Mahesh Babu: 'ಪ್ರಿನ್ಸ್' ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್ ಇವರೇ ಅಂತೆ!

ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್

ಮಹೇಶ್ ಬಾಬು ಅವರ ಪುತ್ರಿಯ ಬೆಸ್ಟ್ ಫ್ರೆಂಡ್

ಮಹೇಶ್ ಬಾಬು ಅವರ ಮಗಳು ಸದಾ ಒಂದಲ್ಲ ಒಂದು ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ ಎಂದು ಹೇಳಬಹುದು. ಸ್ಟಾರ್ ಕಿಡ್‌ಗಳಲ್ಲಿ ತನ್ನ ತಂದೆಯಂತೆಯೇ ತುಂಬಾನೇ ಮುದ್ದಾಗಿ ಕಾಣುವ ಈಕೆ ಈಗ ಮತ್ತೆ ಸುದ್ದಿಯಲ್ಲಿರುವುದು ಏಕೆ ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇರಬೇಕಲ್ಲವೇ? ಬನ್ನಿ, ಹಾಗಾದರೆ ಈ ಪುಟ್ಟ ಹುಡುಗಿ ಯಾವ ವಿಷಯದ ಬಗ್ಗೆ ಮಾತಾಡಿದ್ದಾರೆ ಎಂದು ತಿಳಿದುಕೊಳ್ಳೋಣ...

ಮುಂದೆ ಓದಿ ...
  • Share this:

ತೆಲುಗು (Telugu) ಚಲನ ಚಿತ್ರೋದ್ಯಮದ (Film Industry) ಜನಪ್ರಿಯ ಮತ್ತು ಸ್ಪುರದ್ರೂಪಿ ನಟ (Actor) ಎಂದು ಹೇಳಿದರೆ ಬಹುತೇಕ ಅಭಿಮಾನಿಗಳ (Fans) ಕಣ್ಣುಗಳ ಮುಂದೆ ಬರುವ ನಟ ಎಂದರೆ ಅದು ಮಹೇಶ್ ಬಾಬು (Mahesh Babu) ಅವರ ಮುಖ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಅವರು ಅಷ್ಟು ಮುದ್ದಾಗಿ ಕಾಣುತ್ತಾರೆ ಮತ್ತು ಅವರ ದೇಹವನ್ನು ಸಹ ಅಷ್ಟೇ ಫಿಟ್ (Fit) ಆಗಿ ಇರಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇವರು ನಟಿಸುವ (Acting) ಚಿತ್ರಗಳಲ್ಲಿಯೂ (Films) ಸಹ ಇವರ ಮಾತುಗಳು ಸಹ ಈವರಂತೆಯೇ ತುಂಬಾನೇ ವೇಗದಿಂದ ಕೂಡಿರುತ್ತವೆ.


ಒಂದಲ್ಲ ಒಂದು ಒಳ್ಳೆ ಸುದ್ದಿಯಲ್ಲಿ ಇರುವ ಮಹೇಶ್ ಅವರ ಮಗಳು
ಇವರಷ್ಟೇ ಇವರ ಮಗಳು ಸಿತಾರಾ ಘಟ್ಟಮನೆನಿ ಸಹ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಮಹೇಶ್ ಅವರ ಮಗಳು ಸದಾ ಒಂದಲ್ಲ ಒಂದು ಒಳ್ಳೆಯ ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ ಎಂದು ಹೇಳಬಹುದು. ಸ್ಟಾರ್ ಕಿಡ್ ಗಳಲ್ಲಿ ತನ್ನ ತಂದೆಯಂತೆಯೇ ತುಂಬಾನೇ ಮುದ್ದಾಗಿ ಕಾಣುವ ಈಕೆ ಈಗ ಮತ್ತೆ ಸುದ್ದಿಯಲ್ಲಿರುವುದು ಏಕೆ ಅಂತ ತಿಳಿದುಕೊಳ್ಳಲು ನಿಮಗೆ ಕುತೂಹಲ ಇರಬೇಕಲ್ಲವೇ? ಬನ್ನಿ, ಹಾಗಾದರೆ ಈ ಪುಟ್ಟ ಹುಡುಗಿ ಯಾವ ವಿಷಯದ ಬಗ್ಗೆ ಮಾತಾಡಿದ್ದಾರೆ ಎಂದು ತಿಳಿದುಕೊಳ್ಳೋಣ.


ಇದನ್ನೂ ಓದಿ: Doresani Serial: ವರ್ಕೌಟ್ ಆಗ್ತಿಲ್ಲ ಮದುವೆ ನಿಲ್ಲಿಸೋ ಸತ್ಯವತಿ ಪ್ಲಾನ್! ಸಿಂಚನಾ‌ ಪ್ಲಾನ್ ಠುಸ್ ಪಟಾಕಿ


ನಟಿ ಸಮಂತಾ ಜೊತೆ ಸಮಯ ಕಳೆಯುವುದು ಎಂದರೆ ತುಂಬಾನೇ ಇಷ್ಟ
ಈ ಪುಟ್ಟ ಹುಡುಗಿಗೆ ಒಬ್ಬ ತೆಲುಗು ನಟಿ ಜೊತೆ ಸಮಯ ಕಳೆಯುವುದು ಎಂದರೆ ತುಂಬಾನೇ ಇಷ್ಟವಂತೆ. ಹೌದು.. ನಟಿ ಸಮಂತಾ ಅವರ ಜೊತೆಗೆ ಕಳೆಯುವ ಪ್ರತಿಯೊಂದು ಕ್ಷಣವನ್ನು ನಾನು ತುಂಬಾನೇ ಖುಷಿ ಖುಷಿಯಾಗಿ ಕಳೆಯುತ್ತೇನೆ ಎಂದು ಸಿತಾರಾ ಹೇಳಿದರು. ಬ್ರಹ್ಮೋತ್ಸವಂ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತನ್ನ ತಂದೆ ಮಹೇಶ್ ಬಾಬು ಅವರೊಂದಿಗೆ ಕೆಲಸ ಮಾಡುತ್ತಿದ್ದಾಗ ಸೆಟ್ ಗಳಲ್ಲಿ ಸಮಂತಾ ಅವರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದೆ ಎಂದು ಸಿತಾರಾ ಹೇಳಿದರು. ಸಮಂತಾ ಅವರೊಂದಿಗೆ ಇರುವುದು ಎಂದರೆ ನನಗೆ ತುಂಬಾನೇ ಇಷ್ಟ ಎಂದು ಸಿತಾರಾ ಹೇಳಿದರು.


ಸಮಂತಾ ತನ್ನ ಬೆಸ್ಟ್ ಫ್ರೆಂಡ್ ಇದ್ದಂತೆ ಎಂದ ಸಿತಾರಾ
ಮಹೇಶ್ ಬಾಬು ಅವರ ಮಗಳು ಸಿತಾರಾ ಅವರು "ಸ್ಯಾಮ್ ಆಂಟಿ ನನಗೆ ಉತ್ತಮ ಸ್ನೇಹಿತೆಯಿದ್ದಂತೆ. ಅವರು ನನ್ನ ತಂದೆಯ ಚಿತ್ರಗಳಲ್ಲಿ ಸಾಕಷ್ಟು ನಟಿಸುತ್ತಿದ್ದರು. ನಾನು ಚಿತ್ರದ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋದಾಗಲೆಲ್ಲಾ ಸಮಂತಾ ಆಂಟಿ ನನ್ನೊಂದಿಗೆ ಆಟ ಆಡುತ್ತಿದ್ದರು. ಅವರು ತುಂಬಾನೇ ತಮಾಷೆ ಮಾಡುತ್ತಾರೆ ಮತ್ತು ಅವರೊಬ್ಬ ಒಳ್ಳೆಯ ವ್ಯಕ್ತಿ ಎಂದು ನಾನು ಹೇಳುತ್ತೇನೆ" ಎಂದು ಸಿತಾರಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದರು.


5 ರಿಂದ 6 ವರ್ಷಗಳ ಹಿಂದೆ ಸಮಂತಾ ಅವರು ಸೆಟ್ ಗಳಲ್ಲಿ ಮೋಜು ಮಾಡುತ್ತಿದ್ದಾಗ ಅವರೊಂದಿಗಿನ ಉತ್ತಮ ನೆನಪುಗಳನ್ನು ನೆನಪಿಸಿಕೊಳ್ಳುವುದು ಮೋಜಿನ ಸಂಗತಿ ಎಂದು ಸಿತಾರಾ ಹೇಳುತ್ತಾರೆ.


ಸಿತಾರಾ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಲಿದ್ದಾರೆಯೇ?


ಸಿತಾರಾ ಇತ್ತೀಚೆಗೆ ‘ಸರ್ಕಾರು ವಾರಿ ಪಾಟ’ ಆಲ್ಬಂನ 'ಪೆನ್ನಿ' ಪ್ರಚಾರ ವೀಡಿಯೋ ಹಾಡಿನಲ್ಲಿ ಕಾಣಿಸಿಕೊಂಡರು. ಕೆಲವು ಸಮಯದಿಂದ, ಸಿತಾರಾ ತೆಲುಗು ಚಿತ್ರರಂಗದಲ್ಲಿ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ ಎಂಬ ಊಹಾಪೋಹಗಳು ತುಂಬಾನೇ ಹರಿದಾಡಿವೆ ಎಂದು ಎಲ್ಲರಿಗೂ ಗೊತ್ತಿದೆ.


ಇದನ್ನೂ ಓದಿ:  KGF Star Yash: ರಾಧಿಕಾ-ಯಶ್ ಮಗಳ ಹೊಸಾ ಫೋಟೋ ನೋಡಿ, ಎಷ್ಟೊಂದು ಮುದ್ದು!


‘ಸರ್ಕಾರು ವಾರಿ ಪಾಟಾ’ ಚಿತ್ರದ ಪ್ರಚಾರ ಹಾಡಿನಲ್ಲಿ ಸಿತಾರಾ ಅವರ ಉಪಸ್ಥಿತಿಯು ಅವರು ನಿರೀಕ್ಷೆಗಿಂತ ಬೇಗ ನಟಿಯಾಗಿ ಪಾದಾರ್ಪಣೆ ಮಾಡಬಹುದು ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದರೆ ಮಹೇಶ್ ಬಾಬು ಅವರ ಕುಟುಂಬವು ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


ನಟ ಮಹೇಶ್ ಬಾಬು ಇತ್ತೀಚೆಗೆ ತಮ್ಮ ಮಕ್ಕಳು ಚಲನ ಚಿತ್ರೋದ್ಯಮಕ್ಕೆ ಪ್ರವೇಶಿಸಲು ಬಯಸಿದರೆ ಅವರನ್ನು ತಡೆಯುವುದಿಲ್ಲ ಎಂದು ಹೇಳಿದರು. ಆದರೆ ಅವರು ತಮ್ಮ ಮಗಳು ಸಿತಾರಾ ಅವರ ಚೊಚ್ಚಲ ಚಿತ್ರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

Published by:Ashwini Prabhu
First published: