾಲ ನಟನಾಗಿ ಪುನೀತ್ ರಾಜಕುಮಾರ್ ಕೂಡ ಅಭಿನಯಿಸಿದ್ರು.


Doctor Rajkumar All Time Hit Chalisuva Modagalu Movie Unknown Facts
ಹುಬ್ಬಳ್ಳಿಯಲ್ಲಿ 40 ವಾರ ಥಿಯೇಟರ್‌ನಲ್ಲಿ ಯಶಸ್ವಿ ಪದರ್ಶನ


ಸೂಪರ್ ಹಿಟ್ ಚಿತ್ರದಲ್ಲಿ ಸೂಪರ್ ಹಿಟ್ ಹಾಡುಗಳು


ಪುಷ್ಪಕ ವಿಮಾನ ಚಿತ್ರವನ್ನ ಡೈರೆಕ್ಟ್ ಮಾಡಿದ್ದ, ಅದೇ ಸಿಂಗಿತಂ ಶ್ರೀನಿವಾಸ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಇವರ ಈ ಸಿನಿಮಾದಲ್ಲಿ ರಾಜನ್-ನಾಗೇಂದ್ರ ಅವರ ಸಂಗೀತದ ಹಾಡುಗಳು ಸೂಪರ್ ಆಗಿಯೇ ಬಂದಿದ್ದವು.
ಚಲಿಸುವ ಮೋಡಗಳು ಸಿನಿಮಾದಲ್ಲಿ ಹಾಡುಗಳು ತುಂಬಾ ಚೆನ್ನಾಗಿಯೇ ಇದ್ದವು. ಜೇನಿನ ಹೊಳೆಯೋ ಹಾಲಿನ ಮಳೆಯೋ ಹಾಡು ಕೂಡ ಹಿಟ್ ಆಗಿತ್ತು. ಇದೇ ರೀತಿ ಈ ಸಿನಿಮಾದಲ್ಲಿರೋ ಅಷ್ಟೂ ಹಾಡುಗಳು ಜನರ ಮನಸನ್ನ ಗೆದ್ದಿದ್ದವು.


ಚಲಿಸುವ ಮೋಡಗಳು ಕನ್ನಡದ ಸೂಪರ್ ಸಿನಿಮಾ


ಚಲಿಸುವ ಮೋಡಗಳು ಚಿತ್ರ ಸೂಪರ್ ಹಿಟ್ ಆಗಿತ್ತು. ಅಕ್ಟೋಬರ್ 29,1982 ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಂಗಾಮಾ ಮಾಡಿತ್ತು. ಉತ್ತರ ಕರ್ನಾಟಕ ಭಾಗದಲ್ಲೂ ಈ ಸಿನಿಮಾ ತುಂಬಾ ಚೆನ್ನಾಗಿಯೇ ಹೋಗಿತ್ತು.


ರಾಜ್ ಅವರ ಈ ಸಿನಿಮಾ ಮೈಸೂರು ಭಾಗದಲ್ಲೂ ಅದ್ಭುತವಾಗಿ ಓಡಿತ್ತು. ಹಾಗಾಗಿಯೇ ಎಲ್ಲೆಡೆ ತುಂಬಾ ಒಳ್ಳೆ ರೆಸ್ಪಾನ್ಸ್ ಪಡೆದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಈ ಚಿತ್ರವನ್ನ ಆಲ್ ಟೈಮ್ ಹಿಟ್ ಸಿನಿಮಾ ಅಂತ ಸಿನಿ ಪಂಡಿತರು ಆಗಲೇ ಅಭಿಪ್ರಾಯ ಪಟ್ಟಿದ್ದರು.


ಹುಬ್ಬಳ್ಳಿಯಲ್ಲಿ 40 ವಾರ ಥಿಯೇಟರ್‌ನಲ್ಲಿ ಯಶಸ್ವಿ ಪದರ್ಶನ


ಚಲಿಸುವ ಮೋಡಗಳು ಸಿನಿಮಾ ಹುಬ್ಬಳ್ಳಿಯಲ್ಲಿ 40 ವಾರಗಳವರೆಗೂ ಯಶಸ್ವಿ ಪ್ರದರ್ಶನ ಕಂಡಿತ್ತು. ಮೈಸೂರಿನ ಎರಡು ಥಿಯೇಟರ್‌ನಲ್ಲಿ ಚಲಿಸುವ ಮೋಡಗಳು ಸಿನಿಮಾ 100 ದಿನ ಓಡಿತ್ತು. ಅದೇ ರೀತಿ ಅನೇಕ ಥಿಯೇಟರ್‌ನಲ್ಲಿ 175 ದಿನಗಳವರೆಗೂ ಯಶಸ್ವಿ ಪ್ರದರ್ಶನ ಕಂಡು ಎಲ್ಲರೂ ಹುಬ್ಬೇರಿಸುವಂತೆನೂ ಈ ಚಿತ್ರ ಮಾಡಿತ್ತು.


Doctor Rajkumar All Time Hit Chalisuva Modagalu Movie Unknown Facts
ಚಲಿಸುವ ಮೋಡಗಳು ಕನ್ನಡದ ಸೂಪರ್ ಸಿನಿಮಾ


ಬೆಂಗಳೂರಿನ ಸಂಪಿಗೆ ಥಿಯೇಟರ್‌ನಲ್ಲಿ ಚಲಿಸುವ ಮೋಡಗಳು ಸಿನಿಮಾ ಸಖತ್ ಆಗಿಯೇ ಓಡಿತ್ತು. ಇಲ್ಲಿ ಬೇರೆ ಭಾಷೆಯ ಸಿನಿಮಾಗಳೇ ಪ್ರದರ್ಶನ ಕಾಣುತ್ತಿದ್ದವು. ಆದರೆ ಚಲಿಸುವ ಮೋಡಗಳು ಸಿನಿಮಾ ಇಲ್ಲಿ 85 ದಿನಗಳವರೆಗೂ ಯಶಸ್ವಿ ಪ್ರದರ್ಶನ ಕಂಡಿತ್ತು.


ಚಲಿಸುವ ಮೋಡಗಳು ಆಲ್ ಟೈಮ್ ಸೂಪರ್ ಹಿಟ್ ಸಿನಿಮಾ


ಈ ಮೂಲಕ ಚಲಿಸುವ ಮೋಡಗಳು ಸಿನಿಮಾ ಈ ಥಿಯೇಟರ್‌ನಲ್ಲಿ ಅತಿ ಹೆಚ್ಚು ಓಡಿದ ಚಿತ್ರ ಎಂದು ರೆಕಾರ್ಡ್ ಮಾಡಿತ್ತು. ಆದರೆ 15 ವರ್ಷಗಳ ಬಳಿಕ ಈ ಥಿಯೇಟರ್‌ನಲ್ಲಿ ನಮ್ಮೂರ ಮಂದಾರ ಹೂವೆ ಸಿನಿಮಾ ಜಾಸ್ತಿ ದಿನ ಪ್ರದರ್ಶನ ಕಂಡು ಜನರ ಮನಸ್ಸಲ್ಲಿ ಖಾಯಂ ಆಗಿಯೇ ಉಳಿದು ಬಿಡ್ತು.


ಇದನ್ನೂ ಓದಿ: Upasana Konidela: ಅಜ್ಜಿ ಕೆಲಸಕ್ಕೆ ಮೆಗಾ ಸೊಸೆ ಉಪಾಸನಾ ಭಾವುಕ! ಚಿರಂಜೀವಿ ಅಮ್ಮ ಮಾಡಿದ್ದೇನು?


ಆದರೆ ಚಲಿಸುವ ಮೋಡಗಳು ಇಲ್ಲಿ ಹೆಚ್ಚು ದಿನ ಓಡಿದ ಮೊದಲ ಕನ್ನಡ ಸಿನಿಮಾ ಅನ್ನುವ ಹೆಗ್ಗಳಿಕೆ ಈ ಚಿತ್ರಕ್ಕೆ ಇದ್ದೇ ಇದೆ. ಇನ್ನುಳಿದಂತೆ ಚಲಿಸುವ ಮೋಡಗಳು ಸಿನಿಮಾ ಕೂಡ ರಾಜ್ ಚಿತ್ರ ಜೀವನದ ಸ್ಪೆಷಲ್ ಚಿತ್ರವೇ ಆಗಿದೆ.

First published: