Kurukshetra: ಡಿಬಾಸ್​ ದರ್ಶನ್ - ಕಿಚ್ಚ ಸುದೀಪ್​ಗೆ ಆಗಸ್ಟ್​ 9 ಸಂತಸದ ದಿನ

Kurukshetra: ಆಗಸ್ಟ್​ 9 ಸ್ಯಾಂಡಲ್​ವುಡ್​ನಲ್ಲಿ ಸಂಭ್ರಮದ ದಿನ ಎಂದರೆ ತಪ್ಪಾಗಲಾರದು. ಕಾರಣ  ಇಷ್ಟೆ ಅಂದು ಡಿಬಾಸ್​ ದರ್ಶನ್​ ಅಭಿನಯದ50ನೇ ಚಿತ್ರವಾದ ಕುರುಕ್ಷೇತ್ರ ಬಿಡುಗಡೆಯಾಗಲಿದೆ. ಜತೆಗೆ ಕಿಚ್ಕಚ ಸುದೀಪ್​ ಅಭಿನಯದ ಪೈಲ್ವಾನ್​ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯಲಿದೆ.

Anitha E | news18
Updated:August 2, 2019, 1:53 PM IST
Kurukshetra: ಡಿಬಾಸ್​ ದರ್ಶನ್ - ಕಿಚ್ಚ ಸುದೀಪ್​ಗೆ ಆಗಸ್ಟ್​ 9 ಸಂತಸದ ದಿನ
ದರ್ಶನ್​ -ಸುದೀಪ್​
  • News18
  • Last Updated: August 2, 2019, 1:53 PM IST
  • Share this:
ದರ್ಶನ್​ ಹಾಗೂ ಕಿಚ್ಚನ ಸ್ನೇಹಾ, ಪ್ರೀತಿ ಹಾಗೂ ವಿರಸದ ಬಗ್ಗೆ ತಿಳಿದೇ ಇದೆ. ಒಂದು ಕಾಲದಲ್ಲಿ ಜಿಗರಿ ದೋಸ್ತಿಗಳಾಗಿದ್ದ ದಚ್ಚು ಕಿಚ್ಚ ಈಗ ನಾಂನೊಂದು ತೀರಾ.. ನೀನೊಂದು ತೀರಾ ಎಂಬಂತೆ ಆಗಿದ್ದಾರೆ. ಆದರೂ ಇವರಿಬ್ಬರ ನಡುವೆ ವಿರಸಕ್ಕಿಂತ ಪ್ರೀತಿಯೇ ಹೆಚ್ಚಾಗಿದೆ ಎಂದರೆ ತಪ್ಪಾಗದು. ಆದರೆ ಈ ಇಬ್ಬರೂ ನಟರಿಗೂ ಆಗಸ್ಟ್​ 9 ಸಂತಸದ ದಿನ. ಅದಕ್ಕೆ ಅವರ ಆಭಿಮಾನಿಗಳು ಅದು ಹಬ್ಬದ ದಿನವಾಗಿದೆ.

ಆಗಸ್ಟ್​ 9 ಸ್ಯಾಂಡಲ್​ವುಡ್​ನಲ್ಲಿ ಸಂಭ್ರಮದ ದಿನ ಎಂದರೆ ತಪ್ಪಾಗಲಾರದು. ಕಾರಣ  ಇಷ್ಟೆ ಅಂದು ಡಿಬಾಸ್​ ದರ್ಶನ್​ ಅಭಿನಯದ50ನೇ ಚಿತ್ರವಾದ 'ಕುರುಕ್ಷೇತ್ರ' ಬಿಡುಗಡೆಯಾಗಲಿದೆ. ಜತೆಗೆ ಕಿಚ್ಕಚ ಸುದೀಪ್​ ಅಭಿನಯದ 'ಪೈಲ್ವಾನ್​' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆಯಲಿದೆ.

Darshan in Kurukshetra
'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​


ಈ ಕಾರಣದಿಂದಲೇ ದರ್ಶನ್ ಹಾಗೂ ಸುದೀಪ್​ ಇಬ್ಬರಿಗೂ ಆಗಷ್ಟ್​ 9 ಸಂತಸದ ದಿನ. ಇನ್ನೂ ಇವರ ಅಭಿಮಾನಿಗಳಿಗಂತೂ ರಸದೌತಣ. ಬಹು ದಿನಗಳಿಂದ ದುರ್ಯೋಧನನ ದರ್ಶನಕ್ಕಾಗಿ ಕಾಯುತ್ತಿರುವವರಿಗೆ ಕೌರವಾಧಿಪತಿಯ ವಿರಾಟ ದರ್ಶನವಾಗಲಿದೆ.

 ಅಂತೆಯೇ ಕಾರಣಾಂತರಗಳಿಂದ ಮುಂದಕ್ಕೆ ಹೋಗಿದ್ದ 'ಪೈಲ್ವಾನ್​' ಆಡಿಯೋ ಕಾರ್ಯಕ್ರಮ ಸಹ ಕಿಚ್ಚ ಅಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ. ಕೃಷ್ಣ ನಿರ್ದೇಶನದ 'ಪೈಲ್ವಾನ್​'ಗೆ ಅರ್ಜುನ್​ ಜನ್ಯ ಸಂಗೀತ ನೀಡಿದ್ದು,ಮ ಆಕಾಂಕ್ಷಾ ಸಿಂಗ್​ ನಾಯಕಿಯಾಗಿದ್ದಾರೆ.

'ಕುರುಕ್ಷೇತ್ರ' ಚಿತ್ರದ ಹಾಡುಗಳು ಈಗ ಆನ್​ಲೈನ್​ನಲ್ಲಿ ಲಭ್ಯವಿದ್ದು, ಅದನ್ನು ಕೇಳಿ ಆನಂದಿಸಬಹುದಾಗಿದೆ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ.

ಕುರುಕ್ಷೇತ್ರ ಚಿತ್ರದ ಹಾಡುಗಳು ನಿಮಗಾಗಿ ಕೇಳಿ ಆನಂದಿಸಿ ನಿಮ್ಮ ಪ್ರೀತಿಯ ದಾಸ ದರ್ಶನ್https://t.co/nm78jXwscZಇನ್ನು ನಾಗಣ್ಣ ನಿರ್ದೇಶಿಸಿ, ಮುನಿರತ್ನ ನಿರ್ಮಿಸಿರುವ 'ಕುರುಕ್ಷೇತ್ರ 3D' ಸಿನಿಮಾ ದೇಶದಾದ್ಯಂತ ತೆರೆಕಾಣಲಿದೆ. ಅಂದು ದಚ್ಚು ದುರ್ಯೋಧನನಾಗಿ ಬೆಳ್ಳಿ ಪರೆದ ಮೇಲೆ ವಿಜೃಂಭಿಸಲಿದ್ದಾರೆ. ಅದನ್ನು ಕಣ್ತುಂಬಿಕೊಳ್ಳಲು ಕಾತರರಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

 

HBD Tapsi: 34ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ತಾಪ್ಸಿ ಪನ್ನು ಹಾಟ್​ ಚಿತ್ರಗಳು..!

First published:August 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ