• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Mahesh Babu: ಜೂನಿಯರ್ ಮಹೇಶ್ ಬಾಬು ಬಗ್ಗೆ ತಾಯಿ ನಮ್ರತಾ ಯಾಕೆ ಇಷ್ಟೊಂದು ಹೊಗಳಿದ್ದು? ನೀವೇ ನೋಡಿ

Mahesh Babu: ಜೂನಿಯರ್ ಮಹೇಶ್ ಬಾಬು ಬಗ್ಗೆ ತಾಯಿ ನಮ್ರತಾ ಯಾಕೆ ಇಷ್ಟೊಂದು ಹೊಗಳಿದ್ದು? ನೀವೇ ನೋಡಿ

ಮಹೇಶ್ ಬಾಬು ಕುಟುಂಬ

ಮಹೇಶ್ ಬಾಬು ಕುಟುಂಬ

ತಮ್ಮ ಮಗ ಗೌತಮ್ ಘಟ್ಟಮನೇನಿ ಅವರು 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಸುದೀರ್ಘವಾದ ಪೋಸ್ಟ್ ವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಮ್ರತಾ ಹಂಚಿಕೊಂಡಿದ್ದಾರೆ. ತಾನೇ ಸ್ವಂತವಾಗಿ ಓದಿಕೊಂಡು ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಿದ ತನ್ನ ಗಂಡು ಮಗುವಿನ ಬಗ್ಗೆ ಅವರು ತುಂಬಾನೇ ಹೆಮ್ಮೆ ಪಡುತ್ತೇನೆ ಎಂದು ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿದ್ದಾರೆ.

ಮುಂದೆ ಓದಿ ...
  • Share this:

ತೆಲುಗು (Telugu) ಚಿತ್ರೋದ್ಯಮದ ಜನಪ್ರಿಯ ನಟರಲ್ಲಿ (Actor) ಒಬ್ಬರಾದ ಮಹೇಶ್ ಬಾಬು (Mahesh Babu) ಅವರು ಒಂದಲ್ಲ ಒಂದು ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರು ಸುದ್ದಿಯಲ್ಲಿದ್ದರೆ, ಇನ್ನೊಮ್ಮೆ ಅವರ ಮುದ್ದಾದ ಮಗಳು (daughter) ಸುದ್ದಿಯಲ್ಲಿ ಇರುತ್ತಾರೆ. ಮೊನ್ನೆ ತಾನೇ ಮಹೇಶ್ ಬಾಬು ಅವರ ಮಗಳಿಗೆ ತೆಲುಗು ನಟಿಯಾದ ಸಮಂತಾ (Samanta) ಅವರು ಎಂದರೆ ತುಂಬಾನೇ ಇಷ್ಟವಂತೆ ಎಂದು ಹೇಳಿದ್ದರು. ಈಗ ಮಹೇಶ್ ಬಾಬು ಅವರ ಹೆಂಡತಿ ನಮ್ರತಾ ಶಿರೋಡ್ಕರ್ (Namrata Shirodkar) ಮತ್ತು ಅವರ ಮಗ ಗೌತಮ್ ಸುದ್ದಿಯಲ್ಲಿದ್ದಾರೆ. ನಮ್ರತಾ ಈಗ ಹೆಮ್ಮೆಯ ತಾಯಿಯಂತೆ, ಇದಕ್ಕೆ ಕಾರಣ ಏನು ಅಂತ ತಿಳಿದುಕೊಳ್ಳುವುದಕ್ಕೆ ನೀವು ತುಂಬಾನೇ ಕಾತುರರಾಗಿರುತ್ತೀರಿ ಎಂಬುದು ನಮಗೆ ಗೊತ್ತಿದೆ.ಏನು, ಯಾಕೆ ಎಂಬುವುದು ಇಲ್ಲಿದೆ ನೊಡಿ


ಮಗನ ಬಗ್ಗೆ ತುಂಬಾನೇ ಹೆಮ್ಮೆ ಪಡುತ್ತಾರಂತೆ ನಮ್ರತಾ
ಗುರುವಾರ ಎಂದರೆ ಮೇ 26ರಂದು ತಮ್ಮ ಮಗ ಗೌತಮ್ ಘಟ್ಟಮನೇನಿ ಅವರು 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಗ್ಗೆ ಸುದೀರ್ಘವಾದ ಪೋಸ್ಟ್ ವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಮ್ರತಾ ಹಂಚಿಕೊಂಡಿದ್ದಾರೆ.


ತಾನೇ ಸ್ವಂತವಾಗಿ ಓದಿಕೊಂಡು ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಿದ ತನ್ನ ಗಂಡು ಮಗುವಿನ ಬಗ್ಗೆ ಅವರು ತುಂಬಾನೇ ಹೆಮ್ಮೆ ಪಡುತ್ತೇನೆ ಎಂದು ಅವರು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿ ಕೊಂಡಿದ್ದಾರೆ. ಈಗನನ್ನ ಮಗ ಹೊಸ ಸವಾಲು ಮತ್ತು ಜೀವನದ ಬಹು ಮುಖ್ಯವಾದ ಹಂತವನ್ನು ತಲುಪಿದ್ದಾನೆ ಎಂದು ಅವರು ಆ ಪೋಸ್ಟ್ ನಲ್ಲಿ ಹೇಳಿದ್ದಾರೆ.


ಇನ್ಸ್ಟಾಗ್ರಾಮ್ ನಲ್ಲಿ ಮಗನ ಬಗ್ಗೆ ಬರೆದಿದ್ದು ಹೀಗೆ
"ತನ್ನಷ್ಟಕ್ಕೆ ತಾನೇ ಓದಿಕೊಂಡು 10ನೇ ತರಗತಿಯನ್ನು ಉತ್ತಮ ಫಲಿತಾಂಶದೊಂದಿಗೆ ಪಾಸ್ ಮಾಡಿದ್ದಾನೆ. ನನ್ನ ಪುಟ್ಟ ಮಗು ನಿನ್ನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಹೆಮ್ಮೆ ಇದೆ. ಮತ್ತೊಂದು ಹೊಸ ಹಂತ. ಮತ್ತೊಂದು ಹೊಸ ಸವಾಲು ನಿನಗಾಗಿ ಕಾಯುತ್ತಿದೆ. ಆದರೆ ನೀನು ಈಗ ಸಾಧಿಸಿದಂತೆಯೇ, ಮುಂದಿನ ಹಂತದಲ್ಲೂ ಮಾಡುತ್ತೀಯಾ ಎಂದು ನನಗೆ ನಂಬಿಕೆ ಇದೆ.


ಇದನ್ನೂ ಓದಿ: Jacqueline Fernandez: ವಿಕ್ರಾಂತ್ ರೋಣ ಬೆಡಗಿಯ ಟ್ರೆಡಿಷನಲ್ ಲುಕ್ - ಮಲ್ಲಿಗೆ ಮುಡಿದು, ಸೀರೆಯಲ್ಲಿ ಜಾಕ್ಲಿನ್ ಮಿಂಚಿಂಗ್



ನಾವು ಯಾವಾಗಲೂ ನಿನ್ನೊಂದಿಗೆ ಇದ್ದೇವೆ ಆದರೆ ಈಗ ನೀನು ನಿನ್ನ ಬದುಕಿನ ಮಾರ್ಗದ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತೀದ್ದೀಯಾ. ನಾನು ನಿನಗೆ ಆಶೀರ್ವದಿಸಲು ಬಯಸುತ್ತೇನೆ. ನಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತಲೇ ಇರು. ನಾವು ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ" ಎಂದು ನಮ್ರತಾ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.


ಯಾವಾಗಲೂ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ತಾಯಿ
ನಮ್ರತಾ ಯಾವಾಗಲೂ ತನ್ನ ಮಕ್ಕಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ಸ್ವಲ್ಪ ಸಮಯದ ಹಿಂದೆ, ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಮಗ ಗೌತಮ್ ಅವರ ಈಜು ಪ್ರತಿಭೆಯನ್ನು ಶ್ಲಾಘಿಸಿದ್ದರು. ಗೌತಮ್ ಅವರ ಮನೆಯ ಈಜುಕೊಳದಲ್ಲಿ ಈಜುವ ವೀಡಿಯೋವನ್ನು ಹಂಚಿಕೊಂಡ ನಮ್ರತಾ, ಅವರು ಕ್ರೀಡೆಗೆ ಸರಿಯಾಗಿ ಹೊಂದಿಕೊಂಡಿದ್ದಾರೆ ಎಂದು ಬರೆದಿದ್ದರು.


ಇದನ್ನೂ ಓದಿ: Sai Pallavi: ಮತ್ತೊಮ್ಮೆ ಗೋಲ್ಡ್​ ಮೆಡಲ್ ತಮ್ಮದಾಗಿಸಿಕೊಂಡ ಫಿದಾ ಬೆಡಗಿ, ಶ್ಯಾಮಸಿಂಗರೈ ಚಿತ್ರದ ಅಭಿನಯಕ್ಕೆ ಬಿಹೈಂಡ್ ದಿ ವುಡ್ಸ್ ಪ್ರಶಸ್ತಿ


"2018 ರಿಂದ ವೃತ್ತಿಪರವಾಗಿ ಈಜುವ ಮೂಲಕ, ಗೌತಮ್ ತಮ್ಮ ವಯೋಮಾನದವರ ಜೊತೆ ತೆಲಂಗಾಣ ರಾಜ್ಯದ ಈಜುಪಟುಗಳಲ್ಲಿ ಅಗ್ರ 8 ಸ್ಪರ್ಧಾತ್ಮಕ ಈಜುಗಾರರಲ್ಲಿ ತಮ್ಮ ಸ್ಥಾನವನ್ನು ಗುರುತಿಸಿಕೊಂಡಿದ್ದಾರೆ. ಗೌತಮ್ ಎಲ್ಲಾ ನಾಲ್ಕು ಈಜು ಶೈಲಿಗಳನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ಅವರ ತಾಯಿ ನಮ್ರತಾ ಬಹಿರಂಗಪಡಿಸಿದ್ದರು. "ಗೌತಮ್ ಬಟರ್‌ಫ್ಲೈ, ಬ್ಯಾಕ್ಸ್ಟ್ರೋಕ್, ಬ್ರೆಸ್ಟ್ಸ್ಟ್ರೋಕ್ ಮತ್ತು ಫ್ರೀಸ್ಟೈಲ್ ಅನ್ನು ಸುಲಭವಾಗಿ ಮತ್ತು ಸೊಗಸಾಗಿ ಪ್ರದರ್ಶಿಸುತ್ತಾನೆ. ಅವನ ನೆಚ್ಚಿನದ್ದು ಫ್ರೀಸ್ಟೈಲ್ ಆಗಿದ್ದು, ಅಲ್ಲಿ ಅವನು 3 ಗಂಟೆಗಳಲ್ಲಿ ಸತತ 5 ಕಿಲೋ ಮೀಟರ್ ಈಜಿದನು" ಎಂದು ಅವರು ಹೇಳಿದ್ದರು.


ಇಷ್ಟೇ ಅಲ್ಲದೆ ಮಹೇಶ್ ಬಾಬು ಅವರ ಮಗ ಗೌತಮ್ ಈಗಾಗಲೇ ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ನೀಡಿದ್ದಾರೆ ಎಂದು ಹೇಳಬಹುದು. ಏಕೆಂದರೆ ಮಹೇಶ್ ಬಾಬು ಅಭಿನಯದ 1: ನೆನೊಕ್ಕಡಿನೇ ಚಿತ್ರದಲ್ಲಿ ಮಹೇಶ್ ಬಾಬು ಅವರ ಕಿರಿಯ ಅವತರಣಿಕೆಯಾಗಿ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ.

Published by:Ashwini Prabhu
First published: