80 ಬಾರಿ ಸಹ ನಟಿಯರ ಮೇಲೆ ಅತ್ಯಾಚಾರವೆಸಗಿದ್ದ ಬಾಲಿವುಡ್​ ನಟ ಯಾರು ಗೊತ್ತಾ?

news18
Updated:September 3, 2018, 2:03 PM IST
80 ಬಾರಿ ಸಹ ನಟಿಯರ ಮೇಲೆ ಅತ್ಯಾಚಾರವೆಸಗಿದ್ದ ಬಾಲಿವುಡ್​ ನಟ ಯಾರು ಗೊತ್ತಾ?
news18
Updated: September 3, 2018, 2:03 PM IST
ನ್ಯೂಸ್​ 18 ಕನ್ನಡ 

80ರ ದಶಕದಲ್ಲಿ ಖಳ ಹಾಸ್ಯ ನಟನಾಗಿ ಬಾಲಿವುಡ್​ನಲ್ಲಿ ಆಳುತ್ತಿದ್ದ ನಟ ಎಂದರೆ ಅದು ಶಕ್ತಿ ಕಪೂರ್​. ಸಿನಿಮಾದಲ್ಲಿ ಶಕ್ತಿ​ ಎಂಬ ಹೆಸರು ಕೇಳುತ್ತಲೇ ಹೆಣ್ಣು ಮಕ್ಕಳು ಹಾಗೂ ಕುಟುಂಬದ ಹಿರಿಯರು ನಡಗುತ್ತಿದ್ದರು. ಕಾರಣ ಅವರು ಸಿನಿಮಾಗಳಲ್ಲಿ ಕಾಮುಕನಾಗಿ ಸದಾ ಒಂದಲ್ಲಾ ಒಂದು ಹೆಣ್ಣು ಮಗಳಿಗೆ ಹಿಂಸೆ ನೀಡುತ್ತಿದ್ದರು. ಇಂತಹ ದೃಶ್ಯಗಳಿಂದಲೇ ಸಾಕಷ್ಟು ಕುಖ್ಯಾತಿ ಪಡೆದಿದ್ದರು ಶಕ್ತಿ ಕಪೂರ್​.

ಹೌದು ಈ ನಟ ಸಿನಿಮಾದಲ್ಲಿ ಇದ್ದರೆ ಸಾಕು, ಅದರಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೈರ್ಜನ್ಯ ಕಟ್ಟಿಟ್ಟ ಬುತ್ತಿ. 2005ರಲ್ಲಿ ಈ ನಟನ ವಿರುದ್ಧ ಪಾತ್ರಕ್ಕಾಗಿ ಪಲ್ಲಂಗದ ಆರೋಪವೂ ಕೇಳಿ ಬಂದಿತ್ತು. ಇದಿರಂದಾಗಿ ಇವರನ್ನು ಸಿನಿಮಾಗಳಲ್ಲಿ ಅಭಿನಯಿಸದಂತೆ ನಿಷೇಧಿಸಲಾಗಿತ್ತು. ನಂತರ ನಿಷೇಧವನ್ನು ತೆಗೆಯಲಾಯಿತು.

ಇಂತಹ ನಟ ಸರಿಸುಮಾರು 400 ಸಿನಿಮಾಗಳಲ್ಲಿ 80ಕ್ಕೂ ಸಹ ಕಲಾವಿದರ ಮೇಲೆ ಅತ್ಯಾಚಾರವೆಸಗುವ ದೃಶ್ಯಗಳಲ್ಲಿ ಅಭಿನಯಿಸಿದ್ದಾರಂತೆ. ಇವರ ಈ ದೃಶ್ಯಗಳಿಂದಲೇ ಶಕ್ತಿ ತಮ್ಮ ಸಂಬಂಧಿಕರು ಹಾಗೂ ತಂದೆ-ತಾಯಿಯಿಂದ ಸಾಕಷ್ಟು ಬಾರಿ ಬೈಗುಳಗಳನ್ನೂ ತಿಂದಿದ್ದಾರಂತೆ.

ಶಕ್ತಿ ತಾವು ಖಳ ನಟನಾಗಿ ಅಭಿನಯಿಸಿದ್ದ 'ಇನ್​ಸಾನಿಯತ್​ ಕೆ ದುಶ್ಮನ್​' ಸಿನಿಮಾ ನೋಡಲು ತಮ್ಮ ಪೋಷಕರೊಂದಿಗೆ ಥಿಯೇಟರ್​ಗೆ ಹೋಗಿದ್ದರಂತೆ. ಅದರಲ್ಲಿ ಅತ್ಯಾಚಾರವೆಸಗುವ ದೃಶ್ಯ ಬಂದಾಗ ಶಕ್ತಿ ಅವರ ತಂದೆ-ತಾಯಿ ಚಿತ್ರಮಂದಿರದಿಂದ ಹೊರ ಎದ್ದು ಬಂದು ಮಗನಿಗೆ ಬೈದಿದ್ದರಂತೆ. ಇದನ್ನು ಖುದ್ದು ಶಕ್ತಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶಕ್ತಿ ಕಪೂರ್​ ಅಭಿನಯದ ಸಿನಿಮಾದ  ದೃಶ್ಯವನ್ನು ನೋಡಿ ದಂಗಾಗಿದ್ದ ಸೆನ್ಸಾರ್​ ಮಂಡಳಿ

ಕೇವಲ ಪ್ರೇಕ್ಷರು ಮಾತ್ರವಲ್ಲದೆ ಸೆನ್ಸಾರ್​ ಮಂಡಳಿ ಸಹ ಶಕ್ತಿ ಕಪೂರ್​ ಅವರು ಅಭಿನಯಿಸಿದ್ದ ಸಿನಿಮಾದ ಹಸಿಬಿಸಿ ದೃಶ್ಯವನ್ನು ನೋಡಿ ದಂಗಾಗಿದ್ದರಂತೆ. ಅದು ಸಹ ಸಾಕಷ್ಟು ದಿನಗಳವರೆಗೆ ಆ ಸಿನಿಮಾ ತೆರೆ ಕಾಣಲು ಅನುಮತಿಯೇ ನೀಡಿರಲಿಲ್ಲವಂತೆ. 'ಮೇರೆ ಆಘೋಶ್​ ಮೆ' ಸಿನಿಮಾದಲ್ಲಿ ಶಕ್ತಿ ಅವರ ಅಭಿನಯ ಕಂಡ ಸೆನ್ಸಾರ್​ ಮಂಡಳಿ ಸದಸ್ಯರು ಸಿನಿಮಾಗೆ ಎ ಪ್ರಮಾಣಪತ್ರ ನೀಡಲೂ ಹಿಂದೇಟು ಹಾಕಿದ್ದರಂತೆ. ಅಂದರೆ ಆ ಸಿನಿಮಾದಲ್ಲಿ ಶಕ್ತಿ ಅವರ ಅಭಿನಯ ಎಷ್ಟಿತ್ತು ಎಂದು ನಿವೇ ಊಹಿಸಿಕೊಳ್ಳಿ.
Loading...

ಶಕ್ತಿ ಕಪೂರ್​ ಹೆಸರು ಬರಲು ಕಾರಣ ಸುನಿಲ್​ ದತ್​

ಅಲ್ಲದೆ ಶಕ್ತಿ ಅವರ ನಿಜವಾದ ಹೆಸರು ಸುನಿಲ್​ ಸಿಕಂದ್​ಲಾಲ್ ಕಪೂರ್​. ಅವರಿಗೆ ಶಕ್ತಿ ಕಪೂರ್​ ಅಂದ ಮರುನಾಮಕರಣ ಮಾಡಿದ್ದು ನಟ ಸುನಿಲ್​ ದತ್​. ಸಂಜಯ್​ ದತ್​ ಅವರ ಮೊದಲ ಸಿನಿಮಾ 'ರಾಕಿ'ಗಾಗಿ ವಿಲನ್​ ಹುಡುಕಾಟ ನಡೆದಿದ್ದಾಗ ಶಕ್ತಿ ಸುನಿಲ್​ ದತ್​ ಅವರ ಕಣ್ಣಿಗೆ ಬಿದ್ದಿದ್ದರು. ಆಗ ಸುನಿಲ್​ ಸಿಕಂದರ್​ ಲಾಲ್​ ಹೆಸರಿನ ಬದಲಾಗಿ ಶಕ್ತಿ ಕಪೂರ್​ ಎಂದು ಹೆಸರು ಬಲಾಯಿಸಿದರು. ಅಂದು ಆ ಹೆಸರು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಆಗಿನಿಂದ ಇಲ್ಲಿಯವರೆಗೂ ಅವರು ಶಕ್ತಿ ಕಪೂರ್​ ಎಂದೇ ಖ್ಯಾತಿ ಪಡೆದಿದ್ದಾರೆ.

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ