Sushmita Sen: ಮಾಜಿ ವಿಶ್ವಸುಂದರಿ ಇನ್ನೂ ಸಿಂಗಲ್! ರಹಸ್ಯ ಬಿಚ್ಚಿಟ್ರು ನೋಡಿ

ಟ್ವೀಕ್ ಇಂಡಿಯಾದ ‘ದಿ ಐಕಾನ್ಸ್’ ನಲ್ಲಿ ಟ್ವಿಂಕಲ್ ಖನ್ನಾ ಅವರೊಂದಿಗೆ ಮಾತನಾಡಿದಾಗ ಸುಶ್ಮಿತಾ ಸೇನ್ ಅವರು ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ನಟಿ ಸುಶ್ಮಿತಾ ಸೇನ್

ನಟಿ ಸುಶ್ಮಿತಾ ಸೇನ್

  • Share this:
ನೀವು 90ರ ದಶಕದಲ್ಲಿ ಬಿಡುಗಡೆಯಾದ ‘ದಸ್ತಕ್’ ಹಿಂದಿ ಚಿತ್ರವನ್ನು ನೋಡಿದ್ದರೆ, ಆ ಚಿತ್ರದ ನಟಿ (Actress) ನಿಮಗೆ ನೆನಪಿರುತ್ತಾರೆ ಅಂತ ನಾವು ಊಹಿಸಬಹುದು. ಹೌದು.. 1996 ರಲ್ಲಿ ಬಿಡುಗಡೆಯಾದ ‘ದಸ್ತಕ್’ ಚಿತ್ರದಲ್ಲಿ ಸುಶ್ಮಿತಾ ಸೇನ್ (Sushmita Sen) ಅವರು ಮೊದಲ ಬಾರಿಗೆ ಬಾಲಿವುಡ್ ಗೆ (Bollywood) ಎಂಟ್ರಿ ನೀಡಿದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಷ್ಟೇ ಅಲ್ಲದೆ ಇದಕ್ಕೂ ಮುಂಚೆ ಜನರಿಗೆ 1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು (Miss Universe) ಮುಡಿಗೇರಿಸಿಕೊಂಡ ಸುಂದರಿ ಈಕೆ ಅಂತ ಗೊತ್ತಿತ್ತು. ನಂತರ ಹಾಗೆ ಒಂದರ ಮೇಲೊಂದು ಎಂಬಂತೆ ಅನೇಕ ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದರು. ಬಿವಿ ನಂ.1, ಡು ನಾಟ್ ಡಿಸ್ಟರ್ಬ್, ಮೈನ್ ಹೂಂ ನಾ, ಮೈನೆ ಪ್ಯಾರ್ ಕ್ಯೂಂ ಕಿಯಾ ಮತ್ತು ತುಮ್ಕೊ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಮ್ ನಂತಹ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಸುಶ್ಮಿತಾ ಸೇನ್ ಸಿಂಗಲ್ ಆಗಿರೋದ್ಯಾಕೆ  
ಇಷ್ಟೆಲ್ಲಾ ಸಾಧನೆ ಮಾಡಿದ ಈ ನಟಿ ಸುಶ್ಮಿತಾ ಸೇನ್ ಏಕೆ ಮದುವೆಯಾಗದೆ ಸಿಂಗಲ್ ಆಗಿ ಉಳಿದಿದ್ದಾರೆ ಅಂತ ನಿಮಗೆ ಅನ್ನಿಸಿರಬೇಕಲ್ಲವೇ? ಇದಕ್ಕೆ ಉತ್ತರ ಅವರೇ ಖುದ್ದಾಗಿ ನೀಡಿದ್ದಾರೆ ನೋಡಿ. ಟ್ವೀಕ್ ಇಂಡಿಯಾದ ‘ದಿ ಐಕಾನ್ಸ್’ ನಲ್ಲಿ ಟ್ವಿಂಕಲ್ ಖನ್ನಾ ಅವರೊಂದಿಗೆ ಮಾತನಾಡಿದಾಗ ಸುಶ್ಮಿತಾ ಸೇನ್ ಅವರು ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಮಕ್ಕಳ ಬಗ್ಗೆ ಈಕೆ ಹೇಳಿದ್ದು ಹೀಗೆ
ಮಾಜಿ ಮಿಸ್ ಯೂನಿವರ್ಸ್ ತಾನು ಮದುವೆಯಾಗದಿರುವ ಬಗ್ಗೆ ಮತ್ತು ಅದಕ್ಕೆ ಕಾರಣವೇನು ಎಂಬುದರ ಬಗ್ಗೆ ಮಾತನಾಡುತ್ತಾ "ಅದೃಷ್ಟವಶಾತ್.. ನಾನು ನನ್ನ ಜೀವನದಲ್ಲಿ ಕೆಲವು ಆಸಕ್ತಿದಾಯಕ ಪುರುಷರನ್ನು ಭೇಟಿಯಾದೆ, ನಾನು ಎಂದಿಗೂ ಮದುವೆಯಾಗದ ಏಕೈಕ ಕಾರಣವೆಂದರೆ ಅವರು ನನ್ನನ್ನು ನಿರಾಶೆ ಮಾಡಿದರು. ಅದಕ್ಕೂ ನನ್ನ ಮಕ್ಕಳಿಗೂ ಯಾವ ಸಂಬಂಧವೂ ಇರಲಿಲ್ಲ.

ಇದನ್ನೂ ಓದಿ:  Lalith Modi: ಸುಶ್ಮಿತಾ ಸೇನ್ ಹೃದಯ ಕದ್ದ ಲಲಿತ್ ಮೋದಿ ಯಾರು? ಇವರು ಲಂಡನ್​ಗೆ ಪರಾರಿಯಾಗಿದ್ದೇಕೆ?

ನನ್ನ ಮಕ್ಕಳು ನನ್ನ ಈ ನಿರ್ಧಾರದಲ್ಲಿ ಎಂದಿಗೂ ಇರಲಿಲ್ಲ. ಅವರು ತುಂಬಾ ದಯಾಪರರಾಗಿದ್ದಾರೆ ಮತ್ತು ನನ್ನ ಇಬ್ಬರು ಮಕ್ಕಳು ನನ್ನ ಜೀವನದಲ್ಲಿ ಇರುವ ಜನರನ್ನು ತೆರೆದ ತೋಳುಗಳಿಂದ ಸ್ವೀಕರಿಸಿದ್ದಾರೆ. ಅವರು ಎಲ್ಲರಿಗೂ ಸಮಾನ ಪ್ರಮಾಣದ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದು ನೋಡಲು ಅತ್ಯಂತ ಸುಂದರವಾದ ವಿಷಯವಾಗಿದೆ" ಎಂದು ಸುಶ್ಮಿತಾ ಸೇನ್ ಹೇಳಿದರು.

ಮೂರು ಬಾರಿ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರಂತೆ ಸೇನ್
"ನಾನು ಮೂರು ಬಾರಿ ಇನ್ನೇನು ಮದುವೆಯಾಗಿ ಬಿಡುತ್ತೇನೆ ಎಂಬ ಹಟಕ್ಕೆ ಬಂದಿದ್ದೆ, ಆದರೆ ಆ ಮೂರು ಬಾರಿ ನನ್ನ ದೇವರು ನನ್ನನ್ನು ರಕ್ಷಿಸಿದ್ದಾನೆ ಅಂತ ಹೇಳಬಹುದು. ಏಕೆಂದರೆ ನಾನು ಮದುವೆಯಾಗಲು ಬಯಸಿದ್ದವರ ಜೀವನದಲ್ಲಿ ಎಂತಹ ವಿಪತ್ತುಗಳು ಮೊದಲೇ ಸಂಭವಿಸಿದ್ದವು ಎಂದು ನಾನು ನಿಮಗೆ ಹೇಳಲು ಸಾಧ್ಯವಿಲ್ಲ. ದೇವರು ನನ್ನನ್ನು ರಕ್ಷಿಸಿದನು, ಏಕೆಂದರೆ ದೇವರು ಈ ಇಬ್ಬರು ಮಕ್ಕಳನ್ನು ರಕ್ಷಿಸುತ್ತಿದ್ದಾನೆ, ಅವನು ನನ್ನನ್ನು ಈ ಮದುವೆಯೆಂಬ ಗೊಂದಲದಲ್ಲಿ ತೊಡಗಲು ಬಿಟ್ಟಿಲ್ಲ" ಎಂದು ನಟಿ ಹೇಳಿದರು.

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಗೆ ಏನು ಸಂಬಂಧ 
ಕಳೆದ ವರ್ಷ, ಸುಶ್ಮಿತಾ ಸೇನ್ ಅವರು ತಮ್ಮ ಮತ್ತು ಮಾಡೆಲ್ ಗೆಳೆಯ ರೋಹ್ಮನ್ ಅವರ ನಡುವೆ ಬ್ರೇಕ್ ಅಪ್ ಆಗಿರುವ ಸುದ್ದಿಯನ್ನು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡ ಒಂದು ಪೋಸ್ಟ್ ನಲ್ಲಿ ತಿಳಿಸಿದ್ದರು. "ನಾವು ಸ್ನೇಹಿತರಾಗಿ ಪ್ರಾರಂಭಿಸಿದೆವು, ನಾವು ಸ್ನೇಹಿತರಾಗಿಯೇ ಉಳಿದಿದ್ದೇವೆ! ಈ ಪ್ರೀತಿ ಹಾಗೆಯೇ ಉಳಿಯುತ್ತದೆ" ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Sushmita Sen-Lalit Modi: 9 ವರ್ಷದ ಹಿಂದೆನೇ ಶುರುವಾಗಿತ್ತಂತೆ ಕುಚ್​ ಕುಚ್​! ಲಂಡನ್​ನಲ್ಲಿ ಜುಮ್​ ಅಂತ ಮಜಾ ಮಾಡ್ತಿದ್ದಾರೆ ಲವ್​ ಬರ್ಡ್ಸ್​

ಸುಶ್ಮಿತಾ ಸೇನ್ ಹೆಣ್ಣು ಮಕ್ಕಳಾದ ಅಲಿಸಾ ಮತ್ತು ರೆನೀಗೆ ಒಂಟಿ ತಾಯಿಯಾಗಿದ್ದಾರೆ. ಅವರು 2000 ರಲ್ಲಿ ರೆನೀಯನ್ನು ದತ್ತು ತೆಗೆದುಕೊಂಡರೆ, ಅಲಿಸಾ ಅವರನ್ನು 2010 ರಲ್ಲಿ ದತ್ತು ತೆಗೆದುಕೊಂಡರು. ರೆನೀ ಕಿರುಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಸಹ ಮಾಡಿದ್ದಾರೆ. ಇನ್ನೂ ಕೆಲಸದ ವಿಷಯಕ್ಕೆ ಬಂದರೆ ನಟಿ ಸುಶ್ಮಿತಾ ಅವರು ಕೊನೆಯ ಬಾರಿಗೆ ಆರ್ಯ 2 ವೆಬ್ ಸಿರೀಸ್ ನಲ್ಲಿ ಕಾಣಿಸಿ ಕೊಂಡಿದ್ದರು.
Published by:Ashwini Prabhu
First published: