• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Ashish Vidyarthi: ನಟ ಆಶಿಶ್ ವಿದ್ಯಾರ್ಥಿ ಮದುವೆಯಾದ ರೂಪಾಲಿ ಬರುವಾ ಯಾರು ಗೊತ್ತೇ? ಬಯಲಾಯ್ತು ಕುತೂಹಲಕಾರಿ ವಿಷ್ಯ

Ashish Vidyarthi: ನಟ ಆಶಿಶ್ ವಿದ್ಯಾರ್ಥಿ ಮದುವೆಯಾದ ರೂಪಾಲಿ ಬರುವಾ ಯಾರು ಗೊತ್ತೇ? ಬಯಲಾಯ್ತು ಕುತೂಹಲಕಾರಿ ವಿಷ್ಯ

ಆಶಿಶ್​​ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ

ಆಶಿಶ್​​ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ

60 ವರ್ಷದ ಆಶಿಶ್ ವಿದ್ಯಾರ್ಥಿ ಇದೀಗ ಕೋಲ್ಕತ್ತಾದಲ್ಲಿ 50 ವರ್ಷದ ರೂಪಾಲಿ ಬರುವಾ ಅವರ ಜೊತೆಗೆ ಎರಡನೇ ವಿವಾಹವಾಗಿದ್ದಾರೆ.

  • Share this:

ಹಿರಿಯ ನಟ ಆಶಿಶ್ ವಿದ್ಯಾರ್ಥಿ (Ashish Vidyarthi) ನಿನ್ನೆ ಎಂದರೆ ಮೇ 25 ರಂದು ಮಾಡಿದ ಒಂದು ಘೋಷಣೆ ಬಹುಶಃ ಇವರ ಎಲ್ಲಾ ಅಭಿಮಾನಿಗಳಿಗೆ ಆಶ್ಚರ್ಯಕರವಾಗಿದೆ. ನಟ ಆಶಿಶ್ ವಿದ್ಯಾರ್ಥಿ ಈ ಹಿಂದೆ ರಾಜೋಶಿ ಬರುವಾ (Rajoshi Barua) ಅವರನ್ನು ವಿವಾಹವಾಗಿದ್ದರು. ಆಶಿಶ್ ಮತ್ತು ರಾಜೋಶಿ ಈಗ ಬೇರ್ಪಟ್ಟಿದ್ದರೂ ಸಹ ಅವರು ತಮ್ಮ ಪ್ರೀತಿಯ ಮಗ ಅರ್ಥ್ ವಿದ್ಯಾರ್ಥಿಗೆ ಸಹ-ಪೋಷಕರಾಗಿದ್ದಾರೆ. ಹೀಗಿರುವಾಗ ನಟ ಆಶಿಶ್ ಅವರು ಈಗ ಎರಡನೇ ಮದುವೆಯಾಗಿದ್ದಾರೆ ನೋಡಿ.


ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ


ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ಈ ನಟ ತಾವು ಮದುವೆ ಮಾಡಿಕೊಂಡಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ದಂಪತಿಗಳು ನ್ಯಾಯಾಲಯದಲ್ಲಿ ಮದುವೆಯಾಗಲು ನಿರ್ಧರಿಸಿದರು ಮತ್ತು ಅದೇ ರೀತಿಯಲ್ಲಿ ವಿವಾಹ ಸಹ ಮಾಡಿಕೊಂಡರು. ಈ ಮದುವೆಗೆ ಅವರ ಹತ್ತಿರದ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. "ನನ್ನ ಜೀವನದ ಈ ಹಂತದಲ್ಲಿ, ರೂಪಾಲಿಯನ್ನು ಮದುವೆಯಾಗುವುದು ಅಸಾಧಾರಣ ಭಾವನೆಯಾಗಿದೆ. ನಾವು ಬೆಳಗ್ಗೆ ನ್ಯಾಯಾಲಯದಲ್ಲಿ ವಿವಾಹವನ್ನು ಮಾಡಿಕೊಂಡಿದ್ದೇವೆ, ನಂತರ ಅದೇ ಸಂಜೆಗೆ ಇಬ್ಬರು ದಂಪತಿಗಳಾಗಿದ್ದೇವೆ" ಎಂದು ಆಶಿಶ್ ವಿದ್ಯಾರ್ಥಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.


ರಾಷ್ಟ್ರ ಪ್ರಶಸ್ತಿ ವಿಜೇತ ನಟ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು.


ಇದನ್ನೂ ಓದಿ:  ನಾಪತ್ತೆಯಾದ ನಟನ ದೇಹ ಬಾಕ್ಸ್​ನಲ್ಲಿ ಪತ್ತೆ! ಕುತ್ತಿಗೆಯಲ್ಲಿ ಮೆಟಲ್ ವೈರ್, ಕೈಗಳನ್ನು ಕಟ್ಟಿ ಮಣ್ಣಿನಡಿ ಹಾಕಿದ್ಯಾರು?


ಆಶಿಶ್ ಮದುವೆಯಾದ ರೂಪಾಲಿ ಬರುವಾ ಯಾರು ಗೊತ್ತೇ?


ಆಶಿಶ್ ವಿದ್ಯಾರ್ಥಿ ಅವರ ಎರಡನೇ ಪತ್ನಿ ರೂಪಾಲಿ ಅವರು ಗುವಾಹಟಿ ಮೂಲದವರಾಗಿದ್ದು, ಕೋಲ್ಕತ್ತಾದ ನಾಮ್ಜಿ ಎಂಬ ಉನ್ನತ ಫ್ಯಾಷನ್ ಮಳಿಗೆಯನ್ನು ನಡೆಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ ಆಶಿಶ್ ತುಂಬಾನೇ ಸಕ್ರಿಯವಾಗಿರುತ್ತಾರೋ, ಅದಕ್ಕೆ ತದ್ವಿರುದ್ಧ ಎಂಬಂತೆ ರೂಪಾಲಿ ತುಂಬಾನೇ ಕಡಿಮೆ ಪ್ರೊಫೈಲ್ ಅನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ.


ಆಶಿಶ್​​ ವಿದ್ಯಾರ್ಥಿ ಮತ್ತು ರೂಪಾಲಿ ಬರುವಾ


ರೂಪಾಲಿ, ತನ್ನ ರೀಲ್ ಗಳಿಂದ ಸ್ಪಷ್ಟವಾಗುವಂತೆ, ತನ್ನ ಕುಟುಂಬ ಸದಸ್ಯರೊಂದಿಗೆ ನೃತ್ಯ ಮಾಡುವುದರಲ್ಲಿ ಮತ್ತು ಪ್ರೀತಿಯ ಕ್ಷಣಗಳನ್ನು ಕಳೆಯುವುದರಲ್ಲಿ ತಮ್ಮ ಸಂತೋಷವನ್ನು ಕಂಡುಕೊಳ್ಳುತ್ತಾರೆ.


ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅವರ ವೈಯಕ್ತಿಕ ಆಸಕ್ತಿಗಳು ಮತ್ತು ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ. ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಸೀಮಿತ ಸಂಖ್ಯೆಯ ಜನರನ್ನು ಫಾಲೋ ಮಾಡುವುದು, 50 ವರ್ಷದ ಉದ್ಯಮಿ ತನ್ನ ಆಸಕ್ತಿಗಳಿಗೆ ಹೊಂದಿಕೆಯಾಗುವ ಪರಿಚಿತರು ಮತ್ತು ಖಾತೆಗಳ ನಿಕಟ ವೃತ್ತದೊಂದಿಗೆ ತೊಡಗಿಸಿಕೊಳ್ಳಲು ಬಯಸುತ್ತಾರೆ ಎಂದು ಸೂಚಿಸುತ್ತದೆ.


ನಟ ಆಶಿಶ್ ಮತ್ತು ರೂಪಾಲಿಯ ಮಧ್ಯೆ ಪ್ರೇಮ ಹೇಗೆ ಶುರುವಾಯ್ತು ನೋಡಿ..


ಮಾಧ್ಯಮಗಳ ವರದಿಗಳ ಪ್ರಕಾರ, ನಟ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ಅವರ ಪ್ರೇಮಕಥೆ ಒಂದು ಫ್ಯಾಷನ್ ಚಿತ್ರೀಕರಣದ ಸಮಯದಲ್ಲಿ ಪ್ರಾರಂಭವಾಯಿತು. ಅಲ್ಲಿ ಅವರಿಬ್ಬರು ತಮ್ಮ ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಂಡರು. ಈ ಚಿತ್ರೀಕರಣ ಮುಗಿದ ನಂತರ, ಅವರು ಇಬ್ಬರು ಸಂಪರ್ಕದಲ್ಲಿ ಇದ್ದರು ಮತ್ತು ಅವರು ಪರಸ್ಪರರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಪ್ರಯಾಣವನ್ನು ಪ್ರಾರಂಭಿಸಿದರು.


ಒಟ್ಟಿಗೆ ಕೆಲವು ವರ್ಷಗಳನ್ನು ಕಳೆದ ನಂತರ, ಅವರ ಬಂಧವು ಇನ್ನಷ್ಟು ಬಲವಾಯಿತು, ಇದು ಅವರ ಸಂಬಂಧವನ್ನು ಮುಂದಿನ ಹಂತಕ್ಕೆ ಎಂದರೆ ಮದುವೆ ಹಂತಕ್ಕೆ ತೆಗೆದುಕೊಂಡು ಹೋಯಿತು. ಬರುವಾ ಅವರೊಂದಿಗಿನ ತಮ್ಮ ಪ್ರೇಮಕಥೆಯ ವಿವರಗಳನ್ನು ಆಶಿಶ್ ಅವರು ತುಂಬಾನೇ ಖಾಸಗಿಯಾಗಿಟ್ಟಿದ್ದರೂ, ಅವರು ಇಟೈಮ್ಸ್ ಜೊತೆಗಿನ ಸಂಭಾಷಣೆಯಲ್ಲಿ ಅವರ ಮದುವೆಯ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ತನ್ನ ಜೀವನದ ಈ ಹಂತದಲ್ಲಿ ರೂಪಾಲಿಯನ್ನು ಮದುವೆಯಾಗುವುದು ತನಗೆ ಅಸಾಧಾರಣ ಭಾವನೆಯನ್ನು ತಂದಿದೆ ಅಂತ ನಟ ಹೇಳಿದರು.


ತಮ್ಮ ಮದುವೆಯ ಬಗ್ಗೆ ರೂಪಾಲಿ ಅವರು ಮಾತನಾಡಿ "ನಾವು ಸ್ವಲ್ಪ ಸಮಯದ ಹಿಂದೆ ಭೇಟಿಯಾದೆವು ಮತ್ತು ಅದನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆವು. ಆದರೆ ನಾವಿಬ್ಬರೂ ನಮ್ಮ ಮದುವೆಯನ್ನು ತುಂಬಾನೇ ಖಾಸಗಿಯಾಗಿಟ್ಟುಕೊಳ್ಳಬೇಕೆಂದು ಬಯಸಿದ್ದೆವು." ಎಂದು ಹೇಳಿದರು.

top videos
    First published: