Celebrity Marriage: ರಣವೀರ್ ಸಿಂಗ್ ದೀಪಿಕಾ, ವಿಕ್ಕಿ ಕತ್ರೀನಾ ಮದುವೆ ಬಗ್ಗೆ ಜನ ತಮಾಷೆ ಮಾಡ್ತಾರಂತೆ!

ದೀಪಿಕಾ ಮತ್ತು ಕತ್ರಿನಾ ಅವರ ಮದುವೆ ಅದೇ ಚಿತ್ರೋದ್ಯಮದಲ್ಲಿ ಜನಪ್ರಿಯ ನಟರಾದ ರಣವೀರ್ ಮತ್ತು ವಿಕ್ಕಿ ಅವರ ಜೊತೆ ಆಗಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ. ಆದರೆ ಈ ಮದುವೆಯಾದ ನಂತರ ವಿಕ್ಕಿ ಮತ್ತು ರಣವೀರ್ ಅವರನ್ನ ಜನರು ಏನಂತ ಅಣುಕಿಸುತ್ತಾರೆ ಗೊತ್ತೇ? ಬನ್ನಿ ಇದನ್ನು ರಣವೀರ್ ಸಿಂಗ್ ಅವರ ಬಾಯಿಯಿಂದಲೇ ಕೇಳೋಣ.

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

  • Share this:
ಬಾಲಿವುಡ್ ನ ಸುಂದರ ನಟಿಮಣಿಯರಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ಕತ್ರಿನಾ ಕೈಫ್ (Katrina Kaif) ಅವರ ಮದುವೆ ರಣವೀರ್ ಸಿಂಗ್ (Ranveer Singh) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರ ಜೊತೆ ಆಗಿದ್ದು ನಮಗೆಲ್ಲಾ ಗೊತ್ತಿರುವ ವಿಚಾರವೇ. ಆದರೆ ಈ ಮದುವೆಯಾದ ನಂತರ ವಿಕ್ಕಿ ಮತ್ತು ರಣವೀರ್ ಅವರನ್ನ ಜನರು ಏನಂತ ಅಣುಕಿಸುತ್ತಾರೆ ಗೊತ್ತೇ? ಬನ್ನಿ ಇದನ್ನು ರಣವೀರ್ ಸಿಂಗ್ ಅವರ ಬಾಯಿಯಿಂದಲೇ ಕೇಳೋಣ. ಬಾಲಿವುಡ್ ನಟ ರಣವೀರ್ ಸಿಂಗ್ ಫಿಲ್ಮ್ ಫೇರ್ ಅವಾರ್ಡ್ಸ್ ನ (Film fare Awards) ಗಾಲಾ ಸಂಜೆಯನ್ನು ಇನ್ನಷ್ಟು ಗ್ಲಾಮರಸ್ ಆಗುವಂತೆ ಮಾಡಿದರು.

ರಣವೀರ್ ಸಿಂಗ್ ತನ್ನ ‘83’ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರೇ, ಇನ್ನೊಬ್ಬ ನಟ ವಿಕ್ಕಿ ಕೌಶಲ್ ಅವರು ತಮ್ಮ ‘ಸರ್ದಾರ್ ಉಧಮ್’ ಚಿತ್ರಕ್ಕಾಗಿ ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿಯನ್ನು ಗೆದ್ದರು. ಆನಂತರ ಈ ಇಬ್ಬರು ನಟರು ಅಲ್ಲಿ ನೆರೆದಿರುವಂತಹ ಪ್ರೇಕ್ಷಕರನ್ನು ರಂಜಿಸಲು ವೇದಿಕೆಗೆ ಬಂದರು.

ಈ ನಟರು ಮದುವೆಯಾಗಿದ್ದಕ್ಕೆ ಏನಂದ್ರು ಜನ
ಇಬ್ಬರು ನಟರು ಆ ದೊಡ್ಡ ವೇದಿಕೆಯನ್ನು ಹತ್ತಿದಾಗ ರಣವೀರ್ ಅವರು ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರನ್ನು ವಿಕ್ಕಿ ಕೌಶಲ್ ಅವರು ಮದುವೆಯಾಗಿದ್ದಕ್ಕಾಗಿ ತಮ್ಮನ್ನು ಜನರು ಹೇಗೆ ಅಣಕಿಸುತ್ತಾರೆ ಎಂದು ಎಲ್ಲರ ಮುಂದೆಯೇ ಹೇಳಿದರು.

ಇದನ್ನೂ ಓದಿ: Vijay Deverakonda: ಜುಬಿಲಿ ಹಿಲ್ಸ್​​ನಲ್ಲಿ ಲಕ್ಷುರಿ ಮನೆ, ಬಿಎಂಡಬ್ಲ್ಯೂ ಕಾರ್! ಹೀಗಿದೆ ವಿಜಯ್ ಹೈಫೈ ಲೈಫ್

ನಾವಿಬ್ಬರೂ ಎತ್ತರವಾಗಿದ್ದೇವೆ, ಸುಂದರರಾಗಿದ್ದೇವೆ

ಕರಣ್ ಜೋಹರ್ ಅವರ ಮುಂಬರುವ ಚಿತ್ರವಾದ ‘ತಖ್ತ್’ ನಲ್ಲಿ ವಿಕ್ಕಿಯ ಸಹೋದರನ ಪಾತ್ರವನ್ನು ರಣವೀರ್ ಅವರು ನಿರ್ವಹಿಸಲಿದ್ದಾರೆ. ಅವರು ಹಾಗೆಯೇ ಮುಂದುವರಿಸಿ "ಅಷ್ಟಕ್ಕೂ, ನಾವಿಬ್ಬರೂ ಎತ್ತರವಾಗಿದ್ದೇವೆ ಮತ್ತು ನೋಡಲು ತುಂಬಾನೇ ಸುಂದರರಾಗಿದ್ದೇವೆ.

ನಾವಿಬ್ಬರೂ ನಮ್ಮದೇ ಆದ ಜೀವನ ಶೈಲಿಯಲ್ಲಿ ಬದುಕುತ್ತಿದ್ದೇವೆ. ಆದರೆ ಜನರು ಮಾತ್ರ ನಮ್ಮಿಬ್ಬರನ್ನು ನೋಡಿ 'ಹೇಯ್ ಅವರಿಬ್ಬರೂ ನಮ್ಮ ಲೀಗ್ ನಿಂದ ಹೊರಗುಳಿದಿದ್ದಾರೆ ಎಂದು ಹೇಳುತ್ತಾರೆ" ಎಂದು ಹೇಳಿದರು.

ಪತ್ನಿಯಿಂದಲೇ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡ ರಣವೀರ್
ನಟ 12 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ ನಂತರ ತನಗಾಗಿ ಒಂದು ಸ್ವಂತ ಮನೆಯನ್ನು ಖರೀದಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ಸಹ ರಣವೀರ್ ಇಲ್ಲಿ ಹಂಚಿಕೊಂಡರು. ರಣವೀರ್​​ಗೆ ಅವರ ಪತ್ನಿ ದೀಪಿಕಾ ಪಡುಕೋಣೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿದರು.

ಬಹು ಬೇಡಿಕೆಯ ಬಾಲಿವುಡ್ ದಂಪತಿಗಳು 
2018 ರಲ್ಲಿ ನಟ ರಣವೀರ್ ಮತ್ತು ನಟಿ ದೀಪಿಕಾ ಇಬ್ಬರು ಇಟಾಲಿಯನ್ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಬೆರಗುಗೊಳಿಸುವ ಲೇಕ್ ಕೋಮೊದಲ್ಲಿ ನಡೆದ ಆತ್ಮೀಯ ಮದುವೆ ಸಮಾರಂಭದಲ್ಲಿ ವಿವಾಹವಾದರು. ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 2021 ರಲ್ಲಿ ರಾಜಸ್ಥಾನದ ಸವಾಯ್ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾದರು. ಈ ಇಬ್ಬರು ಜೋಡಿಗಳು ಹೆಚ್ಚು ಬೇಡಿಕೆಯ ಬಾಲಿವುಡ್ ದಂಪತಿಗಳಲ್ಲಿ ಒಂದಾಗಿದ್ದಾರೆ.

ಇದನ್ನೂ ಓದಿ: Disha Patani - Tiger Shroff: ಬ್ರೇಕಪ್ ಆದ್ಮೇಲೂ ದಿಶಾ, ಟೈಗರ್ ಶ್ರಾಫ್ ಡೇಟಿಂಗ್ ಮಾಡ್ತಿದ್ದಾರಾ? ಟೈಗರ್ ಖುದ್ದು ಈ ಬಗ್ಗೆ ಮಾತಾಡಿದ್ದಾರೆ

ಕತ್ರಿನಾ ಬಗ್ಗೆ ವಿಕ್ಕಿ ಏನಂದ್ರು ನೋಡಿ 
ಈ ಹಿಂದೆ, ವಿಕ್ಕಿ ಅವರು ಕತ್ರಿನಾ ಅವರನ್ನು ಹೆಂಡತಿಯಾಗಿ ಪಡೆದಿರುವುದು ತಮ್ಮ ಜೀವನದಲ್ಲಿ ಒಂದು ಮಹತ್ವದ ಪ್ರಭಾವ ಎಂದು ಕರೆದಿದ್ದರು. ಅವರು ಹಲೋ ನಿಯತಕಾಲಿಕದೊಂದಿಗೆ ಮಾತನಾಡುತ್ತಾ "ಕತ್ರಿನಾ ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ತುಂಬಾನೇ ಪ್ರಭಾವ ಬೀರಿದ್ದಾರೆ ಎಂದರು.

ಅವಳನ್ನು ನಾನು ಜೀವನ ಸಂಗಾತಿಯಾಗಿ ಪಡೆಯಲು ತುಂಬಾನೇ ಅದೃಷ್ಟ ಮಾಡಿದ್ದೇನೆ. ಏಕೆಂದರೆ ಅವಳು ಅತ್ಯಂತ ಬುದ್ಧಿವಂತೆ ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದಾಳೆ" ಎಂದು ಹೇಳಿದರು.
Published by:Ashwini Prabhu
First published: