ಎಲ್ಲಿ, ಏನು ಮಾಡುತ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ?

news18
Updated:August 10, 2018, 6:45 PM IST
ಎಲ್ಲಿ, ಏನು ಮಾಡುತ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ?
news18
Updated: August 10, 2018, 6:45 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಸ್ವೀಟಿ ರಾಧಿಕಾ ಕುಮಾರಸ್ವಾಮಿ ಎಲ್ಲೋದರೂ, ಏನು ಮಾಡುತ್ತಿದ್ದಾರೆ ಅಂತ ಚಿತ್ರರಸಿಕರು ತಲೆಕೆಡಿಸಿಕೊಳ್ಳುತ್ತಿರುವಾಗಲೇ, ಅವರ ಕುರಿತಾಗಿ ಬ್ರೇಕಿಂಗ್ ಸುದ್ದಿಯೊಂದು ಗಾಂಧಿನಗರದಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿದೆ. ಅದು ಏನಂತಿರಾ? ಇಲ್ಲಿದೆ ಈ ವರದಿ ಓದಿ.

ರಾಧಿಕಾ ಕುಮಾರಸ್ವಾಮಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡು ಭರ್ತಿ ಮೂರು ವರ್ಷಗಳೇ ಕಳೆದಿವೆ. 'ರುದ್ರ ತಾಂಡವ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ಹೆಜ್ಜೆ ಹಾಕಿದ್ದೇ ಕೊನೆ. ಆ ನಂತರ ಆ ಚಂದದ ಮೊಗವನ್ನ, ಮೋಹಕ ನಗುವನ್ನ ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳು ಅವಕಾಶ ಚಿತ್ರರಸಿಕರಿಗೆ ಸಿಕ್ಕಿಲ್ಲ.

ಈ ಮಧ್ಯೆ ಅವರು 'ಕಂಟ್ರ್ಯಾಕ್ಟ್' ಅನ್ನೋ ಸಿನಿಮಾ ಮಾಡುತ್ತಿದ್ದಾರೆ ಅಂತ ಸುದ್ದಿಯಾಯಿತು. ಆ ಸಿನಿಮಾ ಯಾವಾಗ ತೆರೆಕಾಣಲಿದೆ ಎಂದು ಯಾರಿಗೂ ಗೊತ್ತಿಲ್ಲ. ಇನ್ನು ರಮೇಶ್ ಅರವಿಂದ್ ಜೊತೆ 'ಭೈರಾದೇವಿ' ಅನ್ನೋ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಆ ಸಿನಿಮಾ ಕೂಡ ಸದ್ದು ಸುದ್ದಿ ಮಾಡುತ್ತಿಲ್ಲ. ಇಷ್ಟೇ ಅಲ್ಲದೆ ರವಿಮಾಮನ ಜೊತೆ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲೂ ಈ ರಾಧಿಕೆಯೇ ನಾಯಕಿ. ಆದರೆ ಈ ಯಾವ ಸಿನಿಮಾಗಳ ಬಗ್ಗೆ ಸದ್ಯಕ್ಕೇನು ಮಾಹಿತಿ ಇಲ್ಲದ ಕಾರಣ, ರಾಧಿಕಾ ಎಲ್ಲಿಗೆ ಹೋದರು ಹಾಗೂ ಏನು ಮಾಡುತ್ತಿದ್ದಾರೆ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು.

ಸದ್ಯ ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆ ಸುದ್ದಿಯೊಂದು ಹೊರಬಿದ್ದಿದೆ. ಈ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ರೆಕ್ಕೆ ಬಿಚ್ಕೊಂಡು ಹಾರಾಡುತ್ತಿದೆ.ಅಷ್ಟಕ್ಕೂ ಅದು ಏನಪ್ಪ ಸುದ್ದಿ ಅಂದರೆ ರಾಧಿಕಾ ಈಗ 'ದಮಯಂತಿ' ಎಂಬ ದೊಡ್ಡ ಪ್ರಾಜೆಕ್ಟ್ ಒಂದಕ್ಕೆ ಸಹಿ ಹಾಕಿದ್ದಾರಂತೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿರಲಿದ್ದು, 80ರ ದಶಕದ ಪರಿಸ್ಥಿತಿ  ಹಾಗೂ ಪ್ರಸ್ತುತ ಸ್ಥಿತಿಗಳ ಕುರಿತಾಗಿ  ಎರಡು ಆಯಾಮಗಳಲ್ಲಿ ಕಥೆ ಇರಲಿದೆಯಂತೆ.

ಈ ಚಿತ್ರಕ್ಕೆ ರಾಕ್ಷಸಿ ಖ್ಯಾತಿಯ ನವರಸನ್ ಆ್ಯಕ್ಷನ್ ಕಟ್ ಹೇಳಲಿದ್ದು, ತೆಲುಗಿನ ಭಾಗಮತಿ ಹಾಗೂ ಅರುಂಧತಿ ಮಾದರಿಯಲ್ಲಿ ಈ ಸಿನಿಮಾವನ್ನ ತೆರೆಮೇಲೆ ತರಲು ನಿರ್ದೇಶಕರು ಆಲೋಷಿಸುತ್ತಿದ್ದಾರಂತೆ.
Loading...

ಸದ್ಯ ಇದಿಷ್ಟು ಮಾಹಿತಿ ಮಾತ್ರ ಹೊರಬಿದ್ದಿದ್ದು, ಯಾವಾಗ ಮಹೂರ್ತ, ಯಾವಾಗ ಚಿತ್ರೀಕರಣ ಆರಂಭ, ರಾಧಿಕಾ ಲುಕ್ ಹೇಗಿರುತ್ತೆ ಅನ್ನೋದನ್ನೆಲ್ಲ ನಾವೇ ಮುಂದಿನ ದಿನಗಳಲ್ಲಿ ನಿಮಗೆ ನೀಡುತ್ತೇವೆ.

 

 

 

 
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...