• Home
  • »
  • News
  • »
  • entertainment
  • »
  • Film Story: 'ನಟರು ಏನೂ ಮಾಡುವುದಿಲ್ಲ' ಅಂತ ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ ಗೊತ್ತಾ?

Film Story: 'ನಟರು ಏನೂ ಮಾಡುವುದಿಲ್ಲ' ಅಂತ ಪ್ರಿಯಾಂಕಾ ಚೋಪ್ರಾ ಹೇಳಿದ್ದೇಕೆ ಗೊತ್ತಾ?

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಈ ಸಿನೆಮಾಗಳಲ್ಲಿ ನಟ ಮತ್ತು ನಟಿಯರಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಚಿತ್ರತಂಡದಲ್ಲಿ ಬೇರೆ ಯಾರಿಗೂ ಸಿಗುವುದಿಲ್ಲ ಅಂತ ಪ್ರಿಯಾಂಕ ಚೋಪ್ರಾ ಹೇಳಲು ಕಾರಣವೇನು

  • Share this:

ಈ ಸಿನೆಮಾಗಳಲ್ಲಿ (Film) ನಟ ಮತ್ತು ನಟಿಯರಿಗೆ (Actress) ಸಿಕ್ಕಷ್ಟು ಪ್ರಾಮುಖ್ಯತೆ ಚಿತ್ರತಂಡದಲ್ಲಿ ಬೇರೆ ಯಾರಿಗೂ ಸಿಗುವುದಿಲ್ಲ ಅಂತ ಹೇಳಬಹುದು. ಏಕೆಂದರೆ ಒಂದು ಸಿನೆಮಾ ಅಂತ ಹೇಳಿದರೆ ಪರದೆಯ ಮೇಲೆ ಕಾಣಿಸುವವರು ಕೇವಲ ನಟರು, ಉಳಿದವರೆಲ್ಲರೂ ಪರದೆಯ ಹಿಂದೆ (Background worker) ಎಂದರೆ ಚಿತ್ರದ ಚಿತ್ರೀಕರಣದ (Shooting) ಸಂದರ್ಭದಲ್ಲಿ (Time) ಕೆಲಸ ಮಾಡುವವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಈ ವಿಷಯವನ್ನೇ ಸ್ವಲ್ಪ ಡಿಫರೆಂಟ್ ಆಗಿ ಹೇಳಿದ್ದಾರೆ ನೋಡಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra). ಅಷ್ಟಕ್ಕೂ ಹೀಗೆ ಹೇಳಲು ಕಾರಣವಾದರು ಏನು ಅನ್ನೋದನ್ನ ತಿಳಿಯೋಣ ಬನ್ನಿ.


ನಟಿ ಪ್ರಿಯಾಂಕಾ ಇತ್ತೀಚೆಗೆ ತಮ್ಮ ಹೇರ್ ಕೇರ್ ಬ್ರ್ಯಾಂಡ್ ಅನ್ನು ದೇಶದಲ್ಲಿ ಪ್ರಾರಂಭಿಸಲು ಭಾರತಕ್ಕೆ ಬಂದಿದ್ದರು. ಸಂದರ್ಶನವೊಂದರಲ್ಲಿ, ಜನರು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತಾರೆ ಮತ್ತು ಚಲನಚಿತ್ರದಲ್ಲಿ ಅವರ ಪಾತ್ರವು 'ತುಂಬಾ ಸೀಮಿತವಾಗಿದೆ' ಎಂದು ಪ್ರಿಯಾಂಕಾ ಹೇಳಿದರು. 'ಅತ್ಯುತ್ತಮ ಚಲನಚಿತ್ರ ನಿರ್ಮಾಪಕರೊಂದಿಗೆ' ಕೆಲಸ ಮಾಡುವ ಮೂಲಕ ಅವರು 'ಅತ್ಯುತ್ತಮ ನಟಿ' ಅಂತ ಅನ್ನಿಸಿಕೊಂಡಿದ್ದು ಅಂತ ಅವರು ಹೇಳಿದರು.


ಭಾರತದ ಪ್ರವಾಸ ಮುಗಿಸಿ ಪತಿಯ ಕಂಸರ್ಟ್ ನಲ್ಲಿ ಭಾಗವಹಿಸಿದ ಪ್ರಿಯಾಂಕಾ


ಪ್ರಿಯಾಂಕಾ ತನ್ನ ಒಂದು ವಾರದ ಭಾರತ ಪ್ರವಾಸದ ನಂತರ ಲಾಸ್ ಏಂಜಲೀಸ್‌ಗೆ ಹಿಂದಿರುಗಿ ಇತ್ತೀಚಿನ ದಿನಗಳಲ್ಲಿ ಯುಎಸ್ ನಲ್ಲಿ ಗಾಯಕ ಮತ್ತು ಅವರ ಪತಿಯಾದ ನಿಕ್ ಜೋನಸ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದ್ದಿಯು ನಮಗೆ ಗೊತ್ತೇ ಇದೆ. ಪ್ರಿಯಾಂಕಾ ಅವರು ಭಾರತದಲ್ಲಿದ್ದಾಗ ಚಲನಚಿತ್ರದಲ್ಲಿನ ನಟರ ಪಾತ್ರ ಏನು ಎಂದು ಅವರನ್ನು ಕೇಳಿದಾಗ, ಪ್ರಿಯಾಂಕಾ ಅವರು ನಟರು ಏನೂ ಮಾಡುವುದಿಲ್ಲ, ಎಲ್ಲಾ ಬಹುತೇಕ ಕೆಲಸಗಳನ್ನು ಬರಹಗಾರರು, ನಿರ್ದೇಶಕರು, ನೃತ್ಯ ಸಂಯೋಜಕರು, ಮೇಕಪ್ ಕಲಾವಿದರು, ಸ್ಟೈಲಿಸ್ಟ್ ಗಳು ಮತ್ತು ಇತರರು ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳಿದರು.


Do you know why Priyanka Chopra said that 'actors do nothing'?
ಸಾಂದರ್ಭಿಕ ಚಿತ್ರ


ಸಂದರ್ಶನದಲ್ಲಿ ಪ್ರಿಯಾಂಕಾ ಹೇಳಿದ್ದೇನು ಗೊತ್ತೇ?


ಜಾನಿಸ್ ಸಿಕ್ವೇರಾ ಅವರೊಂದಿಗಿನ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ ಅವರು ವಿಶ್ವದ ಜನಪ್ರಿಯ ವ್ಯಕ್ತಿಗಳೊಂದಿಗೆ ಸಿನೆಮಾ ಮಾಡಿದ ನಂತರ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು. "ಇದು ಯುಎಸ್ ನಲ್ಲಿನ ವ್ಯವಹಾರದಲ್ಲಿ ಅತ್ಯುತ್ತಮರೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿದ್ದಲ್ಲ. ನಾನು ಬಾಲಿವುಡ್ ನಲ್ಲಿ ಕೆಲಸ ಮಾಡುತ್ತಿದ್ದಾಗಲೂ, ಅತ್ಯುತ್ತಮ ಚಲನಚಿತ್ರ ನಿರ್ಮಾಪಕರೊಂದಿಗೆ ಕೆಲಸ ಮಾಡುವುದು, ಉತ್ತಮ ನಟಿನಾಗುವುದು ಹೇಗೆ ಎಂಬುದನ್ನು ನನಗೆ ಕಲಿಸಿತು. ನಾವು ನಟರಿಗೆ ಹೆಚ್ಚು ಮನ್ನಣೆ ನೀಡುತ್ತೇವೆ. ಅಂದ ಹಾಗೆ ನಟರು ಏನನ್ನೂ ಮಾಡುವುದಿಲ್ಲ. ನಾವು ನಿಜವಾಗಿಯೂ ಏನೂ ಮಾಡುವುದಿಲ್ಲ. ನಾನು ಈ ಮಾತನ್ನು ಯಾವಾಗಲೂ ಹೇಳುತ್ತೇನೆ. ನಟರು ಏನೂ ಮಾಡುವುದಿಲ್ಲ... ಒಂದು ದೃಶ್ಯದ ಆ 30 ಸೆಕೆಂಡುಗಳ ನಟನೆ ತದನಂತರ ಚಲನಚಿತ್ರದ ಬಗ್ಗೆ ಮಾತನಾಡುವುದು. ಆದ್ದರಿಂದ ನಾನು ಹೇಳುತ್ತಿದ್ದೇನೆ ನಟರಿಗೆ ತುಂಬಾ ಸೀಮಿತವಾದ ಕೆಲಸವಿದೆ" ಎಂದು ನಟಿ ಹೇಳಿದರು.




ನಟರು ಬೇರೆಯವರ ಸಹಾಯದಿಂದ ಕೆಲಸ ಮಾಡುತ್ತಾರಂತೆ


"ನಾವು ಬೇರೊಬ್ಬರು ಬರೆದುಕೊಟ್ಟ ಡೈಲಾಗ್ ಗಳನ್ನು ಹೇಳುತ್ತೇವೆ, ಬೇರೆಯವರು ಬರೆದ ಸ್ಕ್ರಿಪ್ಟ್ ನಂತೆ ನಾವು ಕೆಲಸ ಮಾಡುತ್ತೇವೆ, ನಾವು ಹಾಡುಗಳಿಗೆ ಲಿಪ್-ಸಿಂಕ್ ಮಾಡುತ್ತೇವೆ ಅಷ್ಟೇ ಮತ್ತು ಇನ್ನೊಬ್ಬ ಗಾಯಕರು ಅದನ್ನು ಹಾಡುತ್ತಾರೆ. ನಾವು ಇನ್ನೊಬ್ಬರಿಂದ ನೃತ್ಯ ಕಲಿತುಕೊಂಡು ಸಿನೆಮಾದಲ್ಲಿರುವ ಹಾಡಿಗೆ ಹೆಜ್ಜೆ ಹಾಕುತ್ತೇವೆ. ನಾವು ಕೇವಲ ಮಾರ್ಕೆಟಿಂಗ್ ಮಾಡುತ್ತೇವೆ, ನಮಗೆ ಯಾರೂ ಕೂದಲು ಬಾಚುತ್ತಾರೆ ಮತ್ತು ಮೇಕಪ್ ಮಾಡುತ್ತಾರೆ. ನಾವೇನು ಮಾಡುತ್ತಿದ್ದೇವೆ ಅಂತ ನನಗೆ ಅನ್ನಿಸುತ್ತದೆ” ಎಂದು ಪ್ರಿಯಾಂಕಾ ಹೇಳಿದರು.


ಇದನ್ನೂ ಓದಿ: Rishab Shetty-Rajinikanth: ನಟ ರಿಷಬ್ ಶೆಟ್ಟಿಗೆ ರಜನಿ ಕೊಟ್ಟ ಗೋಲ್ಡ್ ಚೈನ್ ಹೇಗಿದೆ?


ಪ್ರಿಯಾಂಕಾ ಚೋಪ್ರಾ ಕೊನೆಯ ಬಾರಿಗೆ ಕೀನು ರೀವ್ಸ್ ಅವರೊಂದಿಗೆ ‘ದಿ ಮ್ಯಾಟ್ರಿಕ್ಸ್ ರೀಸರೆಕ್ಷನ್ಸ್’ ನಲ್ಲಿ ಕಾಣಿಸಿಕೊಂಡರು. ರುಸ್ಸೊ ಬ್ರದರ್ಸ್ ನಿರ್ಮಿಸಿರುವ ತನ್ನ ಮೊದಲ ವೆಬ್ ಸೀರಿಸ್ ಸಿಟಾಡೆಲ್ ನಲ್ಲಿ ಅವರು ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ‘ಜೀ ಲೇ ಜರಾ’ ಎಂಬ ಬಾಲಿವುಡ್ ಚಿತ್ರವನ್ನೂ ಸಹ ಮಾಡಲಿದ್ದಾರೆ.

First published: