• Home
  • »
  • News
  • »
  • entertainment
  • »
  • Alia Bhatt: ನಟಿ ಆಲಿಯಾ ಡೆಲಿವರಿ ಯಾವಾಗ ಆಗಬಹುದು ಗೊತ್ತೇ? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

Alia Bhatt: ನಟಿ ಆಲಿಯಾ ಡೆಲಿವರಿ ಯಾವಾಗ ಆಗಬಹುದು ಗೊತ್ತೇ? ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

ಆಲಿಯಾ ಭಟ್​

ಆಲಿಯಾ ಭಟ್​

ನಟಿ ಆಲಿಯಾ ಅವರು ನವೆಂಬರ್ ತಿಂಗಳಲ್ಲಿ ಅಥವಾ ಡಿಸೆಂಬರ್ ಮೊದಲನೇ ವಾರದಲ್ಲಿ ಮಗುವಿಗೆ ಜನ್ಮ ನೀಡಬಹುದೆಂದು ನಿರೀಕ್ಷಿಸಲಾಗಿದೆ. ಈಗಾಗಲೇ ನಟಿ ಆಲಿಯಾ ಅವರ ಗರ್ಭಧಾರಣೆಯು ಅನೇಕ ಸುದ್ದಿಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿದೆ ಅಂತ ಹೇಳಬಹುದು.

  • Share this:

ಈ ಚಿತ್ರೋದ್ಯಮದಲ್ಲಿನ ನೆಚ್ಚಿನ ನಟ ಮತ್ತು ನಟಿಗೆ ಮಗು ಆಗುತ್ತಿದೆ ಎಂದರೆ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೆ ಆ ದಂಪತಿಗಳಿಗಿಂತ ಒಂದು ಸ್ವಲ್ಪ ಅವರ ಅಭಿಮಾನಿಗಳಿಗೆ ಆ ಕುತೂಹಲ ಹೆಚ್ಚಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು. ನಟಿ ಆಲಿಯಾ ಭಟ್ (Alia Bhatt) ಅವರು ಗರ್ಭಿಣಿಯಾಗಿರುವ ಸುದ್ದಿ ಗೊತ್ತಾದ ಮೇಲಂತೂ ಅವರ ಅಭಿಮಾನಿಗಳು, ಅವರ ಬಗ್ಗೆ ಸುದ್ದಿಗಳು ಸ್ವಲ್ಪ ಹರಿದಾಡಿದರೂ ಸಾಕು ಅದನ್ನು ಓದದೆ ಮುಂದೆ ಹೋಗುತ್ತಿಲ್ಲ ಅಂತ ಹೇಳಬಹುದು. ನಟಿ ಆಲಿಯಾ ಭಟ್ ದಕ್ಷಿಣ ಮುಂಬೈನ ಎಚ್ ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ (HN Reliance Foundation Hospital ) ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿಯನ್ನು ನಾವು ಇತ್ತೀಚೆಗೆ ನೋಡಿದ್ದೆವು. ಕಾಕತಾಳೀಯವೆಂಬಂತೆ, ರಿಷಿ ಕಪೂರ್ (Rishi Kapoor) ಅವರನ್ನು ದಾಖಲಿಸಿದ್ದು ಮತ್ತು ಅವರು ಕೊನೆಯುಸಿರೆಳೆದಿದ್ದು ಸಹ ಇದೇ ಆಸ್ಪತ್ರೆಯಲ್ಲಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದು ಸಹ-ಘಟನೆಯಾಗಿರಬಹುದು ಅಥವಾ ಅದೇ ಆಸ್ಪತ್ರೆಯಲ್ಲಿ ತಮ್ಮ ಮಗುವಿಗೆ ಜನ್ಮ ನೀಡುವ ಉತ್ತಮ ಯೋಜಿತ ನಿರ್ಧಾರ ಸಹ ಆಗಿರಬಹುದು.


ಯಾವಾಗ ಆಗುತ್ತೆ ಗೊತ್ತೇ ನಟಿ ಆಲಿಯಾ ಡೆಲಿವರಿ!


ನಟಿ ಆಲಿಯಾ ಅವರು ನವೆಂಬರ್ ತಿಂಗಳಲ್ಲಿ ಅಥವಾ ಡಿಸೆಂಬರ್ ಮೊದಲನೇ ವಾರದಲ್ಲಿ ಮಗುವಿಗೆ ಜನ್ಮ ನೀಡಬಹುದೆಂದು ನಿರೀಕ್ಷಿಸಲಾಗಿದೆ. ಈಗಾಗಲೇ ನಟಿ ಆಲಿಯಾ ಅವರ ಗರ್ಭಧಾರಣೆಯು ಅನೇಕ ಸುದ್ದಿಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿದೆ ಅಂತ ಹೇಳಬಹುದು.




ಇದನ್ನೂ ಓದಿ: ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತು ಸಾಧನೆ ಕಥೆ! ಸಿಎಂ ಬೊಮ್ಮಾಯಿಗೆ ಪುನೀತ್​ ಅಭಿಮಾನಿಗಳಿಂದ ಮನವಿ


ಅವರ ಡೆಲಿವರಿ ದಿನಾಂಕ ಇನ್ನೂ ನಿಖರವಾಗಿ ತಿಳಿದಿಲ್ಲ, ಇದು ಬಹುಶಃ ನವೆಂಬರ್ 20 ರಿಂದ 30 ರ ಒಳಗೆ ಸಹ ಆಗಬಹುದು ಅಥವಾ ಡಿಸೆಂಬರ್ ಮೊದಲನೇ ವಾರಕ್ಕೂ ಸಹ ಇದು ಹೋಗುವ ಸಾಧ್ಯತೆಯಿದೆ ಎಂದು ಮೂಲವೊಂದು ತಿಳಿಸಿದೆ.


ಆಲಿಯಾ ಡೆಲಿವರಿ ಅವರ ಸಹೋದರಿ ಹುಟ್ಟುಹಬ್ಬದ ಸಮಯದಲ್ಲಿ ಆಗಬಹುದೇ?


ನವೆಂಬರ್ 28 ರಂದು ಆಲಿಯಾ ಅವರ ಸಹೋದರಿ ಶಾಹೀನ್ ಅವರ ಹುಟ್ಟುಹಬ್ಬವಿದೆಯಂತೆ. ಆ ಡೆಲಿವರಿ ದಿನಾಂಕದ ಹತ್ತಿರದ ಯಾವುದಾದರೂ ದಿನದಲ್ಲಿ ಆಲಿಯಾ ಅವರು ತಮ್ಮ ಮಗುವಿಗೆ ಜನ್ಮ ನೀಡಬಹುದು ಅಂತ ಹೇಳಲಾಗುತ್ತಿದೆ. ನವೆಂಬರ್ 28 ರಂದೇ ಆಲಿಯಾ ಅವರ ಮಗು ಸಹ ಹುಟ್ಟಿದರೆ ಅದೇ ದಿನ ಇಬ್ಬರ ಹುಟ್ಟುಹಬ್ಬಗಳನ್ನು ಒಟ್ಟಿಗೆ ಆಚರಿಸಬಹುದು ಎಂದು ಆಲಿಯಾ ಕುಟುಂಬದ ಲೆಕ್ಕಾಚಾರವಾಗಿದೆ.


ಈಗಾಗಲೇ ವರದಿಯೊಂದು ತಿಳಿಸಿರುವಂತೆ ಆಲಿಯಾ ತಮ್ಮ ಹೆರಿಗೆಗಾಗಿ ಮುಂಬೈನ ಎಚ್ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ತಮಗಾಗಿ ರೂಂ ಒಂದನ್ನು ಕಾಯ್ದಿರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ, ಪತಿ ಮತ್ತು ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ದಂಪತಿಗಳು ತಮ್ಮ ಮೊದಲ ಮಗುವಿನ ಆಗಮನಕ್ಕೆ ಎದುರು ನೋಡುತ್ತಿದ್ದಾರೆ ಎಂದು ಹೇಳಬಹುದು.


ಇದನ್ನೂ ಓದಿ: ಎಲ್ಲೆಲ್ಲೂ ಅಪ್ಪು ಆರಾಧನೆ, ಪುನೀತ್ ರಾಜ್‍ಕುಮಾರ್ ನೆನೆದ ಬಿಗ್ ಬಾಸ್ ಮಂದಿ!


ಜೂನ್ ತಿಂಗಳಲ್ಲಿಯೇ ಗರ್ಭಧಾರಣೆ ಘೋಷಿಸಿದ ಸ್ಟಾರ್ ದಂಪತಿಗಳು


ನಟಿ ಆಲಿಯಾ ಭಟ್ ಜೂನ್ 27, 2022 ರಂದು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಗರ್ಭಧಾರಣೆಯನ್ನು ಘೋಷಿಸಿದ್ದರು. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಅವರು ಶೀಘ್ರದಲ್ಲಿಯೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದರು.


ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ನಟಿ ಆಲಿಯಾ ಅವರು ರಣಬೀರ್ ಅವರೊಂದಿಗಿನ ಹೃದಯಸ್ಪರ್ಶಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಆಲಿಯಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದು ಮತ್ತು ರಣಬೀರ್ ಅವರು ಅಲ್ಲೇ ಪಕ್ಕದಲ್ಲಿ ಕುಳಿತಿರುವುದನ್ನು ನಾವು ನೋಡಬಹುದು.


ಮೊದಲ ಮಗುವು ಸಾಮಾನ್ಯವಾಗಿ ನಿಗದಿತ ದಿನಾಂಕಕ್ಕಿಂತ 10-12 ದಿನಗಳ ಮೊದಲು ಜನಿಸುತ್ತದೆ. ಆದರೆ ಶಾಹೀನ್ ಮಾತ್ರ ಆಕೆಯ ಹುಟ್ಟುಹಬ್ಬದ ದಿನವೇ ಆಲಿಯಾ ಮಗುವಿಗೆ ಜನ್ಮ ನೀಡಬೇಕೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿರಬಹುದು ಎಂದು ಹೇಳಬಹುದು.

First published: