ಸಾಮಾನ್ಯವಾಗಿ ಬಾಲಿವುಡ್ ನ ಕೆಲವು ನಟ-ನಟಿಯರು, ತಮ್ಮನ್ನು ಹಿಂಬಾಲಿಸಿಕೊಂಡು ಫೋಟೋ ತೆಗೆಯುವ ಛಾಯಾಗ್ರಾಹಕರ ಮೇಲೆ ಮತ್ತು ಅವರಿಗಾಗಿ ಕಾದು ಕುಳಿತ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಳ್ಳುವುದನ್ನು ಮತ್ತು ಅವರ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಹೋಗುವುದನ್ನು ನಾವೆಲ್ಲಾ ಅನೇಕ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ (Viral Video) ನೋಡಿರುತ್ತೇವೆ. ಆದರೆ ಅದರಂತೆಯೇ ಇನ್ನೂ ಕೆಲವು ನಟ-ನಟಿಯರು ಈ ಛಾಯಾಗ್ರಾಹಕರನ್ನು ಮತ್ತು ಅಭಿಮಾನಿಗಳನ್ನು (Fans) ಕಂಡರೆ ಸಾಕು ಅವರ ಬಳಿಗೆ ಬಂದು ಕೈ ಬೀಸುತ್ತಾ ಅವರನ್ನು ಚೆನ್ನಾಗಿ ಮಾತನಾಡಿಸಿ, ಫೋಟೋಗೆ ಪೋಸ್ ಸಹ ನೀಡಿ ಹೋಗುತ್ತಾರೆ. ಇಂತಹ ನಟರ ಸಾಲಿನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಸಹ ಒಬ್ಬರು.
ನ್ಯೂಯಾರ್ಕ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ರಣವೀರ್
ನಟ ರಣವೀರ್ ಸಿಂಗ್ ಇತ್ತೀಚೆಗೆ ನ್ಯೂಯಾರ್ಕ್ ನಗರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಗ್ರ್ಯಾಂಡ್ ಸ್ಟೋರ್ ಪುನರಾರಂಭ ಕಾರ್ಯಕ್ರಮಕ್ಕಾಗಿ ರೆಡ್ ಕಾರ್ಪೆಟ್ ನಲ್ಲಿ ನಡೆದುಕೊಂಡು ಹೋದ ಇತರ 50 ಸೆಲೆಬ್ರಿಟಿಗಳಲ್ಲಿ ರಣವೀರ್ ಸಿಂಗ್ ಏಕೈಕ ಬಾಲಿವುಡ್ ನಟನಾಗಿದ್ದರು ಅನ್ನೋದು ವಿಶೇಷವಾದ ಸಂಗತಿ.
ನಟ ರಣವೀರ್ ಅವರಲ್ಲದೆ, ಈ ಕಾರ್ಯಕ್ರಮದಲ್ಲಿ ಫ್ಲಾರೆನ್ಸ್ ಪಗ್, ಬ್ಲೇಕ್ ಲೈವ್ಲಿ, ಮೈಕೆಲ್ ಬಿ ಜೋರ್ಡಾನ್, ಕೇಟಿ ಪೆರ್ರಿ, ಗೇಬ್ರಿಯೆಲ್ ಯೂನಿಯನ್ ಮತ್ತು ಬಿಟಿಎಸ್ ತಾರೆ ಜಿಮಿನ್, ಥಾಯ್ ನಟ ಮೆಟಾವಿನ್ ಅಕಾ ವಿನ್ ಸೇರಿದಂತೆ ಇನ್ನೂ ಅನೇಕ ಹಾಲಿವುಡ್ ತಾರೆಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಶೀಘ್ರದಲ್ಲೇ ಶಾಂತಂ ಪಾಪಂ ಕತೆ, ಹೊಸ ಸೀಸನ್ ಯಾವಾಗಿನಿಂದ?
ಈಗಂತೂ ಈ ಕಾರ್ಯಕ್ರಮದಲ್ಲಿ ನಟ ರಣವೀರ್ ಕಾಣಿಸಿಕೊಂಡ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋಗಳಿಗೆ ಮತ್ತು ವಿಡಿಯೋಗಳಿಗೆ ಕಾಮೆಂಟ್ ಮತ್ತು ಕೆಂಪು ಹೃದಯದ ಎಮೋಜಿಗಳನ್ನು ಕಾಮೆಂಟ್ ನಲ್ಲಿ ಹಾಕುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ಈ ಕಾರ್ಯಕ್ರಮದಲ್ಲಿ ಸೆರೆ ಹಿಡಿದ ಒಂದು ವಿಡಿಯೋದಲ್ಲಿ ನಟ ತನ್ನ ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ಮತ್ತು ಫ್ಲೈಯಿಂಗ್ ಕಿಸ್ ಗಳನ್ನು ಸಹ ನೀಡುತ್ತಿರುವುದನ್ನು ನಾವು ನೋಡಬಹುದು. ಅಭಿಮಾನಿಗಳು ಸಹ ನಟ ರಣವೀರ್ ಅವರನ್ನು ನೋಡಿ ತುಂಬಾನೇ ಖುಷಿಯಿಂದ ರಣವೀರ್, ರಣವೀರ್ ಅಂತ ಜೋರಾಗಿ ಕರೆಯಲು ಶುರು ಮಾಡಿದರು.
Ranveer Singh arrived at the Tiffany & Co the land mark opening 💙 #TiffanyAndCo pic.twitter.com/JDRHnTezdu
— Ranveer Singh TBT (@Ranveertbt) April 27, 2023
ಅಲ್ಲಿ ನೆರೆದಿರುವ ಅಭಿಮಾನಿಗಳ ಗುಂಪಿನಿಂದ ನಟ ರಣವೀರ್ ಅವರ ಅಭಿಮಾನಿಯೊಬ್ಬರು "ರಣವೀರ್ ಐ ಲವ್ ಯು. ದೀಪಿಕಾ ಹೇಗಿದ್ದಾರೆ ಅಂತ ಕೇಳಿಯೇ ಬಿಟ್ಟರು. ಅದಕ್ಕೆ ನಟ ರಣವೀರ್ ಕಿಂಚಿತ್ತೂ ಯೋಚನೆ ಮಾಡದೆ ಮತ್ತು ಕೂಲ್ ಆಗಿ “ಆಕೆ ಚೆನ್ನಾಗಿದ್ದಾಳೆ” ಅಂತ ಉತ್ತರಿಸಿದರು.
ತೀಕ್ಷ್ಣವಾದ ಬಿಳಿ ಸೂಟ್ ಧರಿಸಿದ್ದ ಅವರು ಎಂದಿನಂತೆ ಆಕರ್ಷಕವಾಗಿ ಕಾಣುತ್ತಿದ್ದರು. ನಟ ತನ್ನ ಬಿಳಿ ಸೂಟ್ ನಲ್ಲಿ ಯಾವುದೇ ಅಂಗಿಯನ್ನು ಹಾಕಿರಲಿಲ್ಲ. ದೊಡ್ಡ ವಜ್ರದ ಬ್ರೂಚ್ ಗಳು, ಬ್ರೇಸ್ಲೆಟ್ ಮತ್ತು ಬೆಳ್ಳಿಯ ಉಂಗುರಗಳನ್ನು ಹಾಕಿಕೊಂಡಿದ್ದ ರಣವೀರ್ ದಿಟ್ಟೋ ಹಾಲಿವುಡ್ ಹೀರೋ ತರಹ ಕಾಣಿಸುತ್ತಿದ್ದರು.
ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ಇನ್ನೂ ಕೆಲವು ವಿಡಿಯೋಗಳಲ್ಲಿ ನ್ಯೂಯಾರ್ಕ್ ನ ಅಂಗಡಿಯ ಹೊರಗೆ ಸೆಲೆಬ್ರಿಟಿಗಳಿಂದ ಜನಸಮೂಹವನ್ನು ಸುರಕ್ಷಿತವಾಗಿ ದೂರವಿರಿಸಲು ಬ್ಯಾರಿಕೇಡ್ಗಳನ್ನು ಹಾಕಿದ್ದರೂ ಸಹ, ನಟ ರಣವೀರ್ ಅವರತ್ತ ಕೈ ಬೀಸುತ್ತಾ ಅವರಿಗೆ ಫ್ಲೈಯಿಂಗ್ ಕಿಸ್ ಗಳನ್ನು ಕೊಡುತ್ತಾ ತನ್ನ ಅಭಿಮಾನಿಗಳ ತುಂಬಾ ಹತ್ತಿರಕ್ಕೆ ಬಂದರು. ಒಳಗೆ ಪ್ರವೇಶಿಸಿದ ನಂತರ, ರಣವೀರ್ ಛಾಯಾಗ್ರಾಹಕರ ಫೋಟೋಗೆ ಸಂತೋಷದಿಂದ ಪೋಸ್ ನೀಡಿದ್ದಾರೆ.
ನಟ ರಣವೀರ್ ಅವರ ಮುಂದಿನ ಚಿತ್ರ ಯಾವುದು ಗೊತ್ತೇ?
ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ವರುಣ್ ಶರ್ಮಾ ಮತ್ತು ಪೂಜಾ ಹೆಗ್ಡೆ ಅವರೊಂದಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಹಣವನ್ನು ಸಂಪಾದಿಸಲಿಲ್ಲ. ಅವರು ಪ್ರಸ್ತುತ ಆಲಿಯಾ ಭಟ್ ಅವರೊಂದಿಗೆ ತಮ್ಮ ಮುಂಬರುವ ಚಿತ್ರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಈ ಚಿತ್ರ ಜುಲೈ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ