Marvel ಸೂಪರ್ ಸ್ಟಾರ್ ರಿಚರ್ಡ್ ಮ್ಯಾಡೆನ್ ನಟಿ ಪ್ರಿಯಾಂಕಾ ಬಗ್ಗೆ ಏನು ಹೇಳಿದ್ದಾರೆ ಗೊತ್ತೇ?

Priyanaka Chopra: ನಟಿ ಪ್ರಿಯಾಂಕಾ ಈಗ ‘ಮ್ಯಾಟ್ರಿಕ್ಸ್’ (Matrix) ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ‘ಸಿಟಾಡೆಲ್’ (Citadel) ಎಂಬ ಗೂಢಚಾರ ಕಥೆಯಿರುವ ಟಿವಿ ಸೀರಿಸ್‌ನಲ್ಲಿಯೂ ಸಹ ಇವರು ನಟಿಸಲಿದ್ದಾರೆ. ಇವರ ಬಗ್ಗೆ ಹಾಲಿವುಡ್ ನಾಯಕ ನಟ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

 ಪ್ರಿಯಾಂಕಾ ಚೋಪ್ರಾ / Priyanaka Chopra

ಪ್ರಿಯಾಂಕಾ ಚೋಪ್ರಾ / Priyanaka Chopra

  • Share this:
    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanaka Chopra) ತಮ್ಮ ನಟನೆಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ ತುಂಬಾ ಕಡಿಮೆ ಬಾಲಿವುಡ್ (Bollywood) ನಟಿಯರು ಹಾಲಿವುಡ್ (Hollywood) ಸಿನೆಮಾಗಳಲ್ಲಿ ನಟಿಸಿದ್ದು ಮತ್ತು ಹಾಲಿವುಡ್ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಎಂದು ಹೇಳಬಹುದು. ಆದರೆ ನಟಿ ಪ್ರಿಯಾಂಕಾ ಮಾತ್ರ ಹಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಲ್ಲದೆ ಅವರಿಂದ ಸೈ ಎನಿಸಿಕೊಂಡಿದ್ದಾರೆ.ಎಷ್ಟೋ ನಟಿಯರು ಬಾಲಿವುಡ್‌ನಲ್ಲಿ ತುಂಬಾ ಯಶಸ್ಸು ಕಂಡರೂ ಹಾಲಿವುಡ್‌ನಲ್ಲಿ ಚಿತ್ರಗಳನ್ನು ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ನಟಿ ಪ್ರಿಯಾಂಕಾ ವಿಷಯವೇ ಬೇರೆ, ಬಾಲಿವುಡ್ ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದಲ್ಲದೇ, ಹಾಲಿವುಡ್‌ನಲ್ಲಿಯೂ ಸಹ ‘ಕ್ವಾಂಟಿಕೋ’ (Quantico ) ದ ಮೂಲಕ ಪದಾರ್ಪಣೆ ಮಾಡಿ ನಂತರ ‘ಬೇವಾಚ್’ (Baywatch) ನಂತಹ ಚಲನ ಚಿತ್ರಗಳಲ್ಲಿ ನಟಿಸಿ ಅಲ್ಲಿನವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಪ್ರಿಯಾಂಕಾ ಈಗ ‘ಮ್ಯಾಟ್ರಿಕ್ಸ್’ (Matrix) ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ‘ಸಿಟಾಡೆಲ್’ (Citadel) ಎಂಬ ಗೂಢಚಾರ ಕಥೆಯಿರುವ ಟಿವಿ ಸೀರಿಸ್‌ನಲ್ಲಿಯೂ ಸಹ ಇವರು ನಟಿಸಲಿದ್ದಾರೆ. ಇವರ ಬಗ್ಗೆ ಹಾಲಿವುಡ್ ನಾಯಕ ನಟ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

    “ಈಗ ಪ್ರಿಯಾಂಕಾ ಹೋಗುತ್ತಿರುವ ಯಶಸ್ಸಿನ ವೇಗ ನೋಡುತ್ತಿದ್ದರೆ, ‘ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್’ ನಲ್ಲಿ ಮೊದಲ ಭಾರತೀಯ ಸೂಪರ್ ಹೀರೋ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ” ಎಂದು ಇತ್ತೀಚೆಗೆ ಬಿಡುಗಡೆಯಾದ ‘ಎಟರ್ನಲ್ಸ್’ ಚಲನಚಿತ್ರದಲ್ಲಿ ನಟಿಸಿದ ಮಾರ್ವೆಲ್ ತಾರೆಯು ಹೇಳಿದ್ದಾರೆ. ಈ ನಟ ಬೇರೆ ಯಾರು ಅಲ್ಲ, ಅವರೇ ‘ಗೇಮ್ ಆಫ್ ಥ್ರೋನ್ಸ್’ ನಲ್ಲಿ ರಾಬ್ ಸ್ಟಾರ್ಕ್ ಪಾತ್ರ ನಿಭಾಯಿಸಿದ ರಿಚರ್ಡ್ ಮ್ಯಾಡೆನ್ (Richard Madden).



    Read Also: ಕರಗುತ್ತಿಲ್ಲ APPU ಅಗಲಿಯ ನೋವು; ಮನೆಗೆ ಬಂದ ನಟ Ram Charan ಕೈ ಹಿಡಿದು ಕಣ್ಣೀರಿಟ್ಟ ಶಿವಣ್ಣ

    ಮುಂಬರುವ ‘ಸಿಟಾಡೆಲ್’ ಸೀರಿಸ್‌ನಲ್ಲಿ ನಟಿ ಪ್ರಿಯಾಂಕಾ ಸಹ ನಟರೂ ಆಗಿರುವ ರಿಚರ್ಡ್, ನಟಿ ಪರಿಪೂರ್ಣ ಸೂಪರ್ ಹೀರೋ ಆಗಲು ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂಬುದರ ಬಗ್ಗೆ ಮಾತನಾಡಿದರು. ಮನೋರಂಜನೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಚರ್ಡ್ "ಪ್ರಿಯಾಂಕಾ ಒಬ್ಬ ಅದ್ಭುತ ಮಾರ್ವೆಲ್ ಸೂಪರ್ ಹೀರೋ ಆಗಿದ್ದಾರೆ. ಅವಳು ಅದ್ಭುತವಾಗಿ ನಟಿಸುವ ಪ್ರತಿಭಾವಂತ ನಟಿ, ಅವಳು ಸುಂದರವಾಗಿದ್ದಾಳೆ ಮತ್ತು ಅವಳು ತುಂಬಾ ಬಲಶಾಲಿಯಾಗಿರುವುದನ್ನು ಸಂಪೂರ್ಣವಾಗಿ ತನ್ನ ನಟನೆಗೆ ಬಳಸಿಕೊಳ್ಳುತ್ತಾಳೆ” ಎಂದು ಹೇಳಿದ್ದಾರೆ.



    ಮಾರ್ವೆಲ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾದ 'ಅವೆಂಜರ್ಸ್: ಎಂಡ್ ಗೇಮ್' ನಿರ್ದೇಶಕರಾದ ರುಸ್ಸೊ ಬ್ರದರ್ಸ್ ಮಾಡಿದಂತಹ ‘ಸಿಟಾಡೆಲ್’ನಲ್ಲಿ ಸ್ಟಾನ್ಲಿ ಟುಸಿ ಅವರೊಂದಿಗೆ ಪ್ರಿಯಾಂಕಾ ಮತ್ತು ರಿಚರ್ಡ್ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ.

    Read Also: Puneeth Rajkumar: ಸಾವಿನಲ್ಲೂ ಲಾಭ ಪಡೆಯಲು ಮುಂದಾದ ಕಟುಕರು: ಅಪ್ಪು ಫ್ಯಾನ್ಸ್​ ತೀವ್ರ ಆಕ್ರೋಶ!

    ಈ ಮೊದಲು, ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಬಗ್ಗೆ ಮಾತನಾಡುವಾಗ ಜೋ ರುಸ್ಸೊ ಅದೇ ಪ್ರತಿಕ್ರಿಯೆ ಹೊಂದಿದ್ದರು. "ಅವಳಲ್ಲಿ ನಂಬಲಾಗದ ಪ್ರತಿಭೆ ಇದ್ದು, ಅವಳು ಅದ್ಭುತವಾಗಿ ನಟಿಸುತ್ತಾಳೆ ಎಂದು ನಾನು ಭಾವಿಸುತ್ತೇನೆ. ನಾವು ಒಂದೆರಡು ದಿನಗಳ ಹಿಂದೆಯೇ ಪ್ರದರ್ಶನದ ಬಗ್ಗೆ ಅನಿಸಿಕೆಗಳನ್ನು ಓದಿದ್ದೇವೆ ಮತ್ತು ಅದು ಅದ್ಭುತವಾಗಿತ್ತು. ಆ ಪ್ರದರ್ಶನದ ಬಗ್ಗೆ ನಾವು ತುಂಬಾ ಹೆಮ್ಮೆ ಪಡುತ್ತೇವೆ. ಪ್ರೇಕ್ಷಕರು ಅದನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡಲು ನಾವು ಉತ್ಸುಕರಾಗಿದ್ದೇವೆ" ಎಂದು ಹೇಳಿದ್ದಾರೆ.
    First published: