ಬಾಲಿವುಡ್ ನಟರಾದ ಹೃತಿಕ್ ರೋಷನ್ (Hrithik Roshan) ಮತ್ತು ಸೈಫ್ ಅಲಿ ಖಾನ್ (Saif Ali Khan) ಅವರ ಬಹು ನಿರೀಕ್ಷಿತ ಚಿತ್ರ ‘ವಿಕ್ರಮ್ ವೇದಾ’ ಚಿತ್ರವನ್ನು (Vikram Vedha Movie )ನೋಡಲು ಇವರಿಬ್ಬರ ಅಭಿಮಾನಿಗಳು ತುಂಬಾನೇ ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಚಿತ್ರದ ತಾರಾಬಳಗ ಮತ್ತು ತಯಾರಕರು ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೈಲರ್ (Trailer) ಅನ್ನು ಬಿಡುಗಡೆ ಮಾಡಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಈ ಟ್ರೈಲರ್ ಬಿಡುಗಡೆಯ ಸಮಾರಂಭದಲ್ಲಿ ಚಿತ್ರತಂಡವು ಭಾಗವಹಿಸಿತ್ತು. ಈ ಚಿತ್ರದಲ್ಲಿ ನಟಿಸಿರುವ ಇಬ್ಬರು ನಟರು ಬಾಲಿವುಡ್ ನಲ್ಲಿ (Bollywood) ತುಂಬಾನೇ ಹೆಸರು ಮಾಡಿದವರು ಆಗಿದ್ದು, ಈ ಚಿತ್ರದಲ್ಲಿ ನಟಿಸಿದ ನಟಿಗೆ (Actress) ಈ ಚಿತ್ರವು ತುಂಬಾನೇ ವಿಶೇಷ. ಏಕೆಂದರೆ ಈ ನಟಿಗೆ ಇದು ಆಕೆಯ ಚೊಚ್ಚಲ ಚಿತ್ರವಾಗಿದೆ.
‘ವಿಕ್ರಮ್ ವೇದಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ ಯೋಗಿತಾ ಬಿಹಾನಿ
ಹೌದು.. ನಟಿ ಯೋಗಿತಾ ಬಿಹಾನಿ ಅವರು ಈ ತಿಂಗಳು ‘ವಿಕ್ರಮ್ ವೇದಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ನ ವಿಶೇಷ ಪ್ರಥಮ ಪ್ರದರ್ಶನದಲ್ಲಿ ಚೊಚ್ಚಲ ತಾರೆ ತನ್ನ ಸಹನಟ ಸೈಫ್ ಅಲಿ ಖಾನ್ ಅವರಿಂದ ತುಂಬಾನೇ ಪ್ರಶಂಸೆಗೆ ಪಾತ್ರರಾದರು.
ಟ್ರೈಲರ್ ಪ್ರೀಮಿಯರ್ ಶೋ ನಲ್ಲಿ ಪಿಂಕ್ ಬ್ಲೇಜರ್ ಹಾಕಿಕೊಂಡು ಮನಮೋಹಕವಾಗಿ ಕಾಣಿಸುತ್ತಿದ್ದ ಯೋಗಿತಾ ಬಿಹಾನಿ ಅವರು ಪರದೆಯ ಮೇಲೆ ತಮ್ಮ ವಿಭಿನ್ನವಾದ ಲುಕ್ ನೊಂದಿಗೆ ಎಲ್ಲರ ಹೃದಯ ಮತ್ತು ಮನಸ್ಸಿನಲ್ಲಿ ಗಮನಾರ್ಹ ಛಾಪು ಮೂಡಿಸಿದ್ದಾರೆ.
ನಟಿ ಯೋಗಿತಾ ಬಗ್ಗೆ ಸೈಫ್ ಅಲಿ ಖಾನ್ ಹೇಳಿದ್ದು ಹೀಗೆ
ಇದೇ ಸಂದರ್ಭದಲ್ಲಿ ಯೋಗಿತಾ ಅವರನ್ನು ಸಹನಟ ಸೈಫ್ ಅಲಿ ಖಾನ್ ಅವರನ್ನು ತುಂಬಾನೇ ಶ್ಲಾಘಿಸಿದರು. ಈ ಬಗ್ಗೆ ಮಾತನಾಡಿದ ಸೈಫ್ ಅಲಿ ಖಾನ್ "ನಾನು ಈ ಯುವತಿಯನ್ನು ಚಲನಚಿತ್ರದಲ್ಲಿ ನೋಡಿದಾಗ, ಆ ಎಲ್ಲಾ ಮುಖಗಳ ಮತ್ತು ಹಿಂಸಾಚಾರದಲ್ಲಿ ಶುದ್ಧ ಗಾಳಿಯಲ್ಲಿ ಬಂದ ಉಸಿರಿನಂತೆ ಎಂದು ನಾನು ಈ ಯುವತಿಗೆ ಹೇಳಿದೆ" ಎಂದು ಹೇಳಿದರು.
ಇದನ್ನೂ ಓದಿ: Yashoda Teaser: ಯಶೋದಾ ಚಿತ್ರದ ಟೀಸರ್ ಔಟ್; ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಸಮಂತಾ
"ಚೆನ್ನಾಗಿದೆ, ತುಂಬಾ ಚೆನ್ನಾಗಿದೆ" ಎಂದು ಸಹನಟಿ ಯೋಗಿತಾ ಅವರನ್ನು ಚಿತ್ರದ ರೋಮಾಂಚಕಾರಿ ಅಂಶಕ್ಕಾಗಿ ನಟ ಸೈಫ್ ಅವರು ಶ್ಲಾಘಿಸಿದರು. ಯೋಗಿತಾ ಬಿಹಾನಿ ತನ್ನ ಕಠಿಣ ಪರಿಶ್ರಮದಿಂದ ಹಿಂದಿ ಚಿತ್ರೋದ್ಯಮಕ್ಕೆ ತನ್ನದೇ ಆದ ದಾರಿಯನ್ನು ರೂಪಿಸಿಕೊಂಡಿದ್ದಾರೆ, ಯೋಗಿತಾ ಬಿಹಾನಿ ತಮ್ಮ ಚೊಚ್ಚಲ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.
ವಿಕ್ರಮ್ ವೇದಾ ಸಿನೆಮಾ ಬಿಡುಗಡೆ
ಪ್ರಸ್ತುತ, ‘ವಿಕ್ರಮ್ ವೇದಾ’ ಚಿತ್ರವು ಬೆಳ್ಳಿತೆರೆಗೆ ಇದೇ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಎಂದರೆ 30ನೇ ತಾರೀಖಿನಂದು ಬಿಡುಗಡೆಯಾಗಲಿದೆ. ನಟರಾದ ಹೃತಿಕ್ ರೋಷನ್, ಸೈಫ್ ಅಲಿ ಖಾನ್, ನಟಿ ರಾಧಿಕಾ ಆಪ್ಟೆ ಮತ್ತು ರೋಹಿತ್ ಸರಾಫ್ ಅವರೊಂದಿಗೆ ಯೋಗಿತಾ ಬಿಹಾನಿ ಅವರನ್ನು ಸಹ ಈ ಚಿತ್ರದಲ್ಲಿ ನಾವು ನೋಡಬಹುದು. ಬುಧವಾರ, ಯೋಗಿತಾ ಬಿಹಾನಿ ಮತ್ತು ಸೈಫ್ ಅಲಿ ಖಾನ್, ವಿಕ್ರಮ್ ವೇದಾ ತಯಾರಕರು ಮತ್ತು ಪಾತ್ರವರ್ಗದೊಂದಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Vidyuth Jamwal:ಬಾಲಿವುಡ್ ನ ಪವರ್ ಫುಲ್ ಆಕ್ಷನ್ ಹೀರೋ ಮಾಡೋ ಸಾಹಸಗಳೆಲ್ಲ ರಿಯಲ್ ರಿಯಲ್ !
ಸೆಲೆಬ್ರಿಟಿ ಸ್ಟೈಲಿಸ್ಟ್ ಗರಿಮಾ ಗಾರ್ಗ್ ಅವರು ಯೋಗಿತಾ ಅವರಿಗಾಗಿ ಮೆಶ್ ಡ್ರೆಸ್ ಮತ್ತು ಬ್ಲೇಜರ್ ಅನ್ನು ವಿನ್ಯಾಸಗೊಳಿಸಿದ್ದರು. ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಟಿ ತಮ್ಮ ಪ್ರಮೋಷನಲ್ ಲುಕ್ ಫೋಟೋಗಳನ್ನು ಹಂಚಿಕೊಂಡಿದ್ದರು. ಯೋಗಿತಾ ಅವರ ಪಿಂಕ್ ಬ್ಲೇಜರ್ ಫೋಟೋಗೆ 3,000ಕ್ಕೂ ಹೆಚ್ಚು ಲೈಕ್ ಗಳು ಲಭಿಸಿವೆ. ‘ವಿಕ್ರಮ್ ವೇದಾ’ ಚಿತ್ರವು ಅದೇ ಹೆಸರಿನ 2017 ರ ತಮಿಳು ಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿದೆ. ಇದು ಆಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಪುಷ್ಕರ್ ಮತ್ತು ಗಾಯತ್ರಿ ಅವರು ಬರೆದು ನಿರ್ದೇಶಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ